Horticulture

ಈ ವರ್ಷ 619 ಕೋಟಿ ರೂ. ಮೌಲ್ಯದ ಸುಪ್ರಸಿದ್ಧ ಜಲಗಾವ್ ಬಾಳೆ ದುಬೈಗೆ ರಫ್ತು!

17 June, 2021 3:44 PM IST By:
ಜಲಗಾವ್ ಬಾಳೆ

ಕೃಷಿ ಉತ್ಪನ್ನಗಳ ರಫ್ತು ವಹಿವಾಟಿಗೆ ಸಂಬAಧಿಸಿದAತೆ ಭಾರತಕ್ಕೆ ಸಿಹಿ ಸುದ್ದಿಯೊಂದು ಬಂದಿದೆ. ಅದೇನೆಂದರೆ ಪ್ರಸಕ್ತ ವರ್ಷ ಮಹಾರಾಷ್ಟçದ ಸುಪ್ರಸಿದ್ಧ ಜಲಗಾವ್ ಬಾಳೆ ಹಣ್ಣುಗಳ ರಫ್ತು ಪ್ರಮಾಣ ಅದ್ಧೂರಿಯಾಗಿದೆ. ಈ ವರ್ಷ ದುಬೈಗೆ ಸುಮಾರು 619 ಕೋಟಿ ಮೌಲ್ಯದ, 1.91 ಲಕ್ಷ ಟನ್ ಜಲಗಾವ್ ಬಾಳೆ ಹಣ್ಣುಗಳನ್ನು ಕಳುಹಿಸಿಕೊಡಲಾಗಿದೆ.

ಈ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿ ನೋಡುವುದಾದರೆ ಈ ಬಾರಿ ರಫ್ತು ಪ್ರಮಾಣ ಆಶಾದಾಯಕವಾಗಿದೆ. ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವ ನಡುವೆಯೂ ಭಾರತದಿಂದ ಕೃಷಿ ಉತ್ಪನ್ನಗಳ ರಫ್ತು ಮಾತ್ರ ಯಾವುದೇ ಅಡೆತಡೆಗಳಿಲ್ಲದೆ ಸಾಂಗವಾಗಿ ನಡೆದಿದೆ. ಇದರರ್ಥ ವಿದೇಶಗಳಿಗೆ ಭಾರತದ ಕೃಷಿ ಉತ್ಪನ್ನಗಳ ಮೇಲೆ ವಿಶ್ವಾಸವಿದೆ ಎಂಬುದಾಗಿದೆ. ಇನ್ನು ಬಾಳೆ ಬೆಳೆಯ ವಿಚಾರಕ್ಕೆ ಬರುವುದಾದರೆ ಭಾರತದಲ್ಲಿ ನೂರಾರು ವಿಧದ ಬಾಳೆಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಆಧರೆ, ದುಬೈ ಮಂದಿ ಜಲಗಾವ್ ಬಾಳೆಹಣ್ಣುಗಳನ್ನೇ ಆಮದು ಮಾಡಿಕೊಳ್ಳುತ್ತಿರುವುದೇಕೆ ಎಂಬ ಅನುಮಾನ ಬಾರದೇ ಇರದು.

ಜಲಗಾವ್ ಬಾಳೆ ವಿಶೇಷತೆ ಏನು?

