Health & Lifestyle

ಕಡಲೆ ಕಾಳಿನಲ್ಲಿದೆ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳು

27 October, 2020 4:10 PM IST By:

ಕಡಲೆ ಕಾಳಿನ ರಹಸ್ಯ ತಿಳ್ಕೊಂಡ್ರೆ ನೀವು  ಯಾವತ್ತೂ ಮಿಸ್ ಮಾಡ್ಕೋಳಲ್ಲ. ಹೌದು ಕಡಲೆಕಾಳು ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರುವ ದಾನ್ಯವಾಗಿದೆ. ದೈಹಿಕವಾಗಿ ದಷ್ಟಪುಷ್ಠರಾಗಲು ಬಯಸಿದ್ದೀರೆ ಚಿಕನ್, ಮಟನ್ , ತತ್ತಿ ತಿನ್ನುವ ಅವಶ್ಯಕತೆಯಲ್ಲ. ಮನೆಯಲ್ಲಿಯೇ ಇರುವ ಕಡಲೆ ಕಾಳನ್ನು ರಾತ್ರಿ ನೆನೆದು ಬೆಳಗ್ಗೆ ಸೇವಿಸಿದರೆ ಸಾಕು ದೈಹಿಕವಾಗಿ ಸ್ಟ್ರಾಂಗ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನೀವು ಸ್ಟ್ರಾಂಗ್ ಆಗುವುದರೊಂದಿಗೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದಕ್ಕಾಗಿ ನೀವು ಕಷ್ಟಪಡಬೇಕಾಗಿಲ್ಲ, ರಾತ್ರಿ ಕಡಲೆಕಾಳನ್ನು ನೀರಿನಲ್ಲಿ ನೆನೆಸಿ ಮರುದಿನ ಮುಂಜಾನೆ ಅದನ್ನು ಹಸಿಯಾಗಿ ಬರಿ ಹೊಟ್ಟೆಗೆ ಸೇವನೆ ಮಾಡಿದರೆ ಸಾಕು. ಇದರಿಂದ ಸ್ನಾಯುಗಳು ಗಟ್ಟಿಯಾಗಿ ದೈಹಿಕವಾಗಿ ಸ್ಟ್ರಾಂಗ್ ಆಗುವುದು ಗ್ಯಾರೆಂಟಿ.

ಕಡಲೆ ಬಹಳ ಪೌಷ್ಟಿಕರವಾದ ಆಹಾರ. ಇದರಲ್ಲಿ 20% ರಷ್ಟು ಸಾರಜನಕ ಮತ್ತು ಶೇ. 61ರಷ್ಟು ಶರ್ಕರ ಪಿಷ್ಟಾದಿಗಳಿವೆ. ಖನಿಜ ಪದಾರ್ಥಗಳಾದ ಕ್ಯಾಲ್ಸಿಯಂ (149 ಮಿಗ್ರಾಂ/100 ಗ್ರಾಂ) ಮತ್ತು ಕಬ್ಬಿಣ (7.2 ಮಿಗ್ರಾಂ/100 ಗ್ರಾಂ)ಗಳಲ್ಲದೆ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಎ ಕೂಡ ಇದೆ. ಈ ಕಡಲೆಯನ್ನು ಪ್ರತಿದಿನ ತಿನ್ನುವುದರಿಂದ ನಿಶ್ಯಕ್ತಿ ದೂರವಾಗುತ್ತದೆ.

ಮಾಂಸಖಂಡಗಳು ಬಲಶಾಲಿ :  ನೆನೆಸಿಟ್ಟಿರುವ ಕಡಲೆಕಾಯಿ ಜೊತೆ ಬೆಲ್ಲ ತಿನ್ನುವುದರಿಂದ ಪದೇ ಪದೇ ಮೂತ್ರಕ್ಕೆ ಹೋಗುವ ಸಮಸ್ಯೆ ಪರಿಹಾರವಾಗುತ್ತದೆ. ಕಡಲೆಯನ್ನು ಉಪ್ಪು ಹಾಕದೆ ಹಾಗೆಯೇ ಜಗಿದು ತಿಂದರೆ ಚರ್ಮ ಕಾಂತಿಯುತವಾಗುತ್ತದೆ. ಪ್ರತಿದಿನ ಇದನ್ನು ತಿನ್ನುವುದರಿಂದ ಮಾಂಸಖಂಡಗಳು ಬಲಶಾಲಿಯಾಗುತ್ತದೆ.

ಮಲಬದ್ಧತೆ ಸಮಸ್ಯೆ ದೂರ : ಇದರಲ್ಲಿನ ಪೊಟ್ಯಾಶಿಯಂ, ಮೇಗ್ನೀಶಿಯಂ ಅಂಶಗಳು ರಕ್ತದ ಒತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ, ಅಲ್ಲದೆ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಆಗಾಗ್ಗೆ ಕಡಲೆ ಕಾಳು ಸೇವಿಸಿದರೆ ಆ ಸಮಸ್ಯೆಯಿಂದ ಬೇಗ ಹೊರ ಬರಬಹುದು.

ತೂಕ ನಿಯಂತ್ರಿಸಲು ಕಡಲೆ ತಿನ್ನಿ: ಕಡಲೆ ಕಾಳು ಸೇವನೆಯಿಂದ ತೂಕ ಇಳಿಸಿಕೊಳ್ಳಬಹುದು, ನೀವು ಬೆಳಗ್ಗೆ ಅಥವಾ ಮಧ್ಯಾಹ್ನ ಒಂದು ಬೌಲ್ ಬೇಯಿಸಿದ ಕಡಲೆ ಕಾಳು ತಿಂದರೆ ಹೊಟ್ಟೆ ತುಂಬಿರುತ್ತದೆ, ಇದರಿಂದ ನಿಮಗೆ ಹಸಿವು ಆಗದೆ ಹೆಚ್ಚು ಆಹಾರ ಸೇವಿಸಲು ಸಾಧ್ಯವಾಗುವುದಿಲ್ಲ, ಇದರಿಂದ ನೀವು ತೂಕ ಕಡಿಮೆ ಮಾಡಿಕೊಳ್ಳಬಹುದು.

ನಿತ್ರಾಣ ದೂರ: ಪ್ರತಿದಿನ ನೆನಸಿದ ಕಡಲೆ ಸೇವನೆಯಿಂದ ಶಕ್ತಿ ಬರುತ್ತದೆ. ಹಾಗೆ ಸ್ನಾಯುಗಳು ಬಲಗೊಳ್ಳುತ್ತವೆ. ನಿತ್ರಾಣ ದೂರವಾಗಿ ದೇಹ ಅನೇಕ ರೋಗಗಳಿಂದ ಮುಕ್ತಿ ಪಡೆಯುತ್ತದೆ.