Success stories

ಹವ್ಯಾಸವನ್ನೇ ಉದ್ಯಮವಾಗಿಸಿಕೊಂಡ 21ರ ಯುವತಿ; ತಿಂಗಳಿಗೆ 40ರಿಂದ 45 ಸಾವಿರ ಆದಾಯ!

13 March, 2023 12:05 PM IST By: Kalmesh T
A 21-year-old woman who turned her hobby into a business; 40 to 45 thousand income per month!

ಕೇವಲ 6 ಸಾವಿರ ರೂಪಾಯಿ ಬಂಡವಾಳ ಇಟ್ಟುಕೊಂಡು ಮನೆಯಿಂದಲೇ ಸ್ವಯಂ ಉದ್ಯೋಗ ಶುರು ಮಾಡಿಕೊಂಡು, ಯುವಕರಿಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಕೇವಲ 10 ತಿಂಗಳಲ್ಲಿ ನಿರಂತರ ಪರಿಶ್ರಮದ ಮೂಲಕ ಇದೀಗ ತಿಂಗಳಿಗೆ 40ರಿಂದ 45 ಸಾವಿರ ಆದಾಯವನ್ನು ಕೂಡ ಪಡೆಯುತ್ತಿದ್ದಾರೆ.

150 ಅಪರೂಪದ ಸಿರಿಧಾನ್ಯಗಳ Seed Bank ನಿರ್ಮಿಸಿದ ಬುಡಕಟ್ಟು ಮಹಿಳೆ ಲಹರಿಬಾಯಿ

ಉದ್ಯೋಗವಿಲ್ಲ ಎಂದು ಕೊರಗುತ್ತ ಕುಳಿತುಕೊಳ್ಳುವ ಯುವಜನತೆ ಒಂದೆಡೆಯಾದರೆ, ಸ್ವಯಂ ಉದ್ಯೋಗ ಮಾಡಲು ಎಂಬಿಎ ಪದವಿ ಮತ್ತು ಬಂಡವಾಳ ಇಲ್ಲವೆಂದು ಕೊರಗುವವರು ಇನ್ನೊಂದೆಡೆ. ಆದರೆ, ಕಾರ್ಯ ಸಾಧನೆಯ ಛಲವೊಂದಿದ್ದರೆ ಯಾವುದು ಅಸಾಧ್ಯವಲ್ಲ ಎನ್ನುವುದನ್ನು ಮಾಡಿ ತೋರಿಸಿದ್ದಾರೆ ಇಲ್ಲೊಬ್ಬ ವಿದ್ಯಾರ್ಥಿನಿ.

ಕೇವಲ 6 ಸಾವಿರ ರೂಪಾಯಿ ಬಂಡವಾಳ ಇಟ್ಟುಕೊಂಡು ಮನೆಯಿಂದಲೇ ಸ್ವಯಂ ಉದ್ಯೋಗ ಶುರು ಮಾಡಿಕೊಂಡು, ಯುವಕರಿಗೆ ಮಾದರಿಯಾಗಿದ್ದಾರೆ. ಅಷ್ಟೇ ಅಲ್ಲದೇ ಕೇವಲ 10 ತಿಂಗಳಲ್ಲಿ ನಿರಂತರ ಪರಿಶ್ರಮದ ಮೂಲಕ ಇದೀಗ ತಿಂಗಳಿಗೆ 40ರಿಂದ 45 ಸಾವಿರ ಆದಾಯವನ್ನು ಕೂಡ ಪಡೆಯುತ್ತಿದ್ದಾರೆ.

