ಪೇರಲ ಅಥವಾ ಸೀಬೆಹಣ್ಣು ಒಂದು ಸ್ವಾದಿಷ್ಟಕರವಾದ, ಸಮಶೀತೋಷ್ಣ ವಲಯದ ಹಣ್ಣಿನ ಬೆಳೆಯಾಗಿದ್ದು, ನಮ್ಮ ರಾಜ್ಯದಲ್ಲಿ ಧರವಾಡ, ಬೆಳಗಾವಿ, ಬೆಂಗಳೂರು ಜಿಲ್ಲೆಗಳಲ್ಲಿ ಅಧಿಕವಾಗಿ ಬೆಳೆಯುತ್ತಿದ್ದಾರೆ. ಆದ್ದರಿಂದ ಇದು ಬಹುಪೋಷಕಾಂಶಯುಕ್ತ ಹಣ್ಣಿನ ಬೆಳೆಯಾಗಿದ್ದು ಬಹಳ ಜನಪ್ರಿಯವಾಗುತ್ತಿದೆ. ಪೇರಲಿನಲ್ಲಿ ಅನೇಕ ತರನಾದ ಕೀಟಗಳು, ರೋಗಗಳ ಬಾಧೆಯಿಂದ ರೈತರು ತುಂಬಾ ನಷ್ಠ ಅನುಭವಿಸುತ್ತಿದ್ದಾರೆ ಮತ್ತು ಪೇರಲಿನಲ್ಲಿ ಅಧಿಕ ಇಳುವರಿ ಮತ್ತು ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಕೀಟ, ರೋಗಬಾಧೆ ಮತ್ತು ಪೋಷಕಾಂಶÀಗಳ ನಿರ್ವಹಣೆ ಮುಖ್ಯವಾಗಿರುತ್ತದೆ.
ಸಸ್ಯ ಸಂರಕ್ಷಣೆ:
ಕೀಟಗಳು ಮತ್ತು ನಿರ್ವಹಣಾ ಕ್ರಮಗಳು:
- ಕಜ್ಜಿ ತಿಗಣೆ (ಟೀಸೊಳ್ಳೆ) :
ಹಾನಿಯ ಲಕ್ಷಣಗಳು :
- ಅಪ್ಸರೆ ಮತ್ತು ಪ್ರೌಢತಿಗಣೆಗಳು ಎಲೆಗಳಿಂದ, ಎಳೆಯದಾದ ರೆಂಬೆಗಳಿಂದ ಮತ್ತು ಹಣ್ಣಗಳಿಂದ ರಸವನ್ನು ಹೀರುತ್ತವೆ.
- ಇಂತಹ ರಸ ಹೀರಿದ ಸ್ಥಳದಲ್ಲಿ ಕಂದು ಬಣ್ಣದ ಚೆಕ್ಕೆಯಾಗುತ್ತದೆ.
- ಬಾಧೆಗೊಳಗಾದ ಕಾಯಿಗಳ ಮೇಲೆ ಕಂದು ಬಣ್ಣದ ಕಜ್ಜಿ ಆಗುತ್ತದೆ.
- ಕಾಯಿಗಳು ಗಟ್ಟೆಯಾಗಿ ಗಿಡಗಳಿಂದ ಕೆಳಗೆ ಬೀಳುತ್ತವೆ.
ಮುಖ್ಯ ನಿರ್ವಹಣಾ ಕ್ರಮಗಳು :
- ಗಿಡಗಳಲ್ಲಿ ಗಾಳಿ, ಬೆಳಕು ಬೀಳುವಂತೆ ರೆಂಬೆಕೊಂಬೆಗಳ ಚಾಟನಿಯನ್ನು ಮಾಡಬೇಕು
- ಅಂತರ ಬೆಳೆಯಾಗಿ ಆಲು, ಮಾವು, ಗೋಡಂಬಿ, ಹತ್ತಿ ಬೆಳೆಗಳನ್ನು ಬೆಳೆಯಬಾರದು
- ಕೀಟಗಳಿಂದ ಹಾನಿಗೊಳಗಾದ ರೆಂಬೆಗಳು ಮತ್ತು ಹಣ್ಣುಗಳನ್ನು ನಾಶಪಡಿಸಬೇಕು
- ಹೂ ಬಿಡುವ ಸಮಯದಲ್ಲಿ ಗಿಡಗಳಿಗೆ 4 ಗ್ರಾಂ. ಕಾರ್ಬಾರಿಲ್ 50 ಡಬ್ಲ್ಯೂಪಿ ಅಥವಾ 1.7 ಮಿಲಿ ಡೈಮಿಥೋಯೆಟ್ 30 ಇಸಿ ಅಥವಾ ಸೈಪರಮಿಥ್ರಿನ್ 0.5 ಮಿಲಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
- ಹಿಟ್ಟು ತಿಗಣೆ :
ಹಾನಿಯ ಲಕ್ಷಣಗಳು :
* ಬಿಳಿ ಹಿಟ್ಟಿನಂತಹ ತಿಗಣೆಗಳು ಗುಂಪಿನಲ್ಲಿ ಎಲೆಯಿಂದ ಮತ್ತು ಕಾಯಿಗಳಿಂದ ರಸಹೀರುತ್ತವೆ. ಇಂತಹ ಎಲೆಗಳು ಹಳದಿಯಾಗಿ ನಂತರ ಕೆಳಗೆ ಬೀಳುತ್ತವೆ. ಇಂತಹ ಭಾಗಗಳಲ್ಲಿ ಬೂಷ್ಟ್ ಬೆಳವಣಿಗೆ ಆಗುತ್ತದೆ.
