ನೀವು ಸಾಮಾನ್ಯವಾಗಿ ತರಕಾರಿ ಪಲಾವ್, ಪನೀರ್ ಪಲಾವ್ ಟ್ರೈ ಮಾಡಿರ್ತೀರಿ, ಆದರೆ ಅದರಲ್ಲೆ ಡಿಫರೆಂಟ್ ಆಗಿ ಏನಾದ್ರು ತಯಾರಿಸಿದ್ದೀರಾ? ಇಲ್ಲ ಅಲ್ವ. ಅದಕ್ಕೆ ನಿಮಗಾಗಿ ಇಲ್ಲೊಂದು ಒಳ್ಳೆ ರೆಸಿಪಿ ತಂದಿದೀನಿ ಬನ್ನಿ. ನಾನೀಗ ಹೇಳೋಕೆ ಹೊರಟಿರೋದು ಮೊಟ್ಟೆ ಪಲಾವ್ ಬಗ್ಗೆ. ಹಾಗಿದ್ರೆ ಈ ಮೊಟ್ಟೆ ಪಲಾವ್ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು:
- ಬೇಯಿಸಿದ ಮೊಟ್ಟೆ - 12
- ಅಕ್ಕಿ- 2 ಕಪ್
- ಘನಾಕಾರದ ಪನೀರ್- 2 ಕಪ್
- ಮೆಣಸಿನ ಪುಡಿ- 3 ಚಮಚ
- ಅರಶಿನ ಪುಡಿ- 1/4 ಚಮಚ
- ಜೀರಿಗೆ ಪುಡಿ- 1 ಚಮಚ
- ಬಟಾಣಿ- 2 ಕಪ್
- ಕೆನೆಮೊಸರು- ಅರ್ಧ ಕಪ್
- ನೀರು- ಅಗತ್ಯಕ್ಕೆ ತಕ್ಕಷ್ಟು
- ಟೊಮೆಟೊ ಪ್ಯೂರಿ - 1 ಕಪ್
- ಈರುಳ್ಳಿ - 2
- ಎಣ್ಣೆ- ಸ್ವಲ್ಪ
- ಗರಂ ಮಸಾಲ- 2 ಟೀ ಚಮಚ
- ಉಪ್ಪು- ರುಚಿಗೆ ತಕ್ಕಷ್ಟು
- ಗೋಡಂಬಿ- 4
- ತೆಂಗಿನಕಾಯಿ- ಅರ್ಧ ಕಪ್
- ಗಸಗಸೆ - 2 ಚಮಚ (ಚನ್ನಾಗಿ ಅರೆದು ಪೇಸ್ಟ್ ಮಾಡಿಕೊಳ್ಳಿ)
- ಕೊತ್ತಂಬರಿ ಸೊಪ್ಪು - ಸ್ವಲ್ಪ
- ಬೆಳ್ಳುಳ್ಳಿ ಶುಂಠಿ ಪೇಸ್ಟ್- 2 ಚಮಚ
ಮಾಡುವ ವಿಧಾನ
ಮೊದಲು ಪನೀರ್ ಅನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ. ಸ್ಟೌವ್ ಮೇಲೆ ಒಂದು ಬಾಣಲೆ ಇಟ್ಟು ಕಾದ ನಂತರ ಸ್ವಲ್ಪ ಎಣ್ಣೆ ಸೇರಿಸಿ ಪರೀರ್ ತುಂಡುಗಳನ್ನು ಸೇರಿಸಿ ಹಗುರವಾಗಿ ಹುರಿದಿಟ್ಟುಕೊಳ್ಳಿ. ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆಯನ್ನು ಕಾಯಿಸಿ, ಕತ್ತರಿಸಿಟ್ಟ ಈರುಳ್ಳಿಯನ್ನು ಹಾಕಿ ಚನ್ನಾಗಿ ಫ್ರೈ ಮಾಡಿ. ಇದಕ್ಕೆ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಸೇರಿಸಿ ಹುರಿಯಿರಿ. ನಂತರ ಮೆಣಸಿನ ಪುಡಿ, ಅರಶಿನ, ಜೀರಿಗೆ ಪುಡಿ ಸೇರಿಸಿ ಮಿಕ್ಸ್ ಮಾಡಿ. ಎರಡು ನಿಮಿಷ ಮೀಡಿಯಂ ಫ್ಲೇಂನಲ್ಲಿಟ್ಟು(ಸಣ್ಣ ಬೆಂಕಿಯಲ್ಲಿ) ಮಿಕ್ಸ್ ಮಾಡಿ. ಇದಕ್ಕೆ ಟೊಮೆಟೊ ಪ್ಯೂರಿ, ಬಟಾಣಿ, ಅಕ್ಕಿ, ನೀರು ಸೇರಿಸಿ ಚೆನ್ನಾಗಿ ಕಲಸಿ.
ನಂತರ ಮಿಕ್ಸಿಗೆ 4 ಗೋಡಂಬಿ, ಅರ್ಧ ಕಪ್ ತೆಂಗಿನಕಾಯಿ, 2 ಚಮಚ ಗಸಗಸೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ಸಹ ಕುಕ್ಕರಿಗೆ ಸೇರಿಸಿ. ನಂತರ ಪನೀರ್, ಮೊಟ್ಟೆಗಳು, ಕೆನೆಮೊಸರು ಮತ್ತು ಗರಂ ಮಸಾಲಪುಡಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3 ವಿಸಿಲ್ ಬರುವವರೆಗೆ ಬಿಡಿ. ಇದನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ರಾಯ್ತ ಜೊತೆ ಸರ್ವ್ ಮಾಡಿ.
ಲೇಖಕರು: ಕುಸುಮಾ ಎಲ್ ಆಚಾರ್ಯ