ಅದ್ಭುತ ಕಸೂತಿ ಕಲೆಯಿಂದ ಆಕರ್ಷಕ ಆಭರಣ ತಯಾರಿಸುವ ಸಮುದಾಯದ ತಲ್ಲಣ

21 ವರ್ಷ ವಯಸ್ಸಿಗೆ ಇದೆಲ್ಲ ಹೇಗೆ ಸಾಧ್ಯ? ಎಂದು ನಿಮಗೆಲ್ಲ ಕುತೂಹಲ ಮೂಡಬಹುದು. ಹೌದು! ಇಲ್ಲಿದೆ ಹ್ಯಾಂಡ್‌ಕ್ರಾಫ್ಟ್‌ ಪೇಂಟಿಂಗ್ಸ್‌ ಉದ್ಯಮ ಆರಂಭಿಸುವ ಮೂಲಕ ಸದ್ಯ ತಮ್ಮದೇ ಸ್ವಂತ ಬ್ರಾಂಡ್‌ನ ಮೂಲಕ ದೇಶವಷ್ಟೇ ಅಲ್ಲದೇ ವಿದೇಶದಲ್ಲೂ ತಮ್ಮ ಗ್ರಾಹಕರನ್ನು ಸೆಳೆದ ಯುವತಿ , ಯುವ ಉದ್ಯಮಿ ಮಾನಿಕ ಸೂಕಿ ಅವರ ಕುರಿತಾದ ವಿಶೇಷ ಲೇಖನ.

ಮೂಲತಃ ತುಮಕೂರಿನವರಾದ ಮಾನಿಕ ಸೂಕಿಯವರು ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ ಪಡೆದುಕೊಂಡಿದ್ದಾರೆ. ತಮ್ಮ ವಿದ್ಯಾಬ್ಯಾಸದ ಜೊತೆಗೆ ಚಿತ್ರಕಲೆ, ಪೆಂಟಿಂಗ್ಸ್‌, ಹ್ಯಾಂಡ್‌ಕ್ರಾಫ್ಟ್‌ನಂತ ಕರಕುಶಲ ಕಲೆಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ.

ಸಾಫ್ಟವೇರ್ ಕೆಲಸ ಬಿಟ್ಟು ಕೃಷಿಗೆ ನಿಂತ ಯುವಕ.. ಬಂಜರು ಭೂಮಿಯಲ್ಲಿ ವ್ಯವಸಾಯ ಮಾಡಿ ಗೆದ್ದ!

ಸದ್ಯ ಪದವಿ ಪೂರ್ತಿಗೊಳಿಸಿ ಪೂಣೆಯಲ್ಲಿ ಇಂಟರ್ನ್‌ಶಿಪ್‌ ಮಾಡುತ್ತಿರುವ ಅವರು, ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮಿಷ್ಟದ ಬಿಸಿನೆಯಾ ಐಡಿಯಾವನ್ನು ವಾಸ್ತವಕ್ಕೆ ತರಲು ಮುಂದಾಗಿದ್ದರು. DMAAN ಎನ್ನುವ ಬ್ರಾಂಡ್‌ ಮೂಲಕ ಮೇ 2022ರಲ್ಲಿ ಕೇವಲ 6 ಸಾವಿರ ರೂಪಾಯಿ ಬಂಡವಾಳ ಇಟ್ಟುಕೊಂಡು ಸ್ವಂತ ಉದ್ಯಮವನ್ನು ಆರಂಭಿಸಿದ್ದರು. DMAAN ಸದ್ಯ ಇನ್ಸ್ಟಾಗ್ರಾಮ್ ಪೇಜ್‌ನ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ.

DMAAN ನಲ್ಲಿ ಏನೇನಿವೆ?

ಹ್ಯಾಂಡ್‌ ಪೆಂಟಿಂಗ್‌ನ ಮೂಲಕ ಪರ್ಸ್‌, ವ್ಯಾಲೆಟ್‌, ಪೌಚ್‌, ಸೈಡ್‌ ಸ್ಲಿಂಗ್‌ ಪೌಚ್‌, ಟೀ ಶರ್ಟ್‌, ಕೈಚೀಲಗಳ ಮೇಲೆ ವಿವಿಧ ರೀತಿಯ ಹ್ಯಾಂಡ್‌ಕ್ರಾಫ್ಟ್‌ ಪೇಂಟಿಂಗ್‌ ಮೂಲಕ ಸಾಮಾನ್ಯ ವಸ್ತುಗಳನ್ನ ತಮ್ಮ ಕೈಚಳಕದಿಂದ ಆಕರ್ಷಣಿಯವಾಗಿ ಚಿತ್ರಿಸಿ ಅಂದಗಾಣಿಸುತ್ತಾರೆ.   