ಹಾನಿಯ ಲಕ್ಷಣಗಳು :
- ನೊಣಗಳು ಕಾಯಿಗಳು ಹಣ್ಣಾಗುವ / ಮಾಗುವ ಸಮಯದಲ್ಲಿ ಮೊಟ್ಟೆಗಳನ್ನು ಇಡುತ್ತವೆ ಮತ್ತು ಹಣ್ಣುಗಳು ಮಾಗಿದ ನಂತರ ಹಣ್ಣಿನ ನೊಣದ ಮರಿಹುಳುಗಳು ಹಣ್ಣಿನ ತಿರುಳನ್ನು ತಿಂದು ಹಾಳುಮಾಡುತ್ತವೆ.
- ಅಂತಹ ಹಣ್ಣಿನ ಮೇಲೆ ಕಪ್ಪು ಬಣ್ಣದ ಮಚ್ಚೆ ಆಗುತ್ತದೆ. ನಂತರ ಹಣ್ಣುಗಳು ಕೊಳೆಯಲು ಆರಂಭಿಸುತ್ತವೆ
- ಹಣ್ಣಿನ ಮೇಲೆ ಚಿಕ್ಕ ಚಿಕ್ಕ ರಂಧ್ರಗಳು ಕಾಣುತ್ತವೆ.
ನಿರ್ವಹಣಾ ಕ್ರಮಗಳು :
- ಹಣ್ಣಿನ ನೊಣಗಳಿಂದ ಬಾಧಿತ ಹಣ್ಣುಗಳನ್ನು ಕೊಯ್ಲುಮಾಡಿ ಸುಟ್ಟುಹಾಕಬೇಕು
- ಮೆಲಾಥಿಯಾನ್ 1ಮಿ.ಲೀ (1%) ಅಥವಾ ಕಾರ್ಬರಿಲ್ 3 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು
- ಮಿಥೈಲ್‍ಯುಜಿನಾಲ್ 1ಮಿಲೀ ಮತ್ತು 1ಮಿಲಿ ಮೆಲಾಥಿಯಾನ್ 50 ಇಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಹತ್ತಿ ಅಥವಾ ಮರದ ತುಂಡುಗಳನ್ನು ಅದರಲ್ಲಿ ಅದ್ದಿ ಅವುಗಳನ್ನು ಹಳದಿ ಬಣ್ಣದ ಪ್ಲಾಸ್ಟಿಕ್ ಬಲೆ ಅಥವಾ ಬಾಕ್ಸ್‍ಗಳಲ್ಲಿ ಇಟ್ಟು ತೂಗುಹಾಕಬೇಕು. ಪ್ರತಿ ಹೆಕ್ಟೇರಿಗೆ 10 ಬಲೆಗಳು ಬೇಕಾಗುತ್ತವೆ. ಇದರಿಂದ ಆಕರ್ಷಿತವಾಗಿ ಬಲೆಗಳಲ್ಲಿ ಬಂದು ಬೀಳುತ್ತವೆ.
