Success stories

ಅದ್ಭುತ ಕಸೂತಿ ಕಲೆಯಿಂದ ಆಕರ್ಷಕ ಆಭರಣ ತಯಾರಿಸುವ ಸಮುದಾಯದ ತಲ್ಲಣ

29 January, 2023 4:13 PM IST By: Farmer The Journalist
An insight into the making of traditional jewelleries in Ragi Kana

ಲಂಬಾಣಿ ಸಮುದಾಯಗಳ ಉಡುಗೆ ತೊಡುಗೆಗಳಿಗೆ ನಮ್ಮ ಪರಂಪರೆಯಲ್ಲಿ ಒಂದು ವಿಶೇಷ ಸ್ಥಾನವಿದೆ. ಬೆಳ್ಳಿ ಮತ್ತು ತಾಮ್ರವನ್ನು ಬಳಸಿಕೊಂಡು ಅದ್ಭುತ ಕಸೂತಿ ಕಲೆಯಿಂದ ಆಕರ್ಷಕ ಆಭರಣಗಳನ್ನು ತಯಾರಿಸುವ ಇವರ ಕಲೆ ಮುಂದೆ ಯಾವ ಆಧುನಿಕ ಒಡವೆ ಡಿಸೈನ್ ಗಳು ಪೈಪೋಟಿ ಮಾಡಲಾರವು.

ಹಸುವಿನ ಸಗಣಿಯಿಂದ ಆಭರಣ ತಯಾರಿಸಿ ಆದಾಯ ಗಳಿಸುತ್ತಿರುವ ಸ್ವಾವಲಂಬಿ ಮಹಿಳೆಯರು! ಹೇಗೆ ಗೊತ್ತೆ?

ನಗರಗಳ ಅಭಿವೃದ್ಧಿ ಹಲವಾರು ಸಮುದಾಯಗಳ ವಲಸೆಗೆ ಕಾರಣವಾಗಿದೆ. ನಗರಗಳಿನ ಭ್ರಮ ಲೋಕದ ಕಲ್ಪನೆಗಾಗಿ, ಬದುಕಿನ ಅಗತ್ಯತೆಗಳ ಹುಡುಕಾಟಕ್ಕಾಗಿ ಸೇರಿದಂತೆ ಹಲವಾರು ಕಾರಣಕ್ಕೆ ಅನೇಕ ಜನಾಂಗಗಳು ನಗರಗಳಿಗೆ ವಲಸೆ ಬರುತ್ತಿದ್ದಾರೆ.

ವಲಸೆಯ ಕಾರಣಕ್ಕಾಗಿ ಪಾರಂಪರಿಕವಾದ ಕಲೆ ಸಂಸ್ಕೃತಿಗಳು ಅವನತಿಯ ದಾರಿ ಹಿಡಿವುದಲ್ಲದೆ. ಅ ಸಮುದಾಯಗಳ ಬದುಕಿನ ವೈಶಿಷ್ಟಗಳ ಬಗೆಗಿನ ಕುರುಹುಗಳೇ ಇಲ್ಲವಾಗಿ ಬಿಡುತ್ತಿವೆ.

Dragon fruit: ಡ್ರ್ಯಾಗನ್‌ ಫ್ರೂಟ್‌ ಬೆಳೆದು 1.5 ಕೋಟಿ ಗಳಿಸುತ್ತಿರುವ ಡಾಕ್ಟರ್‌; ಇಲ್ಲಿದೆ ವೈದ್ಯರೊಬ್ಬರ ಕೃಷಿ ಕತೆ!

ನಗರಗಳ ಮಾಯ ಲೋಕದಲ್ಲಿ ಚದುರಿ ಹೋಗುವ ಹಲವಾರು ಸಮುದಾಯಗಳು ಉಳಿಯಲಾರದೆ ಹಾಗೂ ಬದುಕಲಾರದೆ ಅಳಿವಿನಂಚಿನಲ್ಲಿ ಜೀವಿಸುತ್ತಿರುವುದನ್ನು ನಾವು ಕಾಣಬಹುದು.

ಇಂತದೇ ದಾರಿಯಲ್ಲಿ ಸಾಗುತ್ತಿರುವ ಸಮುದಾಯ ಲಂಬಾಣಿ ಅಕ್ಕಸಾಲಿಗರ ಸಮುದಾಯ. ಈ ಸಮುದಾಯದ ಜನರು ಬಿಜಾಪುರ ಜಿಲ್ಲೆಯಲ್ಲಿ ಹೆಚ್ಚಾಗಿದ್ದು, ಇವರ ಕುಲ ಕಸುಬು ಆಕರ್ಷಕವಾಗಿ ಆಭರಣಗಳನ್ನು ಕೈಗಳಿಂದ ತಯಾರು ಮಾಡುವುದು.

