ಪಶುಸಂಗೋಪನೆಯಲ್ಲಿ ಸರ್ಕಾರದಿಂದ ರೈತರಿಗೆ ವಿವಿಧ ಪ್ರಾಣಿಗಳನ್ನು ಸಾಕಲು ಇಂತಿಷ್ಟು ಎಂದು ಸಾಲದ ಮೊತ್ತವನ್ನು ನಿಗದಿಪಡಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ
ಇದನ್ನೂ ಓದಿರಿ: ₹23 ಲಕ್ಷಕ್ಕೆ ಬೇಡಿಕೆ ಗಿಟ್ಟಿಸಿಕೊಂಡ ಅಪರೂಪದ ಮೇಕೆ! ಏನಿದರ ವಿಶೇಷತೆ ಗೊತ್ತೆ?
ಜೂನ್ 1 "ವಿಶ್ವ ಹಾಲು ದಿನ": ಹಾಲಿನ ಪ್ರಾಮುಖ್ಯತೆ ಮತ್ತು ಅದರ ವಿಶಿಷ್ಟ ಪ್ರಯೋಜನಗಳೇನು ಗೊತ್ತಾ?
ಹಸು ಸಾಕುವ ರೈತರಿಗೆ 40,783 ರೂ., ಎಮ್ಮೆ ಸಾಕುವ ರೈತರಿಗೆ 60,249 ರೂ.ನೀಡುವ ನಿಯಮವಿದೆ. ಅದೇ ರೀತಿ ಮೇಕೆ/ಕುರಿಗಳಿಗೆ 4,063 ರೂ., ಕೋಳಿಗೆ 720 ರೂ. ಈ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Pashu kisan credit card scheme):
ಮೂಲತಃ ನಮ್ಮ ದೇಶ ರೈತ ಪ್ರಧಾನ ದೇಶ, ರೈತರಿಗೆ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ, ಹಸು, ಎಮ್ಮೆ, ಆಡು / ಕುರಿ, ಕೋಳಿಗಳನ್ನು ಸಾಕಲು ಸರ್ಕಾರದಿಂದ ಸಹಾಯವನ್ನು ನೀಡಲಾಗುತ್ತದೆ.
ಹೇಗೆ ಅಂದರೆ ಪಶುಸಂಗೋಪನೆಗಾಗಿ ವಿಶಿಷ್ಟ ಧನ ಸಹಾಯ ಮಾಡುವುದರಿಂದ. ಕಾರಣ ಭಾರತ ಸರ್ಕಾರ ANIMAL HUSBANDRY ಗೋಸ್ಕರ ಹೊಸ ಸ್ಕೀಮ್ ತಗೆದುಕೊಂಡು ಬಂದಿದೆ. ಅದೇ Pashu kisan credit card scheme. ಇದರಲ್ಲಿ ರೈತರಿಗೆ ಒಳ್ಳೆಯ ಮೊತ್ತದ ಹಣವನ್ನು ಗೋಸ್ಕರ ನೀಡಲಾಗುತ್ತಿದೆ.
ಕುರಿ ಸಾಕಾಣಿಕೆಯಲ್ಲಿ ಲಸಿಕೆಗಳ ಮಹತ್ವ..! ನೀವು ಇದರ ಬಗ್ಗೆ ತಿಳಿದಿರಲೇಬೇಕು..
ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ
ಎಷ್ಟು ಬಡ್ಡಿಯಲ್ಲಿ ಸಾಲ ದೊರೆಯುತ್ತದೆ?
ಈ ಯೋಜನೆಯಲ್ಲಿ ಸರ್ಕಾರವು ರೈತರಿಗೆ ಪಶುಸಂಗೋಪನೆಗಾಗಿ (ANIMAL HUSBANDRY) ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತದೆ. ಸರ್ಕಾರದ ವತಿಯಿಂದ ಈ ಯೋಜನೆ ಆರಂಭಿಸಲಾಗಿದೆ.
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನಗಳು!
ಕ್ರೆಡಿಟ್ ಕಾರ್ಡ್ ಪಡೆದ ರೈತರು ಈ ಕ್ರೆಡಿಟ್ ಕಾರ್ಡ್ ಅನ್ನು ಬ್ಯಾಂಕಿನಲ್ಲಿ(BANK) ಡೆಬಿಟ್ ಕಾರ್ಡ್ ಆಗಿ ಬಳಸಬಹುದು. ಈ ಯೋಜನೆಯಡಿ ಕ್ರೆಡಿಟ್ ಕಾರ್ಡ್ ಹೊಂದಿರುವವರು ಭದ್ರತೆ ಇಲ್ಲದೆ 1.60 ಲಕ್ಷ ರೂ.ವರೆಗೆ ಸಾಲವನ್ನು ಪಡೆಯಬಹುದು.
ಪಶು ಸಾಕಣೆದಾರರಿಗೆ ಎಲ್ಲಾ ಬ್ಯಾಂಕ್ಗಳಿಂದ ಶೇ. 7ರಷ್ಟು ವಾರ್ಷಿಕ ಬಡ್ಡಿಯಲ್ಲಿ ಸಾಲ ನೀಡಲಾಗುತ್ತದೆ. ನಿಗದಿತ ಸಮಯಕ್ಕೆ ಬಡ್ಡಿ ಪಾವತಿಸಿದರೆ ಶೇ.3ರಷ್ಟು ರಿಯಾಯಿತಿ ಇದೆ.
ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ
ಹರಧೇನು ತಳಿಯ ಹಸು 50 ರಿಂದ 55 ಲೀಟರ್ ಹಾಲು ನೀಡುತ್ತದೆ!
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮೊತ್ತ
ಹಸುಗಳಿಗೆ : ₹ 40,783/- ಎಮ್ಮೆಗೆ : ₹ 60,249/-
ಕುರಿ ಮತ್ತು ಮೇಕೆಗೆ : ₹ 4,063/- ಕೋಳಿಗೆ : ₹ 720/-
ನೋಂದಾಯಿಸುವುದು ಹೇಗೆ
- ಆಸಕ್ತ ಫಲಾನುಭವಿಯು ಹತ್ತಿರದ ಬ್ಯಾಂಕ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
- ಅರ್ಜಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಅರ್ಜಿ ನಮೂನೆಯನ್ನು ಬ್ಯಾಂಕ್ನಲ್ಲಿ ಭರ್ತಿ ಮಾಡಬೇಕು.
- ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
- ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಬ್ಯಾಂಕ್ ಅಧಿಕಾರಿಗೆ ಸಲ್ಲಿಸಿ.
- - ಅರ್ಜಿಯ ಪರಿಶೀಲನೆಯ ನಂತರ ಒಂದು ತಿಂಗಳ ನಂತರ, ನಿಮಗೆ ಪ್ರಾಣಿ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ.