ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ದಾಳಿಂಬೆ ಬೆಳೆಗಾರರಿಗೆ ಸಂತಸದ ಸುದ್ದಿ. ತೋಟಗಾರಿಕಾ ಇಲಾಖೆಯಿಂದ ಶೇ. 40ರಷ್ಟು ಸಹಾಯಧನವನ್ನು ದಾಳಿಂಬೆ ತೋಟದ ಸ್ಥಾಪನೆಗೆ ನೀಡಲಾಗುತ್ತದೆ.
ಹೌದು, ಇದು 2021ರಲ್ಲಿ ಬಂದಿರುವ ಯೋಜನೆಯಾಗಿದೆ. ಇಂತಹ ಹೆಚ್ಚು ಆದಾಯ ನೀಡುವ ಬೆಳೆಗಳು ರೈತರು ಬೆಳೆದು ಹೆಚ್ಚಿನ ಲಾಭ ಪಡೆದುಕೊಳ್ಳಲಿ ಎಂದು ಸ್ವತಹ ಸರಕಾರವೇ ಸಹಾಯಧನ ನೀಡಿ ರೈತರಿಗೆ ಪ್ರೋತ್ಸಾಹಿಸುತ್ತಿದೆ. ಈ ಸಹಾಯಧನವನ್ನು 4 ಹೆಕ್ಟರ್ ವರೆಗೂ ಪಡೆಯಬಹುದು. ಒಂದು ಎಕರೆಗೆ ಶೇ. 40 ರಷ್ಟು ಸಹಾಯಧನ ನೀಡಲಾಗುವುದು.
ಯಾವುದಕ್ಕೆಲ್ಲ ಸಹಾಯಧನ ಗೊತ್ತೆ?
ದಾಳಿಂಬೆ ಸಸಿ 5×4ಮೀ ಅಂತರ ವಾಗಿ ತೋಟ ಸ್ಥಾಪನೆ ಮಾಡಿದರೆ ಶೇ. 40 ರಷ್ಟು ಸಹಾಯಧನ ಅಂದರೆ ಪ್ರತಿ ಹೆಕ್ಟೇರ್ ಗೆ 21200/- ಗರಿಷ್ಠವಾಗಿ ನೀಡಲಾಗುತ್ತದೆ. ಈ ಹಣವನ್ನು ಹಂತಹಂತವಾಗಿ ನೀಡಲಾಗುತ್ತದೆ.
ಮೊದಲನೆಯ ವರ್ಷ 60ರಷ್ಟು ಸಹಾಯಧನ ಅಂದರೆ 12700/- ನೀಡಲಾಗುತ್ತದೆ. ಎರಡನೆಯ ವರ್ಷ 20ರಷ್ಟು ಸಹಾಯಧನ ಅಂದರೆ 4200/- ನೀಡಲಾಗುತ್ತದೆ. ಮೂರನೆಯ ವರ್ಷ 20 ರಷ್ಟು ಸಹಾಯಧನ ಅಂದರೆ 4200/- ನೀಡಲಾಗುತ್ತದೆ.
*ದಾಳಿಂಬೆ ಸಸಿ 5×5ಮೀ ಅಂತರ ವಾಗಿ ತೋಟ ಸ್ಥಾಪನೆ ಮಾಡಿದರೆ ಶೇ. 40 ರಷ್ಟು ಸಹಾಯಧನ ಅಂದರೆ ಪ್ರತಿ ಹೆಕ್ಟೇರ್ ಗೆ 19208/- ಗರಿಷ್ಠವಾಗಿ ನೀಡಲಾಗುತ್ತದೆ. ಈ ಹಣವನ್ನು ಹಂತಹಂತವಾಗಿ ನೀಡಲಾಗುತ್ತದೆ.
ಮೊದಲನೆಯ ವರ್ಷ 60ರಷ್ಟು ಸಹಾಯಧನ ಅಂದರೆ 11520/- ನೀಡಲಾಗುತ್ತದೆ. ಎರಡನೆಯ ವರ್ಷ 20ರಷ್ಟು ಸಹಾಯಧನ ಅಂದರೆ 3844/- ನೀಡಲಾಗುತ್ತದೆ. ಮೂರನೆಯ ವರ್ಷ 20 ರಷ್ಟು ಸಹಾಯಧನ ಅಂದರೆ 3844/- ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು.
ಲೇಖನ:ಮುತ್ತಣ್ಣ ಬ್ಯಾಗೆಳ್ಳಿ