ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಿ ನೌಕರರಿಗಾಗಿ ಉಚಿತ ಚಿಕಿತ್ಸೆಯನ್ನು ನೀಡಲು ಜ್ಯೋತಿ ಸಂಜೀವಿ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ೭ ತರಹದ ಗಂಭೀರ ಖಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಹೃದ್ರೋಗ, ನರರೋಗ, ಕ್ಯಾನ್ಸರ್, ನವಜಾತ ಶಿಶು & ಚಿಕ್ಕ ಮಕ್ಕಳ ಚಿಕಿತ್ಸೆ, ಅಪಘಾತ( ಮರ ಅಥವಾ ಮನೆ ಮೇಲಿಂದ ಬಿದ್ದು ಮೂಳೆ ಮುರಿತಗೊಂಡಾಗ), ಸುಟ್ಟ ಗಾಯ, ಮೂತ್ರ ಪಿಂಡದ ಸಮಸ್ಯೆ( ಮೂತ್ರ ಪಿಂಡದ ಕಲ್ಲಿನ ಶಸ್ತ್ರ ಚಿಕಿತ್ಸೆ)ಗೆ ಈ ವಿಮೆ ಇದೆ.
ಏನಿದು ಆರೋಗ್ಯ ಸಂಜೀವಿನಿ?
ಇದು ಆರೋಗ್ಯ ವಿಮೆ ಯೋಜನೆಯಾಗಿದ್ದು, ಕುಟುಂಬದ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಹಕಾರಿ. ವೈಯಕ್ತಿಕ ಮತ್ತು ಕುಟುಂಬಕ್ಕೆ ಈ ವಿಮೆ ಕೊಳ್ಳಬಹುದು. 18 ವರ್ಷ ಮೀರಿದ ನಾಗರಿಕರು ಖರೀದಿಸಬಹುದು. ಗರಿಷ್ಠ ವಯೋಮಿತಿ 65 ವರ್ಷ. ಇದರ ಪ್ರೀಮಿಯಂ ಕಡಿಮೆ ಮೊತ್ತದಲ್ಲಿ ಇರುತ್ತದೆ.
ಅರ್ಹತೆ:- ರಾಜ್ಯ ಸರ್ಕಾರಿ ನೌಕರರಾಗಿರಬೇಕು ಹೆಚ್ ಆರ್ ಎಂ ಎಸ್ ನಲ್ಲಿ ನೌಕರರ ಹಾಗೂ ಅವರ ಕುಟುಂಬದ ಅವಲಂಬಿತರ ಆಧಾರ್ ಸಂಖ್ಯೆಯನ್ನು ನಮೂದಿಸಿರುವುದು ಕಡ್ಡಾಯವಾಗಿದೆ. ನೌಕರರ ಕೆ ಜಿ ಐ ಡಿ ಸಂಖ್ಯೆ ಕಡ್ಡಾಯವಾಗಿದೆ.
ಆರೋಗ್ಯ ವಿಮೆ ಯೋಜನೆಗೆ ಒಳಪಡುವ ವೈದ್ಯಕೀಯ ಸಂಸ್ಥೆಗಳು:
ಪ್ರವರ್ಗ-1 ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳು, ಸಾರ್ವಜನಿಕ ಆಸ್ಪತ್ರೆಗಳು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, ಸಂಶೋಧನೆ ಸಂಸ್ಥೆಗಳು, ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ವೈದ್ಯಕೀಯ ತಪಾಸಣಾ ಕೇಂದ್ರಗಳು
ವೈದ್ಯಕೀಯ ಶಿಕ್ಷಣ ಇಲಾಖೆಯ ನಿಯಂತ್ರಣಕ್ಕೆ ಒಳಪಡುವ ಹಾಗೂ ಸರ್ಕಾರದಿಂದ ಅನುದಾನ ಪಡೆಯುವ ಎಲ್ಲಾ ಆರೋಗ್ಯ ಸಂಸ್ಥೆಗಳು, ರಾಜ್ಯದ ಎಲ್ಲಾ ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳು
ಪ್ರವರ್ಗ-2 ಆಯುಷ್ ಇಲಾಖೆಯ ನಿಯಂತ್ರಣಕ್ಕೆ ಒಳಪಡುವ ಎಲ್ಲಾ ಸರ್ಕಾರಿ ಆರೋಗ್ಯ ಸಂಸ್ಥೆಗಳು, ಆಯುರ್ವೇದ, ಹೋಮಿಯೋಪಥಿ, ಯುನಾನಿ ಇತ್ಯಾದಿ.
