2022-23ನೇ ಸಾಲಿನ 10 ತಿಂಗಳ ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಗದಗ ತೋಟಗಾರಿಕೆ ತರಬೇತಿ ಕೇಂದ್ರದಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಗಳನ್ನು ತಿಳಿದು, ಅರ್ಜಿ ಸಲ್ಲಿಸಬಹುದು.
Bamboo Farmingನಲ್ಲಿ Zero Investmentನಿಂದ ನೀವು ಒಂದು ಹೆಕ್ಟೇರ್ನಲ್ಲಿ 7 Lakh ರೂಪಾಯಿಗಳನ್ನು ಪಡೆಯುತ್ತೀರಿ!
ತೋಟಗಾರಿಕೆ ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಹೀಗೆ ಕೆಳಕಂಡಂತೆ ನಿಗದಿಪಡಿಸಲಾಗಿದೆ.
1. ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿರಬೇಕು.
2. ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು.
3. ಕಂದಾಯ ಇಲಾಖೆಯಿಂದ ದೃಢೀಕರಣ ಪತ್ರ ಪಡೆದುಕೊಳ್ಳಬೇಕು.
4. 11 ಪುರುಷರು ಹಾಗೂ 5 ಜನ ಮಹಿಳೆಯರು ಸಹಿತ 16 ಜನರನ್ನು ತರಬೇತಿಗೆ ಆಯ್ಕೆ ಮಾಡಲಾಗುವುದು.
ವಯೋಮಿತಿ ಅರ್ಹತೆಗಳು :
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು 18 ರಿಂದ 33 ವರ್ಷದೊಳಗಿರಬೇಕು. ಇತರೆ ವರ್ಗದ ಅಭ್ಯರ್ಥಿಗಳು 18 ರಿಂದ 30 ವರ್ಷದೊಳಗಿರಬೇಕು.
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳು ರೂ.30 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ರೂ.15 ಅನ್ನು ತೋಟಗಾರಿಕೆ ಉಪನಿರ್ದೇಶಕರು(ಜಿ.ಪಂ)ಹಾವೇರಿ ಇವರ ಹೆಸರಿನಲ್ಲಿ ಪೋಸ್ಟಲ್ ಆರ್ಡರ್(ಐಪಿಒ) ಅಥವಾ ಡಿಮ್ಯಾಂಡ್ ಡ್ರಾಪ್ಟ್ ಮಾಡಿ, ಅರ್ಜಿ ಜೊತೆಗೆ ಲಗತ್ತಿಸಬೇಕು.
Farming Business Ideas! ಹೇಗೆ ಒಬ್ಬ ರೈತ ತಿಂಗಳಿಗೆ 1-2 ಲಕ್ಷ ಗಳಿಸಬಹುದು?
ಅರ್ಜಿ ನಮೂನೆಯನ್ನು ತೋಟಗಾರಿಕೆ ಇಲಾಖೆ ವೆಬ್‌ಸೈಟ್ https://horticulturedir.karnataka.gov.in ನಲ್ಲಿ ಅಥವಾ ಹತ್ತಿರದ ತೋಟಗಾರಿಕೆ ಕಚೇರಿಯಲ್ಲಿ ಮಾರ್ಚ್ 15 ರಿಂದ ದಿನಾಂಕ 16-04-2022ರವರೆಗೆ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-04-2022. ಆಯ್ಕೆಪಟ್ಟಿಯನ್ನು ದಿನಾಂಕ 20-04-2022 ರಂದು ಪ್ರಕಟಿಸಲಾಗುತ್ತದೆ. ತೋಟಗಾರಿಕೆ ಇಲಾಖೆ ವೆಬ್‌ಸೈಟ್ ವಿಳಾಸ : https://horticulturedir.karnataka.gov.in/
ಇದನ್ನು ಓದಿರಿ:
PM Kisan Samman Nidhi Scheme! 1.82 ಲಕ್ಷ ಕೋಟಿ ರೂ ರೈತರಿಗೆ! ಈ ಯೋಜನೆಯಿಂದ ಸಿಕ್ಕಿದೆ!