Food and Others

ಗರಮ್ ಗರಮ್ ಸಾಬುದಾನ ಪಕೋಡಾ

01 July, 2020 7:18 PM IST By:

ಕೆಲಸ ಮುಗಿಸಿ ಸಂಜೆ ಮನೆಗೆ ಬರುತ್ತಿದ್ದಂತೆ ಏನಾದರೂ ತಿನ್ನಬೇಕೆನಿಸುತ್ತದೆ. ರಜಾ ದಿನಗಳಲ್ಲಂತು ನಾಲಿಗೆಗೆ ರುಚಿಕೊಡುವ ಯಾವುದಾದರೂ ಪದಾರ್ಥಗಳನ್ನು ಮಕ್ಕಳೊಂದಿಗೆ ಸೇವಿಸುವದು ಮಜಾನಾ ಬೇರೆ.  ಗರಿಗರಿಯಾಗಿ ಕಾಫಿ/ಟೀ ಜೊತೆ ತಿನ್ನಲು ಏನಾದರೂ ಇದ್ದರೆ ಎಷ್ಟು ಚೆನ್ನ ಅನಿಸುತ್ತದೆ ಅಲ್ವಾ? ಪಾಲಕ್ ಪಕೋಡಾ, ಈರುಳ್ಳಿ ಪಕೋಡಾ ಕೇಳಿದ್ದೀರಿ ತಿಂದಿದ್ದೀರಿ. ಪಕೋಡಾ ರುಚಿಯಂತೂ ಎಲ್ಲರಿಗೂ ಗೊತ್ತು. ಆದರೆ ಸಾಬುದಾನ ಪಕೋಡ .....ತಿಂದಿದ್ದೀರಾ...

ಈಗ ಲಾಕ್ಡೌನ್ ಆದಮೇಲೆ ಎಲ್ಲಾ ಬಂದ್ ಆಗಿ ಹೊರಗಡೆ ಕುರುಕಲು ತಿಂಡಿ ಸೇವಿಸಲು ಭಯವಾಗುತ್ತದೆ. ಈಗ ಹೊರಗಡೆ ಹೋಗಬೇಕಿಲ್ಲ., ಮನೆಯಲ್ಲಿಯೇ ಕುಳಿತು ನಿಮ್ಮ ಕುಟುಂಬದೊಂದಿಗೆ ಸಾಬುದಾನ ಪಕೋಡಾ  ತಿಂದು ಮಸ್ತ್ ಮಜಾ ಮಾಡಿ. ಮತ್ತೇ ಮತ್ತೇ ತಿನ್ನಬೇಕೆನಿಸುತ್ತದೆ .ಯೋಚನೆ ಏಕೆ ಆರೋಗ್ಯಕ್ಕೂ ಒಳ್ಳೆಯದಾಗಿರುವ  ಸಾಬುದಾನ ತಂದು ಈ ಪಕೋಡ ಮಾಡಿ ರುಚಿ ನೋಡಿ.

