ಐಶಾರಾಮಿ ವಸ್ತುಗಳು, ಮೊಬೈಲ್‌ಗಳು, ವಾಹನಗಳು, ಮನೆಗಳ ಬಗ್ಗೆ ನೀವು ಕೇಳಿದ್ದೀರ. ಆದರೆ ಐಶಾರಾಮಿ ಮಾವಿನ ಹಣ್ಣಿನ ಬಗ್ಗೆ ಎಂದಾದರೂ ಕೇಳಿದ್ದೀರಾ? ಇಲ್ಲ ಎನ್ನುವುದು ನಿಮ್ಮ ಉತ್ತರವಾದರೆ ನೀವೀಗ ಓದುತ್ತಿರುವುದು ಅಂತಹ ಒಂದು ಐಶಾರಾಮಿ ಮಾವಿನ ಹಣ್ಣಿನ ಕಥೆ.
ಮೊನ್ನೆ ತಾನೇ ಅಫ್ಘಾನಿಸ್ಥಾನ ಮೂಲದ ನೂರ್‌ಜಹಾನ್ ತಳಿಯ ಮಾವಿನ ಹಣ್ಣಿನ ಬಗ್ಗೆ ನಿಮ್ಮ ‘ಕೃಷಿ ಜಾಗರಣ’ದಲ್ಲೇ ಓದಿದ್ದೀರಿ. 2.5 ಕೆ.ಜಿ ತೂಗುವ ಒಂದು ಹಣ್ಣಿನ ಬೆಲೆ 1200 ರೂಪಾಯಿ ಎಂಬುದು ಆ ಹಣ್ಣಿನ ವಿಶೇಷತೆ. ಆದರೆ ಈ ಹಣ್ಣಿಗಿಂತಲೂ ದುಬಾರಿ ಮತ್ತೊಂದು ಮಾವು ಇರಲಿಕ್ಕಿಲ್ಲ ಎಂದು ನೀವು ಅಂದುಕೊAಡಿದ್ದರೆ, ನಿಮ್ಮ ಅನಿಸಿಕೆ ತಪ್ಪು. ಏಕೆಂದರೆ ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣಿನ ತಳಿ ಒಂದಿದೆ. ಅದರ ಮೂಲ ಜಪಾನ್ ದೇಶ. ಆ ಮಾವಿನ ಹಣ್ಣಿನ ಬೆಲೆ ಒಂದು ಕೆ.ಜಿಗೆ 2.7 ಲಕ್ಷ ರೂಪಾಯಿ!
ಹಣವಂತರು ಐದಾರು ಕೋಟಿ ರೂಪಾಯಿ ಕೊಟ್ಟು ಕಾರು, ಅದೇ ಕೋಟಿ ರೂಪಾಯಿ ಖರ್ಚು ಮಾಡಿ ಒಂದು ಬೈಕ್ ಖರೀದಿಸುತ್ತಾರೆ. ಹತ್ತಾರು ಲಕ್ಷ ರೂಪಾಯಿ ಕೊಟ್ಟು ಬಟ್ಟೆ ಕೊಳ್ಳುತ್ತಾರೆ. ಮತ್ತು ಅದೇ ಲಕ್ಷಗಳನ್ನು ಚೆಲ್ಲಿ ಮೊಬೈಲ್ ಫೋನು ಕೊಂಡು ಬೀಗುತ್ತಾರೆ. ಹೀಗೆ ಸಾಮಾನ್ಯಕ್ಕಿಂತಲೂ ಅತಿ ಹೆಚ್ಚು ಬೆಲೆ ಕೊಟ್ಟು ಖರೀದಿಸುವ ಇವೆಲ್ಲವನ್ನೂ ಐಶಾರಾಮಿ ವಸ್ತು, ವಾಹನಗಳೆನ್ನಲಾಗುತ್ತದೆ. ಆದರೆ ಜಪಾನ್‌ನಲ್ಲಿ ಐಶಾರಾಮಿ ಮಾವಿನ ಹಣ್ಣು ಕೂಡ ಇದೆ. ಆ ತಳಿಯ ಹೆಸರು ಮಿಯಾಜಕಿ. ಅದರ ಬೆಲೆ ಒಂದು ಕೆ.ಜಿ.ಗೆ ಬರೋಬ್ಬರಿ 2.7 ಲಕ್ಷ ರೂಪಾಯಿ. ಜಪಾನ್‌ನ ನೈರುತ್ಯ ಭಾಗದಲ್ಲಿರುವ ಹಾಗೂ ಅಲ್ಲಿನ ಪ್ರಮುಖ ದ್ವೀಪಗಳಲ್ಲಿ ಒಂದಾದ ಕ್ಯುಶು ಎಂಬಲ್ಲಿರುವ ಮಿಯಾಜಕಿ ನಗರ ಈ ಮಾವಿನ ಹಣ್ಣಿನ ತಳಿಯ ಮೂಲ. ಮೊದಲೆಲ್ಲಾ ಜಪಾನ್‌ಗಷ್ಟೇ ಸೀಮಿತವಾಗಿದ್ದ ಈ ತಳಿ ಈಗ ಭಾರತದಲ್ಲೂ ಇದೆ. ಅದು ಕೂಡ ಮಧ್ಯಪ್ರದೇಶದ ಊರೊಂದರಲ್ಲಿ ಮಾತ್ರ.