ಸೋಷಿಯಲ್‌ ಮಿಡಿಯಾ ಮೂಲಕವೇ ಪ್ರಚಾರ ಮತ್ತು ಮಾರಾಟ!

ಸ್ವಯಂ ಉದ್ಯೋಗವನ್ನು ಮಾಡುವ ಬಹುಪಾಲು ಜನರಿಗೆ ಎದುರಾಗುವ ಬಹುದೊಡ್ಡ ಸಮಸ್ಯೆ ಮತ್ತು ಸವಾಲೆಂದರೆ ಅದು ಪ್ರಚಾರ ಮತ್ತು ಮಾರಾಟ ಮಾಡುವುದು. ತಮ್ಮ ಸರಕು-ಸೇವೆಗಳನ್ನ ಗ್ರಾಹಕರಿಗೆ ತಲುಪಿಸುವ ನಿಟ್ಟಿನಲ್ಲಿ ಇವೆರಡು ಬಹುಮುಖ್ಯ.

ಇಲ್ಲಿಯೂ ಕೂಡ ಮಾನಿಕ ಸೂಕಿಯವರು ಇನ್ಸ್ಟಾಗ್ರಾಮ್ ಪೇಜ್‌ ರಚಿಸುವ ಮೂಲಕ ತಮ್ಮ ಪ್ರಾಡಕ್ಟ್ಸ್‌ಗಳನ್ನ ಖುದ್ದು ತಾವೇ ಪ್ರಚಾರ ಮಾಡಿದ್ದರು. ಇಲ್ಲಿಯೂ ಕೂಡ ಅವರು ಸಕಾರಾತ್ಮಕ ಸ್ಪಂದನೆಯನ್ನು ಪಡೆದುಕೊಂಡಿದ್ದಾರೆ. ಕಳೆದ ಹತ್ತು ತಿಂಗಳಿನಿಂದ ತಮ್ಮ ಎಲ್ಲ ಪ್ರಾಡಕ್ಟ್‌ಗಳನ್ನು ಕೇವಲ ಇನ್ಸ್ಟಾಗ್ರಾಮ್ ಪೇಜ್‌ನ ಮೂಲಕವೇ ಎಲ್ಲೆಡೆ ಪ್ರಚಾರ ಮಾಡಿ, ಮಾರಾಟವನ್ನು ಮಾಡುತ್ತಿದ್ದಾರೆ. ಹಾಗೆಯೇ ಗ್ರಾಹಕರಿಗೆ ಅವರಿಷ್ಟದ ಪ್ರಾಡಕ್ಟನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಾರೆ.

ಈ ಆಟೋ ಹತ್ತಿದ್ರೆ ಸಾಕು ಬುಕ್ಸ್‌, ಬಿಸ್ಕೆಟ್‌, ಸ್ಯಾನಿಟರಿ ಪ್ಯಾಡ್‌, ನೀರು ಉಚಿತ!

24x7 ಕಸ್ಟಮರ್‌ ಕೇರ್‌ ಸರ್ವಿಸ್‌!

