ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಅಥವಾ ಕಾಫಿ ಕುಡಿಯುವುದು ಹೆಚ್ಚಿನವರಿಗೆ ರೂಢಿಯಾಗಿದೆ. ಇದು ಸಿಗದೇ ಹೋದರೆ ಬದುಕುವುದೆ ಕಷ್ಟ ಎಂದುಕೊಂಡವರೂ ಇದ್ದಾರೆ. ಆದರೆ ಈ ಪದ್ಧತಿ ಅಷ್ಟೊಂದು ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯ. ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಬಿಸಿನೀರು ಕುಡಿದು ದಿನವನ್ನು ಪ್ರಾರಂಭಿಸಬೇಕು ಎಂಬುದು ಅವರ ಅಭಿಪ್ರಾಯ.
ಸೆಲೆಬ್ರಿಟಿ ಪೌಷ್ಟಿಕ ತಜ್ಞಯಾದ ಡಾ ರುಜುತಾ ದಿವೇಕರ್ ಅವರ ಪ್ರಕಾರ, ಬೆಳಿಗ್ಗೆ ಎರಡು ಅಥವಾ ಮೂರು ಒಣ ದ್ರಾಕ್ಷಿಯನ್ನು ಸ್ವಲ್ಪ ಬೆಚ್ಚಗಿನ ನೀರು ಕುಡಿದ ನಂತರ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಏಕೆಂದರೆ ಅವುಗಳನ್ನು ತಿನ್ನುವುದರಿಂದ ದಿನವಿಡೀ ಶಕ್ತಿ ಹಾಗೂ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ. ಖಾಲಿ ಹೊಟ್ಟೆಯಲ್ಲಿ ತಿನ್ನಬಾರದ ಆಹಾರಗಳ ಕುರಿತು ನೋಡುವುದಾದದರೆ.
ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ, ಇಂದಿನ ಬೆಲೆ ಎಷ್ಟೇಂದು ಮನೆಯಲ್ಲಿ ಕುಳಿತು ತಿಳಿಯಿರಿ
ಮಸಾಲೆಯುಕ್ತ ಆಹಾರಗಳು...
ಖಾಲಿ ಹೊಟ್ಟೆಯಲ್ಲಿ ಅಥವಾ ಬೆಳಗಿನ ಉಪಾಹಾರದಲ್ಲಿ ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಎದೆಯುರಿ ಮತ್ತು ಆಮ್ಲೀಯತೆ ಉಂಟಾಗುತ್ತದೆ.
ತಂಪು ಪಾನೀಯಗಳು
ಖಾಲಿ ಹೊಟ್ಟೆಯಲ್ಲಿ ತಂಪು ಪಾನೀಯಗಳನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ತಂಪು ಪಾನೀಯಗಳನ್ನು ಕೃತಕ ಬಣ್ಣಗಳು, ಸಂರಕ್ಷಕಗಳು (ಆಹಾರ ಹಾಳಾಗುವುದನ್ನು ತಡೆಯಲು ಬಳಸಲಾಗುತ್ತದೆ) ಮತ್ತು ಸುಕ್ರೋಸ್ ಅಥವಾ ಕೃತಕ ಸಕ್ಕರೆಯಿಂದ ತಯಾರಿಸಲಾಗುತ್ತದೆ. ಬೆಳಿಗ್ಗೆ ಇವುಗಳನ್ನು ಸೇವಿಸುವುದರಿಂದ ವಾಂತಿ ಮತ್ತು ಗ್ಯಾಸ್ ಟ್ರಬಲ್ ಉಂಟಾಗುತ್ತದೆ.
ತಂಪು ಪಾನೀಯಗಳ ನಿಯಮಿತ ಸೇವನೆಯು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳು ಮತ್ತು ಕೆಟ್ಟ ಕೊಬ್ಬಿನ ಉತ್ಪಾದನೆಗೆ ಕಾರಣವಾಗಬಹುದು.ದೀರ್ಘಕಾಲದ ಬಳಕೆಯು ಆಲ್ಕೊಹಾಲ್ಯುಕ್ತವಲ್ಲದ ಪಿತ್ತಜನಕಾಂಗದ ಕಾಯಿಲೆಗೆ ಕಾರಣವಾಗಬಹುದು ಮತ್ತು ಹಸಿವು ಹೆಚ್ಚಾಗುತ್ತದೆ. ಈ ಸಿಹಿಯು ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಗೌಟ್ ನಂತಹ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಪೆನ್ಷನ್ ನಿಯಮಗಳಲ್ಲಿ ಬದಲಾವಣೆ: ಪಿಂಚಣಿದಾರರಿಗೆ ಸೂಪರ್ ಅಪ್‌ಡೇಟ್!
ಕೋಲ್ಡ್ ಕಾಫಿ
ಖಾಲಿ ಹೊಟ್ಟೆಯಲ್ಲಿ ಕೋಲ್ಡ್ ಕಾಫಿ ಅಥವಾ ಐಸ್ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ ಎಂದು ರುಜುತಾ ಹೇಳಿದ್ದಾರೆ.
ಸಿಟ್ರಸ್ ಹಣ್ಣುಗಳು
ಖಾಲಿ ಹೊಟ್ಟೆಯಲ್ಲಿ ಸಿಟ್ರಸ್ ಹಣ್ಣುಗಳನ್ನು ತಿನ್ನುವುದು ಅತಿಯಾದ ಆಮ್ಲ ಉತ್ಪಾದನೆಗೆ ಕಾರಣವಾಗಬಹುದು. ಹಣ್ಣುಗಳು ಫೈಬರ್‌ನ ಸಮೃದ್ಧ ಮೂಲವಾಗಿದ್ದು