ಆತ್ಮೀಯರೇ ತಮ್ಮೆಲ್ಲರಿಗೂ ಗೊತ್ತು ಹತ್ತರಕಿ ಪಲ್ಲೆ ಎಂದು ಉತ್ತರ ಕರ್ನಾಟಕದಲ್ಲಿ ಆಡುಭಾಷೆಯಲ್ಲಿ ಕರೆಯಲ್ಪಡುವ ಇದು ಅತ್ಯಂತ ವಿಶೇಷವಾದ ಗುಣವನ್ನು ಹೊಂದಿದೆ.
ಇದು ಮನುಷ್ಯನ ದೇಹಕ್ಕೆ ಹಲವಾರು ರೀತಿ ಸಹಾಯ ಮಾಡುತ್ತದೆ.ಇದಕ್ಕೆ ಯಾವುದೇ ರೀತಿ ಬಿತ್ತಿ ಉಳುಮೆಮಾಡಿ ಬೆಳೆಸುವುದು ಅವಶ್ಯಕತೆ ಇಲ್ಲ. ಇದು ತಾನೇ ಗಾಳಿಯ ಪ್ರಸಾರದಿಂದ ಬೀಜಗಳು ಹಲವೆಡೆ ಬಂದು ಬೀಳುತ್ತವೆ. ನಂತರ ತಾನಾಗಿಯೇ ಏಳುತ್ತದೆ. ಇದನ್ನು ನಾವು ಒಂದು ಜೋಳದ ಬೆಳೆಯಲ್ಲಿ ಅತ್ಯಂತ ಹೆಚ್ಚು ವಾಗಿ ಕಾಣಬಹುದು.ಮೊದಲು ಹಿಂದಿನ ಕಾಲದಲ್ಲಿ ಯಾರಾದರೂ ಹೊಲಕ್ಕೆ ಹೋಗಿ ಅಲ್ಲಿ ಬುತ್ತಿ ಬಿಚ್ಚಿ ಊಟ ಮಾಡುವ ಸಮಯದಲ್ಲಿ ಹತ್ತರಕಿ ಪಲ್ಲೆ ಯನ್ನು ತಿನ್ನುತ್ತಿದ್ದರು.ಆದರೆ ಕ್ರಮೇಣವಾಗಿ ಇದರ ಬಗ್ಗೆ ಯಾರು ಅಷ್ಟು ಅರಿತಿಲ್ಲ, ಇದರಲ್ಲಿ ಪೌಷ್ಟಿಕಾಂಶಗಳು ಅತ್ಯಧಿಕವಾಗಿದೆ. ಇದಕ್ಕೆ ಆಂಗ್ಲ ಭಾಷೆಯಲ್ಲಿ Dandelion ಅಂತ ಕರೆಯಲಾಗುತ್ತದೆ. ಮತ್ತು ಹಲವಾರು ಕಂಪನಿಗಳು ಇದೇ ಹೆಸರಿನಿಂದ ಹರ್ಬಲ್ ಔಷಧಿಗಳನ್ನು ತಯಾರಿಸಿ ದುಬಾರಿ ವೆಚ್ಚಕ್ಕೆ ಮಾರುತ್ತಿದ್ದಾರೆ.
ಹತ್ತರಕಿ( ಹಕ್ಕರಿಕೆ) ಸೊಪ್ಪಿನ ಔಷಧೀಯ ಗುಣಗಳು
* ಹೊಟ್ಟೆಯಲ್ಲಿ ಅಂದರೆ ಮೂತ್ರಪಿಂಡದಲ್ಲಿ ಹರಳು ಆಗುವುದನ್ನು ತಡೆಗಟ್ಟುತ್ತದೆ.ಮತ್ತು glycoxylate and reductase ಎಂಬ ಕಿಣ್ವಗಳು ಇದರ ಎಲೆಗಳಲ್ಲಿ ಇದೆ.
* ಈ ಸೊಪ್ಪು ತಿನ್ನುವುದರಿಂದ ಬಳಲಿಕೆ ಮತ್ತು ಆಯಸ್ಸು ದೂರವಾಗುತ್ತದೆ.ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ.
* ದೇಹದ ತೂಕ ಇಳಿಸಲು ಸಹಕಾರಿಯಾಗಿದೆ ಮತ್ತು ದೇಹಕ್ಕೆ ಬಲ ನೀಡುತ್ತದೆ.
*ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.ಚರ್ಮರೋಗಗಳು ಸಹ ನಿಯಂತ್ರಣ ಮಾಡುತ್ತದೆ.
* ಗರ್ಭಿಣಿ ಸ್ತ್ರೀಯರು ಮತ್ತು ಹಾಲುಣಿಸುವ ತಾಯಂದಿರಿಗೆ ಇದು ತಿನ್ನುವುದರಿಂದ ಅತ್ಯಂತ ಹೆಚ್ಚು ಪೌಷ್ಟಿಕಾಂಶ ನೀಡುತ್ತದೆ.
* ಆಧುನಿಕ ದಿನಗಳಲ್ಲಿ ಸಂಶೋಧನೆ ಪ್ರಕಾರ ಇದು ಏಡ್ಸ್ ರೋಗ ಮತ್ತು ಕ್ಯಾನ್ಸರ್ ರೋಗಕ್ಕೆ ಪರಿಣಾಮಕಾರಿಯಾಗಿದೆ ಎಂದು ಹಲವಾರು ವಿಜ್ಞಾನಿಗಳು ಹೇಳುತ್ತಿದ್ದಾರೆ.
ಲೇಖಕರು: ಮುತ್ತಣ್ಣ ಬ್ಯಾಗೆಳ್ಳಿ