ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕತೆಗೆ ಹೆಸರಾಗಿವೆ. ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದ ಪ್ರೋಟೀನ್, ನಾರಿನಾಂಶ, ಬಿ ಗುಂಪಿನ ಜೀವಸತ್ವಗಳು, ಅಗತ್ಯ ಅಮೈನೋ ಆಮ್ಲಗಳು, ಫೋಲಿಕ್ ಆಮ್ಲ ಹಾಗೂ ಜೀವಸತ್ವ ‘ಇ’ ಅಂಶಗಳಿಂದ ಕೂಡಿದ್ದು, ಹೆಚ್ಚು ಪೌಷ್ಟಿಕವಾಗಿದೆ. ಇಲ್ಲಿದೆ ಈ ಕುರಿತಾಗಿ "ಡಾ. ಲತಾ ಆರ್. ಕುಲಕರ್ಣಿ, ಡಾ. ದಿನೇಶ ಎಮ್.ಎಸ್ ಮತ್ತು ಡಾ. ಸೌಜನ್ಯ ಎಸ್, (ಕೃಷಿ ವಿಜ್ಞಾನ ಕೇಂದ್ರ, ಚಂದೂರಾಯನಹಳ್ಳಿ, ಕಲ್ಯಾ ಪೋಸ್ಟ್, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ.) ಅವರು ಬರೆದ ಲೇಖನ
Raitha Siri project : ರೈತ ಸಿರಿ ಯೋಜನೆಯತ್ತ ಒಂದು ನೋಟ
ಸಿರಿಧಾನ್ಯಗಳೆಂದರೆ ರಾಗಿ, ಹಾರಕ, ನವಣೆ ಸಾಮೆ, ಬರಗು, ಕೊರಲೆ, ಊದಲು, ಸಜ್ಜೆ, ಮತ್ತು ಜೋಳ ಬೆಳೆಗಳ ಸಮೂಹ. ಇವುಗಳಿಗೆ ಸುಮಾರು 5 ಸಾವಿರ ವರ್ಷಗಳ ಬೇಸಾಯದ ಇತಿಹಾಸವಿದ್ದು, ನಮ್ಮ ದೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ, ಚತ್ತೀಸಗಡ್, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ ಹಾಗೂ ಉತ್ತರಖಂಡ್ ರಾಜ್ಯಗಳಲ್ಲಿ ಬೆಳೆಯಲಾಗುತ್ತಿದೆ.
ಈ ಬೆಳೆಗಳು ಪ್ರಮುಖವಾಗಿ ಮಳೆ ಆಶ್ರಿತ ಬೆಳೆಯಾಗಿ ಅತಿ ಕಡಿಮೆ ಫಲವತ್ತತ್ತೆ ಇರುವ ಪ್ರದೇಶಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಬೆಳೆಸುತ್ತ ಗುಡ್ಡಗಾಡು ಹಾಗೂ ಬುಡಕಟ್ಟು ಜನಾಂಗದವರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ಸಿರಿಧಾನ್ಯಗಳು ಬೇಗ ಕೊಯ್ಲಿಗೆ ಬರುವುದರ ಜೊತೆಗೆ ಬರನಿರೋಧಕ ಗುಣಗಳನ್ನು ಹೊಂದಿದ್ದು ಸಂದಿಗ್ಧ ಪರಿಸ್ಥಿತಿಯ ವಾತಾವರಣಕ್ಕೂ ಹೊಂದಿಕೊಳ್ಳುತ್ತದೆ.
ಕಳಪೆ ಗುಣಮಟ್ಟದ ಬೀಜಗಳಿಂದ ರೈತರಿಗೆ ಬೆಳೆ ನಷ್ಟವಾದಲ್ಲಿ ಪರಿಹಾರ: ಕೃಷಿ ಸಚಿವ ಬಿ.ಸಿ.ಪಾಟೀಲ್
ಸಿರಿಧಾನ್ಯಗಳ ವೈಶಿಷ್ಟ್ಯತೆ :
ಸಿರಿಧಾನ್ಯಗಳು ಸಾಂಪ್ರದಾಯಕ ಬೆಳೆ ಪದ್ಧತಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದು, ಸ್ಥಳೀಯವಾಗಿ ಆಹಾರ ವೈವಿಧ್ಯತೆ ಹಾಗೂ ಸುಭದ್ರತೆಯನ್ನು ಒದಗಿಸುತ್ತವೆ. ಕಡಿಮೆ ಆಳದ ಹೆಚ್ಚು ಫಲವತ್ತತೆಯಿಲ್ಲದ ಮಣ್ಣಿನಲ್ಲಿಯೂ ಇವುಗಳನ್ನು ಬೆಳೆಯಬಹುದು.
