Agripedia

ಸೊಳ್ಳೆಗಳ ಕಾಟವೇ..? ಹಾಗಾದ್ರೆ ಮನೆಯಲ್ಲಿ ಈ ಚಮತ್ಕಾರಿ ಗಿಡಗಳನ್ನು ಬೆಳಿಸಿ ಸಾಕು

13 June, 2022 2:33 PM IST By: Maltesh
Mosquitos

ಸಾಮಾನ್ಯವಾಗಿ ನೀವು ಎಷ್ಟೇ ರಾಸಾಯನಿಕ ನಿವಾರಕಗಳನ್ನು ಹಾಗೂ ಸೊಳ್ಳೆಯ ಕಾಯಿಲ್‌ಗಳನ್ನು ಬಳಸಿದರೂ, ಸೊಳ್ಳೆಗಳು ಅವುಗಳ ಪರಿಣಾಮಕಾರಿ ಪ್ರಭಾವಕ್ಕೆ ಒಳಗಾಗುವುದಿಲ್ಲ. ಜೊತೆಗೆ ಅವು ಮತ್ತೆ ನಮ್ಮನ್ನು ಕಚ್ಚುತ್ತಾ ಕಿವಿಯಲ್ಲಿ ಹಾಡುತ್ತಲೇ ಇರುತ್ತವೆ!. ಇನ್ನು ಮಳೆಗಾಲ ಬಂತೆಂದರೆ ಸೊಳ್ಳೆಗಳ (Mosquito) ಕಾಟ ಹೆಚ್ಚಾಗಿರುತ್ತದೆ.

ಹಸಿ ಬಟಾಣಿ ತಿನ್ನುವುದರಿಂದ ಆಗುವ ಲಾಭಗಳಿವು

ಸೊಳ್ಳೆಗಳ (Mosquito) ಕಾಟ ತಪ್ಪಿಸಲು ಲೋಷನ್ಗಳು , ಕ್ರೀಮ್ ಗಳು, ಮಾರುಕಟ್ಟೆಯಲ್ಲಿ ಸಿಗುತ್ತವೆ. ಆದರೆ ಇದರಲ್ಲಿ ರಾಸಾಯನಿಕಗಳಿರುತ್ತವೆ. ಈ ಕಾರಣದಿಂದಾಗಿ ಇವೆಲ್ಲವೂ ಚರ್ಮದ ಮೇಲೆ ಅಡ್ಡಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಸೊಳ್ಳೆಗಳ ಕಾಟವನ್ನು ತಪ್ಪಿಸುವ ಸಲುವಾಗಿ ನೈಸರ್ಗಿಕ ವಿಧಾನವನ್ನು ಅಳವಡಿಸಿಕೊಳ್ಳುವುದು ಉತ್ತಮ.

ಆದರೆ ಬೇಸಿಗೆಯ ಸಮಯದಲ್ಲಿಯೂ ಬೆಳಿಗ್ಗೆ, ಸಂಜೆ ಸೊಳ್ಳೆಗಳು ಹೆಚ್ಚಾಗಿರುತ್ತವೆ. ಸೊಳ್ಳೆ ಕಚ್ಚಿದರೆ ಡೆಂಗ್ಯೂ (Dengue), ಮಲೇರಿಯಾ, ಚಿಕುನ್ ಗುನ್ಯಾದಂಥಹ ಅನೇಕ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಸದ್ಯ ಈ ಲೇಖನದಲ್ಲಿ ಸೊಳ್ಳೆಗಳನ್ನು ತೊಡೆದು ಹಾಕಲು ನಿಮಗೆ ಸಹಾಯ ಮಾಡುವ ಕೆಲವು ನೈಸರ್ಗಿಕ ಪರಿಹಾರಗಳು ಇಲ್ಲಿವೆ.

