Health & Lifestyle

ರೈತರ ಮಕ್ಕಳಿಗೆ ಸಿಹಿಸುದ್ದಿ: ಶಿಕ್ಷಣದಲ್ಲಿ ಶೇ.10% ಮೀಸಲಾತಿ; 430 ಸೀಟು ಲಭ್ಯ- ಬಿ.ಸಿ ಪಾಟೀಲ್‌!

20 November, 2022 11:00 AM IST By: Hitesh
BC Patil

ರೈತರ ಮಕ್ಕಳಿಗೆ ಸರ್ಕಾರ ಈಗಾಗಲೇ ಶಿಕ್ಷಣದಲ್ಲಿ ಶೇ.10ರಷ್ಟು ಮೀಸಲಾತಿ ನೀಡುವುದಾಗಿ ಘೋಷಣೆ ಮಾಡಿದೆ. ಆದರೆ, ಕೃಷಿ ಸಚಿವ ಬಿ.ಸಿ ಪಾಟೀಲ್‌ ಅವರು ಇದೀಗ ಮತ್ತೊಂದು ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿರಿ: ರೈತರ ಮಕ್ಕಳಿಗೆ ಶುಭ ಸುದ್ದಿ-ಕೃಷಿ ಕೋರ್ಸ್ ಗಳಲ್ಲಿ ಮೀಸಲಾತಿ ಹೆಚ್ಚಳ  

ರಾಜ್ಯ ಸರ್ಕಾರವು ಈಗಾಗಲೇ ರೈತರ ಮಕ್ಕಳಿಗೆ ಕೃಷಿಯಲ್ಲಿ ಮೀಸಲಾತಿ ನೀಡುವುದಾಗಿ ತಿಳಿಸಿದೆ. ಇದೀಗ ಕೃಷಿ ಸಚಿವ ಬಿ.ಸಿ ಪಾಟೀಲ್‌ ಅವರು ಈ ನಿರ್ಧಾರದ ಬಗ್ಗೆ ರೈತರ ಮಕ್ಕಳಿಗೆ ಪರಿಚಯಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿರಿ: ರೈತರ ಮಕ್ಕಳಿಗೆ ಶೇ.40 ಮೀಸಲಾತಿ- ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಆಹ್ವಾನ 

ಈ ವಿಷಯಕ್ಕೆ ಸಂಬಂಧಿಸಿದಂತೆ ಟ್ವೀಟ್‌ ಮಾಡಿರುವ ಅವರು “ಕೃಷಿ ಇಲಾಖೆಯ ನಿವೃತ್ತ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ, ಅವರ ಸಮಸ್ಯೆಗಳನ್ನು ಆಲಿಸಬೇಕು.

ರೈತರಿಗೆ ಅಗತ್ಯ ಮಾಹಿತಿ ನೀಡುವಂತಹ ಕೆಲಸವಾಗಬೇಕು, ಸರ್ಕಾರ ರೈತರ ಮಕ್ಕಳಿಗೆ 10% ಮೀಸಲಾತಿ ಹೆಚ್ಚು ಮಾಡಿದ್ದು, ಇದರಿಂದ 4300 ಸೀಟುಗಳಲ್ಲಿ 430 ಸೀಟುಗಳು ರೈತರ ಮಕ್ಕಳಿಗೆ ಲಭ್ಯವಾಗುತ್ತವೆ” ಎಂದು ತಿಳಿಸಿದ್ದಾರೆ. 

ಒಂದು ಚಹಾಗೆ ಬರೋಬ್ಬರಿ 9 ಕೋಟಿ ರೂಪಾಯಿ!

ಏನಿದು ಶೇ.10ರಷ್ಟು ಮೀಸಲಾತಿ ?

ರಾಜ್ಯ ಕೃಷಿ ಕಾಲೇಜುಗಳಲ್ಲಿನ ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಮಾಡಲಿಚ್ಛಿಸುವ ರೈತರ ಮಕ್ಕಳಿಗೆ ರಾಜ್ಯ ಸರ್ಕಾರವು ಡಿಪ್ಲೋಮಾ ಮತ್ತು ಪದವಿ ಕೋರ್ಸ್‌ಗಳಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದೆ.

ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಪ್ಲೋಮಾ, ಬಿ.ಎಸ್.ಸಿ ಅಗ್ರಿ ಮತ್ತು ಅದರ ಸರಿಸಮಾನ ಪದವ ಕೋರ್ಸ್‌ಗಳ ಪ್ರವೇಶಕ್ಕೆ ಇರುವ ಮೀಸಲಾತಿ ಪ್ರಮಾಣವನ್ನು ಶೇ. 10 ರಷ್ಟು ಮೀಸಲಾತಿಯನ್ನು ಹೆಚ್ಚಿಸಿ ಮಹತ್ವದ ತೀರ್ಮಾನ ಕೈಗೊಂಡಿದೆ.

ಈ ಬದಲಾವಣೆಯಿಂದಾಗಿ ರೈತರ ಮಕ್ಕಳಿಗೆ ಶಿಕ್ಷಣದಲ್ಲಿ ಶೇ 50ರಷ್ಟು ಮೀಸಲಾತಿ ಲಭ್ಯವಾಗುತ್ತಿದೆ. ಈ ಹಿಂದೆ ರೈತರ ಮಕ್ಕಳಿಗೆ ಶೇ. 40 ರಷ್ಟು ಮೀಸಲಾತಿಯಿತ್ತು.

ಈಗ ಶೇ. 50 ರಷ್ಟು ಮೀಸಲಾತಿ ರೈತರ ಮಕ್ಕಳಿಗೆ ಸಿಗಲಿದೆ.

ಪ್ರತಿ ವರ್ಷ ಶೈಕ್ಷಣಿಕ ಸಾಲಿನಲ್ಲಿ ಸುಮಾರು ನಾಲ್ಕು ಸಾವಿರ ಸೀಟುಗಳಿಗೆ ದಾಖಲಾತಿ ನಡೆಯುತ್ತವೆ.  ಇದರಲ್ಲಿ ಕೃಷಿ ಕುಟುಂಬದಿಂದ ಬಂದ ಮಕ್ಕಳಿಗೆ ಶೇ. 50 ರಷ್ಟು ಮೀಸಲಾತಿ ಸಿಗಲಿದೆ.

ಡಿಪ್ಲೋಮಾ ಮತ್ತು ಪದವಿ ಕೋರ್ಸ್ ಮಾಡಲಿಚ್ಛಿಸುವ ರೈತರ ಮಕ್ಕಳಿಗೆ ಇನ್ನೂ ಮುಂದೆ ಹೆಚ್ಚಿನ ಸೀಟುಗಳು ಸಿಗಲಿವೆ.

ಇದಕ್ಕಿಂತ ಮುಂಚಿತವಾಗಿ ಬಹಳಷ್ಟು ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗದೆ ಕೃಷಿ ಕೋರ್ಸ್ ಗಳಿಂದ ವಂಚಿತರಾಗುತ್ತಿದ್ದರು.ಈಗ ರೈತರ ಮಕ್ಕಳಿಗೆ ಹೆಚ್ಚಿನ ಅವಕಾಶ ಸಿಗಲಿದೆ.

ರಾಜ್ಯದಲ್ಲಿ ಒಟ್ಟು ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಆರು ವಿಶ್ವವಿದ್ಯಾಲಯಗಳಿನವೆ.

ಬೆಂಗಳೂರು, ಧಾರವಾಡ, ರಾಯಚೂರು, ಶಿವಮೊಗ್ಗ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ, ಬೀದರ್ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ

ಅಧೀನದಲ್ಲಿ 26 ಸರ್ಕಾರಿ ಕಾಲೇಜುಗಳು, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳು ನಡೆಯುತ್ತಿವೆ. 

ಸರ್ಕಾರಿ ನೌಕರರಿಗೆ ಮತ್ತೆ ಸಿಹಿಸುದ್ದಿ: ಸಿ, ಡಿ ದರ್ಜಿ ನೌಕರರ ವರ್ಗಾವಣೆ ನಿಯಮದಲ್ಲಿ ಬದಲಾವಣೆ; ಪತಿ, ಪತ್ನಿ ಪ್ರಕರಣ ನಿಯಮ ಸಡಿಲ!