- ಅಲ್ಪಾವಧಿ ಬೆಳೆ, ಮಳೆಯಾಶ್ರಿತ ಪ್ರದೇಶಗಳಿಗೆ ಸೂಕ್ತ. ಬರಸಹಿಷ್ಣು ಬೆಳೆಗಳು, ಹವಾಮಾನ ವೈಪರೀತ್ಯಕ್ಕೆ ಹೊಂದಿಕೊಂಡು ಬೆಳೆಯುವ ಬೆಳೆಗಳು.
- ಕೀಟ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.
- ಕಡಿಮೆ ಉತ್ಪಾದನಾ ವೆಚ್ಚ ಮತ್ತು ಉತ್ತಮ ಇಳುವರಿ ಕೊಡಬಲ್ಲ ಪರಿಸರ ಸ್ನೇಹಿ ಬೆಳೆಗಳು.
- ಸತ್ವಯುತ ಆಹಾರಗಳು, ಗಾತ್ರದಲ್ಲಿ ಕಿರಿದಾದರು ಪೋಷಣಾ ಮೌಲ್ಯದಲ್ಲಿ ಹಿರಿಯದು.
ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಬಿಳಿಜೋಳ ಖರೀದಿ ಕೇಂದ್ರ ಆರಂಭ | ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
ಪೋಷಕಾಂಶಗಳ ಕಣಜ: ಈ ಸಿರಿಧಾನ್ಯಗಳು ಹೆಚ್ಚು ಪೌಷ್ಟಿಕತೆಗೆ ಹೆಸರಾಗಿವೆ. ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದ ಪ್ರೋಟೀನ್, ನಾರಿನಾಂಶ, ಬಿ ಗುಂಪಿನ ಜೀವಸತ್ವಗಳು, ಅಗತ್ಯ ಅಮೈನೋ ಆಮ್ಲಗಳು, ಫೋಲಿಕ್ ಆಮ್ಲ ಹಾಗೂ ಜೀವಸತ್ವ ‘ಇ’ ಅಂಶಗಳಿಂದ ಕೂಡಿದ್ದು, ಹೆಚ್ಚು ಪೌಷ್ಟಿಕವಾಗಿದೆ. ಸಿರಿಧಾನ್ಯಗಳಲ್ಲಿ ಕಬ್ಬಿಣಾಂಶ, ಮೆಗ್ನೀಶಿಯಂ, ತಾಮ್ರ, ರಂಜಕ, ಸತು, ಕ್ಯಾಲ್ಷಿಯಂ ಹಾಗೂ ಪೊಟ್ಯಾಷಿಯಂ ಅಂಶಗಳು ಹೇರಳವಾಗಿದೆ. ಆದ್ದರಿಂದ ಈ ಧಾನ್ಯಗಳನ್ನು ‘ನ್ಯೂಟ್ರಿ-ಸೀರಿಯಲ್ಸ್’ ಅಥವಾ ‘ಸಿರಿಧಾನ್ಯಗಳು’ ಎಂದು ಕರೆಯುತ್ತಾರೆ.
ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳನ್ನು ಉತ್ಕೃಷ್ಟ ಆಹಾರ ಅಥವಾ ವಿಸ್ಮಯ ಧಾನ್ಯಗಳೇಂದೆ ಪರಿಗಣಿಸಲಾಗಿದೆ. ಇವು ಗ್ಲೂಟೆನ್ ಮುಕ್ತ ಧಾನ್ಯಗಳು. ಒಂದು ಕಾಲದಲ್ಲಿ ಬಡವರ ಆಹಾರವಾಗಿದ್ದ ಈ ಆಹಾರಗಳು ಸೂಪರ್ ಫುಡ್ ಮತ್ತು ಶ್ರೀಮಂತರ ಆಹಾರವಾಗಿದೆ. ಈ ಧಾನ್ಯಗಳ ಬಳಕೆಯಿಂದ ಮಧುಮೇಹ, ಹೃದಯರೋಗ, ಕರುಳಿನಬೇನೆ ಇತ್ಯಾದಿ ಕಾಯಿಲೆಗಳನ್ನು ತಡೆಯಬಹುದಾಗಿದೆ. ಇಷ್ಟೆಲ್ಲಾ ಪೌಷ್ಟಿಕತೆಯನ್ನು ಹೊಂದಿದ್ದರೂ ಸಹ ಇವುಗಳು ಹೆಚ್ಚಿನ ಬಳಕೆ ಬೆಳೆಯುವ ಪ್ರದೇಶಗಳಲ್ಲಿ ಮಾತ್ರ ಸೀಮಿತವಾಗಿದೆ.
