Government Schemes

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

06 April, 2022 5:32 PM IST By: Kalmesh T
Good News for Farmers: Agriculture on government land, This project is a boon for agricultural aspirants

ಯಾರಿಗಾದರೂ ಸ್ವಂತ ಜಮೀನು ಇಲ್ಲದೇ ಕೃಷಿ ಮಾಡಬೇಕೆಂದಿದ್ದರೆ ಸರ್ಕಾರ ಅವರ ಆಸೆ ಈಡೇರಿಸಲು ಜಮೀನನ್ನು ಅವರಿಗೆ ನೀಡುತ್ತದೆ. ಹೌದು, ಈಗನೀವು ಸರ್ಕಾರಿ ಮತ್ತು ಬಂಜರು ಭೂಮಿಯಲ್ಲಿಯೂ ಕೃಷಿ ಮಾಡಬಹುದು. ಮೋದಿ ಸರಕಾರ ರೈತರಿಗಾಗಿ  ಹಲವು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಕೇಂದ್ರ ಸರಕಾರವೂ ತನ್ನ ಸ್ವಂತ ಭೂಮಿಯನ್ನು ರೈತರಿಗೆ ಕೃಷಿಗಾಗಿ ನೀಡುವ ಮೂಲಕ ಇದನ್ನು ಕಾರ್ಯಗತಗೊಳಿಸುತ್ತಿದೆ.

ಬಂಜರು ಮತ್ತು ಸರ್ಕಾರಿ ಭೂಮಿ ಸಾಗುವಳಿ ಯೋಜನೆ

ಇವತ್ತಿನಿಂದ ಸುಮಾರು ಒಂದು ವರ್ಷದ ಹಿಂದೆ ಅಂದರೆ 2021ನೇ ಇಸವಿಯಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸರ್ಕಾರಿ ಭೂಮಿಯನ್ನು ರೈತರಿಗೆ ಗುತ್ತಿಗೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸೂಚಿಸಿತ್ತು.

ಇದನ್ನು ಓದಿರಿ: 

Bitter Gourd :ಹೈಬ್ರೀಡ್‌ ಹಾಗಲಕಾಯಿ ಕೃಷಿ ಹೇಗೆ..ಇಲ್ಲಿದೆ ಸಿಂಪಲ್‌ ಟಿಪ್ಸ್‌

Tomato Cultivation: ಮನೆಯಲ್ಲೇ ಟೊಮೆಟೊ ಬೆಳೆಯುವುದು ಹೇಗೆ..?

ಕಾನೂನನ್ನು ಜಾರಿಗೆ ತಂದ ಮೊದಲ ರಾಜ್ಯ ಗುಜರಾತ್

ಅದರ ನಂತರ ಜನವರಿ 2021 ರಲ್ಲಿ, ಗುಜರಾತ್ ತನ್ನ ಬಂಜರು ಮತ್ತು ಫಲವತ್ತಾದ ಭೂಮಿಯನ್ನು ರೈತರಿಗೆ ಗುತ್ತಿಗೆ ನೀಡಲು ನಿರ್ಧರಿಸಿದ ಮೊದಲ ರಾಜ್ಯವಾಯಿತು. ಗುಜರಾತ್ ನಂತರ, ಯುಪಿ, ಬಿಹಾರ, ಮಧ್ಯಪ್ರದೇಶ, ಜಾರ್ಖಂಡ್, ಅಸ್ಸಾಂ, ಹಿಮಾಚಲ ಪ್ರದೇಶ ಸೇರಿದಂತೆ ಇನ್ನೂ ಹಲವು ರಾಜ್ಯಗಳು ಈ ಕಾನೂನನ್ನು ಇಲ್ಲಿಯವರೆಗೆ ಜಾರಿಗೆ ತಂದಿವೆ. ಇಂತಹ ಪರಿಸ್ಥಿತಿಯಲ್ಲಿ ಈಗ ಜನ ಸಾಮಾನ್ಯರಿಂದ ಹಿಡಿದು ರೈತನವರೆಗೂ ಸರ್ಕಾರಿ ಜಮೀನುಗಳನ್ನು ಅತಿ ಕಡಿಮೆ ಬೆಲೆಗೆ ಗುತ್ತಿಗೆ ಪಡೆದು ಕೃಷಿ ಆರಂಭಿಸಿ ಲಾಭ ಗಳಿಸಬಹುದು ಆದರೆ ಇದಕ್ಕೆ ಅಗತ್ಯವಾದ ಕೆಲವು ಷರತ್ತುಗಳಿವೆ, ಈ ಷರತ್ತುಗಳು ಯಾವುವು ಎಂದು ತಿಳಿಯೋಣ.

