Health & Lifestyle

ನುಗ್ಗೆಕಾಯಿಯಷ್ಟೇ ಅಲ್ಲ, ನುಗ್ಗೆ ಸೊಪ್ಪೂ ಪ್ರಯೋಜನಕಾರಿ

06 September, 2020 7:29 AM IST By:

ಸಾಮಾನ್ಯವಾಗಿ ಎಲ್ಲರಿಗೂ ಪರಿಚಯವಿರುವ ನುಗ್ಗೆಕಾಯಿಯನ್ನು ಇಷ್ಟ ಪಡದವರು ಅತಿ ವಿರಳ. ನುಗ್ಗೆಕಾಯಿ ಮಾತ್ರವಲ್ಲದೆ ನುಗ್ಗೆಯ ಎಲೆಗಳು ಅಂದರೆ ನುಗ್ಗೆ ಸೊಪ್ಪು ಕೂಡ ಅಷ್ಟೇ ಪ್ರಯೋಜನಕಾರಿ. ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ.

ನುಗ್ಗೆಕಾಯಿ ಅಷ್ಟೇ ಅಲ್ಲ,  ಎಲೆ, (leaves) ಬೇರು, ಹೂ (flowers) , ತೊಗಟೆ ಎಲ್ಲವೂ ಆರೋಗ್ಯದ ದೃಷ್ಟಿಯಿಂದ ಮಹತ್ವ ಪಡೆದಿವೆ.  ಹಾಗಾಗಿ ಇದು ಕೇವಲ ತರಕಾರಿಯಲ್ಲ, ಪೋಷಕಾಂಶಗಳ ಭಂಡಾರ ಎಂದರೆ ತಪ್ಪಾಗಲಿಕ್ಕಿಲ್ಲ.  ನುಗ್ಗೆಕಾಯಿ ಮೊರಿಂಗೆಸೀ (Moringaceae) ಕುಟುಂಬಕ್ಕೆ ಸೇರಿದ್ದು ಇದರ ವೈಜ್ಞಾನಿಕ ಹೆಸರು ಮೊರಿಂಗಾ ಒಲೀಫೆರಾ (Moringa oleifera). ನುಗ್ಗೆಯಲ್ಲಿ  ಸುಮಾರು 20 ಪ್ರಕಾರದ ಅಮೈನೊ ಆಮ್ಲಗಳು ಹಾಗೂ 16 ಆಂಟಿ ಆಕ್ಸಿಡೆಂಟಗಳು ಇರುತ್ತವೆ. ಇದರಲ್ಲಿ ಕಿತ್ತಳೆಗಿಂತ 7 ಪಟ್ಟು ಹೆಚ್ಚು ಜೀವಸತ್ವ-ಸಿ, ಹಾಲಿಗಿಂತ 4 ಪಟ್ಟು ಹೆಚ್ಚು ಕ್ಯಾಲ್ಸಿಯಂ, ಬಾಳೆ ಹಣ್ಣಿಗಿಂತ 3 ಪಟ್ಟು ಹೆಚ್ಚು  ಪೊಟ್ಯಾಶಿಯಂ, ಹಾಲಿಗಿಂತ 2 ಪಟ್ಟು ಹೆಚ್ಚು ಪ್ರೋಟೀನ್ ಮತ್ತು ಗಜ್ಜರಿಗಿಂತ 4 ಪಟ್ಟು ಜೀವಸತ್ವ-ಎ ಇರುವುದು. 

100 ಗ್ರಾಂ ನುಗ್ಗೆ ಸೊಪ್ಪಿನಲ್ಲಿರುವ ಪೋಷಕಾಂಶಗಳು:

ಪೋಷಕಾಂಶಗಳು ನುಗ್ಗೆಸೊಪ್ಪು

ಜೀವಸತ್ವ-A      18.9mg

ಕ್ಯಾಲ್ಸಿಯಂ        2009 mg

ಪೊಟ್ಯಾಷಿಯಂ    1324 mg

ಪ್ರೋಟೀನ್        27.1 mg

ಜೀವಸತ್ವ-C       17.3 mg

ನುಗ್ಗೆ ಸೊಪ್ಪಿನ ಉಪಯೋಗಗಳು:

  • ನುಗ್ಗೆಸೊಪ್ಪಿನ ಪುಡಿ ಪ್ರತಿದಿನ ಉಪಯೋಗಿಸುತ್ತ ಹೋದರೆ ಮಧುಮೇಹಿಗಳ ಸಕ್ಕರೆ ನಿಯಂತ್ರಣ ಮಾಡಬಹುದು.
  • ಕೊಲೆಸ್ಟ್ರೋಲ್ ಕಡಿಮೆ ಮಾಡುವಲ್ಲಿ ಸಹಾಯ ಮಾಡುವುದು
  • ನುಗ್ಗೆಸೊಪ್ಪಿನ ಪುಡಿ ಸೇವನೆ ಕ್ಯಾನ್ಸರ್ ಮತ್ತು ಹೃದಯ ರೋಗಿಗಳಿಗೆ ಒಂದು ಉಪಯುಕ್ತ ಔಷಧಿ ಮತ್ತು ರಕ್ತದೊತ್ತಡ ಕಡಿಮೆ ಮಾಡುವುದು
  • ಗರ್ಭಿಣಿಯರು ನುಗ್ಗೆಸೊಪ್ಪನ್ನು ಆಹಾರದಲ್ಲಿ ಉಪಯೋಗಿಸುತ್ತಾ ಹೋದರೆ ಹೆರಿಗೆ ನೋವನ್ನು ಕಡಿಮೆ ಮಾಡಿ ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ.
  • ಹೆರಿಗೆಯ ನಂತರ ತಾಯಿಯ ಎದೆ ಹಾಲು ಹೆಚ್ಚುವುದರ ಜೊತೆಗೆ ಗರ್ಭಿಣಿಯರ ಹಾಗೂ ತಾಯಿಯ ದಿನನಿತ್ಯದ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶದ ಅವಶ್ಯಕತೆಯನ್ನು ಪೂರೈಸುವುದು
  • ಇದರಲ್ಲಿ ಜೀವಸತ್ವ ಮತ್ತು ಖನಿಜಗಳ ಪ್ರಮಾಣ ಅತ್ಯಧಿಕವಾಗಿರುವುದರಿಂದ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದು
  • ರಕ್ತಶುದ್ಧಿಕರಣದಲ್ಲಿಯೂ ಕೂಡ ನುಗ್ಗೆ ಸೊಪ್ಪು ಪ್ರಮುಖ ಪಾತ್ರ ವಹಿಸುತ್ತದೆ.
  • ನುಗ್ಗೆ ಸೊಪ್ಪಿನ ಸೇವನೆಯಿಂದ ಪಚನಕ್ರಿಯೆಗೆ ಸಂಭಂದಿಸಿದ ತೊಂದರೆಗಳನ್ನು ನಿವಾರಿಸುವಲ್ಲಿ ಸಹಾಯ ಮಾಡುವುದು.
  • ನುಗ್ಗೆಯಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿರುವುದರಿಂದ ಮೂಳೆಗಳನ್ನು ಸದೃಡವಾಗಿಡಲು ಉಪಯೋಗಕಾರಿ
  • ಕಬ್ಬಿಣಾಂಶದ ಕೊರತೆಯಿಂದ ಪ್ರೌಢಾವಸ್ಥೆಯಲ್ಲಿ ಹಾಗೂ ಮಹಿಳೆಯರಲ್ಲಿ ಕಾಣಬರುವ ಅನೀಮಿಯ ಕಡಿಮೆ ಮಾಡುವಲ್ಲಿ ಒಳ್ಳೆಯ ಔಷಧಿಯಾಗಿ ಕಾರ್ಯ ನಿರ್ವಹಿಸುವುದು.
  • ಯಾವುದೇ ರೀತಿಯ ವೆಚ್ಚವನ್ನು ಮಾಡದೇ ಮನೆಯಲ್ಲಿಯೇ ನುಗ್ಗೆಸೊಪ್ಪಿನ ಪೌಡರನ್ನು ತಯಾರಿಸಿ ಅದರ ಉಪಯೋಗ ದಿನನಿತ್ಯದ ಆಹಾರದಲ್ಲಿ ಉಪಯೋಗ ಮಾಡಬಹುದು.

 

ಲೇಖಕರು:

1. ರೇಖಾ ಭಾ. ಕಾರಭಾರಿ

2. ಧನಂಜಯ ಸಿ. ಚೌಗಲಾ

ICAR ಕೃಷಿ ವಿಜ್ಞಾನ ಕೇಂದ್ರ, ತುಕ್ಕಾನಟ್ಟಿ

ತಾಲೂಕ : ಗೋಕಾಕ ಜಿಲ್ಲೆ : ಬೆಳಗಾವಿ

Email : pcbelgaum @gmail.com