Agripedia

“ಟೊಮೆಟೊ”ಗೆ ಅಂಗಮಾರಿ ರೋಗ, ತಡೆಯುವುದು ಹೇಗೆ ?

14 November, 2022 10:59 AM IST By: Hitesh
"Tomato" disease, how to prevent?

ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಟೊಮೆಟೊ (Tomato) ಬೆಳೆಯನ್ನು ನೆಚ್ಚಿಕೊಂಡಿದ್ದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಸಾಲು ಸಾಲು ಹಬ್ಬಗಳ ಎಫೆಕ್ಟ್‌ : ಗಗನಕ್ಕೇರಿದ  ಕೆಂಪು ಮೆಣಸಿನಕಾಯಿ ಬೆಲೆ 

ಬಂಗಾಳಕೊಲ್ಲಿಯಲ್ಲಿ ಸೃಷ್ಟಿ ಆಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಅಲ್ಲಲ್ಲಿ ಚದುರಿದಂತೆ ಮಳೆ ಆಗುತ್ತಿದೆ.

ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಹಾಗೂ ಟೊಮೆಟೊ, ಆಲೂಗಡ್ಡೆ ಬೆಳೆಗಳು ಬೆಳೆಯುವ ಜಿಲ್ಲೆಗಳಲ್ಲೂ ನಿರಂತರವಾಗಿ ಮಳೆ ಆಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಟೊಮೆಟೊ ಬೆಳೆಯುವ ಜಿಲ್ಲೆ ಎಂದೇ ಖ್ಯಾತಿ ಗಳಿಸಿರುವ ಕೋಲಾರ ಜಿಲ್ಲೆಯಲ್ಲಿ ಟೊಮೆಟೊ ಮತ್ತು ಟೊಮೆಟೊ (Tomato)ಬೆಳೆಗೆ ಅಂಗಮಾರಿ ರೋಗ ಆವರಿಸಿದ್ದು,

ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.  

ಕೋಲಾರ (kolara) ಜಿಲ್ಲೆಯಲ್ಲಿ ಟೊಮೆಟೊ ಹಾಗೂ ಆಲೂಗಡ್ಡೆಯನ್ನು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಾರೆ.

ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಉತ್ತಮ ಮಳೆ ಆಗುತ್ತಿದೆ. ಆದರೆ, ಅಕಾಲಿಕ ಮಳೆಯಿಂದ ಬೆಳೆಗೂ ಹಾನಿಯಾಗುತ್ತಿದ್ದು, ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದಾರೆ.  

ಸಿಲಿಕಾನ್‌ ಸಿಟಿಯಲ್ಲಿ ಶುರುವಾಯ್ತು ATM ಇಡ್ಲಿ, ವಡೆ, ಸೆಂಟರ್‌..ವಿಡಿಯೋ

ಕೋಲಾರದಲ್ಲಿ 9 ಸಾವಿರ ಹೆಕ್ಟೇರ್‌ ಬೆಳೆ

ಕೋಲಾರದಲ್ಲಿ ಬರೋಬ್ಬರಿ 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಟೊಮೊಟೆಗೆ ಸ್ಥಳೀಯ ಮಾರುಕಟ್ಟೆಗಳಲ್ಲಿ ವರ್ಷಕ್ಕೆ 200 ಕೋಟಿಗೂ ಹೆಚ್ಚು ಇದೇ ವಹಿವಾಟು ಸಹ ನಡೆಯುತ್ತದೆ.

ಟೊಮೊಟೊವನ್ನು ರಾಜಸ್ಥಾನ, ದೆಹಲಿ, ಜಾರ್ಖಾಂಡ್‌, ಒಡಿಶಾ, ಕೇರಳ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಆಂಧ್ರ ಪ್ರದೇಶ, ಗುಜರಾತ್, ಮಹಾರಾಷ್ಟ್ರಕ್ಕೆ ರಫ್ತು ಮಾಡಲಾಗುತ್ತದೆ.

ದೇಶಿಯವಾಗಿ ಮಾತ್ರವಲ್ಲದೇ ಬಾಂಗ್ಲದೇಶ, ಅಫ್ಗಾನಿಸ್ತಾನ ಮತ್ತು ಚೀನಾಕ್ಕೂ ರಫ್ತು ಮಾಡಲಾಗುತ್ತದೆ.  

