ಕೆಲವರು ಬೇರೆಯವರ ಬಳಿ ಕೆಲಸ ಮಾಡುತ್ತಾರೆ, ಕೆಲವರು ಸ್ವಂತ ವ್ಯಾಪಾರ ಮಾಡುತ್ತಾರೆ. ಆದರೆ ಪ್ರತಿಯೊಬ್ಬರ ಗುರಿ ಉತ್ತಮ ಹಣ ಗಳಿಸಬೇಕು ಇದರಿಂದ ತಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂಬುದಾಗಿರುತ್ತದೆ. ಇದಕ್ಕಾಗಿ ಜನರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವುದರ ಜೊತೆ ಉಳಿತಾಯವನ್ನೂ ಮಾಡುತ್ತಾ̧ರೆ. ಇತ್ತೀಚಿಗೆ ಸಾಕಷ್ಟು ಯುವ ಜನತೆ ಸ್ವ ಉದ್ದಿಮೆಯತ್ತ ಆಕರ್ಷಿತರಾಗುತ್ತಿದ್ದಾರೆ. ಈ ಕೋವಿಡ್ ಸಾಂಕ್ರಾಮಿಕ ಬಂದ ನಂತರವಂತೂ ಕೆಲ ಯುವಕರು ನಗರಗಳಿಂದ ತಮ್ಮ ತಮ್ಮ ಊರುಗಳತ್ತ ಧಾವಿಸಿ ಸ್ವ ಉದ್ದಿಮೆ ಆರಂಭಿಸಿದ ಎಷ್ಟೋ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ.
ರೆಪೋ ರೇಟ್‌ನಲ್ಲಿ ಭಾರೀ ಏರಿಕೆ..ಸಾಲದ ಕಂತುಗಳ ಮೇಲೆ ಉಂಟಾಗುವ ಪರಿಣಾಮಗಳೇನು..?
ಇನ್ನು ಸ್ವಂತ ಉದ್ದಿಮೆಗಳ ಪ್ರೋತ್ಸಾಹಕ್ಕಾಗಿ ಕೂಡ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಈ ಯೋಜನೆಗಳ ಮೂಲಕ ಕಡ್ಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಪ್ರೋತ್ಸಾಹಧನ, ತರಬೇತಿಗಳಂತ ಸಾಕಷ್ಟು ಸವಲತ್ತುಗಳನ್ನು ನೀಡುತ್ತಿದೆ. ಸದ್ಯ ಈ ಲೇಖನದಲ್ಲಿ ಸಾಬೂನು ತಯಾರಿಕೆಯ ಉದ್ದಿಮೆಯ ಬಗ್ಗೆ ವಿವರಿಸಲಾಗಿದೆ. ಹಾಗೂ ಈ ಉದ್ದಿಮೆಗೆ ಬೇಕಾದಂತ ಕಚ್ಚಾ ವಸ್ತುಗಳು, ತಯಾರಿಕೆಯ ಕ್ರಮ ಹಾಗೂ ಸರ್ಕಾರದಿಂದ ಲಭ್ಯವಿರುವ ಸಾಲ ಸೌಲಭ್ಯಗಳ ಕುರಿತು ಸಂಕ್ಷಿಪ್ತವಾದ ಮಾಹಿತಿಯನ್ನು ನೀಡಲಾಗಿದೆ.