ಜಲಗಾವ್, ಮಹಾರಾಷ್ಟçದ ಉತ್ತರ ಭಾಗದಲ್ಲಿರುವ ಒಂದು ಜಿಲ್ಲೆ. ಈ ಜಿಲ್ಲೆ ಬಾಳೆ ಹಣ್ಣು ಬೆಳೆಯಲು ಫೇಮಸ್. ಅದರಲ್ಲೂ ಸ್ಥಳೀಯ ತಳಿಯಾಗಿರುವ ಜಲಗಾವ್ ಬಾಳೆಹಣ್ಣು ಇಲ್ಲಿನ ರೈತರ ಪ್ರಮುಖ ತಳಿ ಮತ್ತು ಬೆಳೆ. ಈ ತಳಿಯ ವಿಶೇಷತೆ ಏನೆಂದರೆ, ಜಗತ್ತಿನಲ್ಲಿ ಕೆಲವೇ ಕೆಲವು ಕೃಷಿ ಉತ್ಪನ್ನಗಳಿಗೆ ನೀಡಲಾಗುವ ಜಿಐ ಪ್ರಮಾಣಪತ್ರ ಈ ಜಲಗಾವ್ ತಳಿಗೆ ದೊರೆತಿದೆ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಯಲಾಗುವ ಮತ್ತು ನಿರ್ದಿಷ್ಟ ಲಕ್ಷಣ, ವಿಶೇಷತೆಗಳನ್ನು ಹೊಂದಿರುವ ಕೃಷಿ ಉತ್ಪನ್ನಗಳಿಗೆ ಜಿಐ ಅಂದರೆ, ‘ಜಿಯಾಗ್ರಾಫಿಕಲ್ ಇಂಡಿಕೇಷನ್ಸ್’ (ಭೌಗೋಳಿಕ ಸೂಚಕಗಳು) ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರ ಪಡೆದಿರುವುದನ್ನು ಹೊರತುಪಡಿಸಿ ಜಲಗಾವ್ ತಳಿಯ ಬಾಳೆಹಣ್ಣುಗಳು ಆರೋಗ್ಯದ ದುಷ್ಟಿಯಿಂದಲೂ ಮಹತ್ವ ಪಡೆದಿವೆ. ಈ ಹಣ್ಣುಗಳು ಫೈಬರ್ ಹಾಗೂ ಮಿನರಲ್‌ಗಳಿಂದ ಶ್ರೀಮಂತವಾಗಿವೆ. ಹೀಗಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ದುಬೈ ಮಂದಿ ಈ ಹಣ್ಣುಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ.

ಜಲಗಾವ್‌ನಲ್ಲಿರುವ ನಿಸರ್ಗರಾಜ ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) 2016ರಲ್ಲಿ ಜಲಗಾವ್ ಬಾಳೆಹಣ್ಣುಗಳ ತಳಿಗೆ ಜಿಐ ಪ್ರಮಾಣಪತ್ರವನ್ನು ಪಡೆದಿದೆ. ಆ ಬಳಿಕ ಜಿಲ್ಲೆಯ ರೈತರು ಜಾಗತಿಕ ಗುಣಮಟ್ಟದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡ ಕಾರಣ, ಇತ್ತೀಚಿನ ವರ್ಷಗಳಲ್ಲಿ ಈ ಹಣ್ಣುಗಳೂ ಸೇರಿದಂತೆ ಭಾರತದ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣದಲ್ಲಿ ನಿರಂತರವಾಗಿ ವೃದ್ಧಿಯಾಗುತ್ತಿದೆ.

