Agripedia

MSP: ಎಳ್ಳು ಬೆಳೆಗಾರರಿಗೆ ಜಾಕ್‌ಪಾಟ್‌..ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ ಎಷ್ಟು..?

09 June, 2022 10:38 AM IST By: Maltesh
Minimum Supporting Price To Sesame And Paddy

ಸರಕಾರ ರೈತರ ಅನುಕೂಲಕ್ಕಾಗಿ ಸಬ್ಸಿಡಿ, ಸಹಾಯಧನ, ಸಾಲ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಇದೀಗ ಸರಕಾರ ಎಂಎಸ್‌ಪಿ ಹೆಚ್ಚಿಸುವ ಮೂಲಕ ರೈತರಲ್ಲಿ ಸಂತಸ ಮೂಡಿಸಿದೆ.

8 ಜೂನ್ 2022 ರಂದು ಕೇಂದ್ರ ಸರ್ಕಾರವು ಖಾರಿಫ್ ಸೀಸನ್‌ಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಲು ಅನುಮೋದಿಸಿದೆ. ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. 2022-23ನೇ ಸಾಲಿನ ಖಾರಿಫ್ ಬೆಳೆಗಳ ಎಂಎಸ್‌ಪಿ ಈಗ ಹೆಚ್ಚಾಗಲಿದೆ.

Paddy: ಉತ್ತಮ ಇಳುವರಿ ನೀಡುವ ರೋಗ ನಿರೋಧಕ ಭತ್ತದ ತಳಿಗಳ ಕುರಿತು ಇಲ್ಲಿದೆ ಸಮಗ್ರ ಮಾಹಿತಿ…

ಮಣ್ಣು ಪರೀಕ್ಷೆ ಮಾಡಿ ದುಪ್ಪಟ್ಟು ಲಾಭ ಪಡೆಯಿರಿ!

MSP ಎಂದರೇನು?

MSP ಅಂದರೆ ಕನಿಷ್ಠ ಬೆಂಬಲ ಬೆಲೆಯು ಬೆಳೆಯನ್ನು ಬಿತ್ತನೆ ಮಾಡುವ ಮೊದಲು ಆ ಧಾನ್ಯದ ಬೆಲೆಗಳಿಗೆ ಸರ್ಕಾರವು ನಿಗದಿಪಡಿಸಿದ ಖಾತರಿಯಾಗಿದೆ. ರೈತರು ಬೆಳೆಗಳನ್ನು ಉತ್ಪಾದಿಸಿದಾಗ ಹವಾಮಾನ, ಮಳೆಯಿಂದಾಗಿ ಬೆಳೆಗಳಲ್ಲಿ ಏರುಪೇರುಗಳಾಗುತ್ತವೆ.

ಇದು ಬೆಲೆಯ ಮೇಲೂ ಪರಿಣಾಮ ಬೀರುತ್ತದೆ. ರೈತರು ಎಂಎಸ್‌ಪಿಯಿಂದ ಲಾಭ ಪಡೆಯುತ್ತಾರೆ. ಕಾರಣಾಂತರಗಳಿಂದ ಮಾರುಕಟ್ಟೆಯಲ್ಲಿ ಧಾನ್ಯದ ಬೆಲೆ ಕಡಿಮೆಯಾದರೆ, ರೈತರು ಆತಂಕ ಪಡಬೇಕಾಗಿಲ್ಲ, ಏಕೆಂದರೆ ಸರ್ಕಾರವು ಅವರ ಬೆಳೆಯನ್ನು ಪೂರ್ವ ನಿರ್ಧಾರಿತ ಬೆಲೆಗೆ (ಎಂಎಸ್‌ಪಿ) ಖರೀದಿಸುತ್ತದೆ, ಇದರಿಂದ ರೈತರಿಗೆ ತೊಂದರೆಯಾಗುವುದಿಲ್ಲ.

ಭತ್ತದ ಬೆಂಬಲ ಬೆಲೆ ಏರಿಕೆ..!

