ಇತ್ತೀಚಿನ ಜೀವನಶೈಲಿಯ ಪರಿಣಾಮದಿಂದಾಗಿ ಮನುಷ್ಯರನ್ನು ಹಲವಾರು ರೋಗ ರುಜಿನಗಳು ಕಾಡುತ್ತಿವೆ. ಅವುಗಳಲ್ಲಿ ಪ್ರಮುಖವೆಂದರೆ ರಕ್ತದೊತ್ತಡ ಹಾಗೂ ಸಕ್ಕರೆಖಾಯಿಲೆ/ಡಯಾಬಿಟೀಸ್ ಈ ಕಾಯಿಲೆಗಳು ವಯಸ್ಕರಿಂದ ಹಿಡಿದು ವೃದ್ಧರವರೆಗೂ ಕಾಡುತ್ತಿವೆ. ಇವೆಲ್ಲವನ್ನೂ ನಿಯಂತ್ರಿಸಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು. ಹಾಗೂ ಇವುಗಳಲ್ಲಿ ಒಂದು ಬೇಲದ ಹಣ್ಣು.
ಬೇಲದ ಹಣ್ಣು :
ಲೈಮೋನಿಯ ಅಸಿಡಿಸ್ಸಿಮಾ ಎಂಬುದುಈ ಹಣ್ಣಿನ ವೈಜ್ಞಾನಿಕ ಹೆಸರು ಹಾಗೂ ಇದು ರೋಟೇಸಿಯೆಎಂಬ ಕುಟುಂಬಕ್ಕೆ ಸೇರಿದೆ. ಇದನ್ನು ಕನ್ನಡದಲ್ಲಿ ಬೇಲದ ಹಣ್ಣು, ಹಿಂದಿಯಲ್ಲಿ ಬೇಲ್ ಎಂದು , ತಮಿಳಿನಲ್ಲಿವೇಲುಝಾಂ, ತೆಲುಗಿನಲ್ಲಿ ವೆಲ್ಲಗ ಪಂ ಡುಎಂದು ಕರೆಯುತ್ತಾರೆ.
ಈ ಹಣ್ಣು ಭಾರತಕ್ಕೆ ಸ್ಥಳೀಯವಾಗಿದ್ದು, ಬಾಂಗ್ಲಾದೇಶ, ಶ್ರೀಲಂಕಾ,ಹಾಗೂ ಮಲೇಷಿಯಾಮುಂತಾದ ದೇಶಗಳಲ್ಲಿಕಾಣಸಿಗುತ್ತದೆ. ಹಳ್ಳಿಗಳಲ್ಲಿ ಈ ಗಿಡವನ್ನುಹೊಲದ ಬದುಗಳ ಮೇಲೆ ಕೆರೆಗಳ ಹತ್ತಿರ ಹಾಗೂ ರಸ್ತೆಗಳ ಪಕ್ಕದಲ್ಲಿ ಕಾಣಸಿಗುತ್ತವೆ ಹಾಗೂ ಈ ಗಿಡದ ಎಲೆಗಳನ್ನು ಉಜ್ಜಿದರೆ ನಿಂಬೆ ಹಣ್ಣಿನ ವಾಸನೆ ಬರುತ್ತದೆ. ಈ ಹಣ್ಣು ಗಟ್ಟಿಯಾದ ಹೊರಕವಚ ಹೊಂದಿದ್ದು, ಅದರ ಒಳಗೆ ಕಂದು ಬಣ್ಣದ ತಿರುಳನ್ನು ಹೊಂದಿದ್ದು, ಅದರಲ್ಲಿ ಬಿಳಿ ಬಣ್ಣದ ಬೀಜ ಹೊಂದಿರುತ್ತದೆ.ಹಾಗೂ ತಿರುಳು ಹುಳಿಮಿಶ್ರಿತಸಿಹಿಯ ರುಚಿ ಹೊಂದಿದೆ. ಈ ಹಣ್ಣಿನ 100 ಗ್ರಾಂನಲ್ಲಿ 18 ಗ್ರಾಂ ಶರ್ಕರಪಿಷ್ಟ, 3.7 ಗ್ರಾಂ ನಷ್ಟು ಕೊಬ್ಬು, 7.1 ಗ್ರಾಂನಷ್ಟು ಪ್ರೋಟೀನ್, 28 ಗ್ರಾಂ ನಷ್ಟು ವಿಟಮಿನ್ ( ವಿಟಮಿನ್ ಸಿ, ವಿಟಮಿನ್ಬಿ) ಹಾಗೂ 130 ಮಿಲಿ ಗ್ರಾಂನಷ್ಟು ಕ್ಯಾಲ್ಸಿಯಂಮತ್ತು ಮುಂತಾದ ಖನಿಜಗಳನ್ನು ಹೊಂದಿದೆ.
ಹಣ್ಣಿನ ಉಪಯೋಗಗಳು:
ಈ ಹಣ್ಣನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ,ಹಾಗೂ ಮಲಬದ್ಧತೆಗಳಂತ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆಯಲ್ಲಾಗುವ ಅಲ್ಸರ್ಗಳಿಗೆ ಇದು ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿನ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನುಹೆಚ್ಚಿಸುತ್ತದೆ.
ಈ ಹಣ್ಣು ಮಕ್ಕಳಲ್ಲಿ ಅವರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತದೆ. ಹಾಗೂ ಬೇಸಿಗೆಯಲ್ಲಿ ಈ ಹಣ್ಣಿನ ಪಾನಕ ಅಥವಾ ಹಣ್ಣಿನಜೊತೆ ಬೆಲ್ಲ ಸೇರಿಸಿ ತಿನ್ನುವುದರಿಂದ ದೇಹವನ್ನು ತಂಪಾಗಿರಿಸುತ್ತದೆ.
ಲೇಖಕರು: ಆತ್ಮಾನಂದ ಹೈಗರ್