Food and Others

ಪಟಾಪಟ್ ಬಿಸಿ ಬಿಸಿ ತುಪ್ಪಾನ್ನ ಮಾಡಲು ಇಲ್ಲಿದೆ ಹೊಸ ವಿಧಾನ

23 November, 2020 12:46 PM IST By:

ನಿಮ್ಮ ಮನೆಗೆ  ಧಿಡೀರ್ ಅಂತ ಅತಿಥಿಗಳು ಬಂದಾಗ ಸಾಂಬಾರು ಪಲ್ಯೆ ಇಲ್ಲವೆಂದು ಚಿಂತೆ ಬೇಡ,  ಅತಿಥಿಗಳಿಗೆ ವಿಶೇಷ ಏನಾದರೂ ಮಾಡಬೇಕೆಂದುಕೊಂಡಿದ್ದರೆ  ಬಿಸಿ ಬಿಸಿ ತುಪ್ಪಾನ್ನ  ಮಾಡಬಹುದು. ಹೌದು,,, ದಿಢೀರನೇ ತುಪ್ಪಾನ್ನ ಮಾಡಹುದು ಹೇಗೆ ಎಂಬುದನ್ನು ತಿಳಿಯಲು ಈ ಮಾಹಿತಿ ಓದಿ.

ಬೇಕಾಗುವ ಪದಾರ್ಥಗಳು

  1. ಬಾಸುಮತಿ /ಸೋನ ಮಸೂರಿ ಅಕ್ಕಿ
  2. ತುಪ್ಪ
  3. ಗೋಡಂಬಿ
  4. ಒಣದ್ರಾಕ್ಷಿ
  5. ಬೆಳ್ಳುಳ್ಳಿ
  6. ದಾಲ್ಚಿನಿ
  7. ಏಲಕ್ಕಿ
  8. ಕೊತ್ತಂಬರಿ ಸೊಪ್ಪು
  9. ಉಪ್ಪು
  10. ಈರುಳ್ಳಿ

ಮಾಡುವ ವಿಧಾನ:

ಅಕ್ಕಿಯನ್ನು ತೊಳೆದು ಚೆನ್ನಾಗಿ ಅದರ ನೀರನ್ನು ಬಸಿಯಿರಿ. ಅಗಲವಾದ ಪಾತ್ರೆಯಲ್ಲಿ 3 ಚಮಚ ತುಪ್ಪವನ್ನು ಕಾಯಿಸಿ ಅದಕ್ಕೆ ಒಂದು ಇಡಿ ಈರುಳ್ಳಿಯ ಹೋಳುಗಳನ್ನು ಹಾಕಿ ಬೇಯಿಸಿ.ಅದು ಕಂದು ಬಣ್ಣಕ್ಕೆ ತಿರುಗುವಾಗ ಒಲೆಯಿಂದ ತೆಗೆದಿಡಿ.ಸ್ವಲ್ಪ ತುಪ್ಪದಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ಹುರಿದಿಡಿ.

ಇನ್ನು ಸ್ವಲ್ಪ ತುಪ್ಪದೊಂದಿಗೆ ಶುಂಠಿ, ಬೆಳ್ಳುಳ್ಳಿ, ಏಲಕ್ಕಿ, ದಾಲ್ಚಿನಿಯನ್ನು ಹದವಾಗಿ ಹುರಿಯಿರಿ. ಇನ್ನುಳಿದ ಈರುಳ್ಳಿ ಹೋಳುಗಳನ್ನು ಅದರೊಂದಿಗೆ ಬೆರೆಸಿ ಕೈಬಿಡದಂತೆ ಹುರಿಯುತ್ತಾ ಇರಿ. ಇದಕ್ಕೆ ಅಕ್ಕಿಯನ್ನು ಹಾಕಿ ನೀರನ್ನು ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿ. ನೀರು ಕುದಿಯಲು ಪ್ರಾರಂಭವಾದಾಗ ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ.

ಪಾತ್ರೆಯಲ್ಲಿನ ಅಕ್ಕಿ ಬೆಂದು ಅದರ ನೀರು ಪೂರ್ತಿ ಆವಿಯಾದ ನಂತರ ಒಲೆಯಿಂದ ಕೆಳಗಿಳಿಸಿ. ಹುರಿದಿಟ್ಟ ಈರುಳ್ಳಿ, ಗೋಡಂಬಿ, ಒಣದ್ರಾಕ್ಷಿಗಳನ್ನು ಬೆರೆಸಿ ಬಿಸಿಯಾಗಿ ಬಡಿಸಿ.

ಲೇಖಕರು: ಶಗುಪ್ತಾ ಅ ಶೇಖ