ಪಂಜಾಬ್‌ನಲ್ಲಿ 4.1 ತೀವ್ರತೆಯ ಭೂಕಂಪನ!

ಈ ಬಾರಿ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಯಂತೆ ಮಳೆಯಾಗಿಲ್ಲ. ಹಿಂಗಾರು ಹಂಗಾಮಿನಲ್ಲಿ 15 ದಿನಗಳು ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿತ್ತು.

ಒಮ್ಮೊಮ್ಮೆ ತುಂತುರು ಮಳೆಯಾಗುತ್ತಿತ್ತು. ಹೀಗಾಗಿ, ವಾತಾ ವರಣದಲ್ಲಿ ತೇವಾಂಶ ಪ್ರಮಾಣ ಹೆಚ್ಚಾಗಿದ್ದು, ಟೊಮೊಟೆ ಬೆಳೆಯಲ್ಲಿ ಅಂಗಮಾರಿ ರೋಗ ಕಾಣಿಸಿಕೊಂಡಿದೆ.

MCD ಚುನಾವಣೆ: ಟಿಕೆಟ್ ಕೊಡಲಿಲ್ಲ ಎಂದು ವಿದ್ಯುತ್‌ ಕಂಬ ಏರಿದ ಪಾಲಿಕೆಯ ಮಾಜಿ ಸದಸ್ಯ!

"Tomato" disease, how to prevent?

ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇದೇ ಸಮಸ್ಯೆ

ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇದೇ ಸಮಸ್ಯೆ ಕಾಣಿಸಿಕೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಟೊಮೆಟೊ ಬೆಳೆ  ಕೊಯ್ಲು ಆರಂಭವಾಗಿದೆ.

ಅಂಗಮಾರಿ ರೋಗಬಾತ ಗಿಡದ ಎಲೆಗಳು ಕಂದು ಮತ್ತು ಕಪ್ಪು ಬಣ್ಣಕ್ಕೆ ತಿರುಗಿ ಒಣಗುತ್ತಿವೆ. ರಾತ್ರೋರಾತ್ರಿ ಬೆಳೆ ನಾಶವಾಗುತ್ತಿದೆ.

ಕಾಯಿಗಳು ಬಲಿತು ಹಣ್ಣಾಗುವುದಕ್ಕೂ ಮುನ್ನವೇ ಗಿಡದಿಂದ ಉದುರುತ್ತಿವೆ.

ಇನ್ನು ಟೊಮೆಟೊ ಜತೆಗೆ ಆಲೂಗಡ್ಡೆ ಹಾಗೂ ದಪ್ಪ ಮೆಣಸಿನಕಾಯಿ ಬೆಳೆಯಲ್ಲೂ ಅಂಗಮಾರಿ ರೋಗ ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಮೋಡ ಕವಿದ ವಾತಾವರಣವಿದ್ದು ತುಂತುರು ಮಳೆಯಾಗುತ್ತಿದ್ದು, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು, ಟೊಮೆಟೊ ಬೆಳೆಯಲ್ಲಿ ಅಂಗಮಾರಿ ರೋಗ ಸೃಷ್ಟಿಯಾಗಿದೆ. 

ರಾಜ್ಯದಲ್ಲಿ ಮುಂದುವರಿದ ಮಳೆಯ ಆರ್ಭಟ! 

"Tomato" disease, how to prevent?

ರೈತರು ಆರಂಭದಿಂದಲೂ ಟೊಮೆಟೊ ಬೆಳೆ ರೋಗಗಳಿಗೆ ತುತ್ತಾಗದಂತೆ ನಿಯಮಿತವಾಗಿ ಔಷಧಿ ಸಿಂಪಡಣೆ ಮಾಡುವ ಮೂಲಕ ಬೆಳೆಗಳ ಸಂರಕ್ಷಣೆಗೆ ಮುಂದಾಗಿದ್ದರು.

ಈಗ ಕಾಯಿಬಿಟ್ಟು ಹಣ್ಣಾಗುವ ಹಂತದಲ್ಲಿ ವಾತಾವರಣದ ವೈಪರೀತ್ಯ ಆಗಿದ್ದು, ಇಳುವರಿ ಕುಸಿತದ ಆತಂಕ ಎದುರಾಗಿದೆ.

