Animal Husbandry

75 ಸಂಚಾರಿ ಪಶು ಚಿಕಿತ್ಸಾ ವಾಹನಗಳ ಲೋಕಾರ್ಪಣೆ..ಇವುಗಳ ವಿಶೇಷತೆಯೇನು..?

09 May, 2022 2:33 PM IST By: Maltesh
CM Basavaraj Bommai

ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ  ಉಪಯೋವಾಗುವ ನಿಟ್ಟಿನಲ್ಲಿ, ಯೋಜಿಸಲಾದ ಸಂಚಾರಿ ಅಂಬುಲೆನ್ಸ್‌ ಸೇವೆಗೆ ಸಿಎಂ ಬಸವರಾಜ ಬೊಮ್ಮಾಯಿ ನಿನ್ನೆ ಚಾಲನೆ ನೀಡಿದ್ದಾರೆ. ವಿಕಾಸಸೌಧದಲ್ಲಿ  ಮೊದಲ ಹಂತದ ಭಾಗವಾಗಿ ಒಟ್ಟು 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಲೋಕಾರ್ಪಣೆಗೊಳಿಸಿದ್ದಾರೆ.

ನಿಮ್ಮ ದನ-ಕರುಗಳಿಗೆ ಚರ್ಮ ರೋಗ ಇದೆಯೇ? ಇದನ್ನು ಓದಿ

Central Government Scheme! Pashu kisan credit card scheme! ನಿಂದ ನಿಮಗೆ ಪಶುಸಂಗೋಪನೆಗಾಗಿ 60,000 ರೂಪಾಯಿ ನೀಡಲಾಗುತ್ತೆ!

ತುರ್ತು ಸಮಯದಲ್ಲಿ ಈ ಅಂಬುಲೆನ್ಸ್‌ಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು. ಈ ಮೂಲಕ ರೈತರ ಮನೆ ಬಾಗಿಲಿಗೆ ಪಶು ಆಸ್ಪತ್ರೆ  ಬರಲಿದೆ. ಇದರಿಂದ ಪಶ ಸಂಗೋಪನೆ ಮಾಡುವವರಿಗೆ ಬಹಳ. ಅನುಕೂಲವಾಗಲಿದೆ ಅತ್ಯಾಧ್ಯುನಿಕ, ಸುಸಜ್ಜಿತವಾದ ಈ ವಾಹನದಲ್ಲಿ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾ‌ನಿಂಗ್‌,ತುರ್ತು ಚಿಕಿತ್ಸಾ ಘಟಕ, ಔಷಧಿ ಹಾಗೂ ಚಿಕಿತ್ಸಾ ಸಲಕರಣೆಗಳು ಇವೆ.

ಸದ್ಯ 270 ವಾಹನಗಳನ್ನು ಲೋಕಾರ್ಪಣೆಗೊಳಿಸಿದ್ದು ಈಗಾಗಲೇ ಅವು ಕಾರ್ಯಾರಂಭ  ಮಾಡಿವೆ. ಕೂಡ ಎಲ್ಲರ ಚಿತ್ತ ಈ ಅಂಬುಲೆನ್ಸ್‌ಗಳಲ್ಲಿ ಯಾವ ಯಾವ ಸೌಲಭ್ಯಗಳಿವೆ ಎಂಬುದರ ಮೇಲೆ ನೆಟ್ಟಿದ್ದು,  ಈ ಕುರಿತು ಈ ಲೇಖನದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

50 ಲೀ. ವರೆಗೆ ಹಾಲು ನೀಡುವ ದೇಸಿ ತಳಿಯ ಹಸುಗಳು! ರೈತರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

ಮೇಕೆ ಸಾಕಾಣಿಕೆಗೆ ಲಾಭದಾಯಕವಾದ ತಳಿಗಳು ಯಾವು..? ಇಲ್ಲಿದೆ ಮಾಹಿತಿ

ಕರ್ನಾಟಕ ಸರ್ಕಾರದ ಯೋಜನೆಯ ಪ್ರಕಾರ ಈ ಪಶು ಅಂಬುಲೆನ್ಸ್‌ ರೈತರ ಮನೆ ಬಾಗಿಲಿಗೆ ತೆರಳಿ ಅವರು ಸಾಕಿದ ಪಶು ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಉಪಚಾರ ಮಾಡಿ ಬರುತ್ತಾರೆ. ಇದರಿಂದ ಜಾನುವಾರುಗಳನ್ನು ಸಾಕುತ್ತಿರುವ ರೈತರಿಗೆ ಅನುಕೂಲವಾಗಲಿದೆ.

ಈ ವಾಹನಗಳ ವಿಶೇಷತೆಯೇನು..?

