Horticulture

ಮಾವಿನ ತೋಟ ಸ್ಥಾಪನೆಗೆ ತೋಟಗಾರಿಕಾ ಇಲಾಖೆಯಿಂದ 7.5 ಲಕ್ಷ ರೂಪಾಯಿಯವರೆಗೆ ಸಹಾಯಧನ

04 January, 2021 9:20 AM IST By:
Mango crop

ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 2020 -21 ಸಾಲಿನಲ್ಲಿ ಕೇಂದ್ರದಿಂದ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ನೀಡಲಾಗುತ್ತಿದೆ. ಶೇ. 50 ರಷ್ಟು ಅಥವಾ ಗರಿಷ್ಠ 7.5 ಲಕ್ಷ  ರೂಪಾಯಿಯವರೆಗೆ ಸಹಾಯ ಧನ ನೀಡಲಾಗುತ್ತದೆ. ಇದನ್ನು ಬ್ಯಾಂಕಿನ ಸಾಲಕ್ಕೆ ಸಹಾಯಧನವನ್ನು ಹೊಂದಾಣಿಕೆ ಮಾಡಲಾಗುತ್ತದೆ.

ಸಣ್ಣ ಸಸ್ಯ ಗಾರರು  ಅಂದರೆ ಸಸಿಗಳನ್ನು ತಯಾರಿಸುವವರು,  ಉದಾಹರಣೆಗೆ ನೀವು ಮಾವಿನ ಆಗಿ ಗಳನ್ನು ಅಥವಾ ಸಸಿಗಳು  ತಯಾರಿಸಿದ್ದೀರಿ ಅಂತ ಇಟ್ಟುಕೊಳ್ಳಿ. ಎಷ್ಟು ಪ್ರದೇಶದಲ್ಲಿ ಮಾವಿನ ಸಸಿಗಳನ್ನು ತಯಾರಿಸಿದ್ದೀರಾ ಮತ್ತು ಎಷ್ಟು ತಯಾರಿಸಿದ್ದೀರಾ ಅನ್ನುವುದರ ಆಧಾರದ ಮೇಲೆ ನಿಮಗೆ ಸಹಾಯಧನ ಒಂದು ಹೆಕ್ಟೇರ್ ಗೆ 50ರಷ್ಟು ಸಹಾಯಧನ. ಅಥವಾ ಗರಿಷ್ಠ 7.5 ಲಕ್ಷದವರೆಗೆ ಸಹಾಯಧನವನ್ನು ನೀಡಲಾಗುತ್ತದೆ.

ಪ್ರತಿಯೊಬ್ಬ ರೈತರಿಗೂ 10×10 ಮೀಟರ್ ಮಾವಿನ ಗಿಡಗಳ ಅಂತರ ವಾಗಿ ಸಸಿಗಳನ್ನು ನಾಟಿ ಮಾಡಿದರೆ 40 ರಷ್ಟು ಸಹಾಯಧನ, ಗರಿಷ್ಠ 10120/- ಒಂದು ಹೆಕ್ಟೇರಿಗೆ  ಮಾತ್ರ, ತೋಟಗಾರಿಕಾ ಇಲಾಖೆಯಿಂದ ನೀಡಲಾಗುತ್ತದೆ. ಇದನ್ನು ಮೊದಲನೇ ವರ್ಷಕ್ಕೆ 6120/- ಅಂದರೆ ಶೇಕಡಾ 60ರಷ್ಟು ಸಹಾಯಧನ ನೀಡಲಾಗುತ್ತದೆ.

ಎರಡನೇ ವರ್ಷಕ್ಕೆ ಶೇಕಡ 20ರಷ್ಟು ಅಂದರೆ ₹2000/- ಮತ್ತು ಮೂರನೇ ವರ್ಷಕ್ಕೆ, ಶೇಕಡ 20ರಷ್ಟು ಅಂದರೆ 2000/- ಗಳು ಸಹಾಯಧನ ನೀಡಲಾಗುತ್ತದೆ.  ಹೆಚ್ಚಿನ ಮಾಹಿತಿಗಾಗಿ  ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಿ.