Food and Others

ಹತ್ತೇ ನಿಮಿಷದಲ್ಲಿ ಬಿಸಿ ಬಿಸಿ ರವಾ ದೋಸೆ ರಡಿ

28 June, 2020 1:31 PM IST By:

ದೋಸೆ ಎಂದಾಕ್ಷಣ, ಒಂದು ದಿನ ಮೊದಲು ರಾತ್ರಿ ನೆನೆಸಿಕೊಂಡು ಮರುದಿನ ಮಿಕ್ಸಿಯಲ್ಲಿ ರುಬ್ಬಿ ದೋಸೆ ಮಾಡುವುದನ್ನು ಕೇಳಿದ್ದೀರಿ. ಆದರೆ ಇದು ಹಾಗಲ್ಲ,  ಹತ್ತೇ ನಿಮಿಷದಲ್ಲಿ ಬಿಸಿ ಬಿಸಿ ದೋಸೆ ರಡಿಯಾಗುತ್ತದೆ, ಯಾವಾಗ ದೋಸೆ ತಿನ್ನಬೇಕೇನೆಸುತ್ತದೆಯೋ ಆಗಲೇ ಇದು ರಡಿಯಾಗುತ್ತದೆ. ಆರೋಗ್ಯಕರ ಗುಣವನ್ನು ಒಳಗೊಂಡಿರುವ ಈ ದೋಸೆಯು ವಿಶೇಷ ರುಚಿಯನ್ನು ನೀಡುವುದು.ಗರಿಗರಿಯಾಗಿ ಬರುವ ಈ ದೋಸೆಯು ಎಲ್ಲಾ ವಯೋಮಾನದವರು ಸಹ ಸವಿಯಲು ಬಯಸುವರು. ಇದನ್ನು ಮುಂಜಾನೆಯ ತಿಂಡಿ ಅಥವಾ ಸಾಯಂಕಾಲದ ತಿಂಡಿಯನ್ನಾಗಿಯೂ ಸವಿಯಬಹುದು. ಬಹಳ ಸುಲಭವಾಗಿ ಕರಗುವ ರವಾ ಜೀರ್ಣಕ್ರಿಯೆಗೆ ಅನುಕೂಲ ಮಾಡುವುದು. ಆರೋಗ್ಯಕರ ಉಪಹಾರ ಹೊಂದಲು ಬಯಸುವವರಿಗೆ ರವಾ ದೋಸೆಯು ಅತ್ಯುತ್ತಮವಾದ ಆಯ್ಕೆಯಾಗುವುದು. ಇದನ್ನು ನೀವು ಮನೆಯಲ್ಲಿ ಪ್ರಯತ್ನಿಸಿ, ನಿಮ್ಮವರಿಗೆ ಸವಿಯಲು ನೀಡಿ.

ಪ್ರಮುಖ ಸಾಮಗ್ರಿ

  • 250  ಗ್ರಾಮ್ಸ್‌ ರವಾ,
  •  125 ಗ್ರಾಂ ಮೊಸರು
  • 6 ಚಮಚ (ಟೀ ಸ್ಪೂನ್) ಗೋದಿ ಹಿಟ್ಟು

ಮುಖ್ಯ ಅಡುಗೆಗೆ

  • ಬೇಕಿಂಗ್ ಸೋಡ್ 1 ಟೀ ಸ್ಪೂನ್
  • 1-1/2 ಟೀ ಸ್ಪೂನ್ ಜೀರಿಗೆ
  • ಅಗತ್ಯಕ್ಕೆ ತಕ್ಕಷ್ಟು salt

ಹೇಗೆ ಮಾಡುವುದು: ಬಿಸಿ ಬಿಸಿ ರವಾ ದೋಸೆ

Step 1:

