ವಿವಿಧ ಕೃಷಿ ಚಟುವಟಿಕೆಗಳಿಗಾಗಿ ಸರ್ಕಾರದಿಂದ ಭರ್ಜರಿ ಸಹಾಯಧನದ ನೆರವು ದೊರೆಯಲಿದೆ. ಇಲ್ಲಿ ರೈತರಿಗೆ ರೂ.1,25,000ದ ವರೆಗೆ ಸಬ್ಸಿಡಿಯನ್ನು ನೀಡಲಾಗುವುದು. ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ (Rashtriy Krushi Vikas Yojana) ವಿವಿಧ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಸಹಾಯಧನ ನೀಡಲಾಗುತ್ತದೆ. ಸಮಗ್ರ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳುವ ರೈತರಿಗೆ ಗರಿಷ್ಠ ರೂ. 1,25,000 ಸಬ್ಸಿಡಿ ಲಭ್ಯವಾಗುತ್ತದೆ. ವಿವಿಧ ಚಟುವಟಿಕೆಗಳಿಗೆ ಘಟಕ ವೆಚ್ಚದ ಶೇಕಡ 50 ರಷ್ಟು ಸಹಾಯಧನ ಸಿಗಲಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಉದ್ದೇಶ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ (Rashtriy Krushi Vikas Yojana) ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿಗೆ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸುವುದು ತೋಟಗಾರಿಕೆ ಹಾಗೂ ಪಶು ಸಂಗೋಪನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಪದ್ಧತಿ ಮೂಲಕ ರೈತರ ಆದಾಯ ಹೆಚ್ಚಳ ಮಾಡುವುದು. ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಬೇಸಾಯ ಪದ್ಧತಿ ಅಳವಡಿಸುವ ಮೂಲಕ ಅಧಿಕ ಇಳುವರಿ ಕೊಡುವ ತಳಿಗಳನ್ನು ಬಳಸುವುದು. ರೈತರ ಆದಾಯ ಹೆಚ್ಚಿಸಲು ಕೃಷಿ ಜೊತೆಗೆ ಇತರೆ ಆದಾಯ ಬರುವ ಉದ್ದಿಮೆಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.
ಇದನ್ನೂ ಓದಿರಿ:
ರೈತರಿಗೆ ಸಿಹಿಸುದ್ದಿ : ಹಸು-ಎಮ್ಮೆ ಖರೀದಿಗೆ ರೂ.20 ಸಾವಿರ ಸಬ್ಸಿಡಿ! ರಾಜ್ಯ ಸರ್ಕಾರದ ಭರ್ಜರಿ ಕೊಡುಗೆ!
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ಯಾವ ಯಾವ ಸೌಲಭ್ಯಕ್ಕೆ ಎಷ್ಟೆಷ್ಟು ಸಬ್ಸಿಡಿ?
ಮಳೆಯಾಶ್ರಿತ ಪ್ರದೇಶದಕ್ಕೆ (NMSARAD) ಘಟಕ ವೆಚ್ಚ ಹಾಗೂ ಸಬ್ಸಿಡಿ ಕುರಿತ ಮಾಹಿತಿ ಇಲ್ಲಿದೆ.
ಕೃಷಿ ಹೊಂಡ ನಿರ್ಮಾಣ
ನೀರು ಸಂರಕ್ಷಣೆ ಚಿಕ್ಕ ಹೊಂಡಗಳ ನಿರ್ಮಾಣಕ್ಕೆ ಅಂದಾಜು 75000 ರೂಪಾಯಿ ವೆಚ್ಚವಾಗುತ್ತದೆ. ಒಟ್ಟು ವೆಚ್ಚದ ಶೇ. 50 ರಷ್ಟು ಅಂದರೆ 37,500 ರೂಪಾಯಿ ಸಹಾಯಧನ ನೀಡಲಾಗುವುದು. ಬದುಗಳ ನಿರ್ಮಾಣ, ಟ್ರೆಂಚ್‌ಗಳ ನಿರ್ಮಾಣಕ್ಕೆ 4000 ರೂಪಾಯಿ ವೆಚ್ಚದಲ್ಲಿ 2000 ರೂಪಾಯಿ ಸಹಾಯಧನ ನೀಡಲಾಗುವುದು.
ಇತರೆ ಕೃಷಿ ಚಟುವಟಿಕೆಗಳು
ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಎರೆಹುಳು ಗೊಬ್ಬರ, ಅಜೋಲಾ ಕೃಷಿ, ಮರ ಆಧಾರಿತ ಕೃಷಿ ಕೈತೋಟಕ್ಕೆ ಒಟ್ಟು ವೆಚ್ಚದ ಶೇ. 25 ರಷ್ಟು ಸಹಾಯಧನ ಸಿಗಲಿದೆ. ಎರೆಹುಳು ಗೊಬ್ಬರ ಘಟಕಕ್ಕೆ ಅಂದಾಜು 17,500 ರೂಪಾಯಿ ವೆಚ್ಚವಾಗುತ್ತದೆ. ಇದಕ್ಕೆ ಸರ್ಕಾರದಿಂದ 8,500 ರೂಪಾಯಿ ಸಬ್ಸಿಡಿ ನೀಡಲಾಗುವುದು. ಅಜೊಲಾ ಕೃಷಿಗೆ 1,000 ರೂಪಾಯಿ ಸಹಾಯಧನ ನೀಡಲಾಗುವುದು.
ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ
ಅದೇ ರೀತಿ ಜೇನು ಕೃಷಿಗೆ ಪ್ರತಿ ಜೇನು ಗೂಡಿಗೆ 4000 ರೂಪಾಯಿ ವೆಚ್ಚವಾಗುತ್ತದೆ. ಇದರಲ್ಲಿ 1600 ಸಹಾಯಧನ ನೀಡಲಾಗುವುದು. ಮಳೆಯಾಶ್ರಿತ ಪ್ರದೇಶದ ಸಮಗ್ರ ಕೃಷಿ ಪದ್ಧತಿಗೆ ಗರಿಷ್ಠ 1,25,000 ಸಹಾಯಧನ ನೀಡಲಾಗುವುದು. MGNREGS ಅಡಿಯಲ್ಲಿ ಕಾರ್ಮಿಕರ ವೆಚ್ಚ ಭರಿಸಿ ಈ ಯೋಜನೆಯಡಿ ಸಾಮಗ್ರಿ ವೆಚ್ಚ ಭರಿಸಲಾಗುತ್ತದೆ. ಅದೇ ರೀತಿ ನೀರಾವರಿ ಪ್ರದೇಶದಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಘಟಕ ನಿರ್ಮಾಣಕ್ಕೆಸಹಾಯಧನ ನೀಡಲಾಗುವುದು.
ನೀರಾವರಿ ಪ್ರದೇಶಕ್ಕೆ ಸಿಗುವ ಸಬ್ಸಿಡಿ
ಚಿಕ್ಕ ಹೊಂಡಗಳಿಗೆ (ಲೈನಿಂಗ್ ರಹಿತ) ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು. ಘಟಕ ವೆಚ್ಚ ಅಂದಾಜು 52,500 ರೂಪಯಿ ಆಗಲಿದೆ. ಈ ಪೈಕಿ 26,250 ರೂಪಾಯಿ ಸಹಾಯಧನ ನೀಡಲಾಗುವುದು. ಅದೇ ರೀತಿ ಬದು ನಿರ್ಮಾಣ ಹೊದಿಕೆ/ ಲ್ಯಾಂಡ್ ಲೇವಲಿಂಗ್ ಗೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು. ಜಾನುವಾರು ಆಧಾರತ ಮೇವಿನ ಬೆಳೆ, ಮಿಶ್ರ ಬೆಳೆಗೆ ಶೇ. 50 ರಷ್ಟು ಸಹಾಯಧನ (ಗರಿಷ್ಠ 40,000 ರೂಪಾಯಿವರೆಗೆ) ಸಹಾಯಧನ ನೀಡಲಾಗುವುದು. ಎರೆಹುಳು ಗೊಬ್ಬರ ತಯಾರಿಗೆ ಅಂದಾಜು 17500 ರೂಪಾಯಿ ವೆಚ್ಚವಾಗುತ್ತದೆ. ಈ ಪೈಕಿ 8,500 ರೂಪಾಯಿ ಸಹಾಯಧನ ನೀಡಲಾಗುವುದು. ನರೇಗಾ (MGNREGS) ಯೋಜನೆಯಡಿ ಕಾರ್ಮಿಕರ ವೆಚ್ಚ ಭರಿಸಿ ಈ ಯೋಜನೆಯಡಿ ಸಾಮಗ್ರಿ ವೆಚ್ಚ ಭರಿಸಲಾಗುತ್ತದೆ.
50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ಮೀಸಲಾತಿಯೂ ಇದೆ
ಫಲಾನುಭವಿಗಳನ್ನು ನಿಯಮಾನುಸಾರ ಆಯ್ಕೆ ಮಾಡಲಾಗುತ್ತದೆ. ಪರಿಶಿಷ್ಟ ಜಾತಿಗೆ ಶೇ. 17,1, ಪರಿಶಿಷ್ಟ ಪಂಗಡಕ್ಕೆ ಶೇ. 6.9 ರಂತೆ ಆಯ್ಕೆ ಮಾಡಲಾಗುವುದು. ಮಹಿಳೆಯರಿಗೆ ಶೇ. 33, ರಷ್ಟು, ಅಲ್ಪಸಂಖ್ಯಾತರಿಗೆ ಶೇ. 15 ರಷ್ಟು ಆದ್ಯತೆ ನೀಡಲಾಗುವುದು.
ಅಗತ್ಯ ದಾಖಲೆಗಳು
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ರೈತರು ಸ್ವಂತ ಜಮೀನು ಹೊಂದಿರಬೇಕು.
ಪಹಣಿ ಪತ್ರ (ಆರ್‌ಟಿಸಿ) ಹೊಂದಿರಬೇಕು.
ಆಧಾರ್ ಕಾರ್ಡ್ ಇರಬೇಕು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು.
ಬ್ಯಾಂಕ್ ಪಾಸ್ಬುಕ್ ಹೊಂದಿರಬೇಕು.
ನಿರ್ದಿಷ್ಟ ಸೌಲಭ್ಯಕ್ಕೆ ಬೇಕಾದ ಇನ್ನಿತರ ಅಗತ್ಯ ದಾಖಲೆಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ವಿಚಾರಿಸಿ ಸಲ್ಲಿಸಬೇಕು.
ಕುರಿ, ಮೇಕೆ ಸಾಕಾಣಿಕೆದಾರರಿಗೆ ಭೀತಿ ಹುಟ್ಟಿಸಿದ ಹಿರೇಬೇನೆ..ಈ ರೋಗದ ತಡೆಗಟ್ಟುವಿಕೆ ಹೇಗೆ..?