Food and Others

ಪಾಲಕ್ ಎಲೆಯ ಪಕೋಡಾ ಪಾಕ ವಿಧಾನ

30 September, 2018 4:46 PM IST By:

ಮಳೆಗಾಲದಲ್ಲಿ ಬಿಸಿ-ಬಿಸಿ ಪಕೋಡಾ ತಿನ್ನುವುದು ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಪಕೋಡಾ ಆಳವಾಗಿ ಎಣ್ಣೆಯಲ್ಲಿ ಕರಿಯುವುದರಿಂದ ಎಣ್ಣೆಯುಕ್ತವಾಗಿದ್ದು, ಡಯೆಟ್‍ಗಳಲ್ಲಿ ಇರುವವರಿಗೆ ಸೂಕ್ತ ತಿಂಡಿಯಾಗಿರುವುದಿಲ್ಲ. ಆದರೆ ಪಾಲಕ್ ಸೊಪ್ಪಿನ ಪಕೋಡಾ ಈ ಅಪವಾದದಿಂದ ದೂರ ಎನ್ನಬಹುದು. ಪಾಲಕ್ ಸೊಪ್ಪು ಬಹುಬೇಗ ಬೇಯುವುದರಿಂದ ಇದನ್ನು ಎಣ್ಣೆಯಲ್ಲಿ ದೀರ್ಘಕಾಲದ ವರೆಗೆ ಬೇಯಿಸಬೇಕಾಗುವುದಿಲ್ಲ. ಅಲ್ಲದೆ ಪಾಲಕ್ ಎಲೆಯಲ್ಲಿ ಆರೋಗ್ಯಕ್ಕೆ ಅಗತ್ಯವಾದ ಖನಿಜಗಳು ಹಾಗೂ ವಿಟಮಿನ್‍ಗಳು ಇರುತ್ತವೆ. ಇದು ಮೆದುಳಿಗೆ ಉತ್ತಮ ಪೋಷಣೆ ನೀಡುವುದು. ಕಡ್ಲೇ ಹಿಟ್ಟು, ಅಕ್ಕಿ ಹಿಟ್ಟು, ಮಸಾಲೆ ಪದಾರ್ಥ ಹಾಗೂ ಪಾಲಕ್ ಎಲೆಯ ಸಂಯೋಜನೆಯಲ್ಲಿ ಬಹು ರುಚಿಕರವಾದ ಪಕೋಡವನ್ನು ತಯಾರಿಸಬಹುದು. ಬಲು ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಇದನ್ನು ಸಾಯಂಕಾಲದ ಟೀ-ಕಾಫಿಯೊಂದಿಗೆ ಹಾಗೂ ನಿಮ್ಮ ಮನಸ್ಸು ಬಯಸಿದಾಗಲೆಲ್ಲಾ ತಯಾರಿಸಿ ಸವಿಯಬಹುದು. ಈ ರುಚಿಕರವಾದ ತಿಂಡಿಯನ್ನು ನೀವು ಸಹ ತಯಾರಿಸಬೇಕು ಎನ್ನುವ ಹಂಬಲವನ್ನು ಹೊಂದಿದ್ದರೆ ಈ ಮುಂದೆ ವಿವರಿಸಲಾದ ವಿಡಿಯೋ ಚಿತ್ರಣ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಿ.


Ingredients

ಉಪ್ಪು -ರುಚಿಗೆ ತಕ್ಕಷ್ಟು. ಎಣ್ಣೆ - ಕರಿಯಲು ಖಾರದ ಪುಡಿ -1,1/2 ಟೇಬಲ್ ಚಮಚ ಕಡ್ಲೇ ಹಿಟ್ಟು - 1 ಕಪ್ ಪಾಲಕ್ ಎಲೆ- 10-12 ಎಲೆಗಳು ಜೀರಿಗೆ -1 ಟೇಬಲ್ ಚಮಚ ಅಕ್ಕಿ ಹಿಟ್ಟು-2 ಟೇಬಲ್ ಚಮಚ ನೀರು - 1 ಕಪ್.


How to Prepare


 ಪಾಲಕ್ ಎಲೆಯನ್ನು ಬಿಡಿಸಿಕೊಳ್ಳಿ. ಒಂದು ಬೌಲ್‍ಅಲ್ಲಿ ಕಡ್ಲೇ ಹಿಟ್ಟು, ಜೀರಿಗೆ, ಅಕ್ಕಿ ಹಿಟ್ಟು, ಖಾರದ ಪುಡಿ ಮತ್ತು ಉಪ್ಪನ್ನು ಸೇರಿಸಿ. ಎಲ್ಲವನ್ನು ಚೆನ್ನಾಗಿ ಮಿಶ್ರಗೊಳಿಸಿ. ಬಿಸಿ ಎಣ್ಣೆಯನ್ನು ತೆಗೆದುಕೊಳ್ಳಿ. ತಯಾರಿಸಿಕೊಂಡ ಮಿಶ್ರಣಕ್ಕೆ ಅಗತ್ಯವಿದ್ದರೆ ಸ್ವಲ್ಪ ಸ್ವಲ್ಪವಾಗಿ ನೀರನ್ನು ಸೇರಿಸಿ, ಮೃದುವಾದ ಬೆಣ್ಣೆಯ ಹದಕ್ಕೆ ತಂದುಕೊಳ್ಳಿ. ಮಿಶ್ರಣ ಸಿದ್ಧವಾದ ಬಳಿಕ ಪಾಲಕ್ ಎಲೆಯನ್ನು ಅದರಲ್ಲಿ ಅದ್ದಿ ಖಾದಿರುವ ಎಣ್ಣೆಯಲ್ಲಿ ಬಿಡಿ. ಪಕೋಡದ ಎರಡು ಮಗ್ಗುಲಲ್ಲಿ ಚೆನ್ನಾಗಿ ಬೇಯುವಂತೆ ತಿರುವಿ. ಬಳಿಕ ಪಕೋಡವನ್ನು ಒಂದು ಪ್ಲೇಟ್‍ಗೆ ವರ್ಗಾಯಿಸಿ.