ಲಾಕ್ಡೌನ್ ಪರಿಣಾಮದಿಂದಾಗಿ ರೈತರ ಬೆಳೆಗಳು, ಹೂವು ಹಣ್ಣು ಹೊಲದಲ್ಲಿಯ ಒಣಗಿ ಹಾಳಾಗುತ್ತಿದ್ದರಿಂದ ಕೃಷಿಕರು ಸಂಕಷ್ಟಕ್ಕೆ ಸಿಲುಕಿz್ದÁರೆ. ಖರೀದಿದಾರರು ಇಲ್ಲದೆ, ಸಮರ್ಪಕ ಸಾರಿಗೆ ವ್ಯವಸ್ಥೆಯೂ ಇಲ್ಲದೇ ರೈತರು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ರೈತರ ಪರಿಸ್ಥಿತಿ.
ಮದುವೆ ಸಮಾರಂಭಗಳಿಗೆ, ಗೃಹಪ್ರವೇಶ ಸೇರಿದಂತೆ ಇತರ ಧಾರ್ಮಿಕ ಕಾರ್ಯಕ್ರಮಗಳಿಗೆ ಬೇಕಾಗುವ ಹೂವು ಕಮರಿ ಹೋಗಿದೆ. ಹೊಲದಲ್ಲಿಯೇ ಕಮರಿ ರೈತರ ಬದುಕನ್ನು ಕಿತ್ತುಕೊಂಡಿದೆ. ಚೆಂಡುಹೂವು, ಸೇವಂತಿಕೆ ಸೇರಿದಂತೆ ಹಲವಾರು ಹೂವು ಮಾರುಕಟ್ಟೆಗೆ ಸಾಗಿಸಲಾಗುತ್ತಿಲ್ಲ. ಗುಡಿ ಗುಂಡಾರಗಳು, ಮಂದಿರ ಮಸೀದಿಗಳು ಬಂದ್ ಮಾಡಿದ್ದರಿಂದ ಹೂವಿನ ವ್ಯಾಪಾರದ ಮೇಲೆ ಬದುಕುವ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
ಇದೇ ರೀತಿ ತರಕಾರಿ, ಮಾವು, ಬಾಳೆ ಬೆಳೆದ ರೈತರ ಪರಿಸ್ಥಿತಿ ಹೊರತಾಗಿಲ್ಲ. ಅಕಾಲಿಕ ಮಳೆಯಿಂದಾಗಿ ಪಪ್ಪಾಡಿ, ಕಲ್ಲಂಗಡಿ, ಬಾಳೆಹಣ್ಣು, ತರಕಾರಿಗಳು ಹಾಳಾಗುತ್ತಿದ್ದರಿಂದ ರೈತರು ಇತ್ತ ಕಟಾವು ಮಾಡಿದರೆ ಮಾರುಕಟ್ಟೆಯಿಲ್ಲ ಇದ್ದ ಬೆಳೆಯನ್ನು ಅಗ್ಗದ ದರದಲ್ಲಿ ಮಾರಾಟ ಮಾಡೋಣವೆಂದರೆ ಜನರೂ ಮನೆಯಿಂಹ ಹೊರಬರುತ್ತಿಲ್ಲವೆಂದು ತಮ್ಮ ಆಶಾಭಾವನೆಯನ್ನೇ ಕಳೆದುಕೊಂಡಿದ್ದಾರೆ.
ಸೂಕ್ತ ಮಾರುಕಟ್ಟೆ ಸಿಗದೇ ಹಣ್ಣು, ತರಕಾರಿ ಇತರೆ ಬೆಳೆ ಬೆಳೆದ ರೈತರು ಮತ್ತಷ್ಟು ಸಾಲದ ಕೂಪಕ್ಕೆ ಸಿಲುಕುವಂತಾಗಿದೆ. ಲಾಕ್ಡೌನ್ ದಿಂದಾಗಿ ಸೂಕ್ತ ಮಾರುಕಟ್ಟೆ ಸಿಗದ್ದರಿಂದ ಮತ್ತು ಮಾರಾಟಗಾರರು ಹಣ್ಣುಗಳನ್ನು ಖರೀದಿಸಲು ಮುಂದೆ

ಬಾರದ್ದರಿಂದ ಹಣ್ಣು ತೋಟದಲ್ಲಿಯೇ ಕೊಳೆಯುತ್ತಿದೆ.
ಕರ್ನಾಟಕ ರಾಜ್ಯವಷ್ಟೇ ಅಲ್ಲ, ದೇಶಾದ್ಯಂತ ರೈತರ ಇದೇ ಪರಿಸ್ಥಿತಿಯಾಗಿದೆ. ಹೋಟೆಲ್‍ಗಳು ಬಂದ್ ಆಗಿರುವುದು, ಮದುವೆ ಸಮಾರಂಭಗಳು ಇಲ್ಲದಿರುವುದರಿಂದ ತರಕಾರಿಗಳ ಬೆಲೆ ಕುಸಿದಿದ್ದು, ರೈತರು ತರಕಾರಿಗಳನ್ನು ಮಾರುಕಟ್ಟೆಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಹಾಕಿದ್ದ ಖರ್ಚು ಬರುತ್ತಿಲ್ಲವೆಂದು ರೈತರು ಚಿಂತಾಕ್ರಾಂತರಾಗಿ ಕುಳಿತಿದ್ದಾರೆ. ರೈತನ ಶ್ರಮಕ್ಕೆ ಪ್ರತಿಫಲವಾಗಿ ಉತ್ತಮ ಬೆಳೆ ಬಂದಿದೆ. ಆದರೆ ಹಣ್ಣುಗಳನ್ನು ಮಾರುಕಟ್ಟೆಗೆ ಸಾಗಿಸಲಾಗುತ್ತಿಲ್ಲ. ಇದರಿಂದ ಮನನೊಂದ ರೈತರು ತರಕಾರಿ ಹಣ್ಣುಗಳನ್ನು ದನ-ಕರುಗಳಿಗೆ ತಿನ್ನಲು ಹಾಕುತ್ತಿದ್ದಾನೆ.