ಹೌದು! ಬರಿ ವಸ್ತುಗಳನ್ನು ಮಾರಾಟ ಮಾಡಿ ಲಾಭ ಗಳಿಸುವುದಷ್ಟೇ ಮುಖ್ಯವಲ್ಲ. ನಮ್ಮ ವಸ್ತುಗಳನ್ನು ಮೆಚ್ಚಿ ನಮ್ಮಲ್ಲಿ ಬರುವ ಗ್ರಾಹಕರಿಗೆ ಸ್ಪಂದಿಸುವುದು ಕೂಡ ಮುಖ್ಯ. ಆದ್ದರಿಂದ ದಿನದ 24 ಗಂಟೆ ಮತ್ತು ವಾರದ ಏಳು ದಿನಗಳಲ್ಲಿ ಯಾವುದೇ ಸಮಯದಲ್ಲಿ ಗ್ರಾಹಕರು ಕರೆ ಮಾಡಿದರೂ ಅವರಿಗೆ ಸ್ಪಂದಿಸಲಾಗುತ್ತದೆ ಎನ್ನುತ್ತಾರೆ ಈ ಯುವ ಉದ್ಯಮಿ ಮಾನಿಕ ಸೂಕಿ.

ಅಂದದ ಜೊತೆಗೆ ಪರಿಸರ ಸ್ನೇಹಿ ಪ್ರಾಡಕ್ಟ್ಸ್‌ಗಳು

ಹೌದು, ಕೇವಲ ಫ್ಯಾಷನ್‌ನ ಹೆಸರಲ್ಲಿ ಸಾಕಷ್ಟು ಪ್ರಕೃತಿಗೆ ವಿರುದ್ಧವಾದ ಸರಕು-ಸೇವೆಗಳನ್ನು ನೀಡುತ್ತಿರುವ ಈ ಸಂದರ್ಭದಲ್ಲಿ DMAAN ಸ್ಟೋರ್‌ನ ಪ್ರಾಡಕ್ಟ್ಸ್‌ಗಳು ಪರಿಸರ ಸ್ನೇಹಿಯಾಗಿವೆ ಎನ್ನುವುದು ಇನ್ನೊಂದು ಖುಷಿಯ ವಿಚಾರ. ಯಾವುದೇ ಉದ್ಯಮ ಆರಂಭ ಮಾಡುವಾಗಲೂ ಮುಖ್ಯವಾಗಿ ನಾವೆಲ್ಲ ಪರಿಸರ ಸಂರಕ್ಷಣೆ ಮತ್ತು ಫ್ರಾಷನ್‌ನ ಫ್ಯೂಶನ್‌ ಉದ್ದೇಶದೊಂದಿಗೆ ಆರಂಭ ಮಾಡಬೇಕು ಎನ್ನುತ್ತಾರೆ.

ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಿಗೂ ತಲುಪಿದ DMAAN ಪ್ರಾಡಕ್ಟ್‌ಗಳು

ಸದ್ಯ ಇವರ ಪ್ರಾಡಕ್ಟ್‌ ದೇಶದಲ್ಲಷ್ಟೇ ಅಲ್ಲದೇ ವಿದೇಶಿ ಗ್ರಾಹಕರನ್ನು ಕೂಡ ಸೆಳೆದಿದ್ದು, ವಿದೇಶಗಳಿಗೂ ಇವರ ಪ್ರಾಡಕ್ಟ್ಸ್‌ಗಳು ತಲುಪಿವೆ. ಪ್ರಾಡಕ್ಟ್‌ಗಳನ್ನು ಇಷ್ಟಪಡುವ ಗ್ರಾಹಕರು ಅವರಿಚ್ಛೆಯಂತೆ ಮಾಡಿಕೊಡಲು ಹೇಳಿದಾಗ ಅವರ ಅವಶ್ಯಕತೆಗೆ ತಕ್ಕಂತಹ ಬ್ಯಾಗ್‌, ಪೌಚ್‌ಗಳ ಮೇಲೆ ಅವರಿಷ್ಟದ ಸಾಲುಗಳು, ಚಿತ್ರಗಳು, ಡಿಸೈನ್‌ಗಳನ್ನ ಕೈಯಿಂದ ಪೇಂಟಿಂಗ್‌ ಮಾಡುವ ಮೂಲಕ ತಯಾರಿಸಿ ತಲುಪಿಸಲಾಗುವುದು.

