Health & Lifestyle

ಅಲೋವೆರಾ ಅಂದಕ್ಕೂ ಸೈ ಆರೋಗ್ಯಕ್ಕೂ ಸೈ

11 October, 2020 7:00 AM IST By:

ಲೋಳೆಸರ, ಅಲೋವೆರಾ, ಕತ್ಲಿಗಿಡ ಎಂದೆಲ್ಲಾ ಕರೆಸಿಕೊಳ್ಳುವ ಇದು ಒಂದು ಪ್ರಸಿದ್ಧ ಔಷಧೀಯ ಸಸ್ಯ. ಅಲೋವೆರಾ ಇದು ಒಂದು ಆಯುರ್ವೇದಿಕ್ ಗಿಡವಾಗಿದೆ. ನೋಡಲು ಹಸಿರು ಬಣ್ಣದಿಂದ ಕೂಡಿದ್ದು ಸುತ್ತಲೂ ಚಿಕ್ಕ ಚಿಕ್ಕ ಮುಳ್ಳುಗಳಿಂದ ಕೂಡಿರುತ್ತದೆ. ಮತ್ತು ಇದರ ಮಹತ್ವದ ಅಂಶ ಏನೆಂದರೆ ಇದು ಲೋಳೆ ರೂಪದಲ್ಲಿ ಸಿಗುತ್ತದೆ. ಇದನ್ನು ಮುಟ್ಟಲು ಅಂಟು ಅಂಟಾಗಿರುತ್ತದೆ. ಆದರೆ ಇದರಿಂದ ತುಂಬಾ ಲಾಭಗಳು ದೊರೆಯುತ್ತವೆ. ಹಾಗಾದರೆ ಈ ಅಲೋವೆರಾವನ್ನು ಯಾವ ರೀತಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು. ಮತ್ತು ಸೇವಿಸದೇ ಇದ್ದರೆ ಯಾವ ರೀತಿಯ ಹಾನಿಯುಂಟು ಮಾಡುತ್ತದೆ ಎಂದು ನೋಡೋಣ.

ಅಲೋವೆರಾ ಜ್ಯೂಸ್‍ನ ಪ್ರಯೋಜನಗಳು

ರೋಗನಿರೋಧಕ ಶಕ್ತಿ: ಅಲೋವೆರಾದಲ್ಲಿ ವಿಟಮಿನ್ ಮತ್ತು ಮಿನರಲ್ಸಗಳು ಅಧಿಕವಿರುತ್ತವೆ. ಇದರ ಲೋಳೆ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲೋವೆರಾದಲ್ಲಿ ಜೆಲ್ ಅನ್ನು ಪ್ರತಿನಿತ್ಯ ಒಂದರಿಂದ ಮೂರು ಔನ್ಸಗಳಷ್ಟು ಸೇವಿಸುವುದರಿಂದ ಜೀರ್ಣಕ್ರಿಯೆ ಮತ್ತು ಪಚನಶಕ್ತಿಯು ಸುಧಾರಿಸುತ್ತದೆ.

ಮಲಬದ್ಧತೆ ದೂರ: ಅಲೋವೆರಾ ಜ್ಯೂಸನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮಲಬದ್ಧತೆ ದೂರವಾಗುತ್ತದೆ. ಕರುಳಿನ ಸಮಸ್ಯೆಯೂ ಬರುವುದಿಲ್ಲ. ನಿತ್ಯ ಒಂದು ಗ್ಲಾಸ್ ಅಲೋವೆರಾ ಜ್ಯೂಸನ್ನು ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಹಸಿವು ಕಡಿಮೆಯಾಗಿ ಆಹಾರ ನಿಯಂತ್ರಣ ಸಾಧ್ಯವಾಗುತ್ತದೆ

ಚರ್ಮದ ಹೊಳಪು:
ಚರ್ಮದ ಸೌಂದರ್ಯವನ್ನು ಸುಧಾರಿಸಲು ಬಯಸಿದರೆ, ಅಲೋವೆರಾ ಜೆಲ್ ಅನ್ನು ಬಳಸುವುದು ಉತ್ತಮ. ನಿಮ್ಮ ಮುಖದಿಂದ ಧೂಳು, ಕೊಳಕು, ಡೆಡ್​ ಸ್ಕಿನ್​ ಮತ್ತು ಕೊಳೆಯನ್ನು ಸ್ವಚ್ಛಗೊಳಿಸಲು ಇದು ತುಂಬಾ ಸಹಾಯಕವಾಗಿದೆ. ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುವುದಲ್ಲದೆ ಆಕರ್ಷಣೀಯವಾಗಿಸುತ್ತದೆ.

ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ:
ಅಲೋವೆರಾವನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಕ್ಕೆಸಹಾಯಕರವಾಗಿರುತ್ತದೆ. ಏಕೆಂದರೆ ಈ ಸಸ್ಯವು ರಕ್ತದಲ್ಲಿನ ಕೊಲೆಸ್ಟ್ರಾಲ್ ಅಂಶದ ವಿರುದ್ಧ ಪ್ರಬಲವಾಗಿ ಹೋರಾಡುತ್ತದೆ ಎಂದು ನಂಬಲಾಗಿದೆ. ಅಲೋವೆರಾ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಎಂದು ಕೂಡ ಹೇಳಲಾಗುತ್ತದೆ. ಅಂದರೆ ನೀವು ಆಗಾಗ ಹೆಚ್ಚಾಗಿ ತಿನ್ನುವ ಅಗತ್ಯವನ್ನು ನಿವಾರಿಸುತ್ತದೆ.

ಜೀರ್ಣಕ್ರಿಯೆಗೆ ಬಲು ಸಹಕಾರಿ:
ಅಲೋವೆರಾ ವಿರೇಚಕ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದಾಗ ಜೀರ್ಣ ಕ್ರಿಯೆಗೆ ಸಹಾಯ ಮಾಡುತ್ತದೆ. ಅನಾರೋಗ್ಯಕರ ಕರುಳು ಅಥವಾ ಸದಾ ಅಜೀರ್ಣತೆಯ ಆರೋಗ್ಯವು ಸಾಮಾನ್ಯವಾಗಿ ಮನುಷ್ಯನ ದೇಹದ ತೂಕ ಹೆಚ್ಚಾಗುವುದರೊಂದಿಗೆ ಸಂಬಂಧ ಹೊಂದಿದೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯು ಆಹಾರದ ಸರಿಯಾದ ಚಯಾಪಚಯ ಕ್ರಿಯೆ ನಡೆಸಿ ಮತ್ತು ದೇಹದಿಂದ ಬೇಡದ ತ್ಯಾಜ್ಯವನ್ನು ಉತ್ತಮವಾಗಿ ಹೊರ ಹಾಕಲು ಸಹಕರಿಸುತ್ತದೆ. ಇದು ತೂಕ ನಷ್ಟಕ್ಕೆ ಕೂಡ ಸಹಾಯ ಮಾಡುತ್ತದೆ.

ಲೇಖಕರು: ಶಗುಪ್ತಾ ಅ ಶೇಖ