ರವಾ ಮತ್ತು ಜೀರಿಗೆಯನ್ನು ಮಿಕ್ಸ್ ಮಾಡಿ ಮಿಕ್ಸರ್ ನಲ್ಲಿ ಗ್ರೈಂಡ್ ಮಾಡಬೇಕು.  ರುಬ್ಬಿಕೊಂಡ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಬೇಕು. ಪಾತ್ರೆಯಲ್ಲಿದ್ದ ರವಾನಲ್ಲಿ ಆರು ಸ್ಪೂನ್ ಗೋದಿ ಹಿಟ್ಟು ಮಿಕ್ಸ್ ಮಾಡಬೇಕು. ಅದರಲ್ಲಿ ಮೊಸರು ಸೇರಿಸಬೇಕು. ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಟ್ಟುಕೊಳ್ಳಬೇಕು. ಹೆಚ್ಚು ನೀರು ಆಗಿರಬಾರದು, ಕಡಿಮೆಯೂ ಹಾಕಬಾರದು. ದೋಸೆ ಹಿಟ್ಟಿನಂತೆ ಮಾಡಿಕೊಳ್ಳಬೇಕು..

Step 2:

10 ನಿಮಿಷದವರಿಗೆ ನೆನೆಹಾಕಬೇಕು. ಏಕೆಂದರೆ ರವಾ ನೀರನ್ನು ಹೀರಿಕೊಳ್ಳುತ್ತದೆ. ಹತ್ತು ನಿಮಿಷಗಳ ನಂತರ ಹಿಟ್ಟು ದಪ್ಪವಾಗಿದ್ದರೆ ಸ್ವಲ್ಪ ನೀರು ಸೇರಿಸಬೇಕು. ಇದರಲ್ಲಿ ರುಚಿಗೆ ತಕ್ಕಂತೆ ಉಪ್ಪು ಸೇರಿಸಿಕೊಳ್ಳಬೇಕು. ಇದರಲ್ಲಿ ಒಂದು ಟೀ ಸ್ಪೂನ್ ಬೇಕಿಂಗ್ ಸೋಡಾ ಸೇರಿಸಿಕೊಳ್ಳಬೇಕು.

Step 3:

 ದೋಸೆ ತವೆಯನ್ನು ಬಿಸಿಯಾಗಲು ಇಡಿ.- ದೊಸೆ ತವೆ ಬಿಸಿಯಾದ ಬಳಿಕ ನಾನ್ ಸ್ಟಿಕ್ ಮಾಡಲು ಎರಡು ಹನಿ ಎಣ್ಣೆ ಹಾಕಿ  ಒಂದು ಫೋಕ್ ಸ್ಪೂನ್ ನಲ್ಲಿ ಅರ್ಧ ಕಟ್ ಮಾಡಿದ ಉಳ್ಳಗಡ್ಡಿಯಿಂದ ನೀರಲ್ಲಿ ಹಾಕಿ ತವೆ ಮೇಲೆ ಸುತ್ತಬೇಕು. ಈಗ ನಿಮ್ಮ ನಾನ್ ಸ್ಟಿಕ್ ತವೆ ರಡಿಯಾಗುತ್ತದೆ. ನಂತರ ತವೆ ಮೇಲೆ ಹಿಟ್ಟನ್ನು ಹಾಕಿ, ದೋಸೆಯನ್ನು ನಿಧಾನವಾರಿ ಎರೆಯಿರಿ.

Step 4:

ದೋಸೆಯು ಚೆನ್ನಾಗಿ ಬೆಂದು ಕಂದು ಬಣ್ಣಕ್ಕೆ ತಿರುಗಿದ ಮೇಲೆ ಎಣ್ಣೆ ಅಥವಾ ಬೆಣ್ಣೆ  ಮೇಲ್ಗಡೆ ಹಾಕಬಹುದು. ನಂತರ ಕಾವಲಿಯಿಂದ ತೆಗೆಯಿರಿ. - ನಿಮ್ಮ ಆಯ್ಕೆಗೆ ಅನುಗುಣವಾಗಿ ಶೇಂಗಾ ಚಟ್ನಿ, ಪಲ್ಯ ಅಥವಾ ಗ್ರೇವಿಯೊಂದಿಗೆ ಸವಿಯಿರಿ.

 -------ಸುನಿತಾ