ಬೆಳಗ್ಗೆ ಸ್ವಾದಿಷ್ಟ ಮತ್ತು ರುಚಿಕರ ತಿಂಡಿ ಒಳಗೊಂಡಿದ್ದರೆ ದಿನವಿಡೀ ಚೈತನ್ಯ ನಮ್ಮದಾಗುತ್ತದೆ. ಅದರಲ್ಲೂ ಉತ್ತರ ಭಾರತೀಯ ತಿನಿಸಾದ ಪರೋಟಾ ಹೆಚ್ಚು ಕ್ಯಾಲೋರಿಗಳನ್ನು ಹೊಂದಿದೆ.ಹೌದ ನಾನು ಇಲ್ಲಿ ಹೇಳುತ್ತಿರುವುದು ಆಲೂ ಪರೋಟಾ ಅಲ್ಲ, ಮೆಂತೆ ಪರೋಟಾ. ಒಮ್ಮೆ ತಿಂದು ನೋಡಿದರೆ ಮತ್ತೆ ಮತ್ತೆ ಸವಿಯಬೇಕೆನ್ನಿಸುತ್ತಿದೆ.
ಬೇಕಾಗುವ ಪದಾರ್ಥಗಳು:
- 3 ಕಪ್‍ಗೋಧಿ ಹಿಟ್ಟು(8-10 ದೊಡ್ಡ ಚಪಾತಿಗಾಗುವಷ್ಟು)
- 1 ಕಟ್ಟು ಮೆಂತೆ ಸೊಪ್ಪು
- 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಶುಂಠಿ
- 1 ಟೀಸ್ಪೂನ್ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ
- 1 ಟೀಸ್ಪೂನ್‍ಖಾರದ ಪುಡಿ
- 1/4 ಟೀಸ್ಪೂನ್ ಅರಶಿನ ಪುಡಿ
- ಉಪ್ಪು ರುಚಿಗೆ ತಕ್ಕಷ್ಟು
- 5-6 ಟೀಸ್ಪೂನ್‍ಅಡುಗೆ ಎಣ್ಣೆ
ಮೆಂತೆ ಸೊಪ್ಪಿನ ಪರೋಟ ಮಾಡುವ ವಿಧಾನ:
ಮೆಂತೆ ಸೊಪ್ಪಿನ ಎಳೆ ಭಾಗವನ್ನು ಆಯ್ದುಚೆನ್ನಾಗಿ ತೊಳೆಯಿರಿ. ಮೆಂತೆ ಸೊಪ್ಪು, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸಣ್ಣದಾಗಿ ಪೇಸ್ಟ್ ಮಾಡಿಕೊಳ್ಳಿ. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಹೆಚ್ಚಿದ ಮೆಂತೆ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಉಪ್ಪು, ಖಾರದ ಪುಡಿ ಮತ್ತು ಅರಶಿನ ಪುಡಿ ಹಾಕಿ. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾಚಪಾತಿನ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ.ಹಿಟ್ಟು ಸ್ವಲ್ಪಗಟ್ಟಿಯಾಗಿಯೇ ಇರಲಿ. ಮೇಲಿನಿಂದ 2 ಚಮಚ ಎಣ್ಣೆ ಹಾಕಿ ಪುನ: ಒಮ್ಮೆ ಕಲಸಿ ಒಂದು 10 ನಿಮಿಷ ಮುಚ್ಚಿಡಿ.
ಈಗ ಒಂದು ದೊಡ್ಡ ನಿಂಬೆ ಗಾತ್ರದ ತಯಾರಾದ ಹಿಟ್ಟನ್ನು ಗೋಧಿ ಹಿಟ್ಟಿನ ನಡುವೆ ಇಟ್ಟು ಮಡಿಚಿ ಚಪಾತಿಯಂತೆ ಗೋಲಾಕಾರವಾಗಿ ಲಟ್ಟಿಸಿ.
ಒಂದು ಹಂಚು ಅಥವಾ ನಾನ್ ಸ್ಟಿಕ್ ತವಾ ತೆಗೆದುಕೊಂಡು ಅದನ್ನು ಬಿಸಿ ಮಾಡಿ, ಜಾಗ್ರತೆಯಿಂದ ಲಟ್ಟಿಸಿದ ಪರೋಟಾವನ್ನುತವಾ ಮೇಲೆ ಹಾಕಿ ಎರಡು ಬದಿ ಕಾಯಿಸಿ. ಕಾಯಿಸುವಾಗ ಎರಡೂ ಬದಿಯೂ ಸ್ವಲ್ಪಎಣ್ಣೆ ಆಥವಾ ತುಪ್ಪ ಹಾಕಿ. ಬಿಸಿ ಬಿಸಿಯಾಗಿರುವಾಲೇ ಮೊಸರು ಅಥವಾ ಬೆಣ್ಣೆ ಅಥವಾ ಗೊಜ್ಜು ಅಥವಾ ಪಲ್ಯದೊಂದಿಗೆ ಬಡಿಸಿ.
ಲೇಖಕರು: ಶಗುಪ್ತಾ ಅ ಶೇಖ