Health & Lifestyle

ಕಿತ್ತಳೆ ಹಣ್ಣಿನ ಉಪಯೋಗ ತಿಳಿದರೆ, ಈಗಲೇ ತಿನ್ನಲು ಶುರು ಮಾಡುವಿರಿ

04 November, 2020 9:22 AM IST By:

ಸ್ವಲ್ಪ ಹುಳಿ ಎನಿಸಿದರೂ ಸಿಹಿಯಾದ ಹಣ್ಣು ಕಿತ್ತಳೆ. ಕಿತ್ತಳೆ ಹಣ್ಣು ಎಷ್ಟು ರುಚಿಕರವೋ, ಹಾಗೇ ಅದು ಆರೋಗ್ಯದ ದೃಷ್ಟಿಯಿಂದ ಅಷ್ಚೇ ಉಪಯುಕ್ತವಾದದ್ದು, ಮತ್ತೇಕೆ ತಡ, ಸಾಮಾನ್ಯವಾಗಿ ನವೆಂಬರ್ ನಿಂದ ಜನವರಿ, ಮಾರ್ಚ್ ವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಿತ್ತಳೆಯನ್ನು ಇಂದೇ ಮನೆಗೆ ತೆಗೆದುಕೊಂಡು ಬಂದು ಆರೋಗ್ಯದ ಲಾಭ ಪಡೆಯಿರಿ.. ಈ ಹಣ್ಣು ಕ್ರೀಡಾಪಟುಗಳಿಗೆ ಪ್ರಮುಖ ಆಹಾರವಾಗಿದೆ.

ಕಣ್ಣಿನ ಆರೋಗ್ಯಕ್ಕೆ ಸೂಕ್ತ: ತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಕಣ್ಣಿನ ಆರೋಗ್ಯ ಹೆಚ್ಚಿಸುತ್ತವೆ. ಆದ್ದರಿಂದ ದೃಷ್ಟಿ ಚೆನ್ನಾಗಿರ ಬೇಕೆಂದು ಬಯಸುವವರು ಪ್ರತಿದಿನ ಕಿತ್ತಳೆ ತಿನ್ನಿರಿ.

ಹೃದಯಾಘಾತ ತಡೆಯುತ್ತದೆ: ಕಿತ್ತಳೆ ಹಸ್ಪೆರಿಡಿನ್ ನಂತಹ ಫ್ಲೇವೊನೈಡ್ ಗಳನ್ನು ಹೊಂದಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ, ಅಪಧಮನಿಯನ್ನು ನಿರ್ಬಂಧಿಸದಂತೆ ತಡೆಯುತ್ತದೆ. ಹೃದಯಾಘಾತ ಮತ್ತು ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಹಸಿವು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ: ಇದು ನಾರಿನ ಘನ ಮೂಲವಾಗಿದೆ. ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ಕ್ಯಾಲರಿಗಳನ್ನು ಕಡಿತಗೊಳಿಸಲು ಮತ್ತು ತೂಕ ಇಳಿಸಿಕೊಳ್ಳಲು ಬಯಸುವ ಜನರಿಗೆ ಉತ್ತಮ ಪ್ರಯೋಜನವಾಗಿದೆ.

ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ: ಕಿತ್ತಳೆ ಹಣ್ಣಿನಲ್ಲಿರುವ ಡಿ - ಲಿಮೋನೆನ್ ಎಂಬ ಸಂಯುಕ್ತ ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಮುಂತಾದ ವಿವಿಧ ರೀತಿಯ ಕ್ಯಾನ್ಸರ್ ಗಳನ್ನು ತಡೆಯುತ್ತದೆ. ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುವುದಲ್ಲದೆ, ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಚರ್ಮ ಸಮಸ್ಯೆ ನಿವಾರಣೆ: ಚಿಕ್ಕ ವಯಸ್ಸಿಗೆ ವಯಸ್ಸಾದವರಂತೆ ಕಾಣುತ್ತಿದ್ದರೆ ಅಥವಾ ಚರ್ಮದ ಯಾವುದೇ ಸಮಸ್ಯೆಗಳಿದ್ದರೆ ಕಿತ್ತಳೆ ಸೇವಿಸಿ. ಕಿತ್ತಳೆ ಹಣ್ಣಿನಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು, ನಿಮಗೆ ವಯಸ್ಸಾಗಿದ್ದರೆ ಅಥವಾ ವಯಸ್ಸಾದವರಂತೆ ಕಾಣುತ್ತಿದ್ದರೆ ಅದು ನೀವಿನ್ನು ಚಿಕ್ಕವರಂತೆ ಕಾಣುವಂತೆ ಮಾಡುತ್ತದೆ. ಜೊತೆಗೆ ಚರ್ಮದ ಹೊಳಪಿಗಾಗಿಯೂ ನೀವು ಈ ಹಣ್ಣನ್ನು ಸೇವಿಸಬಹುದು.

ಲೇಖಕರು: ಶಗುಪ್ತಾ ಅ ಶೇಖ