ಪ್ರವರ್ಗ-2 ಖಾಸಗಿ ವಲಯದ ಆರೋಗ್ಯ ಸಂಸ್ಥೆಗಳು, ಮಲ್ಟಿ ಸ್ಟೇಷಾಲಿಟಿ ಆಸ್ಪತ್ರೆಗಳು, ಸ್ಪೆಷಾಲಿಟಿ ಆಸ್ಪತ್ರೆಗಳು, ವಿಶೇಷ ಆಸ್ಪತ್ರೆಗಳಾದ ದಂತ ಮತ್ತು ಕಣ್ಣಿನ ಆಸ್ಪತ್ರೆಗಳು ಪ್ರವರ್ಗ4- ವೈದ್ಯಕೀಯ ತಪಾಸಣಾ ಕೇಂದ್ರಗಳು
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಸದಸ್ಯರಿಗಾಗಿ ನಗದುರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ನೌಕರರು ಕನಿಷ್ಟ ಮೂಲ ವೇತನದ ಶೇ. 1 ರಷ್ಟು ಮಾಸಿಕ ವಂತಿಗೆ ನೀಡಬೇಕು. ಈ ಯೋಜನೆಗೆ ಗ್ರೂಪ್ ಎ,ಬಿ,ಸಿ ಮತ್ತು ಡಿ ವರ್ಗದ ನೌಕರರು ಹೊಂದಿರುವ ಹುದ್ದೆಯ ವೇತನದಲ್ಲಿ ಈ ಮೊತ್ತವನ್ನು ಹಿಡಿಯಲಾಗುತ್ತದೆ. ಕೆಲವು ನಿರ್ಧಿಷ್ಟ ವರ್ಗದ ಸರ್ಕಾರಿ ನೌಕರರನ್ನು ಬಿಟ್ಟು, ಉಳಿದ ಎಲ್ಲಾ ನೌಕರರಿಗೂ ಈ ಯೋಜನೆಯು ಕಡ್ಡಾಯವಾಗಿರುತ್ತದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಕವರೇಜ್ ವ್ಯಾಪ್ತಿ
ಎಲ್ಲರಿಗೂ ಸೂಕ್ತವೆನಿಸುವ, ಪ್ರಾಥಮಿಕ ಆರೋಗ್ಯ ವೆಚ್ಚ ಭರಿಸುವ ಸ್ಟ್ಯಾಂಡರ್ಡ್ ವಿಮೆಯೇ ಆರೋಗ್ಯ ಸಂಜೀವಿನಿ. ಈ ವಿಮೆಯು ಆಸ್ಪತ್ರೆ ವೆಚ್ಚ, ವೈದ್ಯರ ಶುಲ್ಕ, ಶಸ್ತ್ರ ಚಿಕಿತ್ಸೆ ವೆಚ್ಚ, ಅರಿವಳಿಕೆ ಸಲಹೆಗಾರ, ವೆಚ್ಚ, ಔಷಧಗಳ ವೆಚ್ಚ, ಕೃತಕ ಉಸಿರಾಟ ವ್ಯವಸ್ಥೆ, ಶಸ್ತ್ರಚಿಕಿತ್ಸೆ ವೆಚ್ಚ, ಕೊಠಡಿ ವೆಚ್ಚ ಸೇರಿದಂತೆ ಮೂಲಭೂತ ಕಡ್ಡಾಯ ಕವರೇಜ್ ಹೊಂದಿರುತ್ತದೆ.