ಜಪಾನಿಗ ಕೊಟ್ಟ ಕೊಡುಗೆ
ಜಪಾನ್ ದೇಶದ ಆ ಹಣ್ಣು ಭಾರತಕ್ಕೆ ಬಂದದ್ದಾದರೂ ಹೇಗೆ? ಅದರ ವಿಶೇಷತೆಗಳೇನು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದೇ ಇರುತ್ತದೆ. ಹಾಗಾದ್ರೆ ಇಲ್ಲಿ ಕೇಳಿ, ಮಧ್ಯಪ್ರದೇಶದ ಜಬಲ್ಪುರದ ನಿವಾಸಿಗಳಾದ ರಾಣಿ ಹಾಗೂ ಸಂಕಲ್ಪ್ ಕುಮಾರ್ ದಂಪತಿ ಅದೊಂದು ದಿನ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರಿದ್ದ ಬೋಗಿಯಲ್ಲೇ ಅರವತ್ತರ ಆಸುಪಾಸಿನ ಜಪಾನ್ ಪ್ರಜೆಯೂ ಇದ್ದ. ರಾಣಿ-ಸಕ್ಪಾಲ್ ದಂಪತಿ ಜೊತೆ ಸ್ವಲ್ಪ ಹೊತ್ತು ಕಷ್ಟ-ಸುಖ ಮಾತನಾಡಿದ ಆ ಜಪಾನಿಗ, ಇನ್ನೇನು ದಂಪತಿ ಇಳಿಯಲಿರುವ ನಿಲ್ದಾಣ ಬಂತು ಎನ್ನುವಷ್ಟರಲ್ಲಿ ತನ್ನ ಚೀಲದೊಳಗಿದ್ದ ಒಂದು ಮಾವಿನ ಹಣ್ಣಿನ ಸಸಿ ತೆಗೆದು ಅವರ ಕೈಗಿಟ್ಟ. ಜಿತೆಗೆ, ಇದೊಂದು ಅಪರೂಪದ ಮಾವಿನ ತಳಿ. ಇದನ್ನು ಜೋಪಾನವಾಗಿ ನೋಡಿಕೊಳ್ಳಿ. ಇದು ಬೆಳೆದು ದೊಡ್ಡದಾಗಿ ಹಣ್ಣು ನೀಡಲಾರಂಭಿಸಿದರೆ ನಿಮ್ಮ ಆರ್ಥಿಕ ಸಂಕಷ್ಟಗಳೆಲ್ಲಾ ದೂರಾಗುತ್ತವೆ ಎಂದ. ಜಪಾನಿಗ ಕೊಟ್ಟ ಮಾವಿನ ಸಸಿಯನ್ನು ಅಷ್ಟೇ ವಿನಯದಿಂದ ತೆಎಗೆದುಕೊಡ ದಂಪತಿ, ಆ ಸಸಿಯನ್ನು ತಂದು ತಮ್ಮ ಹೊಲದಲ್ಲಿ ನೆಟ್ಟರು. ಅದುವೇ ಮಿಯಾಜಕಿ ಮಾವಿನ ಗಿಡ.