ಆರಂಭದಲ್ಲಿ ಮನೆಯವರಿಂದ ಸಣ್ಣದಾದ ವಿರೋಧ ಕೂಡ ಇತ್ತು!

ಹೌದು, ಬಿಎಸ್ಸಿ ಓದುತ್ತಿದ್ದ ಮಗಳು ಯಾವುದಾದರೂ ಸರ್ಕಾರಿ ಹುದ್ದೆಯಲ್ಲಿರಲಿ ಎನ್ನುವ ಪಾಲಕರ ಕಾಳಜಿಯಿಂದ ಆರಂಭದಲ್ಲಿ ಮಾನಿಕ ಸೂಕಿ ಅವರ ಈ ಪ್ರಯತ್ನಕ್ಕೆ ಸಣ್ಣದಾಗಿ ಮನೆಯವರ ವಿರೋಧವಿತ್ತು. ಆದರೆ, ಇವರ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ಬರಲು ಆರಂಭವಾದ ಮೇಲೆ ಮನೆಯವರು ಕೂಡ ಬೆಂಬಲ ನೀಡಿದರು.

DMAAN ನ್ನು ದೊಡ್ಡ ಇಂಡಸ್ಟ್ರಿ ಮಾಡುವ ಕನಸು !

ಇಂದು ಚಿಕ್ಕದಾಗಿ ಆರಂಭ ಮಾಡಿದ ಈ ಉದ್ಯಮವನ್ನು ಮುಂದೆ ದೊಡ್ಡ ಮಟ್ಟದಲ್ಲಿ ಇಂಡಸ್ಟ್ರಿಯಾಗಿ ಬೆಳೆಸುವ ಕನಸ್ಸು ಇದೆ. ಅಲ್ಲದೇ, ಉದ್ಯೋಗವಿಲ್ಲದೇ ಪರದಾಡುವ ಸಾಕಷ್ಟು ಯುವಜನತೆಗೆ ಕೂಡ ಉದ್ಯೋಗ ನೀಡುವ ಗುರಿ ಇದೆ. ನಿರಂತರ ಪ್ರಯತ್ನದ ಮೂಲಕ ಗುರಿಯನ್ನ ತಲುಪಿಯೇ ತೀರುತ್ತೇನೆ. ಮಹಿಳಾ ಸಬಲೀಕರಣ ಎಂದರೆ ಇನ್ಯಾರದ್ದೋ ಸಹಾಯದಿಂದ ನಾವು ಬದುಕುವುದಲ್ಲ, ಬದಲಾಗಿ ನಾವು ಸ್ವತಃ ನಮ್ಮ ಕಾಲ ಮೇಲೆ ನಿಂತು, ಇನ್ನೂ ಸಾಕಷ್ಟು ಜನರಿಗೆ ಉದ್ಯೋಗ ನೀಡುವುದನ್ನು ಮಹಿಳಾ ಸಬಲೀಕರಣ ಎನ್ನುವುದು ಅವರ ಮಾತು.

ಇಂತಹ ಯುವ ಉದ್ಯಮಿಗಳಿಗೆ ನಿಮ್ಮೆಲ್ಲರ ಸಹಕಾರ ಬಹುಮುಖ್ಯ. ಪ್ರಾಡಕ್ಟ್‌ಗಳಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಗಾಗಿ ಸಂಪರ್ಕಿಸಿ DMAAN ಹ್ಯಾಂಡ್‌ಕ್ರಾಫ್ಟ್‌ ಉದ್ಯಮದ ಸಂಸ್ಥಾಪಕಿ ಮಾನಿಕ್‌ ಸೂಕಿ.

ಸಂಪರ್ಕ ಸಂಖ್ಯೆ: 7899692063 / 9164408180