ಸಿರಿಧಾನ್ಯಗಳ ಬಳಕೆಯನ್ನು ಸಿದ್ದ ಆಹಾರ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸಿ, ಜನಪ್ರಿಯಗೊಳಿಸುವುದರಿಂದ ಬಳಕೆಯನ್ನು ಹೆಚ್ಚಿಸಬಹುದಲ್ಲದೆ, ರೈತರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಬಹುದು. ರಾಗಿ ಸಾಮೆ, ಬರಗು, ನವಣೆ, ಹಾರಕ, ಕೊರಲೆ, ಊದಲು, ಸಜ್ಜೆ, ಮತ್ತು ಜೋಳ ಇವುಗಳನ್ನು ‘ಸಿರಿಧಾನ್ಯ’ ಎಂದು ಕರೆಯುತ್ತಾರೆ ಚಿಕ್ಕ ಕಾಳಿನ ಈ ಧಾನ್ಯಗಳು ಆರೋಗ್ಯದ ದೃಷ್ಟಿಯಿಂದ ಬಹು ದೊಡ್ಡ ಗುಣಹೊಂದಿವೆ.
ಕೀಟನಾಶಕ ಸಿಂಪಡಣೆಗೂ ಬಂತು ಡ್ರೋನ್..! ಚುರುಕುಗೊಂಡ ಕೃಷಿ ಚಟುವಟಿಕೆ
ಆರೋಗ್ಯ ರಕ್ಷಣೆಯಲ್ಲಿ ಸಿರಿಧಾನ್ಯಗಳು
ಸಿರಿಧಾನ್ಯಗಳಲ್ಲಿ ಶೇ. 10-15 ರಷ್ಟಿರುವ ನಾರಿನಾಂಶ ಸಣ್ಣ ಕರುಳಿನ ಕ್ರಿಯೆಗೆ ಸಹಕರಿಸುತ್ತದೆ. ಮಲ ವಿಸರ್ಜನೆಗೆ ಸಿರಿಧಾನ್ಯಗಳ ಆಹಾರ ಪೂರಕ, ಅಲ್ಲದೆ ಮೂಲವ್ಯಾಧಿ ಬರದಂತೆ ತಡೆಯುತ್ತದೆ. ಐಸೋಪ್ಲೇವೋನ್, ಲಿಗ್ನಿನ್‍ಗಳಂತಹ ಸಸ್ಯಜನ್ಯ ಚೋಧಕಗಳೂ ದೈಹಿಕ ಮತ್ತು ಮಾನಸಿಕ ತೊಂದರೆ ವಿರುದ್ಧ ರಕ್ಷಣೆ ನೀಡುತ್ತದೆ. ಸಿರಿಧಾನ್ಯಗಳಲ್ಲಿರುವ ಸಂರಕ್ಷಕ ಪೋಷಕಾಂಶಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ.
ನಿಯಮಿತ ಸೇವನೆಯಿಂದ ಸೋಂಕು ರೋಗಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ. ನಿಧಾನವಾಗಿ ಜೀರ್ಣವಾಗುವ, ಹೀರಲ್ಪಡುವ ಮತ್ತು ಹಂತ ಹಂತವಾಗಿ ಶಕ್ತಿಯಾಗಿ ಪರಿವರ್ತನೆಗೊಳ್ಳುವ ವಿಶಿಷ್ಟಗುಣವುಳ್ಳ ಶರ್ಕರಪಿಷ್ಟ ಸಿರಿಧಾನ್ಯದ್ದು, ಆದ್ದರಿಂದಲೇ ಇದು ಮಧುಮೇಹಿಗಳಿಗೆ ಹೆಚ್ಚು ಉಪಯುಕ್ತ ಆಹಾರ ಅಲ್ಲದೇ ಕ್ಯಾನ್ಸರ್‌ನಂತಹ ಮಾರಕ ರೋಗಗಳನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ. ಸಿರಿಧಾನ್ಯಗಳ ಇನ್ನೊಂದು ವೈಶಿಷ್ಠತೆಯೆಂದರೆ, ಇವುಗಳ ಹಸಿವನ್ನು ಹಿಂಗಿಸುವ ಸಾಮರ್ಥ್ಯ.
