Success stories

ಹಸುವಿನ ಸಗಣಿಯಿಂದ ಆಭರಣ ತಯಾರಿಸಿ ಆದಾಯ ಗಳಿಸುತ್ತಿರುವ ಸ್ವಾವಲಂಬಿ ಮಹಿಳೆಯರು! ಹೇಗೆ ಗೊತ್ತೆ?

04 July, 2022 3:58 PM IST By: Kalmesh T
womens making jewellery from cow dung and earning income!

ಒಂದಷ್ಟು ಸ್ವಾವಲಂಬಿ ಮಹಿಳೆಯರು ಹಸುವಿನ ಸಗಣಿಯಿಂದ ಆಭರಣಗಳನ್ನು ತಯಾರಿಸಿ ಆದಾಯವನ್ನು ಗಳಿಸುತ್ತಿದ್ದಾರೆ. ಹೇಗೆ? ಎಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿರಿ: ಬರೋಬ್ಬರಿ 23 ಅಡಿ ಉದ್ದದ ಕಬ್ಬು ಬೆಳೆದ ರೈತ! ಅಚ್ಚರಿಯಾದರೂ ಇದು ಸತ್ಯ

ಏನಪ್ಪಾ ಹಸುವಿನ ಸಗಣಿಯಿಂದ ಆಭರಣ ತಯಾರಾಗತ್ತಾ? ಅಂತ ನೀವು ಆಶ್ಚರ್ಯಪಡುತ್ತಿದ್ದೀರಾ? ಹೌದು ಇಲ್ಲಿ ಹಸುವಿನ ಸಗಣಿಯಿಂದ ಮಾಡಿದ ಆಭರಣಗಳ ತಯಾರಿಸಲಾಗುತ್ತಿದೆ.

ಹಸುವಿನ ಹಾಲಿನಿಂದ ಮೊಸರು , ತುಪ್ಪ , ಬೆಣ್ಣೆ , ಚೀಸ್ ಮುಂತಾದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ ಮತ್ತು ನಾವು ಅವುಗಳನ್ನು ನಮ್ಮ ಜೀವನದಲ್ಲಿ ಹಲವಾರು ರೀತಿಯಲ್ಲಿ ಬಳಸುತ್ತೇವೆ.

ಆದರೆ, ಗೋವಿನ ಸಗಣಿಯಿಂದ ಮಾಡಿದ ಆಭರಣಗಳ ಬಗ್ಗೆ ನೀವು ಇವತ್ತೆ ಕೇಳುತ್ತಿರಬಹುದು.

ವಾಸ್ತವವಾಗಿ , ಮೂಲತಃ ಬಿಹಾರದ ಸಮಸ್ತಿಪುರ ಜಿಲ್ಲೆಯ ಮಹಿಳೆ ಪ್ರೇಮಲತಾ ಅವರು ಗೋವಿನ ಉಪಯುಕ್ತತೆಯನ್ನು ಸ್ಫೂರ್ತಿ ಎಂದು ಪರಿಗಣಿಸಿ ಜನರಿಗೆ ಸಂದೇಶವನ್ನು ತಲುಪಿಸುವ ಕೆಲಸವನ್ನು ಮಾಡಿದ್ದಾರೆ.

#ರೈತರೊಬ್ಬರಿಂದ ಬೀಜರಹಿತ ಕಲ್ಲಂಗಡಿ ಕೃಷಿ ಪ್ರಯೋಗ! ವಿದೇಶದಿಂದ ನೋಡಲು ಬಂದ ಸಂಶೋಧಕರು!

ಹಾಲಿನ ಉತ್ಪನ್ನಗಳಿಂದ ಹಿಡಿದು ಗೋವಿನ ಸಗಣಿಯವರೆಗೆ ಹಸುವಿನ ಹಾಲಿನ ಉಪಯುಕ್ತತೆಯನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯಲು ಅವರು ಮುಂದಾಗಿದ್ದಾರೆ.

ಪ್ರೇಮಲತಾ  ಅವರು ವಿವಿಧ ರಾಜ್ಯಗಳು ಮತ್ತು ಸಣ್ಣ ಹಳ್ಳಿಗಳು , ಪಟ್ಟಣಗಳಿಗೆ ಹೋಗಿ ಸುಮಾರು 30 ವರ್ಷಗಳಿಂದ ಅಲ್ಲಿನ ಮಹಿಳೆಯರು ಮತ್ತು ನಿರುದ್ಯೋಗಿಗಳಿಗೆ ಗೋವಿನ ಸಗಣಿ ಉಪಯುಕ್ತತೆಯ ಬಗ್ಗೆ ಹೇಳುತ್ತಾರೆ.

ಆ ಹಸುವಿನ ಸಗಣಿ ಬಳಸಿ, ಆಭರಣಗಳನ್ನು ಮಾಡುವುದನ್ನು ತೋರಿಸುತ್ತಾರೆ ಮತ್ತು ಜನರನ್ನು ಸ್ವಾವಲಂಬಿಗಳಾಗಿರಲು ಪ್ರೇರೇಪಿಸುತ್ತಾರೆ.

ಬರೀ 24 ಗುಂಟೆ ಪೇರಲ ಬೆಳೆದು ವರ್ಷಕ್ಕೆ 25 ಲಕ್ಷ ಆದಾಯ ಗಳಿಸುತ್ತಿರುವ ಯವ ರೈತ!

ಸಗಣಿಯಿಂದ 2000 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿದ್ದಾರೆ.

ಪ್ರೇಮಲತಾ ಇದುವರೆಗೆ 2000 ಕ್ಕೂ ಹೆಚ್ಚು ಉತ್ಪನ್ನಗಳನ್ನು ಹಸುವಿನ ಸಗಣಿಯಿಂದ ಸಿದ್ಧಪಡಿಸಿದ್ದಾರೆ, ಇದು ಪರಿಸರದ ದೃಷ್ಟಿಯಿಂದ ಸಾವಯವ ಮತ್ತು ನೈರ್ಮಲ್ಯದ ದೃಷ್ಠಿಯಿಂದ ಕೂಡಿದೆ.

ಇದರಲ್ಲಿ ಆಭರಣಗಳಿಂದ ಹಿಡಿದು ಮನೆಯಲ್ಲಿ ಬಳಸುವ ವಸ್ತುಗಳು , ಪೂಜೆಗೆ ಬೇಕಾದ ವಸ್ತುಗಳು , ಅಗರಬತ್ತಿಗಳು , ಮನೆ ಅಲಂಕರಿಸಲು ವಿಗ್ರಹಗಳು , ಸಗಣಿ ಇಟ್ಟಿಗೆಗಳು , ಚಪ್ಪಲಿಗಳು  , ಕೈಗಡಿಯಾರಗಳು,

ಆಟಿಕೆಗಳು , ಕಿವಿಯೋಲೆಗಳು , ನೆಕ್ಲೇಸ್ಗಳು , ಕೈಗಳ ಬಳೆಗಳು  , ಬಳೆಗಳು , ಕೂದಲಿನ ಕ್ಲಿಪ್ಗಳು ಮತ್ತು ಇನ್ನೂ  ಅನೇಕ . 

ಪ್ರೇಮಲತಾ ಅವರ ಈ ಆಭರಣ ತಯಾರಿಸುವ ಕಲೆ ತುಂಬಾ ಅದ್ಭುತವಾಗಿದೆ.

ಅವರು ಈ ಮೂಲಕ ತಮ್ಮನ್ನು ತಾವೇ ಸ್ವಾವಲಂಬಿಯನ್ನಾಗಿ ಮಾಡಿಕೊಂಡಿದ್ದಾರೆ ಮಾತ್ರವಲ್ಲದೆ ಬಿಹಾರದ ವಿವಿಧ ಭಾಗಗಳಿಗೆ ಹೋಗಿ ಸ್ವಾವಲಂಬಿಗಳಾಗಲು ಬಿಹಾರದ ಮಹಿಳೆಯರನ್ನು ಪ್ರೇರೇಪಿಸಿದ್ದಾರೆ.