ಗೋಮಯ ಬೇಸಾಯದಿಂದ ಕೋಟಿಗಟ್ಟಲೇ ಆದಾಯ ಗಳಿಸುತ್ತಿದ್ದಾನೆ ಈ ರೈತ! ಹೇಗೆ ಗೊತ್ತಾ?

ವಿಶೇಷಗಾಗಿ ಮಹಿಳೆಯರಿಗಾಗಿ ಮೂಗುತಿ, ಕಿವಿ ಒಲೆ, ಸೊಂಟದ ಪಟ್ಟಿ, ಕತ್ತಿನ ಸರಗಳು ಸೇರಿದಂತೆ ವೈವಿದ್ಯಮಯ ಆಭರಣಗಳನ್ನು ತಯಾರು ಮಾಡುವುದು. 

ಆದರೆ, ಇಂದಿಗೆ ಈ ಸಮುದಾಯದ ಕಲೆಗಳು ಅಳಿವಿನಂಚಿನಲ್ಲಿ ಬಂದು ನಿಂತಿವೆ. ಎಷ್ಟೋ ಜನರು ಈ ಕುಲ ಕಸುಬನ್ನು ಬಿಟ್ಟು ನಗರದ ಜಂಜಾಟದ ಮಧ್ಯೆ ನರಳುತ್ತಿದ್ದಾರೆ. ಇವರಲ್ಲಿ ಕೆಲವು ಮಂದಿ ತಮ್ಮ ಬದುಕಿಗಾಗಿ ಈ ಕಲೆಯನ್ನೆ ಅವಲಂಬಿಸಿದ್ದಾರೆ.

ಉತ್ತಮ ಪ್ರಚಾರ, ಮಾರುಕಟ್ಟೆ, ಉತ್ತೇಜನವಿಲ್ಲದೆ ಬದುಕುತ್ತಿರುವ ಲಂಬಾಣಿ ಅಕ್ಕಸಾಲಿಗರ ಕಲೆ ಮತ್ತು ಬದುಕು ಇಂದಿಗೂ ಅವಸಾನದ ಅಂಚಿನಲ್ಲಿದೆ.

ಇದರ ಮಧ್ಯೆ ಭರವಸೆಯ ಬೆಳಕಿನಂತೆ ಬಿಜಾಪುರ ಜಿಲ್ಲೆಯ ಕಲ್ಯಾಣ್ ಸಿಂಗ್ ಎಂಬುವವರು ಈ ಸಮುದಾಯ ಕಲೆಯನ್ನು ಉಳಿಸುವ ಯತ್ನವಾಗಿ ʼParamparaʼ ಎಂಬ ಸಣ್ಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.

ಲಂಬಾಣಿ ಸಮುದಾಯಗಳ ಉಡುಗೆ ತೊಡುಗೆಗಳಿಗೆ ನಮ್ಮ ಪರಂಪರೆಯಲ್ಲಿ ಒಂದು ವಿಶೇಷ ಸ್ಥಾನವಿದೆ. ಬೆಳ್ಳಿ ಮತ್ತು ತಾಮ್ರವನ್ನು ಬಳಸಿಕೊಂಡು ಅದ್ಭುತ ಕಸೂತಿ ಕಲೆಯಿಂದ ಆಕರ್ಷಕ ಆಭರಣಗಳನ್ನು ತಯಾರಿಸುವ ಇವರ ಕಲೆ ಮುಂದೆ ಯಾವ ಆಧುನಿಕ ಒಡವೆ ಡಿಸೈನ್ ಗಳು ಪೈಪೋಟಿ ಮಾಡಲಾರವು.

ಈ ಮೂಲಕ ಲಂಬಾಣಿ ಸಮುದಾಯದ ಜನರಿಗೆ ಉತ್ತಮ ಬದುಕು ರೂಪಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಆಭರಣಗಳ ಕಸೂತಿಯಲ್ಲಿ ನೈಪುಣ್ಯರಾಗಿರುವ ಈ ಸಮುದಾಯದ ಜನರನ್ನು ಸಂಘಟಿಸಿ, ಆಕರ್ಷಕ ಆಭರಣಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದಾರೆ.

ಯಾವುದೇ ಯಂತ್ರೋಪಕರಣಗಳನ್ನು ಬಳಸದೇ, ಕೈಗಳಿಂದ ತಯಾರಾಗುವ ಸುಂದರವಾದ ಒಡವೆಗಳನ್ನು ನಮ್ಮ ರಾಗಿ ಕಣದಲ್ಲೂ ಸಹ  ಮಾರಾಟ ಮಾಡಲಾಗುತ್ತಿದೆ. ಮಾರಾಟ 60ರಷ್ಟು ಹಣ ತಯಾರಕರ ಕೈ ಸೇರುತ್ತದೆ. ಈ ಆದಾಯವೇ ಅವರ ಬದುಕಿಗೆ ಆಧಾರವಾಗಿದೆ.

FTJ : ಕಾವೇರಿದಾಸ್‌ ಲಿಂಗನಾಪುರ (94838 52436)