ಈ ಸಂಚಾರಿ ಪಶು ಚಿಕಿತ್ಸಾ ವಾಹನದಲ್ಲಿ ಒಬ್ಬ ಪಶುವೈದ್ಯರು, ಸಹಾಯಕರು, ವಾಹನ ಚಾಲಕ ಕಂ ಡಿ ದರ್ಜೆ ನೌಕರರು ಸೇರಿದಂತೆ 3 ಜನ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಾರೆ.

ಈಗಾಗಲೇ 15 ವಾಹನಗಳು ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ಸಿಬ್ಬಂದಿ ವೇತನ ವಾಹನಗಳ ನಿರ್ವಹಣಾ ವೆಚ್ಚವನ್ನು ಪ್ರತಿ ವಾಹನಕ್ಕೆ ಪ್ರತಿ ತಿಂಗಳಿಗೆ 1,56,000 ರೂ. ಒದಗಿಸಲಾಗಿದೆ.

ರಾಜ್ಯಕ್ಕೆ ಹೊಸದಾಗಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಮಂಜೂರು ಮಾಡಲಾಗಿತ್ತು, ಅದರ ಪ್ರಕಾರ ಮೊನ್ನೆ 70 ಪಶು ಚಿಕಿತ್ಸಾ ಸಂಚಾರಿ ವಾಹನಗಳ ಲೋಕಾರ್ಪಣೆ ಮಾಡಲಾಗಿದೆ.

ಕುರಿ, ಮೇಕೆ ಸಾಕಾಣಿಕೆದಾರರಿಗೆ ಭೀತಿ ಹುಟ್ಟಿಸಿದ ಹಿರೇಬೇನೆ..ಈ ರೋಗದ ತಡೆಗಟ್ಟುವಿಕೆ ಹೇಗೆ..?

ಹೈನುಗಾರಿಕೆಯಲ್ಲಿ ಹೆಚ್ಚಿನ ಹಾಲು ಉತ್ಪಾದನೆಗೆ ಹೀಗೆ ಮಾಡಿ…

ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಟೋಲ್ ಫ್ರೀ ನಂಬರ್ 1962

ರಾಜ್ಯದಲ್ಲಿ 2.89 ಕೋಟಿ ಜಾನುವಾರುಗಳಿವೆ - ಪ್ರತೀ ಒಂದು ಲಕ್ಷ ಜಾನುವಾರುಗಳಿಗೆ ಒಂದು ಸಂಚಾರಿ ಪಶು ಚಿಕಿತ್ಸಾ ವಾಹನ

ಕೇಂದ್ರದಿಂದ 100% ಸಹಾಯ ಧನದಲ್ಲಿ 44 ಕೋಟಿ ಅನುದಾನ - ಇಂದು 11 ಜಿಲ್ಲೆಗಳಲ್ಲಿ ಒಟ್ಟು 70 ವಾಹನಗಳ ಸೇವೆಗೆ ಚಾಲನೆ

ಯಾವ ಯಾವ ಜಿಲ್ಲೆಗಳಲ್ಲಿ ಈ ಸೇವೆ ಆರಂಭವಾಗಿದೆ.

ಮೊದಲ ಹಂತದಲ್ಲಿ ಬೆಂಗಳೂರು ನಗರಕ್ಕೆ 3 ವಾಹನ, ಬೆಂಗಳೂರು ಗ್ರಾಮಾಂತರ- 4, ಚಿಕ್ಕಬಳ್ಳಾಪುರ 10, ಚಿತ್ರದುರ್ಗ-10, ದಾವಣಗೆರೆ-6, ಕೋಲಾರ-8, ದಕ್ಷಿಣ ಕನ್ನಡ-2, ಹಾಸನ-9, ಕೊಡಗು-1, ಮೈಸೂರು-9 ಹಾಗೂ ಮಂಡ್ಯ ಜಿಲ್ಲೆಗೆ 8 ವಾಹನ ನೀಡಲಾಗಿದೆ. ಲೋಕಾರ್ಪಣೆ ನಂತರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾ ಅವರು, ಜಾನುವಾರುಗಳ ರಕ್ಷಣೆ, ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಜಾನುವಾರು ಸಂಯಪತ್ತು ಹೆಚ್ಚಿಸಲು ಇನ್ನಷ್ಟು ಪುಷ್ಟಿಕೊಡಲಾಗುವುದು ಎಂದರು.

ಮೇ ತಿಂಗಳಲ್ಲಿ ಬಿತ್ತನೆ ಮಾಡಬೇಕಾದ ಬೆಳೆಗಳು! ಇದರಿಂದ ರೈತರಿಗಾಗಲಿದೆ ಹೆಚ್ಚಿನ ಲಾಭ

POULTRY Farming ತುಂಬಾ ಲಾಭದಾಯಕ ಉದ್ಯೋಗ! ಮತ್ತು ಸರ್ಕಾರದಿಂದ ಸಹಾಯ?