ಮುಖ್ಯಮಂತ್ರಿ ಅಮೃತ ಜೀವನ ಯೋಜನೆ (Chief Minister Amrut Jeevan Scheme) ಅಡಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಸುಧಾರಿತ ತಳಿಯ ಅಥವಾ ಮಿಶ್ರತಳಿಯ ಹಸು – ಎಮ್ಮೆಗಳನ್ನು ಕೊಳ್ಳಲು ರೈತರಿಗೆ ನೀಡಲಿದೆ ರೂ. 20 ಸಾವಿರ ಸಬ್ಸಿಡಿ. ರಾಜ್ಯದಲ್ಲಿ ಪಶುಪಾಲನೆ, ಹೈನುಗಾರಿಕೆ, ಕ್ಷೀರೋದ್ಯಮವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಅಮೃತ ಜೀವನ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಈ ಯೋಜನೆಯಡಿ ರೈತರಿಗೆ ಹಸು ಅಥವಾ ಎಮ್ಮೆಗಳನ್ನು ಖರೀದಿಸಲು ಇಪ್ಪತ್ತು ಸಾವಿರ ರೂಪಾಯಿಯ ಸಬ್ಸಿಡಿ ದೊರೆಯಲಿದೆ.
ಇದನ್ನೂ ಓದಿರಿ:
ಹೈನುಗಾರಿಕೆಯಲ್ಲಿ ಯಾರಿಗೆ 'ಡಬಲ್' ಲಾಭ ಬೇಕು!
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ
ಈ ಯೋಜನೆಯಡಿ ರೈತರು ತಮ್ಮ ಕೃಷಿ ಕೆಲಸದ ನಡುವೆಯೇ ಪಶುಪಾಲನೆ ಅಥವಾ ಹೈನುಗಾರಿಕೆ ನಡೆಸಲು ಹಾಲು ಕರೆಯುವ ಮಿಶ್ರತಳಿ ಹಸು ಹಾಗೂ ಸುಧಾರಿತ ತಳಿಯ ಎಮ್ಮೆ ವಿತರಿಸಲಾಗುವುದು. ಘಟಕ ವೆಚ್ಚ 62,000 ರೂಪಾಯಿ ಆಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 20,665 ರೂಪಾಯಿ ಸಹಾಯ ಧನ ನೀಡಲಾಗುವುದು. ಸಾಮಾನ್ಯ ವರ್ಗದ ರೈತರಿಗೆ 15,500 ರೂಪಾಯಿ ಸಹಾಯಧನ ನೀಡಲಾಗುವುದು.
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ಸಹಾಯಧನ ಹೊರತುಪಡಿಸಿದಂತೆ ಉಳಿದ ಮೊತ್ತವನ್ನು ಫಲಾನುಭವಿಗಳು ಸಾಲದ ರೂಪದಲ್ಲಿ Bankನಿಂದ ಪಡೆಯಬಹುದು. ಈ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ರೈತರು ಶೇ. 33 ಹಾಗೂ ಸಾಮಾನ್ಯವರ್ಗದ ಫಲಾನುಭವಿಗಳಿಗೆ ಶೇ. 25 ರಷ್ಟು ಸಹಾಯಧನ ಲಭ್ಯವಾಗಲಿದೆ. ರೈತರಿಗೆ ಆದ್ಯತೆ ಮೇರೆಗೆ ಕೂಲಿ, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಆಸಕ್ತರನ್ನು ಫಲಾನುಭವಿಗಳನ್ನಾಗಿ ಆಯ್ಕೆ ಮಾಡಲಾಗುವುದು. ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ ಶೇ.33.3, ಅಲ್ಪಸಂಖ್ಯಾತರಿಗೆ ಶೇ.15 ಹಾಗೂ ಅಂಗವಿಕಲರಿಗೆ ಶೇ.3 ರಷ್ಟು ಆದ್ಯತೆ ನೀಡಲಾಗುವುದು.
50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ
ಈ ಸೌಲಭ್ಯಕ್ಕೆ ಬೇಕಾದ ದಾಖಲೆಗಳು
ಆಧಾರ್ ಕಾರ್ಡ್ (Adhar Card)
ಪಡಿತರ ಚೀಟಿ (Ration Card)
ಇತ್ತೀಚಿನ ಫೋಟೊಗಳಿರಬೇಕು (Passport Size Photo)
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು.
ಬ್ಯಾಂಕ್ ಪಾಸ್ ಬುಕ್ (Bank PassBook)
ಅರ್ಜಿದಾರರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರಬೇಕು.
ಕುರಿ, ಮೇಕೆ ಸಾಕಾಣಿಕೆದಾರರಿಗೆ ಭೀತಿ ಹುಟ್ಟಿಸಿದ ಹಿರೇಬೇನೆ..ಈ ರೋಗದ ತಡೆಗಟ್ಟುವಿಕೆ ಹೇಗೆ..?