Food and Others

Egg ಎಗ್‌ ಮಸಾಲ ಪಲಾವ್‌ ಮಾಡುವ ಸರಳ ವಿಧಾನ ಇಲ್ಲಿದೆ!

17 April, 2023 5:34 PM IST By: Hitesh
Here's a simple recipe for making Egg Masala Palav!

ನೀವು ತರಕಾರಿ ಪಲಾವ್‌, ಪನೀರ್‌ ಪಲಾವ್‌ ಟ್ರೈ ಮಾಡಿರ್ತೀರಿ, ಆದರೆ ಹೊಸ ತರದ ಆಹಾರ ಟ್ರೈ ಮಾಡಿದ್ದೀರಾ ?

ಅದಕ್ಕೆ ನಿಮಗಾಗಿ ಇಲ್ಲೊಂದು ಭಿನ್ನವಾದ ರೆಸಿಪಿ ಪರಿಚಯಿಸುತ್ತಿದ್ದೇವೆ. ಅದೇ ಮೊಟ್ಟೆ ಪಲಾವ್‌ ಬಗ್ಗೆ. ಹಾಗಿದ್ರೆ ಈ ಮೊಟ್ಟೆ ಪಲಾವ್‌ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್‌ ರೆಸಿಪಿ.

ಮೊಟ್ಟೆ ಪಲಾವ್‌ಗೆ ಬೇಕಾಗುವ ಸಾಮಾಗ್ರಿಗಳು:

ಬೇಯಿಸಿದ ಮೊಟ್ಟೆ - 12

ಅಕ್ಕಿ- 2 ಕಪ್

ಘನಾಕಾರದ ಪನೀರ್- 2 ಕಪ್

ಮೆಣಸಿನ ಪುಡಿ- 3 ಚಮಚ

ಅರಶಿನ ಪುಡಿ- 1/4 ಚಮಚ

ಜೀರಿಗೆ ಪುಡಿ- 1 ಚಮಚ

ಬಟಾಣಿ- 2 ಕಪ್

ಕೆನೆಮೊಸರು- ಅರ್ಧ‌ ಕಪ್‌

ನೀರು- ಅಗತ್ಯಕ್ಕೆ ತಕ್ಕಷ್ಟು

ಟೊಮೆಟೊ ಪ್ಯೂರಿ - 1 ಕಪ್

ಈರುಳ್ಳಿ  - 2

ಎಣ್ಣೆ- ಸ್ವಲ್ಪ

ಗರಂ ಮಸಾಲ- 2 ಟೀ ಚಮಚ

ಉಪ್ಪು- ರುಚಿಗೆ ತಕ್ಕಷ್ಟು

ಗೋಡಂಬಿ- 4

ತೆಂಗಿನಕಾಯಿ-  ಅರ್ಧ ಕಪ್

ಗಸಗಸೆ  - 2 ಚಮಚ (ಚನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಿ)

ಕೊತ್ತಂಬರಿ ಸೊಪ್ಪು - ಸ್ವಲ್ಪ

ಬೆಳ್ಳುಳ್ಳಿ ಶುಂಠಿ ಪೇಸ್ಟ್- 2 ಚಮಚ

ಇದನ್ನು ಮಾಡುವ ವಿಧಾನ

ಮೊದಲು ಪನೀರ್‌ ಅನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.

ಸ್ಟೌವ್‌ ಮೇಲೆ ಒಂದು ಬಾಣಲೆ ಇರಿಸಿ ಕಾದ ನಂತರ ಸ್ವಲ್ಪ ಎಣ್ಣೆ ಸೇರಿಸಿ ಪರೀರ್‌ ತುಂಡುಗಳನ್ನು ಸೇರಿಸಿ ಹಗುರವಾಗಿ ಹುರಿದಿಟ್ಟುಕೊಳ್ಳಿ.

ಕುಕ್ಕರ್‌ ಇಟ್ಟು ಅದಕ್ಕೆ ಎಣ್ಣೆಯನ್ನು ಕಾಯಿಸಿ, ಕತ್ತರಿಸಿಟ್ಟ ಈರುಳ್ಳಿಯನ್ನು ಹಾಕಿ ಚನ್ನಾಗಿ ಫ್ರೈ ಮಾಡಿ.

ಮುಂದೆ ಅದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ ಹುರಿಯಿರಿ. ನಂತರ ಮೆಣಸಿನ ಪುಡಿ, ಅರಶಿನ, ಜೀರಿಗೆ ಪುಡಿ ಸೇರಿಸಿ ಮಿಕ್ಸ್‌ ಮಾಡಿ.

ಎರಡು ನಿಮಿಷ ಮೀಡಿಯಂ ಫ್ಲೇಂನಲ್ಲಿಟ್ಟು(ಸಣ್ಣ ಬೆಂಕಿಯಲ್ಲಿ) ಮಿಕ್ಸ್‌ ಮಾಡಿ. ಇದಕ್ಕೆ ಟೊಮೆಟೊ ಪ್ಯೂರಿ, ಬಟಾಣಿ, ಅಕ್ಕಿ, ನೀರು ಸೇರಿಸಿ ಚೆನ್ನಾಗಿ ಕಲಸಿ.

ನಂತರ ಮಿಕ್ಸಿಗೆ 4 ಗೋಡಂಬಿ, ಅರ್ಧ ಕಪ್ ತೆಂಗಿನಕಾಯಿ‌, 2 ಚಮಚ ಗಸಗಸೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.

ಈ ಪೇಸ್ಟನ್ನು ಸಹ ಕುಕ್ಕರಿಗೆ ಸೇರಿಸಿ. ನಂತರ ಪನೀರ್, ಮೊಟ್ಟೆಗಳು, ಕೆನೆಮೊಸರು ಮತ್ತು ಗರಂ ಮಸಾಲಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3 ವಿಸಿಲ್‌ ಬರುವವರೆಗೆ ಬಿಡಿ.

ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸವಿಯಲು ಮೊಟ್ಟೆ ಪಲಾವ್‌ ಸಿದ್ಧವಾಗುತ್ತದೆ.