Health & Lifestyle

ಆರೋಗ್ಯಕ್ಕೆ ವರದಾನವಾಗಲಿದೆ ಕರಿಬೇವು

09 November, 2020 9:32 PM IST By:

ಕರಿಬೇವಿನ ಸೊಪ್ಪನ್ನು ನಾವು ಪ್ರತಿ ದಿನ ಮನೆಯಲ್ಲಿ ಸಾಂಬಾರ್ಪಲ್ಯಸಾಗು ಇತ್ಯಾದಿಗಳನ್ನು ತಯಾರು ಮಾಡುವಾಗ ಮರೆಯದೆ ಉಪಯೋಗಿಸುತ್ತೇವೆ. ಇದನ್ನು ಉಪಯೋಗಿಸುವುದರಿಂದ ನಮಗೆ ಯಾವ ಪ್ರಯೋಜನಗಳು ಉಂಟಾಗುತ್ತವೆ ಎಂಬುದು ಮಾತ್ರ ನಮಗೆ ತಿಳಿದಿರುವುದಿಲ್ಲ. ಪರೋಕ್ಷವಾಗಿ ನಮ್ಮ ದೇಹದ ಆರೋಗ್ಯಕ್ಕೆ ಕರಿಬೇವಿನ ಸೊಪ್ಪಿನಿಂದ ಬಹಳಷ್ಟು ಉಪಯೋಗವಾಗುತ್ತದೆ.

ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ 'ಒಗ್ಗರಣೆಯಿಂದ ಮುಗಿಯದ ಅಡುಗೆಗೆ ರುಚಿಯೇ ಇರುವುದಿಲ್ಲ. ವಿಶೇಷ ಆರೋಗ್ಯ ರಕ್ಷಣೆಯನ್ನು ಮಾಡುವ ನೈಸರ್ಗಿಕ ಆಹಾರ ಉತ್ಪನ್ನ ಎಂದರೆ ಕರಿಬೇವಿನ ಎಲೆ. ನಿತ್ಯವೂ ಕರಿಬೇವಿನ ಎಲೆಯನ್ನು ಆಹಾರ ಕ್ರಮದಲ್ಲಿ ಬಳಸುವದರಿಂದ ಆರೋಗ್ಯ ಸಮಸ್ಯೆಗಳಲ್ಲಿ ಗಮನಾರ್ಹ ಸುಧಾರಣೆ ಕಾಣಬಹುದು.

ಜೀರ್ಣಕ್ರಿಯೆ ಸುಧಾರಿಸುತ್ತದೆ:

ಕರಿಬೇವು ಸೊಪ್ಪು ಮೂಲತಃ ಒಂದು ಗಿಡಮೂಲಿಕೆಇದು ತನ್ನ ಜೀರ್ಣ ಕ್ರಿಯೆಯನ್ನು ಸುಧಾರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿ. ಅಯುರ್ವೇದದ ಪ್ರಕಾರ ಕಡಿಪತ್ತಾ ಎಂದು ಕರೆಯಲ್ಪಡುವ ಇದನ್ನು ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಕರಿಬೇವಿನ ಎಲೆಯನ್ನು ಬಿಸಿಲಲ್ಲಿ ಒಣಗಿಸಿ ಪುಡಿಮಾಡಿ ಇಟ್ಟಕೊಳ್ಳಿ. ಕರಬೇವಿನ ಎಲೆಯ ಪುಡಿಯನ್ನು ಒಂದು ಲೋಟ ಮಜ್ಜಿಗೆಗೆ ಅಥವಾ ಮೊಸರಿಗೆ ಸೇರಿಸಿ ಕುಡಿಯಿರಿ. ಇಲ್ಲವಾದರೆ ಖಾಲಿ ಹೊಟ್ಟೆಯಲ್ಲಿ ಕೆಲವು ತಾಜಾ ಕರಿಬೇವಿನ ಎಲೆಯನ್ನು ಜಗಿಯಬಹದು.ಈ ವಿಧಾನಗಳಿಂದ ಬಹುಬೇಗ ಉದರದ ಹಾಗೂ ಅಜೀರ್ಣದ ಸಮಸ್ಯೆ ನಿವಾರಣೆಯಾಗುತ್ತದೆ.