ಹಣ್ಣಿಗಿದೆ ವಿಭಿನ್ನ ಬಣ್ಣ
ಗಿಡ ಹಣ್ಣು ಬಿಡಲು ಪ್ರಾರಂಭಿಸಿದಾಗ ಅದರ ಬಣ್ಣ ನೋಡಿ ದಂಪತಿ ಅಚ್ಚರಿಗೊಂಡರು. ಮಾವಿನ ಹಣ್ಣುಗಳು ಕಡುಗೆಂಪು ಬಣ್ಣದಲ್ಲಿದ್ದವು. ಬಳಿಕ ತಜ್ಞರನ್ನು ಸಂಪರ್ಕಿಸಿ ಕೇಳಿದಾಗ ಇವು ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣುಗಳು. ಈ ಒಂದು ಕೆ.ಜಿ ಹಣ್ಣಿನ ಬೆಲೆ ಎರಡುವರೆ ಲಕ್ಷ ರೂಪಾಯಿಗೂ ಅಧಿಕ ಎಂಬ ವಿಷಯ ಕೇಳಿದ ದಂಪತಿಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಹಾಗೇ ರೈಲಿನಲ್ಲಿ ಆ ಹಣ್ಣಿನ ಗಿಡ ಕೊಟ್ಟ ಜಪಾನ್ ಪ್ರಜೆಯನ್ನು ಸ್ಮರಿಸುವುದನ್ನು ಅವರು ಮರೆಯಲಿಲ್ಲ.
ಮಿಯಾಜಕಿ ಮಾವಿನ ವಿಶೇಷತೆಗೆಳು
- ಕಡುಗೆಂಪು ಅಥವಾ ರೂಬಿ ಬಣ್ಣದಲ್ಲಿರುವ ಮಿಯಾಜಕಿ ಮಾವಿನ ಹಣ್ಣುಗಳು ಉದಯಿಸುವ ಸೂರ್ಯನ ಕೆಂಬಣ್ಣ ಹೋಲುವುದರಿಂದ ಇವುಗಳನ್ನು ‘ಸೂರ್ಯನ ಮೊಟ್ಟೆ’ (ಎಗ್ ಆಫ್ ದ ಸನ್) ಎಂದೂ ಕರೆಯಲಾಗುತ್ತದೆ.
- ಆ್ಯಂಟಿ ಆಕ್ಸಿಡೆಂಟ್ಸ್ನಿAದ ಶ್ರೀಮಂತವಾಗಿರುವ ಈ ಹಣ್ಣುಗಳು ಬೀಟಾ ಕ್ಯಾರೋಟಿನ್ ಮತ್ತು ಫೋಲಿಕ್ ಆಸಿಡ್ ಅನ್ನು ಒಳಗೊಂಡಿದ್ದು, ಇವುಗಳಿಂದ ಕಣ್ಣಿನ ಆರೋಗ್ಯ ವೃದ್ಧಿಸುತ್ತದೆ.
- ಮಿಯಾಜಕಿ ಹಣ್ಣು ಸೇವಿಸುವುದರಿಂದ ಕಣ್ಣಿನ ದೃಷ್ಟಿ ಉತ್ತಮಗೊಳ್ಳುವ ಜೊತೆಗೆ, ಕಣ್ಣಿನ ಆಯಾಸ, ಕಣ್ಣು ಮಂಜಾಗುವುದು, ಕೆಂಪಾಗುವಿಕೆ ರೀತಿಯ ಸಮಸ್ಯೆಗಳು ದೂರಾಗುತ್ತವೆ.
- 70ರ ದಶಕದಲ್ಲೇ ಮಿಯಾಜಕಿ ಪ್ರದೇಶದಲ್ಲಿ ಈ ತಳಿಯ ಮಾವಿನ ಹಣ್ಣನ್ನು ಬೆಳೆಯಲಾಗುತ್ತಿತ್ತು ಎಂದು ಜಪಾನ್ ಪತ್ರಿಕೆಗಳು ವರದಿ ಮಾಡಿವೆ.
