ತೋಟಗಾರಿಕೆಯಲ್ಲಿ ಹನಿ ನೀರಾವರಿ ವ್ಯವಸ್ಥೆ ಮಾಡಲು ಬಯಸುವವ ರೈತರಿಗೆ ಸಂತಸದ ಸುದ್ದಿ. ತೋಟಗಾರಿಕೆ ಇಲಾಖೆಯ ವತಿಯಿಂದ ಹನಿನೀರಾವರಿ ಪದ್ಧತಿ ಅಳವಡಿಸಲು ಗರಿಷ್ಠ 5 ಹೆಕ್ಟೆರ್ ವರೆಗೆ ಸಹಾಯ ಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಾಗಿದೆ.
ಹೌದು, ಪ್ರಸಕ್ತ ಸಾಲಿಗೆ ಪ್ರಧಾನಮಂತ್ರಿ ಕೈಷಿ ಸಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ದತಿ ಅಳವಡಿಸಿಕೊಳ್ಳಲು ಗರಿಷ್ಟ 5 ಹೆಕ್ಟೆರ್‍ವರೆಗೆ ಸಹಾಯಧನ ನೀಡಲಾಗುತ್ತಿದ್ದು, ಅರ್ಹ ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪಂಗಡ ವರ್ಗದ ರೈತರು ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತ ರೈತರು ಬಾಗಲಕೋಟೆ ಜಿಲ್ಲೆಯ ಆಯಾ ತಾಲೂಕಿನ ತೋಟಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಬಾದಾಮಿ ತಾಲೂಕಾ ಸಹಾಯಕ ನಿರ್ದೇಶಕ ಕಚೇರಿ (08357-220422, 9986247138), ಬಾಗಲಕೋಟೆ (08354-223358, 9845896489), ಬೀಳಗಿ (08425-235653, 9902906750), ಹುನಗುಂದ (08351-260469, 9986247138), ಜಮಖಂಡಿ (08353-222097, 9900002260), ಮುಧೋಳ (08350-281421, 9902906750)ಗೆ ಸಂಪರ್ಕಿಸಬಹುದಾಗಿದೆ.