ಸಾಬೂನೂ ತಯಾರಿಕೆಯ ಉದ್ದಿಮೆ
ಸಾಬೂನು(ಸೋಪು) ಇದು ದೈನಂದಿನ ಅಗತ್ಯೆತಗಳ ದಿನ ಬಳಕೆಯ ವಸ್ತುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದರೇ ತಪ್ಪಾಗಲಾರದು. ಹೌದು ಯಾಕಂದ್ರೆ ಎಲ್ಲರೂ ಸಾಮಾನ್ಯವಾಗಿ ಸಾಬೂನುಗಳನ್ನು ಬಳಸುತ್ತಾರೆ. ಇದರಿಂದ ಸಾಬೂನಿಗೆ ವಿಸ್ತಾರವಾದ ಮಾರುಕಟ್ಟೆಯ ಇದೆ. ಸಾಬೂನಿನಲ್ಲಿ ಸ್ನಾನಕ್ಕೆ ಬಳಸುವ ಹಾಗೂ ಬಟ್ಟಯನ್ನು ತೊಳೆಯುವ ಸಾಬೂನುಗಳೆಂದು ವಿಂಗಡಿಸಲಾಗುತ್ತದೆ. ಉದ್ದಿಮೆಯನ್ನು ಪ್ರಾರಂಭಿಸುವ ಮೊದಲು ನಮ್ಮ ಸುತ್ತಮುತ್ತ ಹಾಗೂ ನಮ್ಮ ಬಜೆಟ್‌ನಲ್ಲಿ ಸೂಕ್ತವಾಗುವ ವರ್ಗವನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಸಾಮನ್ಯವಾಗಿ ಈ ಉದ್ದಿಮೆಗೆ ಬೇಕಾದ ಕಚ್ಚಾ ವಸ್ತುಗಳು ಯಾವುವು ಎಂದು ನೋಡುವುದಾದದರೆ ಅವುಗಳ ಪಟ್ಟಿ ಈ ಕೆಳಗಿನಂತಿದೆ.
ರೆಪೋ ರೇಟ್‌ನಲ್ಲಿ ಭಾರೀ ಏರಿಕೆ..ಸಾಲದ ಕಂತುಗಳ ಮೇಲೆ ಉಂಟಾಗುವ ಪರಿಣಾಮಗಳೇನು..?
7th Pay Commision: ಈ ತಿಂಗಳ ಅಂತ್ಯದೊಳಗೆ ಹೆಚ್ಚುತ್ತಾ ಕೇಂದ್ರ ಸರ್ಕಾರಿ ನೌಕರರ HRA..?
A.ಆಲಿವ್ ಆಯಿಲ್
B. ಕ್ಯಾಸ್ಟರ್ ಆಯಿಲ್
C. ಸುಗಂಧ ದ್ರವ್ಯಗಳು
D. ಲೈ
E. ಪ್ಯಾಕೇಜಿಂಗ್ ಮೆಟೀರಿಯಲ್ಸ್
F. ನೀರು
G. ಗ್ಲಿಸರಿನ್-ಆಧಾರಿತ ಸಾಬೂನುಗಳಿಗಾಗಿ
ಈ ವ್ಯವಹಾರ ಲಾಭದಾಯಕವೇ..?
ಸೋಪ್‌ಗಳ ಮೇಲಿನ ಲಾಭಾಂಶವು ಕಡಿಮೆ ಎಂದು ಪರಿಗಣಿಸಲ್ಪಟ್ಟಿದ್ದರೂ, FMCGಯ ಭಾಗವಾಗಿರುವುದರಿಂದ ಮತ್ತು ಆಗಾಗ್ಗೆ ಮಾರಾಟ ಮಾಡುವುದರಿಂದ, ಈ ವ್ಯವಹಾರದ ಮೂಲಕ ನೀವು ಗಳಿಸಬಹುದಾದ ಲಾಭದ ಶೇಕಡಾವಾರು 10% ರಿಂದ 25% ರ ನಡುವೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಹಾಗಾದ್ರೆ ಈ ಉದ್ದಿಮೆ ಸ್ಥಾಪಿಸಲು ಸರ್ಕಾದಿಂದಿರುವ ಲಭ್ಯವಿರುವ ಸವಲತ್ತುಗಳೇನು..?
ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬೇಕೆ?.. ಹಾಗಾದ್ರೆ ಹೀಗೆ ಮಾಡಿ ಸಾಕು..!