- ನಗರದಲ್ಲಿನ ಬಿಸಿಯಾದ ವಾತಾವರಣ, ಹೆಚ್ಚು ಸಮಯ ಬೀಳುವ ಸೂರ್ಯನ ಕಿರಣಗಳು ಮತ್ತು ಅತಿಯಾದ ಮಳೆಯು ಈ ಹಣ್ಣುಗಳನ್ನು ಬೆಳೆಯಲು ಪೂರಕವಾಗಿದ್ದು, ಇಲ್ಲಿನ ಬಹುತೇಕ ರೈತರು ಮಾವು ಬೆಳೆಯುತ್ತಾರೆ.
- ಈ ಹಣ್ಣುಗಳು ಮಿಯಾಜಕಿ ದ್ವೀಪದಿಂದ ಹೊರ ಹೋಗುವ ಮನ್ನ ಅತ್ಯುನ್ನತ ಹಂತದ ಗುಣಮಟ್ಟ ಪರೀಕ್ಷೆಗೆ ಒಳಪಡುತ್ತವೆ. ಈ ಮಟ್ಟಿಗಿನ ಗುಣಮಟ್ಟ ಪರೀಕ್ಷೆಯನ್ನು ಜಗತ್ತಿನ ಯಾವ ಭಾಗದಲ್ಲೂ, ಯಾವ ಹಣ್ಣು ಅಥವಾ ಕೃಷಿ ಉತ್ಪನ್ನಕ್ಕೂ ಮಾಡುವುದಿಲ್ಲವಂತೆ.
- ಮಿಯಾಜಕಿ ನಗರದಲ್ಲಿ ಬೆಳೆಯುವುದರಿಂದ ಆ ನಗರದ ಹೆಸರೇ ಈ ತಳಿಗೆ ಬಂದಿದ್ದು, ಒಂದು ಹಣ್ಣು 350 ಗ್ರಾಂ. ತೂಗುತ್ತದೆ. ಈ ಮಾವಿನಲ್ಲಿ ಬೇರೆ ಹಣ್ಣುಗಳಿಗಿಂತಲೂ ಶೇ.15ರಷ್ಟು ಹೆಚ್ಚುವರಿ ಸಕ್ಕರೆ ಅಂಶ ಇರುತ್ತದೆ.
- ಮಿಯಾಜಕಿ ಎಂಬುದು ‘ಇರ್ವಿನ್’ ಜಾತಿಯ ಮಾವಿನ ತಳಿಯಾಗಿದ್ದು, ಏಪ್ರಿಲ್ ಮತ್ತು ಆಗಸ್ಟ್ ತಿಂಗಳು ಈ ಹಣ್ಣಿನ ಇಳುವರಿ ಸಮಯವಾಗಿದೆ. ಅಂತಾರಾಷ್ಟಿçÃಯ ಮಾರುಕಟ್ಟೆಯಲ್ಲಿ ಮಾತ್ರ ಇದು ಮಾರಾಟವಾಗುತ್ತದೆ.
ಮಾವಿನ ಮರ ಕಾಯಲು ಗಾರ್ಡ್!
ರಾಣಿ ಹಾಗೂ ಸಕ್ಪಾಲ್ ದಂಪತಿಯ ಮಾವಿನ ತೋಪಿನಲ್ಲಿ ಮಿಯಾಜಕಿ ತಳಿಯ ಎರಡು ಮಾವಿನ ಮರಗಳಿವೆ. ಈ ಹಣ್ಣಿನ ವಿಶೇಷತೆ ತಿಳಿದು ಕದ್ದೊಯ್ಯುವ ಖದೀಮರ ಹಾವಳಿ ಹೆಚ್ಚಿದ್ದರಿಂದ ಮಾವಿನ ಮರ ಕಾಯಲು ಗಾರ್ಡ್ ಗಳನ್ನು ನೇಮಿಸಿದ್ದಾರೆ. ಜೊತೆಗೆ, ಎರಡು ಭಯಂಕರ ನಾಯಿಗಳೂ ಈ ಮರಗಳ ಕಾವಲಿಗೆ ಇವೆ. ಬಳಿಕ ಯಾವೊಬ್ಬ ಕಳ್ಳನೂ ಮಾವಿನ ಮರದತ್ತ ಸುಳಿಯುತ್ತಿಲ್ಲ.