Agripedia

ಬೆಳೆದ ಬೆಳೆ ನಾಶ ಮಾಡಿ ರೈತನ ಆಕ್ರೋಶ!

02 April, 2022 4:27 PM IST By: Kalmesh T
Destroy the crop and outrage the farmer!

ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಹಿರೇಗೌಜ ಗ್ರಾಮದ ರೈತರೊಬ್ಬರು ಬೆಳೆಯನ್ನು ನಾಶ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ನ್ಯಾಯಯುತವಾದ ಬೆಲೆ ಸಿಗದ ಕಾರಣ ಟ್ರಾಕ್ಟರ್‌ ಮೂಲಕ ತಾವು ಬೆಳೆದ ಬೆಳೆಯನ್ನು ನಾಶ ಮಾಡಿದ್ದಾರೆ.

ಇದನ್ನು ಓದಿರಿ: ಗುಡ್‌ ನ್ಯೂಸ್‌: ಹೈನುಗಾರರಿಗೆ ಕ್ರೆಡಿಟ್‌ ಕಾರ್ಡ್‌! ದೇಶದಲ್ಲೆ ಮೊದಲು

Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ

ಹಿರೇಗೌಜ ಗ್ರಾಮದ ರೈತರಾದ ತನುಜ್ ಕುಮಾರ್ ಅವರು ಒಂದೂವರೆ ಎಕರೆ ಜಮೀನಿನಲ್ಲಿ 75 ಸಾವಿರ ರೂಪಾಯಿ ವೆಚ್ಚ ಮಾಡಿ ಎಲೆಕೋಸು ಬೆಳೆದಿದ್ದರು. ಅವರಿಗೆ ಬೆಳೆ ಕೈ ಹಿಡಿದು ಉತ್ತಮ ಬೆಳೆ ಬಂದಿತ್ತು.  ಉತ್ತಮ ಬೆಳೆ ಬಂದ ಕಾರಣದಿಂದ ಲಾಭದ ನಿರೀಕ್ಷೆಯಲ್ಲಿಯೂ ಇದ್ದರು. ಆದರೆ ಅವರ ನಿರೀಕ್ಷೆ ಸುಳ್ಳಾದ ಕಾರಣ ಮನನೊಂದು ಬೆಳೆಯನ್ನು ನಾಶ ಮಾಡಿದ್ದಾರೆ ಎಂದು ಸ್ವತಃ ರೈತ ತನುಜ್‌ ತಿಳಿಸಿದ್ದಾರೆ.

ಬೆಳೆ ಉತ್ತಮವಾಗಿದ್ದರೂ ಬೆಲೆ ಕುಸಿತದಿಂದ ಬೇಸತ್ತು ತಾವು ಬೆಳೆದ ಬೆಳೆಯನ್ನು ಟ್ರಾಕ್ಟ್ರರ್ ಹೊಡೆದು ನಾಶಪಡಿಸಿ ಬೆಲೆ ಏರಿಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಲೆಕೋಸು ಕೆಜಿಗೆ 2 ರೂ. ಇದ್ದು, ಯಾರು ಕೇಳದಂತಹ ಪರಿಸ್ಥಿತಿ ಇದೆ. ಮಧ್ಯವರ್ತಿಗಳು ಎಕರೆಗೆ 5 ಸಾವಿರ ರೂಪಾಯಿ ನೀಡುತ್ತೇವೆ ಎನ್ನುತ್ತಾರೆ. ಸಾಲಮಾಡಿ ಬೆಳೆ ಬೆಳೆದಿದ್ದು, ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ತನುಜ್‌ ಅವರ ಮಾತು.

ಎಚ್ಚರಿಕೆ: ಕರ್ನಾಟಕದಲ್ಲಿ ಭಾರೀ ಮಳೆ! ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಎಲೆಕೋಸು ಬೆಳೆ ಮಾತ್ರವಲ್ಲ. ಇನ್ನೊಂದೆಡೆ ಟಮೊಟೋ ಕೂಡ ಬೆಳೆದಿದ್ದರು. ಟೊಮೊಟೋವನ್ನು ಕೇಳುವವರು ಇಲ್ಲ. ಹೊಲದಲ್ಲಿ ಟೊಮೆಟೋ ಬೆಳೆ ಕೂಡ ಹುಲುಸಾಗಿ ಬೆಳೆದಿದೆ. ಆದರೆ 2-3 ರೂಪಾಯಿಗೂ ಕೇಳುವವರು ಇಲ್ಲದಂತಾಗಿದೆ.

ಒಂದು ಬೆಳೆಗೆ ಬೆಲೆ ಇಲ್ಲ ಎಂದರೇ ಹೇಗೋ ತಡೆದುಕೊಳ್ಳಬಹುದು. ಇಷ್ಟೆಲ್ಲ ಕಷ್ಟಪಟ್ಟು ಬೆಳೆದ ಮೇಲೆ ಬೆಲೆ ಸಿಗದೆ ಇದ್ದರೇ ಹೇಗೆ ಬದುಕುವುದು ಎಂದು ಬೇಸರ ವ್ಯಕ್ತಪಡಿಸಿದರು.

ಈ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ Whatsapp ಕಾರ್ಯನಿರ್ವ ಹಿಸಲ್ಲ..! ಕಾರಣವೇನು.

ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಹೇಳಿದರೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ, ರೈತ ಆತ್ಮಹತ್ಯೆ ಮಾಡಿಕೊಂಡ ಮೇಲೆ ಸರ್ಕಾರ ಬಂದು ಸಾಂತ್ವನ ಹೇಳಿ ಪರಿಹಾರ ನೀಡುವ ಬದಲು, ರೈತರ ಬೆಳೆಗಳಿಗೆ ಕನಿಷ್ಠ ಪಕ್ಷ ಬೆಂಬಲ ಬೆಲೆಯನ್ನಾದರೂ ನೀಡಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇನ್ಮುಂದೆ Aadhaar-Pan Link ಫ್ರೀ ಇಲ್ಲ..ಸ್ವಲ್ಪ ಯಾಮಾರಿದ್ರೆ 1 ಸಾವಿರ Fine..!

Navy Recruitment : 12ನೇ ತರಗತಿ ಪಾಸ್ ಆದವರಿಗೆ ನೇಮಕಾತಿ..69,000 ವರೆಗೆ ಸಂಬಳ