Government Schemes

ಪಿಎಂ ಕಿಸಾನ್‌ 12 ನೇ ಕಂತು.. ಈ ದಿನ ರೈತರ ಖಾತೆಗೆ ಜಮಾ ಆಗಲಿದೆ ಹಣ

03 September, 2022 10:25 AM IST By: Maltesh
PM Kisan 12th installment.. The money will be deposited in the farmer's account on this day

ಮೋದಿ ಸರ್ಕಾರ ಶೀಘ್ರದಲ್ಲೇ ರೈತರಿಗೆ ಸಿಹಿಸುದ್ದಿ ನೀಡಲಿದೆ. ಹೌದು, ಕೆಲವೇ ದಿನಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣ ರೈತರ ಖಾತೆಗೆ ಬಿಡುಗಡೆಯಾಗಲಿದೆ.

PM ಕಿಸಾನ್ ಯೋಜನೆಯ 12 ನೇ ಕಂತಿಗೆ ಸಂಬಂಧಿಸಿದಂತೆ ದೊಡ್ಡ  ಸುದ್ದಿ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದೇಶಾದ್ಯಂತ ರೈತರಿಗೆ ತುಂಬಾ ಸಹಾಯಕವಾಗಿದೆ, ಏಕೆಂದರೆ ಈ ಯೋಜನೆಯ ಮೂಲಕ ಸರ್ಕಾರವು ರೈತರ ಖಾತೆಗೆ ರೂ 6000 ರ ಆರ್ಥಿಕ ಸಹಾಯವನ್ನು ಕಳುಹಿಸುತ್ತದೆ. ಈ ಮೊತ್ತವನ್ನು 1 ವರ್ಷದಲ್ಲಿ 3 ಕಂತುಗಳಲ್ಲಿ ಕಳುಹಿಸಲಾಗುತ್ತದೆ

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ 11 ಕಂತುಗಳನ್ನು ಸರ್ಕಾರದಿಂದ ರೈತರ ಖಾತೆಗೆ ಕಳುಹಿಸಲಾಗಿದೆ ಮತ್ತು ಈಗ ಸರ್ಕಾರವು ಯೋಜನೆಯ 12 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಸಿದ್ಧತೆಯನ್ನು ನಡೆಸಿದೆ. ಆದರೆ ಈ ಯೋಜನೆಗೆ ಇ-ಕೆವೈಸಿಯ ಕೊನೆಯ ದಿನಾಂಕ ಮುಗಿದಿದೆ. ಇಂತಹ ಪರಿಸ್ಥಿತಿಯಲ್ಲಿ, ಇ-ಕೆವೈಸಿ ಮಾಡದ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಈ ಬಾರಿ 12 ನೇ ಕಂತಿನ ಹಣಕ್ಕಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬಹುದು..

ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಯಾವಾಗ ಬರುತ್ತದೆ?

ರೈತರಿಗೆ ಒಳ್ಳೆಯ ಸುದ್ದಿ ಏನೆಂದರೆ, ಸೆಪ್ಟೆಂಬರ್ 15 ರ ವೇಳೆಗೆ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12 ನೇ ಕಂತನ್ನು ದೇಶದ ಎಲ್ಲಾ ರೈತರ ಖಾತೆಗಳಿಗೆ ಸಂಪೂರ್ಣವಾಗಿ ವರ್ಗಾಯಿಸುವ ನಿರೀಕ್ಷೆಯಿದೆ. ಇದಲ್ಲದೇ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಆಗಿರುವ ರೈತರ ಖಾತೆಗೆ ಮುಂದಿನ ಕಂತು ಮಾತ್ರ ವರ್ಗಾವಣೆಯಾಗಲಿದೆ ಎಂಬ ಮಾಹಿತಿ ಲಭಿಸಿದೆ.

10ನೇ ತರಗತಿ ಪಾಸ್‌ ಆದವರಿಗೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾನಲ್ಲಿ ಉದ್ಯೋಗಾವಕಾಶ

ಸಾಕಷ್ಟು ಜನ 12ನೇ ಕಂತಿನಿಂದ ವಂಚಿತರಾಗಬಹುದು

ಮಾಹಿತಿಯ ಪ್ರಕಾರ, ದೇಶದ ಸುಮಾರು 70 ಲಕ್ಷ ರೈತರು ಯೋಜನೆಯ ಮುಂದಿನ ಕಂತಿನಿಂದ ವಂಚಿತರಾಗಬಹುದು. ಆದರೆ, ವಂಚಿತ ಫಲಾನುಭವಿಗಳ ಅಂಕಿ-ಅಂಶ ಇನ್ನೂ ಸರ್ಕಾರಕ್ಕೆ ಬಂದಿಲ್ಲ. ಆದರೆ ಮುಂದಿನ 1 ರಿಂದ 2 ದಿನಗಳ ನಡುವೆ ಅವರ ಸಂಖ್ಯೆಯನ್ನು ಖಚಿತಪಡಿಸಬಹುದು ಎಂದು ವರದಿಯಾಗಿದೆ.

ಸರ್ಕಾರದ ಈ ಯೋಜನೆ ರೈತರಿಗೆ ತುಂಬಾ ಸಹಕಾರಿಯಾಗುತ್ತಿದ್ದು, ರೈತರು ದಿನದಿಂದ ದಿನಕ್ಕೆ ಈ ಯೋಜನೆಗೆ ಸೇರುತ್ತಿದ್ದಾರೆ.