‘ಮುದ್ರಾ ಯೋಜನೆ’
ಸ್ವಉದ್ಯೋಗ ಮಾಡ್ಬೇಕು ಅಂತ ಆಸಕ್ತಿ ಹೊಂದಿರುವವರಿಗೆ ಈ ಯೋಜನೆ ಅಡಿಯಲ್ಲಿ ಸಾಲ ನೀಡಲಾಗುತ್ತದೆ. ಈ ಯೋಜನೆಯ ಫಲಾನುಭವಿಗಳು ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹೊರತುಪಡಿಸಿ ಉಳಿದ ಆರ್ಥಿಕ ಚಟುವಟಿಕೆಗಳಿಗೆ ಅಥವಾ ಕಿರು ಉದ್ಯಮಕ್ಕೆ ಸಾಲ ನೀಡಲಾಗುತ್ತದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ “ಮುದ್ರಾ” ಬ್ಯಾಂಕ್ ಸ್ಥಾಪಿಸಿ, ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಣ್ಣ ಉದ್ಯಮದಾರರಿಗೆ ಸಾಲವನ್ನು ನೀಡುತ್ತಿದೆ. ಈ ಸಾಲ ನೀಡೋ ಯೋಜನೆಯನ್ನು ಮೊತ್ತದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಿದ್ದಾರೆ.
ಫಲಾನುಭವಿಯ ಅರ್ಹತೆ:
ಪ್ರಧಾನಮಂತ್ರಿ ಮುದ್ರಾಯೋಜನೆಯಡಿ ಉತ್ಪಾದನೆ, ವ್ಯಾಪಾರ, ಸೇವಾ ವಲಯ, ಕೃಷಿಯೇತರ ವಾಣಿಜ್ಯ ಚಟುವಟಿಕೆ ಕೈಗೊಳ್ಳುವವರಿಗೆ ಸಾಲ ನೀಡಲಾಗುತ್ತಿದೆ. ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಾಲ ನೀಡಲಾಗುತ್ತಿದೆ. ಎಲ್ಲಾ ಸಾರ್ವಜನಿಕವಲಯದ ಬ್ಯಾಂಕ್ ಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು, ನಗರ ಸಹಕಾರಿ ಬ್ಯಾಂಕ್ ಗಳೂ ಕೂಡ ಮುದ್ರಾದ ಅಡಿಯಲ್ಲಿ ಬರುತ್ತವೆ.
ಆರ್ಥಿಕ ಹಿಂಜರಿಕೆ ರಹಿತ ಈ ಉದ್ದಿಮೆಗಳು ನಿಮ್ಮ ಕೈ ಹಿಡಿಯೋದು ಪಕ್ಕಾ
ನೀವು 80% ಬಂಡವಾಳಕ್ಕಾಗಿ ಸಾಲ ಪಡೆಯಬಹುದು!
ಈ ವ್ಯವಹಾರವನ್ನು ಪ್ರಾರಂಭಿಸಲು ನೀವು ಶೇಕಡಾ 80 ರಷ್ಟು ಆರಂಭಿಕ ಬಂಡವಾಳವನ್ನು ಸಾಲದ ರೂಪದಲ್ಲಿ ಸಹ ಪಡೆಯಬಹುದು. ಕೇಂದ್ರ ಸರ್ಕಾರದ ಮುದ್ರಾ ಯೋಜನೆಯಡಿ ಸಾಲ ಪಡೆಯುವುದು ಸುಲಭ. ಇನ್ನು ಈ ಉದ್ದಿಮೆಗೆ ಒಂದು ವರ್ಷಕ್ಕೆ ತಗಲುವು ಅಂದಾಜು ವೆಚ್ಚ 45 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಆರಂಭಿಕ ಬಂಡವಾಳದ ಮೊತ್ತವನ್ನು ನೀವು ಸೂಕ್ತ ಪ್ರೋಫೈಲ್‌ನೊಂದಿಗೆ ಬ್ಯಾಂಕ್‌ನಲ್ಲಿ ವಿಚಾರಿಸಿದರೆ ನಿಮಗೆ ಈ ಸೌಲಭ್ಯ ಸಿಗಬಹುದು. ಜೊತೆಗೆ ಇದರ ಬಡ್ಡಿಯ ದರವು ಶೇ 12 ರಷ್ಟಿದ್ದು ಈ ಉದ್ದಿಗೆ ಸೂಕ್ತವಾದದ್ದು ಎನ್ನಲಾಗಿದೆ.