Government Schemes

ರಾಜ್ಯಾದ್ಯಂತ "ಗ್ರಾಮ ಒನ್" ಕೆಂದ್ರಗಳ ಫ್ರಾಂಚೈಸಿ ಆರಂಭಿಸಲು ಅರ್ಜಿ ಆಹ್ವಾನ! ಅರ್ಜಿ ಸಲ್ಲಿಕೆ ಹೇಗೆ?

10 June, 2023 4:15 PM IST By: Kalmesh T
Application Invited for Starting Franchise of Gram One Centres

Application Invited For Grama One Franchisee: ಇ-ಆಡಳಿತ ಇಲಾಖೆಯಿಂದ ರಾಜ್ಯಾದ್ಯಂತ ವಿವಿಧ ಗ್ರಾಮಗಳಲ್ಲಿ ಗ್ರಾಮ್ ಒನ್ ಕೇಂದ್ರಗಳಿಗೆ ಫ್ರಾಂಚೈಸಿಗಳನ್ನು ಆಯ್ಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯದ ಯಾವ ಯಾವ ಜಿಲ್ಲೆಗಳಲ್ಲಿ

ಶಿವಮೊಗ್ಗ, ವಿಜಯಪುರ, ಬೆಂಗಳೂರು ನಗರ, ಚಿತ್ರದುರ್ಗ, ತುಮಕೂರು, ಉತ್ತರ ಕನ್ನಡ, ಗದಗ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಧಾರವಾಡ, ರಾಮನಗರ ಈ ಜಿಲ್ಲೆಗಳ ಆಯ್ದ ಗ್ರಾಮ ಪಂಚಾಯಿತಿಗಳಲ್ಲಿ ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಸಮಗ್ರ ನಾಗರಿಕ ಸೇವಾ ಕೇಂದ್ರ "ಗ್ರಾಮ ಒನ್‌" (Grama One) ಕೇಂದ್ರಗಳನ್ನು ಫ್ರಾಂಚೈಸಿ ಆಧಾರದ ಮೇಲೆ ಸ್ಥಾಪಿಸಲು ಉದೇಶಿಸಲಾಗಿದ್ದು, ಅರ್ಹ ವ್ಯಕ್ತಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹೆಚ್ಚಿನ ವಿವರಗಳು ಮತ್ತು ಅರ್ಜಿ ಅಲ್ಲಿಕೆಗೆ ವೆಬ್‌ಸೈಟ್‌ hhtps://karnatakaone.gov.in ಅಥವಾ sevasindhu.karnataka.gov.in ಗೆ ಲಾಗಿನ್‌ ಆಗಿ Helpdesk : 90190 30487 / 84314 35031 ಅಥವಾ ಇ-ಮೇಲ್‌ gramaonedesk.cms@gmail.com ಸಂಪರ್ಕಿಸಬಹುದು.

ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ದಿನಾಂಕ 06-06-2023 ರಿಂದ 15-06-2023ರವರೆಗೆ ಸಲ್ಲಿಸಬಹುದು ಎಂದು ಇಲಾಖೆ ತಿಳಿಸಿದೆ.

ಸೂಚನೆ: ಅರ್ಜಿಗಳನ್ನು ಆನ್‌ಲೈನ್‌ಗಳಲ್ಲಿ ಮಾತ್ರ ಸಲ್ಲಿಸಬೇಕು. ಬೇರೆ ಯಾವುದೇ ರೂಪದಲ್ಲಿ ಅರ್ಜಿ ಸಲ್ಲಿಸಿದರೂ ಅದನ್ನು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ಒನ್ ಯೋಜನೆಯ ಉದ್ದೇಶ | OBJECTIVE OF KARNATAKA ONE PROJECT

