Health & Lifestyle

ದಾಳಿಂಬೆ ಹಣ್ಣು ಆರೋಗ್ಯಕ್ಕೆ ಉತ್ತಮ ದಿವ್ಯ ಔಷಧಿ

29 September, 2020 8:54 PM IST By:

ದಾಳಿಂಬೆ ಹಣ್ಣು ಅದರ ರುಚಿಗಿಂತ ಹೆಚ್ಚಾಗಿ ಇಷ್ಟವಾಗುವುದು ಅದರ ರಚನೆಯಿಂದಾಗಿ! ಪುಟ್ಟ ಹಣ್ಣೊಳಗೆ ಒಪ್ಪವಾಗಿ ಜೋಡಿಸಿಟ್ಟ ಒಂದೇ ಗಾತ್ರದ ಬೀಜಗಳು,. ರುಚಿಯೂ ಅಷ್ಟೆ. ಅದಕ್ಕೆ ಸರಿಸಾಟಿಯಿಲ್ಲ. ಇತ್ತೀಚೆಗಂತೂ ದಾಳಿಂಬೆ ಹಣ್ಣಿನ ರಸ ಹಲವು ಕಾಯಿಲೆಗಳನ್ನು ವಾಸಿಮಾಡುತ್ತದೆಂಬ ಕಾರಣಕ್ಕಾಗಿ ವೈದ್ಯರು ಸಹ ದಾಳಿಂಬೆ ರಸವನ್ನೇ ತಿನ್ನುವಂತೆ ಸಲಹೆ ನೀಡುತ್ತಾರೆ. ಮಧುಮೇಹ, ಜನನಾಂಗ ಕ್ಯಾನ್ಸರ್, ಕರುಳು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ಹತೋಟಿಗೆ ತರುವಲ್ಲಿ ಇದರ ಪಾತ್ರ ಹಿರಿದು. ಫೋಲಿಕ್ ಆಮ್ಲ, ಜೀವಸತ್ವಗಳಾದ ಎ, ಸಿ ಮತ್ತು ಇ ಹೇರಳವಾಗಿರುವುದರಿಂದ ಆರೋಗ್ಯ  ಕಾಪಾಡುವಲ್ಲಿ ಸಹಕಾರಿಯಾಗಿದೆ.

ರಸಭರಿತ ಬೀಜ:

ಈ ಹಣ್ಣು ಕೆಂಪು, ದುಂಡಗೆ ಕಾಣುತ್ತದೆ. ದಾಳಿಂಬೆ ಚರ್ಮವು ದಪ್ಪದಾಗಿರತ್ತದೆ. ಆದರೆ ಒಳಗೆ ನೂರಾರು ಬೀಜಗಳಿರುತ್ತವೆ. ಪ್ರತಿಯೊಂದು ಬೀಜವು ಕೆಂಪು, ರಸಭರಿತ ಮತ್ತು ಸಿಹಿ ಬೀಜದ ಹೊದಿಕೆಯಿಂದ ಕೂಡಿರುತ್ತದೆ.ಇದನ್ನು ಆರಿಲ್ ಎಂದು ಕರೆಯಲಾಗುತ್ತದೆ.

ನೆನಪಿನ ಶಕ್ತಿ ವೃದ್ಧಿ:

ದಾಳಿಂಬೆ ಹಣ್ಣು ಆರೋಗ್ಯಕ್ಕೆ ಉತ್ತಮ ದಿವ್ಯ ಔಷಧವಾಗಿದೆ. ಈ ಹಣ್ಣನ್ನು ತಿನ್ನುವದರಿಂದ ನಮ್ಮ ನೆನಪಿನ ಶಕ್ತಿಯು ಹೆಚ್ಚುವದು. ಬೇರೆ ಎಲ್ಲ ಹಣ್ಣಿಗಿಂತ ಈ ಹಣ್ಣು ಆರೋಗ್ಯದಲ್ಲಿ ತುಂಬಾ ಉಪಯುಕ್ತವಾದುದೆಂದು ಇತ್ತೀಚಿನ ಸಂಶೋಧನೆಯಿಂದ ತಿಳಿದು ಬಂದಿದೆ. ಕ್ಯಾಲ್ಸಿಯಂ, ಫಾಸ್ಪರಸ್, ಪೋಟ್ಯಾಶಿಯಂ, ಕಬ್ಬಿಣ ಮುಂತಾದ ಖನಿಜಾಂಶಗಳು ದಾಳಿಂಬೆಯಲ್ಲಿ ಹೇರಳವಾಗಿವೆ. ದಾಳಿಂಬೆ ರಸವನ್ನು ಕುಡಿಯುವದರಿಂದ ರಕ್ತನಾಳಗಳು ಹಿಗ್ಗಿ ರಕ್ತ ಸಂಚಾರ ಸರಾಗವಾಗುವಂತೆ ನೋಡಿಕೊಳ್ಳುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:

ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಹತೋಟಿಗೆ ತರುವಲ್ಲಿಯೂ ಇದರ ಪಾತ್ರ ಹಿರಿದು. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಜೀರ್ಣಕ್ರಿಯೆಗೂ ಸಹಕಾರಿ. ದಾಳಿಂಬೆ ಹಣ್ಣು ಅಥವಾ ರಸವನ್ನು ಪ್ರತಿದಿನ ಸೇವಿಸುವದರಿಂದ ಚರ್ಮ ಕಾಂತಿಯುತವಾಗುತ್ತದೆ. ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ಕೂದಲುದುರುವದನ್ನು ಕಡಿಮೆ ಮಾಡಿ ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ. ಕೊಲೆಸ್ಟ್ರಾಲ್ ಹತೋಟಿಗೆ ತರುವದರಿಂದ ಹೃದಯಾಘಾತವಾಗದಂತೆ ತಡೆಗಟ್ಟುತ್ತದೆ.

ಲೇಖಕರು: ಶಗುಪ್ತಾ ಅ. ಶೇಖ