ಈ ವರ್ಷ ರಫ್ತು ವೃದ್ಧಿ

ಜಲಗಾವ್ ಜಿಲ್ಲೆಯ ರೈತರು ಅತ್ಯಂತ ಉತ್ತಮ ಗುಣಮಟ್ಟದ ಬಾಳೆ ಹಣ್ಣುಗಳನ್ನು ಬೆಳೆಯುತ್ತಾರೆ. ಹೆಚ್ಚಿನ ರೈತರು ಸಾವಯವ ಪದ್ಧತಿಯಲ್ಲಿ ಬೆಳೆಯುತ್ತಿರುವುದು ಈ ಹಣ್ಣುಗಳಿಗೆ ಇರುವ ಬೇಡಿಕೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಪರಿಣಾಮ, ವರ್ಷದಿಂದ ವರ್ಷಕ್ಕೆ ರಫ್ತು ಪ್ರಮಾಣ ಏರಿಕೆಯಾಗುತ್ತಿದೆ. 2019ರಲ್ಲಿ ಸುಮಾರು 413 ಕೋಟಿ ರೂಪಾಯಿ ಮೌಲ್ಯದ, ಒಟ್ಟು 1.34 ಲಕ್ಷ ಟನ್ ಬಾಳೆ ಹಣ್ಣುಗಳು ಜಲಗಾವ್‌ನಿಂದ ದುಬೈಗೆ ರಫ್ತಾಗಿದ್ದವು. ಬಳಿಕ 2020ನೇ ಹಣಕಾಸು ವರ್ಷದಲ್ಲಿ 660 ಕೋಟಿ ರೂಪಾಯಿ ಮೌಲ್ಯದ 1.95 ಲಕ್ಷ ಟನ್ ಬಾಳೆ ಹಣ್ಣುಗಳನ್ನು ರಫ್ತು ಮಾಡಲಾಗಿತ್ತು. ಈ ಬಾರಿ ಅಂದರೆ 2021ನೇ ಹಣಕಾಸು ವರ್ಷದಲ್ಲಿ ಈಗಾಗಲೇ 1.91 ಲಕ್ಷ ಟನ್ ಜಲಗಾವ್ ಬಾಳೆ ಹಣ್ಣುಗಳನ್ನು ದುಬೈಗೆ ಕಳುಹಿಸಿಕೊಡಲಾಗಿದೆ. ಇನ್ನೂ ಎರಡು ಮೂರು ತಿಂಗಳ ಕಾಲ ಬಾಳೆ ಹಣ್ಣಿನ ಸೀಸನ್ ಇರುವ ಕಾರಣ ಈ ಬಾರಿ ರಫ್ತು ಪ್ರಮಾಣ 2 ಲಕ್ಷ ಟನ್ ಮೀರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಭಾರತದ ಬಾಳೆಯ ಕಣಜ

ಜಲಗಾವ್ ಅನ್ನು ಭಾರತದ ‘ಬಾಳೆ ಹಣ್ಣಿನ ನಗರ’ (ಬನಾನ ಸಿಟಿ ಆಫ್ ಇಂಡಿಯಾ) ಎಂದು ಗುರುತಿಸಲಾಗಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಬಾಳೆ ಬೆಳೆಯುವ ದೇಶ ಭಾರತ. ಜಾಗತಿಕ ಬಾಳೆಹಣ್ಣು ಉತ್ಪಾದನೆಗೆ ಭಾರತದ ಕೊಡುಗೆ ಶೇ.25ರಷ್ಟಿದ್ದರೆ, ಭಾರತದ ಬಾಳೆಹಣ್ಣು ಉತ್ಪಾದನೆಗೆ ಜಲಗಾವ್ ಜಿಲ್ಲೆ ಒಂದೇ ಶೇ.16ರಷ್ಟು ಕೊಡುಗೆ ನೀಡುತ್ತಿದೆ. ಇನ್ನು ಮಹಾರಾಷ್ಟçದ ಒಟ್ಟು ಉತ್ಪಾದನೆಯಲ್ಲಿ ಶೇ.54ರಷ್ಟು ಪಾಲು ಜಲಗಾವ್ ರೈತರ ಬಾಳೆ ತೋಟಗಳಿಂದ ಬರುತ್ತದೆ. ಇನ್ನೂ ಒಂದು ಲೆಕ್ಕಾಚಾರದ ಪ್ರಕಾರ ನೋಡುವುದಾದರೆ, ಜಲಗಾವ್ ಅನ್ನು ಒಂದು ದೇಶ ಎಂದು ಪರಿಗಣಿಸಿದರೆ ಅತಿ ಹೆಚ್ಚು ಬಾಳೆ ಬೆಳೆಯುವ ದೇಶಗಳ ಪಟ್ಟಿಯಲ್ಲಿ ಜಲಗಾವ್ 7ನೇ ಸ್ಥಾನ ಪಡೆಯುತ್ತದೆ!