ಇತ್ತೀಚಿನ ದಿನಗಳಲ್ಲಿ  ರಾತ್ರಿ ವೇಳೆ ಹಿಮ ಬೀಳುತ್ತಿದ್ದರೆ, ಮೋಡ ಕವಿದ ವಾತಾವರಣದಿಂದ ರೋಗ ಹೆಚ್ಚಾಗುತ್ತಿದೆ.

ಮಳೆ ಬೀಳುವಾಗ ನಾವು ಔಷಧಿ ಸಿಂಪಡಣೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ, ಎಲೆಗಳು ಬಾಡುತ್ತಿವೆ. ಗಿಡಗಳಲ್ಲಿ ಬಿಟ್ಟಿರುವ ಕಾಯಿ ಹಣ್ಣಾಗುತ್ತಿಲ್ಲ.

ಪಿ.ಎಂ ಜನೌಷಧಿ ಯೋಜನೆ: ಕರ್ನಾಟಕ ದೇಶದಲ್ಲೇ ದ್ವಿತೀಯ! 

"Tomato" disease, how to prevent?

ಅಂಗಮಾರಿ ರೋಗ ತಡೆಯುವುದು ಹೇಗೆ ?

ಅಂಗಮಾರಿ ರೋಗವನ್ನು ಮಳೆಯ ನಡುವೆಯೇ ತಡೆಯುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಆದರೆ, ಇದನ್ನೂ ತಡೆಯಲು ಸಹ ಮಾರ್ಗೋಪಾಯಗಳಿವೆ.

ಅಂಗಮಾರಿಯನ್ನು ಪ್ರಾರಂಭಿಕ ಹಂತದಲ್ಲೇ ತಡೆಯುವ ನಿಟ್ಟಿನಲ್ಲಿ 2.0 ಗ್ರಾಂ ಮ್ಯಾಂಕೋಜೆಬ್ ಅಥವಾ 3.0 ಗ್ರಾಂ ತಾಮ್ರದ ಆಕ್ಸಿಕ್ಲೊರೈಡ್ ಅಥವಾ 2.0 ಗ್ರಾಂ ಮೆಟಲಾಕ್ಷಿಲ್ ಮ್ಯಾಂಕೋಜೆಬ್ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.

 ಒಂದೊಮ್ಮೆ ಅಂಗಮಾರಿ ರೋಗದ ತೀವ್ರತೆ ಹೆಚ್ಚಾದರೆ, 2.0 ಗ್ರಾಂ ಫೊಸ್ಟೈಲ್-ಎಲ್ ಅಥವಾ 1.0 ಗ್ರಾಂ ಡೈಮಿಥೋಮಾರ್ಪ ಜೊತೆಗೆ 2.0 ಗ್ರಾಂ ಮೆಟಿರಾಮ

ಅಥವಾ 2.0 ಗ್ರಾಂ ಸೈಮಾಕ್ಸಾನಿಲ್ + ಮ್ಯಾಂಕೋಜೆಬ್ ಅಥವಾ 3.0 ಗ್ರಾಂ ಫೆನಾಮಿಡೊನ್ ಮ್ಯಾಂಕೋಜೆಬ್, ಇಲ್ಲವೇ 1.0 ಮಿ.ಲೀ. ಅಜೋಕ್ಸಿಸ್ಟ್ರೋಬಿನ್,

ಅಥವಾ 2.0 ಗ್ರಾಂ ಪೈರಾಕ್ಲೋಸ್ಟ್ರೊಬಿನ್ ಮೆಟಿರಾಮ, ಅಥವಾ 1.0 ಮಿ.ಲೀ. ಫ್ಯಾಮೊಕ್ಸಾಡೋನ್ ಸೈಮಾಕ್ಸಾನಿಲ್ ಔಷಧಿಗಳನ್ನು ಪ್ರತಿ 1 ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡುವುದು ಸೂಕ್ತ ಎನ್ನುತ್ತಾರೆ ತೋಟಗಾರಿಕೆಯ ಅಧಿಕಾರಿಗಳು.

ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಇಲಾಖೆಯ ಕಚೇರಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.  

ಚಿನ್ನದ ದರದಲ್ಲಿ ಮತ್ತೆ ಏರಿಕೆ, ಎಷ್ಟಿದೆ ಮಾರುಕಟ್ಟೆಯಲ್ಲಿ ಚಿನ್ನದ ದರ ?