- ಎಲೆ ತಿನ್ನುವ ಹುಳು :
ಹಾನಿಯ ಲಕ್ಷಣಗಳು :
- ಮರಿ ಹುಳಗಳು ಎಲೆಗಳನ್ನು ತಿಂದು ಹಾಳು ಮಾಡುತ್ತವೆ
- ರಂಧ್ರಗಳು ಎಲೆಗಳ ಮೇಲೆ ಕಾಣುತ್ತವೆ
ನಿರ್ವಹಣಾ ಕ್ರಮಗಳು :
- ಪ್ರತಿ ಲೀಟರ್ ನೀರಿಗೆ ಕಾರ್ಬಾರಿಲ್ 50 ಡಬ್ಲ್ಯೂಪಿ - 4ಗ್ರಾಂ ಸೇರಿಸಿ ಸಿಂಪರಣೆ ಮಾಡಬೇಕು
- ಅಥವಾ ಪ್ರೊಫೆನೋಫಾಸ್ 1-1.5 ಮಿಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು
- ತೊಗಟೆ ತಿನ್ನುವ ಹುಳು :
ಹಾನಿಯ ಲಕ್ಷಣಗಳು :
- ಮರಿ ಹುಳಗಳು ತೊಗಟೆಮೇಲೆ ಹೆಕ್ಕೆಗಳಿಂದ ಮತ್ತು ಮರದ ಪುಡಿಗಳಿಂದ ಗೂಡುಮಾಡಿ ಕೆಳಗಡೆ ತೊಗಟೆಯನ್ನು ಕೊರೆದು ತಿನ್ನುತ್ತವೆ.
- ಇದನ್ನು ನಿರ್ವಹಣೆ ಮಾಡದೇ ಇದ್ದರೆ ಸಂಪೂರ್ಣ ಗಿಡಗಳನ್ನು ನಾಶಪಡಿಸುತ್ತದೆ.
- ಇದರಿಂದ ಬಾಧೆಗೊಳಪಟ್ಟ ರೆಂಬೆ, ತೊಗಟೆ ಒಣಗಿದಂತೆ ಕಾಣತೊಡಗುತ್ತದೆ
ನಿರ್ವಹಣಾ ಕ್ರಮಗಳು :
- ಪೇರಲಿನ ತೋಟವನ್ನು ಸ್ವಚ್ಛವಾಗಿ ಇಡಬೇಕು
- ಈ ಕೀಟಗಳನ್ನು ಕಂಡ ತಕ್ಷಣವೇ ಅಲ್ಲಿರುವ ಮೊಟ್ಟೆಗಳನ್ನು ನಾಶÀಗೊಳಿಸಿ ಮತ್ತು ಕೊರೆದ ರಂಧ್ರಗಳಲ್ಲಿ ಇಂಕಪಿಲ್ಲರಿಂದ ಡೈಕ್ಲೊರೋವಾಸ್ 5 ಮಿಲಿ ಅಥವಾ ಕೊರೋಸಿನ್‍ನ್ನು ಸುರಿಯಬೇಕು. ಇದರಿಂದ ಕೇಟಗಳು ನಾಶಗೊಳ್ಳುತ್ತವೆ.
- ಹಾನಿಯ ಲಕ್ಷಣಗಳು :
* ಹಸಿರು ಶಲ್ಕ ಕೀಟಗಳು ಎಲೆಯ ಕೆಳಭಾಗದಿಂದ ರಸ ಹೀರುತ್ತವೆ. ಇಂತಹ ಎಲೆಗಳು ಹಳದಿಯಾಗಿ ನಂತರ ಕೆಳಗೆ ಬೀಳುತ್ತವೆ
ನಿರ್ವಹಣಾ ಕ್ರಮಗಳು :
- 7 ಮಿಲೀ ಡೈಮಿಥೊಯೇಟ್ ಅಥವಾ ಕ್ಲೋರೊಪೈರಿಫಾಸ್ 1 ಮಿಲಿ ಅಥವಾ ಪ್ರೊಫೆನೋಫಾಸ್ 1.5 ಮಿಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ರೋಗಗಳು :
- ಕಜ್ಜಿ ರೋಗ :
ಹಾನಿಯ ಲಕ್ಷಣಗಳು : ಹಣ್ಣುಗಳ ಮೇಲೆ ಕಂದು ಬಣ್ಣದ ಹುರುಕು ಹುರುಕಾದ ಚುಕ್ಕೆ ಕಂಡು ಬಂದು, ದೊಡ್ಡದಾಗಿ ಹಣ್ಣು ಕೊಳೆಯುವಂತೆ ಮಾಡುತ್ತವೆ.