‘ಸಿರಿಧಾನ್ಯ’ಗಳಿಗೆ ಉತ್ತಮ ಮಾರುಕಟ್ಟೆ ಮತ್ತು ಬೆಂಬಲ ಬೆಲೆ ಇಲ್ಲದಿರುವುದು ಮತ್ತು ಬಡವರ ಆಹಾರ ಎಂಬ ಭಾವನೆ ಇರುವುದರಿಂದ ಇವುಗಳ ಬಳಕೆ ಕ್ರಮೇಣವಾಗಿ ಮಾಯವಾಗಿದ್ದವು. ಆದರೆ ಹಲವಾರು ಸತ್ವಗಳು ಹೇರಳವಾಗಿರುವ ಈ ಸಿರಿಧಾನ್ಯಗಳನ್ನು ಎಲ್ಲಾ ವಯಸ್ಸಿನವರು ಸೇವಿಸಿ ಇದರ ಉಪಯೋಗವನ್ನು ಪಡೆಯಬಹುದು ಎಂಬ ಅರಿವು ಮೂಡಿದ್ದರಿಂದ, ಇತ್ತೀಚಿನ ದಿನಗಳಲ್ಲಿ ಮತ್ತೆ ನಮ್ಮ ಆಹಾರದಲ್ಲಿ ಸೇರ್ಪಡೆಯಾಗುತ್ತಿರುವುದು ಸಂತಸದ ವಿಷಯ.
ಸಿರಿಧಾನ್ಯಗಳಲ್ಲಿರುವ ಸಸ್ಯಜನ್ಯ ರಾಸಾಯನಿಕಗಳು ಹಾಗೂ ಔಷಧೀಯ ಪೋಷಕಾಂಶಗಳು ಹಾಗೂ ಅವುಗಳ ಮಹತ್ವ
ಪಾಲಿಫಿನಾಲ್ಸ್
* ಕ್ಯಾನ್ಸರ್ ಕಾರಕಗಳ ಉತ್ಪಾದನೆಯನ್ನು ತಡೆಯುತ್ತದೆ.
* ಜೀವಕೋಶಗಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಸೂಕ್ಷ್ಮಾಣುಜೀವಿಗಳ ವಿರುದ್ದ ಹೋರಾಡುತ್ತವೆ. ಅಲ್ಲದೇ ಉತ್ಕರ್ಷಣೆಯ ವಿರುದ್ಧ ರಕ್ಷಣೆಯನ್ನು ನೀಡುವುದರ ಮೂಲಕ ಹೃದಯ ರೋಗಗಳು, ಫೈಟೋಸ್ಟೀರಾಲ್ಸ್‍ಗಳನ್ನು ತಡೆಯುತ್ತದೆ.
* ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯನ್ನು ತಡೆಯುತ್ತವೆ.
* ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತವೆ.
ಪೈಟೋಈಸ್ಟ್ರೋಜನ್‍ಗಳು
* ಸ್ತನ ಕ್ಯಾನ್ಸರ್ ಉಂಟಾಗದಂತೆ ತಡೆಯುತ್ತದೆ.
* ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ತಡೆಗಟ್ಟಲು ಬಹಳಷ್ಟು ಸಹಕಾರಿಯಾಗಿವೆ.
ಫೈಟಿಕ್ ಆಮ್ಲ
*ಉತ್ಕರ್ಷಣೆಯ ವಿರುದ್ಧ ರಕ್ಷಣೆಯನ್ನು ನೀಡುವುದರ ಮೂಲಕ ಜೀವಕೋಶಗಳನ್ನು ರಕ್ಷಿಸುತ್ತದೆ.
ನಾರಿನಾಂಶ
* ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.
* ಜೀರ್ಣರಸಗಳೊಂದಿಗೆ ಆಹಾರದ ಸಂಪರ್ಕವನ್ನು ನಿಧಾನಗೊಳಿಸುತ್ತದೆ.