ಈ ಕುರಿತಂತೆ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದು, ಭತ್ತದ ಕನಿಷ್ಠ ಬೆಂಬಲ ಬೆಲೆ(ಎಂಎಸ್‌ಪಿ)ಯಲ್ಲಿ ಕೇಂದ್ರ ಸರ್ಕಾರ 100ರೂ ಹೆಚ್ಚಳ ಮಾಡಲಾಗಿದೆ. ಈ ಪರಿಷ್ಕೃತ ದರ 2022-23ರ ಬೆಳೆ ವರ್ಷಕ್ಕೆ ಅನ್ವಯವಾಗುತ್ತಿದ್ದು, ಪ್ರತಿ ಕ್ವಿಂಟಲ್ ಭತ್ತದ ಎಂಎಸ್‌ಪಿ 2,040ರೂ ಗೆ ಏರಿಕೆಯಾಗಿದೆ ಎಂದು ತಿಳಿಸಿದರು.

ಹತ್ತಿ ಬೆಳೆ ಬೆಲೆಯನ್ನು ಕ್ವಿಂಟಲ್​ಗೆ 6080 ರೂ.ಗೆ ಹೆಚ್ಚಿಸಲಾಗಿದ್ದರೆ, ತೊಗರಿಬೇಳೆ ಬೆಲೆಯನ್ನು 6,600 ರೂಪಾಯಿಗೆ ಏರಿಸಲಾಗಿದೆ. ಕ್ವಿಂಟಲ್​ಗೆ 300 ರೂಪಾಯಿ ಬೆಂಬಲ ಬೆಲೆ ನೀಡಲಾಗಿದೆ. ಹೆಸರು ಬೇಳೆಗೆ 7,755 ರೂಪಾಯಿಗೆ ಹೆಚ್ಚಿಸಲಾಗಿದೆ.

 

ಈ ಹಿಂದೆ 7,275 ಕ್ವಿಂಟಲ್​ ಮಾರಾಟವಾಗುತ್ತಿದ್ದ ಹೆಸರುಬೇಳೆ ಬೆಲೆಯನ್ನು 480 ರೂ, ಹೆಚ್ಚಿಸಲಾಗಿದೆ ಎಂದು ಅವರು ವಿವರಿಸಿದರು.

ಎಳ್ಳಿನ ಬೆಲೆಯಲ್ಲಿ ಭಾರೀ ಏರಿಕೆ
ಎಳ್ಳಿನ (Sesamum) ಬೆಲೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ 523 ರೂ. ಹೆಚ್ಚಳ ಮಾಡಲಾಗಿದೆ. ಹೆಸರುಕಾಳಿಗೆಪ್ರತಿ ಕ್ವಿಂಟಾಲ್‌ಗೆ 480 ರೂ. ಸೂರ್ಯಕಾಂತಿಗೆ ಪ್ರತಿ ಕ್ವಿಂಟಾಲ್‌ಗೆ 385ರೂ. ಏರಿಸಲಾಗಿದೆ. ಶೇಂಗಾ ಬೆಲೆಯಲ್ಲಿ ಕಳೆದ ವರ್ಷಕ್ಕಿಂತ ₹300 ಏರಿಕೆ ಮಾಡಲಾಗಿದೆ.

ರೈತರಿಗೆ ಗುಡ್ ನ್ಯೂಸ್: ಸರ್ಕಾರಿ ಭೂಮಿಯಲ್ಲಿ ಕೃಷಿ: ಕೃಷಿ ಆಕಾಂಕ್ಷಿಗಳಿಗೆ ವರದಾನ ಈ ಯೋಜನೆ

Bitter Gourd :ಹೈಬ್ರೀಡ್‌ ಹಾಗಲಕಾಯಿ ಕೃಷಿ ಹೇಗೆ..ಇಲ್ಲಿದೆ ಸಿಂಪಲ್‌ ಟಿಪ್ಸ್‌