ಅನಗತ್ಯ ಕೊಬ್ಬು ಕರಗಿಸುವದು:

ನಿತ್ಯ ಖಾಲಿ ಹೊಟ್ಟೆಯಲ್ಲಿ ಅಥವಾ ಉಪಹಾರ ಸೇವಿಸುವ ಮೊದಲು ಬೆರಳೆಣಿಕೆಯ ಕರಿಬೇವಿನ ಎಲೆಯನ್ನು ಜಗಿಯಬೇಕು. ಇದರಿಂದ ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಶುದ್ಧಿಕರಿಸಬಹುದು.ದೇಹದಲ್ಲಿ ಶೇಖರಣೆಯಾದ ಅನಗತ್ಯ ಕೊಬ್ಬುಗಳು ಕರಗುತ್ತವೆ. ಇದು ತೂಕ ಸಹ ಇಳಿಕೆಯಾಗಲಿದೆ. ಇದರಲ್ಲಿ ಇರುವ ಆಲ್ಕಲಾಯ್ಡ್ ದೇಹದಲ್ಲಿರುವ ಅನಗತ್ಯ ಬೊಜ್ಜು ಕರಗಿಸಲು ಸಹಾಯ ಮಾಡುವದು.

ವಾಕರಿಕೆಯನ್ನು ಹೋಗಲಾಡಿಸುತ್ತದೆ:

ವಾಕರಿಕೆ ಹಾಗೂ ಆಯಾಸದಂತಹ ಸಮಸ್ಯೆಯನ್ನು ನಿವಾರಿಸಲು ಕರಿಬೇವು ಉತ್ತಮ. ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಮುಂಜಾನೆ ಅನುಭವಿಸುವ ವಾಕರಿಕೆ ಸಮಸ್ಯೆ ಹಾಗೂ ಅನಾರೋಗ್ಯಕ್ಕೆ ಕರಿಬೇವಿನ ಎಲೆಯು ಉಪಯೋಗಕಾರಿ.

ಸುಟ್ಟ ಗಾಯವನ್ನು ಗುಣಪಡಿಸುವದು:

ಕರಿಬೇವಿನ ಎಲೆಯಲ್ಲಿ ಆಲ್ಕಲಾಯ್ಡ್ ಎಂಬ ಅಂಶವಿದೆ. ಇದು ಆಳವಾದ ಆಥವಾ ಗಂಭೀರವಾದ ಗಾಯವನ್ನು ಸಹ ಗುಣಪಡಿಸುವ ಗುಣವನ್ನು ಪಡೆದುಕೊಂಡಿದೆ. ನಂಜು ನಿರೋಧಕ ಗುಣವನ್ನು ಹೊಂದಿರುವ ಈ ಎಲೆಯ ಪೇಸ್ಟ್ ಅನ್ನು ಅಥವಾ ಇತರ ಔಷಧಿಯ ಗಿಡಮೂಲಿಕೆಯಂದಿಗೆ ಕರಿಬೇವನ್ನು ಬೆರೆಸಿ ಪೇಸ್ಟ್ ತಯಾರಿಸಬಹುದು. ಪದೇ ಪದೇ ಕಾಣಿಸಿಕೊಳ್ಳುವಂತಹ ಕಜ್ಜಿಯ ಸಮಸ್ಯೆ ಸಹ ನಿವಾರಣೆ ಕಾಣುತ್ತವೆ.

ನೆನಪಿನ ಶಕ್ತಿಯನ್ನು ವೃದ್ಧಿಸುವದು:

ಕರಿಬೇವಿನ ಎಲೆಯನ್ನು ನಿತ್ಯ ಸೇವಿಸುವದರಿಂದ ನೆನಪಿನ ಶಕ್ತಿ ವೃದ್ಧಿಯಾಗುವದು. ಅಲ್ಲದೆ ಮೆದುಳಿಗೆ ಬೇಕಾದ ಪೋಷಕಾಂಶವನ್ನು ನೀಡುವದು. ವೃದ್ಧರಿಗೆ ಹಾಗೂ ಮಕ್ಕಳಿಗೆ ಈ ಎಲೆಯನ್ನು ನೀಡುವದರಿಂದ ನೆನಪಿನ ಶಕ್ತಿ ಸುಧಾರಿಸಬಹುದು. ಈ ಎಲೆಯಲ್ಲಿರುವ ಆರೋಗ್ಯಕರ ಆಂಶವು ಅಲ್ಝಮೈರ್ ಅರಳು ಮರಳಿನ ಸಮಸ್ಯೆಯನ್ನು ನಿವಾರಿಸುವದು.

ಲೇಖಕರು: ಶಗುಪ್ತಾ ಅ ಶೇಖ