* ರಕ್ತದಲ್ಲಿ ಸಕ್ಕರೆಯ ಅಂಶವನ್ನು ಕಡಿಮೆ ಮಾಡುತ್ತದೆ ಹಾಗೂ ಹತೋಟಿಯಲ್ಲಿಡುತ್ತದೆ.
*ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮ ಮಾಡುತ್ತವೆ. ಸಂತೃಪ್ತ ಭಾವನೆಯನ್ನು ನೀಡುತ್ತದೆ.
* ಮಲಬದ್ಧತೆ ಹಾಗೂ ಮೂಲವ್ಯಾಧಿ ವಿರುದ್ಧ ರಕ್ಷಣೆ ನೀಡುತ್ತದೆ.
ವಿವಿಧ ರೀತಿಯ ಸಂಸ್ಕರಣೆ ಹಾಗೂ ಮೌಲ್ಯವರ್ಧನೆಯ ತಂತ್ರಜ್ಞಾನ
ಸಿರಿಧಾನ್ಯಗಳ ಸಂಸ್ಕರಣೆಯಲ್ಲಿ ಪ್ರಮುಖವಾಗಿ ಹೊಟ್ಟು ಮತ್ತು ಸ್ವಲ್ಪ ಪ್ರಮಾಣದ ತವಡು ತಗೆಯುವುದು ಅವಶ್ಯವಾಗಿದೆ. ಪಾರಂಪರಿಕವಾಗಿ ಹೊಟ್ಟು ಹಾಗೂ ತವಡು ತೆಗೆಯುವುದು ಅವಶ್ಯವಾಗಿದೆ. ಪಾರಂಪರಿಕವಾಗಿ ಹೊಟ್ಟು ಹಾಗೂ ತವಡು ತೆಗೆಯುವ ಕಾರ್ಯಗಳನ್ನು ಮಾಡಲಾಗುತ್ತಿದ್ದು, ಈ ರೀತಿಯ ಕೆಲಸವು ಅತೀ ಶ್ರಮವುಳ್ಳ ಹಾಗೂ ಮಂದಗತಿಯ ಪದ್ಧತಿಯಾಗಿದೆ. ಆದರೆ, ಇತ್ತಿಚಿನ ದಿನಗಳಲ್ಲಿ ಅಕ್ಕಿಯ ರೀತಿ ಸಿರಿಧಾನ್ಯಗಳನ್ನು ಸಹ ಹೊಟ್ಟು ತೆಗೆಯುವ ಹೊಸ ತಂತ್ರಜ್ಞಾನಗಳಿಂದ ಸುಲಭವಾಗಿ ಎಲ್ಲರೂ ಉಪಯೋಗಿಸಲು ಸಾಧ್ಯವಾಗಿದೆ.
ಸಿರಿಧಾನ್ಯಗಳಿಂದ ಬಳಕೆ ವಿಧಾನ:
ಸಿರಿಧಾನ್ಯಗಳನ್ನು ವಿವಿಧ ಸಂಸ್ಕರಣೆ ವಿಧಾನಗಳನ್ನು ಪಾಲಿಷ್ ಮಾಡುವುದು, ಹಿಟ್ಟು ಮಾಡುವುದು, ಮೊಳಕೆಯೊಡಿಸುವುದು, ಅರಳು ಮಾಡುವುದು, ಹುದುಗುಗೊಳಿಸುವುದು, ಹುರಿಯುವುದು. ಹಾಗೂ ಬಳಸುವ ಸಿದ್ಧ ಆಹಾರ ತಯಾರಿಸಬಹುದು. ಅವಲಕ್ಕಿ, ಅರಳು, ಇಡ್ಲಿರವೆ, ಪಾಲಿಷ್ ಕಾಳುಗಳು ಮತ್ತು ಹಿಟ್ಟಿನ್ನು ಶ್ಯಾವಿಗೆ, ದೋಸೆ, ಬ್ರೆಡ್, ಬಿಸ್ಕತ್, ಹಪ್ಪಳ, ಸಂಡಿಗೆ, ಹಲ್ವಾ ಮತ್ತು ಇತರ ಕರಿದ ತಿಂಡಿಗಳ ತಯಾರಿಕೆಗೆ ಬಳಸಬಹುದು.
