Food and Others

ಮನೆಯಲ್ಲಿ ಶಾಂತಿ-ನೆಮ್ಮದಿ ಇರಬೇಕೇ? ಗೋಡೆಗಳ ಬಣ್ಣ ಹೀಗಿರಲಿ

30 September, 2018 6:07 PM IST By:

ಕೆಂಪು ಬಣ್ಣವು ಭಾವೋದ್ರಿಕತೆ, ಭೌತಿಕತೆ, ಧೈರ್ಯ, ನಾಟಕ, ಭಾವನೆ ಇತ್ಯಾದಿಗಳ ಸಂಕೇತವಾಗಿದೆ. ವಾಸದ ಕೊಠಡಿ(ಲಿವಿಂಗ್ ರೂಮ್)ಗೆ ಈ ಬಣ್ಣ ಹಚ್ಚಬಹುದು. ಇದು ಹಸಿವಿನ ಸಂಕೇತದ ಬಣ್ಣವು ಹೌದು. ಇದರಿಂದಾಗಿ ರೆಸ್ಟೋರೆಂಟ್ ಗಳು ವಾಸ್ತುಶಾಸ್ತ್ರವನ್ನು ಪಾಲಿಸಿ, ಗೋಡೆಗಳಿಗೆ ಕೆಂಪು ಬಣ್ಣ ಬಳಿಯುತ್ತವೆ. ಇದು ವೃತ್ತಿಪರ ಪ್ರಗತಿಗೆ ಉತ್ತೇಜನೆ ಮತ್ತು ಭೌತಿಕತೆ ಸಂತೋಷ ನೀಡುವುದು.

ನೀಲಿ ಬಣ್ಣ

ಈ ಬಣ್ಣವು ಆಗಸ ಹಾಗೂ ನೀರಿನ ಸಂಕೇತವಾಗಿದೆ. ಎರಡು ಕೂಡ ಶಾಂತಿ ಹಾಗೂ ಸ್ವತಂತ್ರಕ್ಕೆ ಸಂಬಂಧಿಸಿದೆ. ಇವೆರಡನ್ನು ಹೊರತುಪಡಿಸಿ ಇದು ಸೌಂದರ್ಯ, ಭಾವನೆ, ಸತ್ಯ, ಸೌಜನ್ಯ ಮತ್ತು ಆಧ್ಯಾತ್ಮದ ಸಂಕೇತವಾಗಿದೆ. ಈ ಬಣ್ಣವು ನೋವು ಮತ್ತು ಸಂಕಷ್ಟ ನಿವಾರಿಸುವುದು. ತಿಳಿನೀಲಿ ಬಣ್ಣವು ಧನಾತ್ಮಕತೆ ಮತ್ತು ಶಮನಕಾರಿಯಾಗಿದೆ. ಮನೆಯ ದೊಡ್ಡ ಗೋಡೆಗಳಿಗೆ ಇದನ್ನು ಬಳಸಿ. ಆದರೆ ಮನೆಯ ಸಣ್ಣ ಗೋಡೆಗಳಿಗೆ ಇದನ್ನು ಬಳಸಬೇಡಿ. ಅದರಲ್ಲೂ ಕಡುನೀಲಿ ಬಣ್ಣವನ್ನು. ಕಚೇರಿ, ಅಂಗಡಿ ಅಥವಾ ಫ್ಯಾಕ್ಟರಿಗೆ ಈ ಬಣ್ಣ ಬಳಿಯಬೇಡಿ.

ಹಸಿರು ಬಣ್ಣ

ಕಿತ್ತಳೆ ಬಣ್ಣ

ಕಿತ್ತಳೆ ಬಣ್ಣವು ಬದ್ಧತೆ, ಗುರಿ, ದೃಷ್ಟಿ, ಸಾಧನೆ ಮತ್ತು ತಾಳ್ಮೆಯ ಸಂಕೇತ. ಖಿನ್ನತೆ ಮತ್ತು ತುಂಬಾ ಒತ್ತಡಕ್ಕೆ ಒಳಗಾಗಿರುವವರ ಕೋಣೆಯ ಗೋಡೆಗೆ ಈ ಬಣ್ಣ ಬಳಿಯಿರಿ. ಕಠಿಣ ಪರಿಶ್ರಮದ ಹೊರತಾಗಿಯೂ ಯಶಸ್ಸು ನಿಮಗೆ ಸಿಗುತ್ತಿಲ್ಲವೆಂದಾದರೆ ಆಗ ನೀವು ಕಿತ್ತಳೆ ಬಣ್ಣ ಬಳಸಿ.

ನೇರಳೆ ಬಣ್ಣ

ನೇರಳೆ ಬಣ್ಣವು ಸ್ವಗೌರವ, ಸಮೃದ್ಧಿ ಮತ್ತು ಸಮತೋಲಿತ ಜೀವನದ ಸಂಕೇತವಾಗಿದೆ. ಇದನ್ನು ಪುರುಷರ ಕೋಣೆಗಳಿಗೆ ಬಳಿಯಬೇಕು. ಆತ್ಮವಿಶ್ವಾಸದ ಕೊರತೆ ಇರುವಂತಹ ವ್ಯಕ್ತಿಗಳು ಕೋಣೆಯ ಗೋಡೆಗಳಿಗೆ ಈ ಬಣ್ಣ ಬಳಸಿ. ಇದರಿಂದ ಸಾಧನೆ ಕಡೆ ದೃಷ್ಟಿ ಹರಿಸಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗುವುದು.

ಕಂದು ಬಣ್ಣ

ಕಂದು ಬಣ್ಣವು ಜೀವನದಲ್ಲಿ ಸಂತೃಪ್ತಿ ಮತ್ತು ಸ್ಥಿರತೆಯ ಸಂಕೇತವಾಗಿದೆ. ಇದು ನಿಸರ್ಗದಲ್ಲಿ ಮಣ್ಣಿನ ಸಂಕೇತವಾಗಿದೆ. ಕಂದು ಬಣ್ಣವು ಪುರುಷರಿಗೆ ಸಂಬಂಧಿಸಿದ್ದಾಗಿದೆ. ಶಾಂತಿ, ಸಂತೋಷ ಮತ್ತು ಜೀವನದಲ್ಲಿ ಸ್ಥಿರತೆ ಬಯಸುವವರು ಇದನ್ನು ಬಳಸಬಹುದು.