“ಹಾಗಲವೆಂದು ಹೀಗೆಲ್ಲಾ ಹೀಗಳೆಯಬೇಡಿ...” ಇಲ್ಲಿದೆ ಹಾಗಲಕಾಯಿ ಔಷಧಿಯ ಗುಣಗಳ ಕುರಿತಾದ ಲೇಖನ

ತುಳಸಿ ಮತ್ತು ಪುದೀನ ಗಿಡ: ತುಳಸಿ ಮತ್ತು ಪುದೀನ ಎರಡರಲ್ಲೂ ಔಷಧೀಯ ಗುಣಗಳಿರುತ್ತವೆ. ಸೊಳ್ಳೆಗಳನ್ನು ಮನೆಯಿಂದ ದೂರವಿರಿಸಲು ತುಳಸಿ (Tulsi) ಮತ್ತು ಪುದೀನ ಸಹಾಯ ಮಾಡುತ್ತದೆ. ತುಳಸಿ ಎಲೆಗಳಿಂದ ಹೊರ ಬರುವ ಪರಿಮಳವು ಸೊಳ್ಳೆಗಳು ಮತ್ತು ಕೀಟಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಪುದೀನ (Pudina) ಸಸ್ಯವು ಸೊಳ್ಳೆಗಳು ಮಾತ್ರವಲ್ಲ ನೊಣಗಳು ಮತ್ತು ಇರುವೆಗಳನ್ನು ಕೂಡಾ ಮನೆಯಿಂದ ದೂರವಿರಿಸುತ್ತದೆ.

ಚೆಂಡು ಹೂವು: ಚೆಂಡು ಹೂವು ಎಲ್ಲಾ ಕಾಲದಲ್ಲೂ ಅರಳುತ್ತದೆ. ಈ ಹೂವಿನ ಸುವಾಸನೆಯನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಈ ಕಾರಣದಿಂದ ಸೊಳ್ಳೆಗಳು ಈ ಸಸ್ಯದಿಂದ ದೂರವಿರುತ್ತದೆ (mosquito repellent plants). ಈ ಗಿಡವನ್ನು ನೆಟ್ಟರೆ ಹೂವುಗಳಿಂದ ಮನೆಯ ಸೌಂದರ್ಯವೂ ಹೆಚ್ಚುತ್ತದೆ. ಸೊಳ್ಳೆ ಕಾಟದಿಂದ ಮುಕ್ತಿಯೂ ಸಿಗುತ್ತದೆ. ಈ ಸಸ್ಯವನ್ನು ಮನೆಯ ಹೊಸ್ತಿಲಲ್ಲಿಟ್ಟರೆ ಸೊಳ್ಳೆ ಮನೆ ಒಳಗೆ ಬರುವುದೇ ಇಲ್ಲ.

ಮುಖಕ್ಕೆ ಜೇನು ತುಪ್ಪವನ್ನು ಹಚ್ಚುವುದರಿಂದ ಆಗುವ ಪ್ರಯೋಜನಗಳು ಏನು..?

ಲ್ಯಾವೆಂಡರ್ ಸಸ್ಯ: ಈ ಸಸಿಯ ಸುತ್ತ ಸೊಳ್ಳೆಗಳು ಮಾತ್ರವಲ್ಲ, ಇತರ ಯಾವ ಕೀಟಗಳು ಕೂಡಾ ಬರುವುದಿಲ್ಲ. ಲ್ಯಾವೆಂಡರ್ (Lavender) ಸಸ್ಯದ ಎಲೆಗಳಲ್ಲಿ ಕಂಡುಬರುವ ಎಸೆನ್ಶಿಯಲ್ ಆಯಿಲ್ ಕಾರಣದಿಂದ ಈ ಸಸ್ಯದಿಂದ ಸುಗಂಧ ಹೊರ ಹೊಮ್ಮುತ್ತದೆ. ಈ ಸುಗಂಧದ ಕಾರಣದಿಂದ ಸೊಳ್ಳೆಗಳು ಈ ಸಸ್ಯದ ಸುತ್ತ ಮುತ್ತ ಪ್ರದೇಶಗಳಲ್ಲಿ ಸುಳಿಯುವುದಿಲ್ಲ. ಈ ಸಸ್ಯದ ಇನ್ನೊಂದು ವಿಶೇಷವೆಂದರೆ ಈ ಸಸ್ಯಕ್ಕೆ ನೀರಿನ ಅಗತ್ಯವಿರುವುದಿಲ್ಲ.