ಮೋದಿ ಸರ್ಕಾರದಿಂದ ರೈತರಿಗೆ ಭರ್ಜರಿ ಉಡುಗೊರೆ! ರೂ. 4000ದ ಯೂರಿಯಾ ಈಗ 266 ಕ್ಕೆ !

PM ಕಿಸಾನ್‌  ರೈತರಿಗೆ  ಬಿಗ್‌ ನ್ಯೂಸ್‌: OTP ಮೂಲಕ ಆಧಾರ್‌ ಕಾರ್ಡ್‌ e-KYC ರದ್ದು

ಮೊದಲ ಮತ್ತು ಅತ್ಯಂತ ಮುಖ್ಯವಾದ ಷರತ್ತು ಎಂದರೆ ನೀವು ಈ ಸರ್ಕಾರಿ ಜಮೀನುಗಳಲ್ಲಿ ಔಷಧೀಯ ಸಸ್ಯಗಳು ಅಥವಾ ಹಣ್ಣುಗಳನ್ನು ಬೆಳೆಯಬಹುದು. ರೈತರಲ್ಲದವರೂ ಈ ಸರ್ಕಾರಿ ಜಮೀನುಗಳನ್ನು ಗುತ್ತಿಗೆಗೆ ಪಡೆಯಬಹುದು. ಸರ್ಕಾರಿ ಭೂಮಿಯನ್ನು ಲೀಸ್‌ಗೆ ನೀಡಬೇಕೆ ಅಥವಾ ಲೀಸ್‌ಗೆ ತೆಗೆದುಕೊಳ್ಳಲು ಬಯಸುವವರಿಗೆ ನೀಡಬೇಕೆ ಎಂದು ಉನ್ನತಾಧಿಕಾರ ಸಮಿತಿ ಮತ್ತು ಜಿಲ್ಲಾಧಿಕಾರಿ ಮಾತ್ರ ನಿರ್ಧರಿಸುತ್ತಾರೆ.

Big Announce! ರೈತರ income ಹೆಚ್ಚಿಸಲು 100 ಕೋಟಿ ಮೀಸಲು CM ಬೊಮ್ಮಾಯಿ ಅವರಿಂದ Big GIft, ಬಜೆಟ್‌ನಲ್ಲಿ ಘೋಷಣೆ

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ!

ಗುಜರಾತ್‌ನಲ್ಲಿನ ಈ ಕಾನೂನಿನ ಅಡಿಯಲ್ಲಿ, ಈ ಸರ್ಕಾರಿ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಳ್ಳುವ ಮೊದಲ 5 ವರ್ಷಗಳವರೆಗೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಕೇಂದ್ರದ ಮೋದಿ ಸರ್ಕಾರವು ಕೃಷಿ ಕ್ಷೇತ್ರವನ್ನು ಮುಂದಕ್ಕೆ ಕೊಂಡೊಯ್ಯಲು ಬಹಳ ಗಂಭೀರವಾಗಿ ಕಾರ್ಯ ನಿರ್ವಹಿಸುತ್ತಿದೆ.  ಇಂತಹ ಪರಿಸ್ಥಿತಿಯಲ್ಲಿ ಈ ಕಾನೂನು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುವುದಲ್ಲದೆ, ಔಷಧೀಯ ಸಸ್ಯಗಳು ಮತ್ತು ತೋಟಗಾರಿಕೆ ಕೃಷಿಗೆ ಉತ್ತೇಜನ ನೀಡುತ್ತಿದೆ.

Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು