Food and Others

ರುಚಿಯಾದ ಶಾವಿಗೆ ಉಪ್ಪಿಟ್ಟು

24 November, 2020 7:40 AM IST By:

ಬೇಕಾಗುವ ಪದಾರ್ಥಗಳು (ಅಳತೆ ಕಪ್=240ಎಂಎಲ್)

  1. 1.5 ಕಪ್ ಶಾವಿಗೆ
  2. 3 ಕಪ್ ನೀರು
  3. 1/2 ಟೀಸ್ಪೂನ್ ಉದ್ದಿನ ಬೇಳೆ
  4. 1 ದೊಡ್ಡ ಈರುಳ್ಳಿ
  5. 1 ಟೊಮ್ಯಾಟೊ
  6. 2 ಹಸಿರು ಮೆಣಸಿನಕಾಯಿ
  7. 6 ಕರಿ ಬೇವಿನ ಎಲೆ
  8. 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ
  9. 1/4 ಟೀಸ್ಪೂನ್ ಅರಿಶಿನ ಪುಡಿ
  10. 8 ಟೀಸ್ಪೂನ್ ಅಡುಗೆ ಎಣ್ಣೆ
  11. ರುಚಿಗೆ ತಕ್ಕಷ್ಟು ಉಪ್ಪು
  12. 2 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ
  13. 1/2 ಕಪ್ ತೆಂಗಿನ ತುರಿ
  14. 1/2 ಟೀಸ್ಪೂನ್ ಸಾಸಿವೆ

ಮಾಡುವ ವಿಧಾನ

ಶಾವಿಗೆಯನ್ನು ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಈರುಳ್ಳಿ, ಟೊಮ್ಯಾಟೊ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿರು ಮೆಣಸಿನಕಾಯಿ ಕತ್ತರಿಸಿಟ್ಟುಕೊಳ್ಳಿ. ಒಂದು ಪಾತ್ರೆ ಬಿಸಿ ಮಾಡಿ ಎಣ್ಣೆ, ಸಾಸಿವೆ ಮತ್ತು ಉದ್ದಿನ ಬೆಳೆ ಹಾಕಿ. ಸಾಸಿವೆ ಸಿಡಿದ ಕೂಡಲೇ ಕರಿಬೇವು, ಕತ್ತರಿಸಿದ ಶುಂಠಿ, ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿ ಸೇರಿಸಿ.ಈರುಳ್ಳಿ ಮೆತ್ತಗಾದ ಮೇಲೆ ಟೊಮ್ಯಾಟೊ ಹಾಕಿ.

ಉಪ್ಪು ಮತ್ತು ಅರಶಿನ ಪುಡಿ ಸೇರಿಸಿ. ಟೊಮ್ಯಾಟೊ ಮೆತ್ತಗಾಗುವವರೆಗೆ ಹುರಿಯಿರಿ.ಅಳತೆ ಪ್ರಕಾರ ನೀರು ಹಾಕಿ ಕುದಿಸಿ. ನೀರು ಕುದಿಯಲು ಪ್ರಾರಂಭವಾದಾಗ ಕೂಡಲೇ ಹುರಿದಿಟ್ಟ ಶಾವಿಗೆ ಹಾಕಿ ಮುಚ್ಚಿ. ಎರಡು ನಿಮಿಷದ ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನೀರಾರುತ್ತ ಬಂದಾಗ ಮುಚ್ಚಳ ತೆಗೆದು ತೆಂಗಗಿನ ತುರಿ, ಕೊತ್ತಂಬರಿ ಸೊಪ್ಪು ಸೇರಿಸಿ ಮುಚ್ಚಿ. ಪುನ: ಮುಚ್ಚಳ ಮುಚ್ಚಿ 2-3 ನಿಮಿಷಗಳ ಕಾಲ ಬೇಯಲು ಬಿಡಿ. ಗ್ಯಾಸ್ ಆಫ್ ಮಾಡಿ. 5 ನಿಮಿಷಗಳ ನಂತರ ಬಡಿಸಿ.

ಲೇಖಕರು: ಶಗುಪ್ತಾ ಅ. ಶೇಖ