ಚನ್ನಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾವು ಮೇಳದಲ್ಲಿ 41.88 ಲಕ್ಷ ರೂಪಾಯಿಯ ವಹಿವಾಟು ನಡೆದಿದ್ದು, 41.55 ಟನ್ ಮಾವು ಮಾರಾಟವಾಗಿದೆ.
ಮಾವು ಮೇಳದಿಂದ ರೈತರಿಗೂ ಖುಷಿಯಾಗಿದ್ದು, ಗ್ರಾಹಕರಿಗೂ ತೃಪ್ತಿಯಾಗಿದೆ. ರಾಸಾಯನಿಕ ಮುಕ್ತ ಮಾವನ್ನು ಸವಿದಿರುವ ಗ್ರಾಹಕರು ತೃಪ್ತಿಪಟ್ಟಿದ್ದಾರೆ.
IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!
ಜಿಲ್ಲೆಯಲ್ಲಿ 3 ದಿನಗಳ ಕಾಲ ನಡೆದ ಮಾವು ಮೇಳ ಯಶಸ್ವಿಯಾಗಿದೆ. ಈ ಮೇಳದಲ್ಲಿ ಭರ್ಜರಿ ವ್ಯಾಪಾರವಾಗಿದೆ. ಉತ್ತಮ ಬೆಲೆ ಸಿಕ್ಕ ಸಂತಸ ರೈತರಲ್ಲಿ ಮೂಡಿದೆ.
ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿರುವ ಕೆಂಗಲ್ ತೋಟಗಾರಿಕಾ ಕ್ಷೇತ್ರದಲ್ಲಿ ರಾಮನಗರ ಜಿಲ್ಲಾ ಪಂಚಾಯಿತಿ, ತೋಟಗಾರಿಕಾ ಇಲಾಖೆ ಹಾಗೂ ಮಾವು ಅಭಿವೃದ್ಧಿ ಮಂಡಳಿ ಸಂಯುಕ್ತಾಶ್ರಯದಲ್ಲಿ ಮಾವು ಮೇಳ ಆಯೋಜಿಸಲಾಗಿತ್ತು.
ಮೂರು ದಿನ ಕಾಲ ನಡೆದಿರುವ ಮಾವು ಮೇಳದಲ್ಲಿ 41.55 ಟನ್ ಮಾವು ಮಾರಾಟವಾಗಿದೆ. 41.88 ಲಕ್ಷ ರೂ. ವಹಿವಾಟು ನಡೆದಿದೆ ಎಂದು ತೋಟಗಾರಿಕಾ ಇಲಾಖೆ ಮಾಹಿತಿ ನೀಡಿದೆ.
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
32 ರೈತರು ಮಾವು ಮೇಳದಲ್ಲಿ ಮಳಿಗೆಯನ್ನು ತೆರೆದಿದ್ದರು. ರಾಮ ಗೋಲ್ಡ್ ಬ್ರಾಂಡ್‌ನಲ್ಲಿ ಬೆಳೆದ ಮಾವನ್ನು ಮಾವು ಮೇಳದಲ್ಲಿ ಮಾರಾಟ ಮಾಡಿದ್ದಾರೆ. ವಾರಾಂತ್ಯದ ದಿನದಲ್ಲಿ ಮೇಳ ಆಯೋಜಿಸಿದ್ದರಿಂದ, ಬೆಂಗಳೂರಿನ ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿರುವುದು ವಿಶೇಷ.
ಮೇಳದಲ್ಲಿ ಯಾವುದೇ ರಾಸಾಯಿನಕ ಬಳಕೆ ಮಾಡದೆ ನೈಸರ್ಗಿಕವಾದ ಮಾವನ್ನು ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು. ಸಹಜವಾಗಿ ಹಣ್ಣಾಗಿರುವ ಮಾವನ್ನು ರೈತರು ಮಾರಾಟ ಮಾಡಿದರು.
ಇದರಿಂದ ರೈತರಿಗೆ ಎಪಿಎಂಸಿಗಿಂತ ಮೂರು ಪಟ್ಟು ಬೆಲೆ ದೊರಕಿದೆ. ಇತ್ತ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಣ್ಣು ಖರೀದಿಸಿದ ತೃಪ್ತಿ ದೊರಕಿದೆ.
3ನೇ ಮಗುವಿಗೆ ಜನ್ಮ ನೀಡಿದರೆ 11 ಲಕ್ಷ ರೂಪಾಯಿ ಬೋನಸ್ ನೀಡತ್ತೆ ಈ ಕಂಪನಿ.. ಜೊತೆಗೆ 1 ವರ್ಷ ರಜೆ! ಏನಿದು Policy?PM
GatiShakti: ಗ್ರಾಮೀಣ ಪ್ರದೇಶಗಳಲ್ಲಿ ಬ್ರಾಡ್ಬ್ಯಾಂಡ್ ಸೇವೆ ನೀಡಲು “GatiShakti Sanchar” ಪೋರ್ಟಲ್ ಪ್ರಾರಂಭ!
ರಾಜ್ಯಕ್ಕೆ ಮೊದಲು
ರಾಜ್ಯದಲ್ಲಿ ಮೊದಲು ರಾಮನಗರ ಜಿಲ್ಲೆಯ ಮಾವು ಮಾರುಕಟ್ಟೆಗೆ ಬರುತ್ತದೆ. ಪ್ರತಿ ವರ್ಷ ಏಪ್ರಿಲ್ ಮೊದಲ ವಾರದಲ್ಲಿ ಮಾವಿನ ಹಣ್ಣಿನ ಸುಗ್ಗಿ ಜಿಲ್ಲೆಯಲ್ಲಿ ಆರಂಭಗೊಂಡು, ಏಪ್ರಿಲ್ ಕೊನೆಯ ವಾರದಿಂದ ಮೇ ಮೊದಲ ವಾರದವರೆಗೆ ಉತ್ತುಂಗದಲ್ಲಿರುತ್ತದೆ.
ಮೂರನೇ ವಾರದ ವೇಳೆಗೆ ಮಾವು ಉತ್ಪಾದನೆ ಪೂರ್ಣಗೊಳ್ಳುತ್ತದೆ. ಬಳಿಕ ಕೋಲಾರ ಭಾಗದ ಮಾವು ಮಾರುಕಟ್ಟೆ ಪ್ರವೇಶಿಸುತ್ತದೆ. ಈ ವರ್ಷ ಡಿಸೆಂಬರ್‌ನಲ್ಲಿ ಹೆಚ್ಚು ಮಳೆ ಸುರಿದ ಪರಿಣಾಮ ಮಾವಿನ ಮರಗಳು ಹೂವು ಬಿಡುವುದು ತಡವಾಗಿದೆ. ಮೇ ಎರಡನೇ ವಾರದಿಂದ ಮಾವು ಮಾರುಕಟ್ಟೆ ಪ್ರವೇಶಿಸಿದೆ.
PM Sinchayi: ರೈತರಿಗೆ ಇಲ್ಲಿದೆ ಭರ್ಜರಿ ಸಬ್ಸಿಡಿ: ನೀರಾವರಿ ಯೋಜನೆಗೆ ಶೇ.90ರಷ್ಟು ಸಹಾಯಧನ
IMD: ರೈತಮಿತ್ರರಿಗೆ ಹವಾಮಾನ ಇಲಾಖೆಯಿಂದ ಶುಭ ಸುದ್ದಿ; ವಾಡಿಕೆಗಿಂತ ಮೊದಲೆ ರಾಜ್ಯದಲ್ಲಿ ಮುಂಗಾರು ಮಳೆ!