ಸಾಮಾನ್ಯವಾಗಿ ದಿನನಿತ್ಯ ಮನೆಗಳಲ್ಲಿ ಮಾಡುವ ತಿಂಡಿ ತಿನಿಸುಗಳಾದ ಚಕ್ಕುಲಿ, ದೋಸೆ, ಇಡ್ಲಿ, ರೊಟ್ಟಿ, ಉಪ್ಪಿಟ್ಟು, ಪೊಂಗಲ್, ತಾಲಿಪಟ್ಟು, ಬಿಸ್ಕೇಟ್, ಮುದ್ದೆ ಇತ್ಯಾದಿಗಳನ್ನೆಲ್ಲಾ ಸಿರಿಧಾನ್ಯಗಳಿಂದ ಮಾಡಬಹುದಲ್ಲದೆ, ಅನ್ನ, ಪಾಯಸ, ವಡೆ, ಹಪ್ಪಳ, ಸಂಡಿಗೆ, ಪಡ್ಡು ಮೊದಲಾದ ತಿಂಡಿ ತಿನಿಸುಗಳನ್ನು ತಯಾರಿಸಬಹುದು.
ಸಿರಿಧಾನ್ಯಗಳಿಂದ ವೈವಿಧ್ಯಮಯ ಆಹಾರಗಳನ್ನು ತಯಾರಿಸಿ ಗೃಹ ಬಳಕೆಗೆ ಮತ್ತು ಆದಾಯ ಗಳಿಕೆಗೆ ಉಪಯೋಗಿಸಬಹುದು.
- ಶಿಶು ಮತ್ತು ಮಕ್ಕಳ ಆಹಾರಗಳು
- ಆರೋಗ್ಯ ಮತ್ತು ಪತ್ಯಯ ಆಹಾರಗಳು
- ಶಕ್ತಿವರ್ಧಕ ಆಹಾರಗಳು
- ದಿಢೀರ್ ಮಿಶ್ರಣಗಳು
- ಪಾಸ್ತ ಪದಾರ್ಥಗಳು
- ವಿಶೇಷ ಆಹಾರಗಳು
- ಬೇಕರಿ ತಿನಿಸುಗಳು
- ಸೇವಿಸಲು ಸಿದ್ಧವಿರುವ ಆಹಾರಗಳು.
- ಬೇಕರಿಯಲ್ಲಿ ಬಿಸ್ಕೆಟ್, ಕೇಕ್, ವಿಶೇಷ್ ಬನ್, ರಸ್ಕ್ , ಇತ್ಯಾದಿ
ಬೇಕರಿಯಲ್ಲಿ ಸಿರಿಧಾನ್ಯಗಳ ಬಳಕೆ
ಸಿರಿಧಾನ್ಯಗಳನ್ನು ಬೇಕರಿಯಲ್ಲಿ ಬಿಸ್ಕತ್ತು, ಕೇಕ್, ವಿಶೇಷ ಬನ್, ರಸ್ಕ್‌ಗಳಲ್ಲಿ ಶೇ.40ರವರೆಗೂ ಯಾವುದೇ ರಚನೆ ಬದಲಾವಣೆ ಇಲ್ಲದೆ ಬಳಸಬಹುದು. ಈ ರೀತಿ ಬಳಸುವುದರಿಂದ ಬೇಕರಿ ಪದಾರ್ಥ ಸುಲಭವಾಗಿ ಪಚನವಾಗುತ್ತದೆ. ಎರಡರಷ್ಟು ಹೆಚ್ಚುವರಿ ಕ್ಯಾಲ್ಸಿಯಂ ಮತ್ತು ರಂಜಕವನ್ನು ಸೂಕ್ತ ಸರಾಸರಿಯಲ್ಲಿ ಒದಗಿಸುತ್ತದೆ. ಅಲ್ಲದೆ, ಪದಾರ್ಥದ ಶೇಖರಣೆ ಕಾಲ ಹೆಚ್ಚಿ, ತಯಾರಿ ಬೆಲೆ ಕಡಿಮೆಯಾಗಿರುತ್ತದೆ. ಸಿರಿಧಾನ್ಯಗಳ ಬಳಕೆಯಿಂದ ವೈವಿಧ್ಯತೆಗೆ ದಾರಿ ಮಾಡಬಹುದಾಗಿದೆ.
ವೈದ್ಯಕೀಯವಾಗಿ ವಿಶ್ಲೇಷಿಸುವುದಾದರೆ, ಮೂರನೇ ಒಂದು ಭಾಗ ನಾರಿನ ಪ್ರಮಾಣವನ್ನು ಸುಲಭವಾಗಿ ಐದು ಬಿಸ್ಕತ್ತು, ಎರಡು ತುಣುಕು ಬ್ರೆಡ್ ಅಥವಾ ಒಂದು ಕಪ್ ಕೇಕ್‌ನಿಂದ ಒದಗಿಸಬಹುದು. ಸಿರಿಧಾನ್ಯಗಳಲ್ಲಿರುವ ನಾರಿನಂಶ ಹೆಚ್ಚುವರಿ ನೀರು ಹಿಡಿದುಕೊಳ್ಳುವುದರಿಂದ ಕ್ಯಾಲೋರಿ ಪ್ರಮಾಣ ಶೇಕಡವಾರು ಒದಗಿಸುವಿಕೆ ಅನುಸಾರವಾಗಿ ಕಡಿಮೆಯಾಗುತ್ತದೆ. ಬೇಕರಿ ಪದಾರ್ಥಗಳಿಂದ ಒದಗುವ ಗ್ಲೂಕೋಸ್ ಕಡಿಮೆ ಮಾಡುತ್ತದೆ. ಬೇಕರಿ ತಿನಿಸುಗಳ ತಯಾರಿಕೆಯಲ್ಲಿ ಬಳಸುವ ಘನಕೊಬ್ಬಿನಿಂದ ಒದಗುವ ತೊಡಕನ್ನು(ಕೊಲೆಸ್ಟಿರಾಲ್ ಪ್ರಮಾಣ) ನಿವಾರಿಸುತ್ತದೆ.
ಆದ್ದರಿಂದ ಈ ಸಿರಿಧಾನ್ಯಗಳನ್ನು ಸಾಂಪ್ರದಾಯಿಕ ಆಹಾರಗಳಲ್ಲಿ ಸೇರಿಸಿ ಪೌಷ್ಟಿಕ ಮೌಲ್ಯ ಹೆಚ್ಚಿಸುವುದರ ಜೊತೆಗೆ ಅದರ ರುಚಿ ಕೆಡದಂತೆ ವಿವಿಧ ಮೌಲ್ಯವರ್ಧಿತ ಆಹಾರಗಳನ್ನು ತಯಾರಿಸಿ ಉಪಯೋಗಿಸಬಹುದು ಹಾಗೂ ರೈತರು ತಮ್ಮ ಮಟ್ಟದಲ್ಲಿಯೇ ಸಂಸ್ಕರಿಸಿ ಮಾರಾಟ ಮಾಡಬಹುದು. ಈ ಸಿರಿಧಾನ್ಯಗಳನ್ನು ಅಕ್ಕಿ ಅಥವಾ ಗೋಧಿಯಿಂದ ತಯಾರಿಸಬಹುದಾದ ಎಲ್ಲಾ ಖಾದ್ಯಗಳ ರೀತಿಯಲ್ಲಿ ದಿನನಿತ್ಯ ಉಪಯೋಗಿಸಬಹುದು.
ಇವುಗಳ ಬಳಕೆ ಹೆಚ್ಚಾಗುವಂತೆ ಮಾಡಲು ಆಧುನಿಕ ಆಹಾರ ತಂತ್ರಜ್ಞಾನಗಳನ್ನು ಬಳಸಿ ಅವುಗಳು ಸುಲಭವಾಗಿ ಎಲ್ಲರಿಗೂ ದೊರೆಯುವಂತೆ ಮಾಡುವ ದಿಸೆಯಲ್ಲಿ ಕಾರ್ಯೊನ್ಮುಖರಾಗಬೇಕಾಗಿದೆ ಹಾಗೂ ಸ್ವಸಹಾಯ ಸಂಘಗಳಲ್ಲಿ ಮೌಲ್ಯವರ್ಧಿತ ಆಹಾರಗಳನ್ನು ತಯಾರಿಸಿ ಆದಾಯೋತ್ಪನ್ನ ಚಟುಟಿಕೆಯಾಗಿ ಕೈಗೊಳ್ಳಬಹುದು. ಗ್ರಾಮೀಣ ಮತ್ತು ನಗರದ ಜನರ ದಿನನಿತ್ಯ ಆಹಾರದಲ್ಲಿ ಸಿರಿಧಾನ್ಯಗಳ ಬಳಕೆಯ ಬಗ್ಗೆ ತಿಳುವಳಿಕೆ ಮೂಡಿಸುವುದು ಸಹ ಅವಶ್ಯಕವಾಗಿದೆ.