Health & Lifestyle

ಅಜ್ವಾನಿನಲ್ಲಿ ಅಡಗಿದೆ ಸಾಕಷ್ಟು ಔಷಧೀಯ ಗುಣಗಳು

16 October, 2020 6:33 AM IST By:

ಅಜವಾನ್ ಜೀರಿಗೆ ಬೀಜಗಳಿಗೆ  ಹೋಲುವ ಸಣ್ಣ, ಅಂಡಾಕಾರದ ಬೀಜವಾಗಿದ್ದು, ಇದು ಕಹಿಯಾಗಿರುತ್ತದೆ. ಇದು ಥೈಮೋಲ್ ಹೊಂದಿರುವದರಿಂದ ಸುವಾಸನೆ ಬೀರುತ್ತದೆ.

 ಈ ಬೀಜಗಳನ್ನು ಒಣಗಿದ, ಹುರಿದ ಅಥವಾ ಮಸಾಲೆಗಳ ಮಿಶ್ರಣವಾಗಿ ತಡ್ಕಾದಲ್ಲಿ  ಬಳಸಲಾಗುತ್ತದೆ. ಬ್ರೇಡ್ ಬಿಸ್ಕಟ್‍ಗಳಂತಹ ಬೇಯಿಸಿದ ಉತ್ಪನ್ನಗಳ ಮೇಲೆ ಚಿಮುಕಿಸಲಾಗುತ್ತದೆ. ಇದು ಥೈಮೋಲ್, ಸಿಮೆನ್, ಟೆರ್ಪಿನೀನ್ ಮತ್ತು ಲಿಮೋನೆನ್ ನಂತಹ ವಿವಿಧ ರೀತಿಯ ತೈಲಗಳಿಂದ ಕೂಡಿದೆ. ಇದರಲ್ಲಿ ಥೈಮೋಲ್ ಮತ್ತು ಕಾರ್ವಾಕ್ರೋಲ್ ಎಂಬ ಸಕ್ರಿಯ ಸಂಯುಕ್ತಗಳಿಗೆ ಕಾರಣವಾಗಿದೆ. ಆದ್ದರಿಂದ ಆಂಟಿಫಂಗಲ್ ಆಗಿ ಕಾರ್ಯನಿರ್ವಹಿಸುತ್ತದೆ.

ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ:

ಆಮ್ಲೀಯತೆ, ಅಜೀರ್ಣ ಕ್ರಿಯೆಗೆ ಚಿಕಿತ್ಸೆ ನೀಡುತ್ತದೆ. ಗ್ಯಾಸ್ಟ್ರಿಕ್ ರಸಗಳ ಸ್ರವಿಸುವಿಕೆಯನ್ನು ಸುಧಾರಿಸುವ ಮೂಲಕ ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ:

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಅಜ್ವೈನನ್ನು ಔಷಧಗಳಲ್ಲಿ ಬಳಸಲಾಗುತ್ತದೆ.

ಸಾಮಾನ್ಯ ಶೀತ ಮತ್ತು ಕೆಮ್ಮು ಚಿಕಿತ್ಸೆ:

ಅಜ್ವೈನ್ ಪುಡಿಯನ್ನು ಬೆಲ್ಲದೊಂದಿಗೆ ತಯಾರಿಸಿ ಅಸ್ತಮಾ ತ್ತು ಬ್ರಾಂಕೈಟಸ್ ನಂತಹ ಉಸಿರಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ದಿನಕ್ಕೆ ಎರಡು ಬಾರಿ ಈ ಮಿಶ್ರಣವನ್ನು ಸೇವಿಸಬೇಕು.

ಲೇಖಕರು: ಶಗುಪ್ತಾ ಅ ಶೇಖ