ಯಾವ ಬೆಳೆ ಯಾವಾಗ ಕೈಹಿಡಿಯುತ್ತದೆ. ಯಾವ ಬೆಳೆ ಯಾವಾಗ ಕುಸಿಯುತ್ತದೆ ಎನ್ನುವುದು ಲೆಕ್ಕಕ್ಕೇ ಸಿಗುವುದಿಲ್ಲ. ಇದೇ ಕಾರಣಕ್ಕೆ ರೈತ ಹಲವು ಬಾರಿ ನಷ್ಟ ಅನುಭವಿಸಿದರೂ, ಒಮ್ಮೊಮ್ಮೆ ದಿಢೀರ್ ಎಂದು ಲಾಭವೂ ಬರುತ್ತದೆ.
Siddheshwar Swamiji: ನಡೆದಾಡುವ ದೇವರು “ಸಿದ್ಧೇಶ್ವರ ಸ್ವಾಮೀಜಿ” ಅಸ್ತಂಗತ; ಕಂಬನಿ ಮಿಡಿದ ಕೋಟ್ಯಾಂತರ ಭಕ್ತರು
ಗದಗದ ರೈತರೊಬ್ಬರೊಬ್ಬರಿಗೆ ಇದೇ ರೀತಿಯಲ್ಲಿ ಲಕ್ ಖುಲಾಯಿಸಿದೆ. ಗದಗನ ರೈತರೊಬ್ಬರು ದಾಖಲೆ ಬೆಲೆಯಲ್ಲಿ ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ.
ಗದಗ ತಾಲೂಕಿನಲ್ಲಿ ಕೋಟಮಚಗಿಯ ಶರಣಪ್ಪ ಜಗ್ಗಲ್ ಎಂಬ ರೈತ ಮೆಣಸಿನಕಾಯನ್ನು ದಾಖಲೆ ಬೆಲೆಗೆ ಮಾರಾಟ ಮಾಡಿ ಲಾಭ ಗಳಿಸಿದ್ದಾರೆ.
Nandini and Amul| ನಂದಿನಿ ಮತ್ತು ಅಮುಲ್ ಬ್ರ್ಯಾಂಡ್ ವಿಲೀನಕ್ಕೆ ವಿರೋಧ
ಈಗಾಗಲೇ ಶರಣಪ್ಪ ಅವರು ಕ್ವಿಂಟಾಲ್‌ಗೆ 70 ಸಾವಿರ ರೂಪಾಯಿ ದಾಖಲೆ ಬೆಲೆಗೆ ಕೆಂಪು ಮೆಣಸಿನಕಾಯಿ ಮಾರಾಟ ಮಾಡಿದ್ದು, ನಾಲ್ಕು ಎಕರೆಯಲ್ಲಿ ಮೆಣಸಿನಕಾಯಿ ಬೆಳೆದಿದ್ದಾರೆ. ರೈತ ಶರಣಪ್ಪ ಜಗ್ಗಲ್ ಈಗಾಗಲೇ ಸುಮಾರು 1 ಲಕ್ಷ ರೂಪಾಯಿಯ ಮೆಣಸಿನಕಾಯಿ ಮಾರಾಟ ಮಾಡಿದ್ದಾರೆ.
ಕಾಶ್ಮೀರ ಡಬ್ಬಿ ಎಂಬ ಮೆಣಸಿನ ಬೀಜ ಬಿತ್ತನೆ ಮಾಡಿ ಶರಣಪ್ಪ ಅವರು ಈ ದಾಖಲೆ ಬೆಲೆ ಕಂಡಿದ್ದಾರೆ. ಇನ್ನೂ ಬೆಳೆದ ಮೆಣಸಿನಕಾಯಿಯನ್ನು ಸಂಗ್ರಹ ಇರಿಸಿಕೊಂಡಿದ್ದು, ಇನ್ನಷ್ಟು ಆದಾಯ ಗಳಿಸುವ ಉತ್ಸಾಹದಲ್ಲಿದ್ದಾರೆ.
PM Kisan| ಪಿ.ಎಂ ಕಿಸಾನ್ ಸಾವಿರಾರು ರೈತರ ಕೆವೈಸಿ ಬಾಕಿ: 13ನೇ ಕಂತು ಡೌಟ್!
ರೈತರೊಬ್ಬರು ಕ್ವಿಂಟಲ್ ಮೆಣಸಿನಕಾಯಿಗೆ 41,101 ರೂ.ಗೆ ಮಾರಾಟ ಮಾಡಿದ್ದರು. ನವೆಂಬರ್ 2022ರಲ್ಲಿ ಮಾರುಕಟ್ಟೆ ಬೆಲೆ 45,000 ಆಗಿತ್ತು ಎಂದು ರೈತರು ತಿಳಿಸಿದ್ದಾರೆ. ಶರಣಪ್ಪ ಅವರ ಮೆಣಸಿನಕಾಯಿಯನ್ನು ಅಂಗಡಿ ಮಾಲೀಕ ಅಶೋಕ ಗಡಾದ್ ಅವರು ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಾರುಕಟ್ಟೆಯಲ್ಲಿ ಖರೀದಿಸಿದ್ದಾರೆ.