"ಕರ್ನಾಟಕ ಒನ್ ಯೋಜನೆಯ ದೂರದೃಷ್ಟಿಯು "ಸರ್ಕಾರಿ ಮತ್ತು ಖಾಸಗಿ ವ್ಯವಹಾರಗಳ ನಾಗರಿಕ ಕೇಂದ್ರಿತ ಸೇವೆಗಳಿಗೆ ಯಾವುದೇ ಸಮಯದಲ್ಲಿ ಒಂದೇ ಇಂಟರ್ಫೇಸ್ ಅನ್ನು ಸಮಗ್ರ, ಅನುಕೂಲಕರ, ನ್ಯಾಯೋಚಿತ, ಪರಿಣಾಮಕಾರಿ, ಸುರಕ್ಷಿತ, ಸುಸ್ಥಿರ ಮತ್ತು ನಾಗರಿಕ ಸ್ನೇಹಿ ರೀತಿಯಲ್ಲಿ ಬಹು ವಿತರಣಾ ಮಾರ್ಗಗಳನ್ನು ಬಳಸಿಕೊಂಡು ಒದಗಿಸುವುದು.

ಕರ್ನಾಟಕ ಒನ್ ಬಗ್ಗೆ | About of KarnatakaOne

ಅನೇಕ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ಸೇವೆಗಳನ್ನು ನಾಗರಿಕ ಸ್ನೇಹಿ ರೀತಿಯಲ್ಲಿ ಒಂದೇ ಸೂರಿನಡಿ ತಲುಪಿಸಲು ಕರ್ನಾಟಕ ಸರ್ಕಾರವು ಬೆಂಗಳೂರು ಒನ್ ಅನ್ನು ಕರ್ನಾಟಕದ ಇತರ ನಗರಗಳಿಗೆ ಪುನರಾವರ್ತಿಸಲು ಕರ್ನಾಟಕ ಸರ್ಕಾರವು ಅನುಷ್ಠಾನಕ್ಕೆ ಕೈಗೆತ್ತಿಕೊಂಡಿದೆ.

Application Invited for Starting Franchise of Gram One Centres

ಪ್ರಸ್ತುತ ಕರ್ನಾಟಕ ಒನ್ (Karnataka one) ಬಳ್ಳಾರಿ, ಬೆಳಗಾವಿ, ದಾವಣಗೆರೆ, ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ತುಮಕೂರು, ಬಾಗಲಕೋಟ, ಕಾರವಾರ, ಉಡುಪಿ, ವಿಜಯಪುರ, ಬೀದರ್, ದಾಂಡೇಲಿ, ಹಾವೇರಿ, ಹಾಸನ, ಮಂಡ್ಯ, ಕೊಪ್ಪಳ, ಚಿತ್ರದುರ್ಗ, ಕೋಲಾರ, ರಾಯಚೂರು, ಯಾದಗಿರಿ ಮತ್ತು ಗದಗ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಆನ್‌ಲೈನ್ ಪಾವತಿಗಳನ್ನು ಸುಲಭಗೊಳಿಸಲು ಕರ್ನಾಟಕ ಒನ್ ಪೋರ್ಟಲ್ (www.karnatakaone.gov.in) ಮೂಲಕವೂ ಸೇವೆಗಳನ್ನು ತಲುಪಿಸಲಾಗುತ್ತಿದೆ. ಬೆಂಗಳೂರು ಹೊರತುಪಡಿಸಿ ಕರ್ನಾಟಕದ ವಿವಿಧ ನಗರಗಳಲ್ಲಿ ಸ್ಥಾಪಿಸಲಾದ ಕೇಂದ್ರಗಳನ್ನು "ಕರ್ನಾಟಕ ಒನ್ ಕೇಂದ್ರಗಳು" ಎಂದು ಹೆಸರಿಸಲಾಗಿದೆ.

Mysterious blinds village : ಮನುಷ್ಯ, ಪ್ರಾಣಿ-ಪಕ್ಷಿಗಳೆಲ್ಲವೂ ಕುರುಡರೇ ಇರುವ ಜಗತ್ತಿನ ಏಕೈಕ ಗ್ರಾಮ