ಬೇಕಾಗುವ ಸಾಮಗ್ರಿಗಳು

- ಸಾಬುದಾನ- 1 ಕಪ್

- ಶೇಂಗೀ ಬೀಜ ಪುಡಿ 3 ಚಮಚ

- ಶೇಂಗಾ ಬೀಜಿ ಹುರದು ಮೇಲ್ಪದರು ತೆಗೆದು ಎರಡು ತುಂಡು ಮಾಡಿದ್ದು ಮೂರು ಚಮಚ

- 3 ರಿಂದ 4 ಹಸಿ ಮೆಣಸಿನ ಕತ್ತರಿಸಿ ರುಬ್ಬಿಕೊಳ್ಳಬೇಕು

- ಅಲ್ಲ ಒಂದು ಚಮಚ

- ಜೀರಾ ಪೌಡರ್ ½ ಚಮಚ

- ಜೀರಾ ½

- ಕೋತಮೀರ ಎರಡು ದಂಟು

- 7.8 ಕರಿಬೇವು ಕತ್ತರಿಸಿಕೊಳ್ಳಬೇಕು

- ನಾಲ್ಕು ಆಲುಗಡ್ಡೆ ಕುದಿಸಿಕೊಳ್ಳಬೇಕು

- ಉಪ್ಪು- ರುಚಿಗೆ ತಕ್ಕಷ್ಟು

- ಎಣ್ಣೆ

ಮಾಡುವ ವಿಧಾನ

- ಒಂದು ಕಪ್ಪು ಸಾಬುದಾನವನ್ನು ಎರಡು ಮೂರು ಸಲ ನೀರಿನಲ್ಲಿ ತೊಳೆದುಕೊಳ್ಳಬೇಕು. ನಂತರ ಅರ್ಧಗಂಟೆ ನೀರಿನಲ್ಲಿ ನೆನೆಯಿಡಬೇಕು. ಅರ್ಧ ಗಂಟೆಯ ನಂತರ ಎಲ್ಲಾ ನೀರು ಸೋಸಬೇಕು. ಎರಡು ಗಂಟೆಗಳ ಕಾಲ ಹಾಗೆ ಇಡಬೇಕು. ನಂತರ ಮೆಣಸಿನಕಾಯಿ, ಜೀರಿಗೆ, ಅಲ್ಲ ಪೇಸ್ಟ್, ಕೋತಮಿರ್, ಶೇಂಗಾಪುಡಿ, ಶೇಂಗಾ ಬೀಜಿ, ಉಪ್ಪು ರುಚಿಗೆ ತಕ್ಕಂತೆ ಸೇರಿಸಿ ಮಿಕ್ಸ್ ಮಾಡಬೇಕು ಮೆಂತ್ಯೆ ಸೊಪ್ಪು, ಹಸಿಮೆಣಸಿನಕಾಯಿ ಒಂದು ಪಾತ್ರೆಗೆ ಹಾಕಿ ಕಲಸಿಕೊಳ್ಳಿ.

- ಕುದಿಸಿದ್ದ ನಾಲ್ಕು ಆಲುಗಡ್ಡೆಯನ್ನು ಹಿಸುಕಿದ ನಂತರ ಸಾಬುದಾನದಲ್ಲಿ ಸೇರಿಸಿಕೊಳ್ಳಬೇಕು. ನಂತರ ಗೋದಿ ಹಿಟ್ಟಿನಂತೆ ಮಾಡಿಕೊಳ್ಳಬೇಕು. ನಂತರ ಸ್ವಲ್ಪ ಮಿಕ್ಸ್ ಮಾಡಿದ್ದ ಸಾಬುದಾನ ತೆಗೆದುಕೊಂಡು ಸಣ್ಣ ಉಂಡೆಗಳಾಗಿ ಮಾಡಿ ವಡಾ ಆಕಾರದಂತೆ ಮಾಡಿಕೊಳ್ಳಬೇಕು. ನಂತರ ಹೀಗೆ ಎಲ್ಲಾ ಸಾಬುದಾನದಿಂದ ಮಾಡಿ ಇಟ್ಟುಕೊಳ್ಳಬೇಕು.

- ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಳ್ಳಿ.

-  ಎಣ್ಣೆ ಕಾದ ನಂತರ ಉಂಡೆಗಳನ್ನು ಹಾಕಿ ಕಂದು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.  ಎರಡು ನಿಮಿಷಗಳ ನಂತರ ಅವುಗಳನ್ನು ತಿರುಗಿಸಬೇಕು. ಸ್ಟೋವ್ ಮಿಡಿಯಂನಲ್ಲಿಟ್ಟು ಎರಡು ಕಡೆ ಕಂದು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.

- ನಂತರ ಅವುಗಳನ್ನು ಎಣ್ಣೆ ಸೋಸಿ ತಟ್ಟೆಗೆ ಹಾಕಿ. ನಂತರ ಯಾವುದೇ ಚಟ್ನಿಯೊಂದಿಗೆ ತಿನ್ನಬಹುದು. ಮಳೆಗಾಲದಲ್ಲಿ ಗರಮ್ ಗರಮ್ ಸಾಬುದಾನ ತಿಂದು ಮಜಾ ಮಾಡಿ. ನೀವು ನಿಂದು ನಿಮ್ಮ ಸ್ನೇಹಿತರಿಗೂ ಇದರ ರುಚಿ ತೋರಿಸಿ.