ಸಾಮಾನ್ಯವಾಗಿ, ಮೆಣಸಿನಕಾಯಿ ಬೆಲೆಯನ್ನು ಅದರ ಗುಣಮಟ್ಟವನ್ನು ಅವಲಂಬಿಸಿ ಕ್ವಿಂಟಲ್‌ಗೆ 35 ಸಾವಿರದಿಂದ 50 ಸಾವಿರ ರೂಪಾಯಿ ನೀಡಲಾಗುತ್ತದೆ. ಆದರೆ, ಶರಣಪ್ಪ ಅವರು ಕ್ವಿಂಟಲ್ ಗೆ 70 ಸಾವಿರಕ್ಕೂ ಹೆಚ್ಚು ಹಣವನ್ನು ಗಳಿಕೆ ಮಾಡಿದ್ದಾರೆ.
ಕಾಶ್ಮೀರ ಡಬ್ಬಿ ಮೆಣಸಿನಕಾಯಿಯು ದಪ್ಪ, ಉದ್ದ ಮತ್ತು ಎಣ್ಣೆಯ ಅಂಶವನ್ನು ಹೊಂದಿರುವ ತಳಿಯಾಗಿದೆ. ಮತ್ತು ಇದು ಹೆಚ್ಚಿನ ಬೆಲೆಯನ್ನು ಆಕರ್ಷಿಸುತ್ತದೆ. ಇದನ್ನು ಮುಖ್ಯವಾಗಿ ಮೆಣಸಿನ ಪುಡಿ ಮಾಡಲು ಬಳಸಲಾಗುತ್ತದೆ. ಗದಗ, ಹುಬ್ಬಳ್ಳಿ ಮತ್ತು ಹಾವೇರಿಯ ಏಜೆಂಟ್‌ಗಳು ಇದಕ್ಕೆ ಉತ್ತಮ ಬೆಲೆ ನೀಡಿ, ಇತರ ರಾಜ್ಯಗಳಿಂದ ಖರೀದಿ ಮಾಡುತ್ತಾರೆ.
Pm Kisan| ಪಿ.ಎಂ ಕಿಸಾನ್ ಅಪ್ಡೇಟ್: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ
ಕಳೆದ ವಾರ ಹುಬ್ಬಳ್ಳಿ ಎಪಿಎಂಸಿಯಲ್ಲಿ ಶರಣಪ್ಪ ಅವರು, ಇದೇ ಮೆಣಸಿನಕಾಯಿಯನ್ನು ಕ್ವಿಂಟಲ್ ಗೆ 59 ಸಾವಿರ ರೂಗೆ ಮಾರಾಟ ಮಾಡಿದ್ದರು. ಈ ಬೆಳವಣಿಗೆಯನ್ನು ಗಮಿಸಿದ ಗಡಾದ್ ಅವರು ಮೆಣಸಿನಕಾಯಿ ನೋಡಿ ಉತ್ತಮ ಬೆಲೆ ನೀಡಿ ಖರೀದಿ ಮಾಡಿದ್ದಾರೆ.
Aadhaar Card| ಆಧಾರ್ ಕಾರ್ಡ್‌ನೊಂದಿಗೆ ಪಾನ್‌ಕಾರ್ಡ್ ಜೋಡಣೆ ಕಡ್ಡಾಯ: ಮತ್ತೊಮ್ಮೆ ಗಡುವು! Pan Card
ಕಳೆದ ವರ್ಷ ಎಡೆಬಿಡದೆ ಸುರಿದ ಮಳೆಯಿಂದಾಗಿ ಬಹುತೇಕ ಮೆಣಸಿನಕಾಯಿ ಬೆಳೆ ನಾಶವಾಗಿ ಬೆಲೆ ಏರಿಕೆಯಾಗಿದೆ ಎಂದು ಅಂಗಡಿ ಮಾಲೀಕರು ತಿಳಿಸಿದ್ದಾರೆ. ಈ ಹಣವನ್ನು ನನ್ನ ಮೂವರು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಲು ನಿರ್ಧರಿಸಿದ್ದೇನೆ. ಇದು ನಮ್ಮ ಕುಟುಂಬಕ್ಕೆ ಹೊಸ ವರ್ಷದ ಉಡುಗೊರೆಯಾಗಿದೆ. ಈ ವಿಶೇಷ ಮೆಣಸಿನಕಾಯಿಯನ್ನು ಬೆಳೆಯಲು ನಮಗೆ ಸಹಾಯ ಮಾಡಿದ ಮತ್ತು ನಮಗೆ ಮಾರ್ಗದರ್ಶನ ನೀಡಿದ ಎಲ್ಲರಿಗೂ ನಾವು ಧನ್ಯವಾದಗಳು ಎಂದು ಶರಣಪ್ಪ ಅವರು ಸಂಭ್ರಮ ಹಂಚಿಕೊಂಡಿದ್ದಾರೆ.