ನಿರ್ವಹಣಾ ಕ್ರಮಗಳು : ತೀವ್ರ ಬಾಧೆಗೊಳಗಾದ ಹಣ್ಣುಗಳನ್ನು ನಾಶÀಪಡಿಸಿ, ರೋಗ ಹರಡುವಿಕೆಯನ್ನು ತಡೆಗಟ್ಟಲು 2 ಗ್ರಾಂ ಬೆನ್ಯೆಬ 75 ಡಬ್ಲ್ಯುಪಿ ಅಥವಾ ಜೈರಾಯಿಡ್ 4 ಮಿಲೀ ನಂತರ 2 ಗ್ರಾಂ ಮ್ಯಾಂಕೊಜೆಬ್ 75 ಡಬ್ಲ್ಯೂಪಿ ಅಥವಾ 1 ಗ್ರಾಂ ಕಾರ್ಬೆನ್‍ಡೈಜಿಮ್ ಅನ್ನು ಪ್ರತಿ ಲೀಟರ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
- ಸೊರಗು ರೋಗ / ಒಣಗು ರೋಗ :
ಹಾನಿಯ ಲಕ್ಷಣಗಳು :
- ಪೇರಲಿನಲ್ಲಿ ಹಲವು ದಶಕಗಳಿಂದ ಈ ಒಣಗು ರೋಗ ದಿನದಿಂದ ದಿನಕ್ಕೆ ಭಾರತದಲ್ಲಿ ಹೆಚ್ಚುತ್ತಿದೆ. ತೋಟಗಳನ್ನು ಸ್ವಚ್ಛವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಈ ಬಾಧೆ ಹೆಚ್ಚಾಗಿರುತ್ತದೆ.
- ಈ ಬಾಧೆಯಿಂದ 15-20% ಗಿಡಗಳು ಸಾಯುತ್ತಿವೆ. ಈ ಬಾಧೆಯು ಪುಸೆರೆಯಮ್ ಆಕ್ಸಿಪೊರಿಯಂ, ರೈಜೊಕ್ಟೊನಿಯಾ ಬಟಾಟಿಕೊಲಾ ಎಂಬ ಶಿಲೀಂದ್ರದಿಂದ ಹರಡುತ್ತದೆ.
- ಈ ಶಿಲೀಂದ್ರವು ಬೂಮಿಯಲ್ಲಿ ಅನುಕೂಲವಾದ ಪರಿಸ್ಥಿಯನ್ನು ನಿರ್ಮಾಣಮಾಡಿಕೊಂಡು ಗಿಡಗಳಲ್ಲಿ ನಿಧಾನವಾಗಿ ಆಕ್ರಮಿಸುತ್ತದೆ. ಮಳಗಾಲದ ನಂತರ ಈ ರೋಗವು ಹೆಚ್ಚಾಗುತ್ತದೆ.
- ಈ ರೋಗವು ಸೆಪ್ಟೆಂಬರ್ – ಅಕ್ಟೋಬರ್ ತಿಂಗಳುಗಳಲ್ಲಿ ಅಧಿಕವಾಗಿ ಕಂಡುಬಂದು, 20-25 ದಿನಗಳಲ್ಲಿ ಗಿಡಗಳು ಸತ್ತುಹೋಗುತ್ತವೆ ಮತ್ತು 7.5 ಪಿಹೆಚ್ ಇರುವ ಮಣ್ಣಿನಲ್ಲಿ ಸರಳವಾಗಿ ಹರಡುತ್ತದೆ.
- ಈ ರೋಗವು ಹರಡಿದ ಗಿಡಗಳಲ್ಲಿ ಮೇಲ್ಭಾಗದ ರೆಂಬೆ ಕೊಂಬೆಗಳು ಒಣಗಿ, ಎಲೆಗಳು ಹಳದಿಯಾಗಿ ಉದುರಲು ಪ್ರಾರಂಭಿಸುತ್ತವೆ. ಇದು ಸಂಪೂರ್ಣವಾಗಿ ಹರಡಿ ಪೂರ್ಣವಾಗಿ ಗಿಡಗಳು ಒಣಗಿ ಸತ್ತುಹೋಗುತ್ತವೆ.
ನಿರ್ವಹಣಾ ಕ್ರಮಗಳು :
- ಈ ರೋಗವು ಹರಡುವ ಪ್ರದೇಶಗಳಲ್ಲಿ ಲಕ್ನೋ-49, ನಾಸಿಕ ಕೆಂಪು ಪೇರಲ ಅಥವಾ ಸುಪ್ರಿಂ ಎಂಬ ರೋರನಿರೋಧಕ ತಳಿಗಳನ್ನು ಬೆಳೆಯಬೇಕು.
- ಮಳೆಗಾಲದ ಸಮಯದಲ್ಲಿ ಭೂಮಿಯನ್ನು ಹದಮಾಡಿ 90 ಕಿ.ಲೋ ತಿಪ್ಪೆಗೊಬ್ಬರ, 10 ಕಿಲೋ ಬೇವಿನ ಹಿಂಡಿ / ಗೊಬ್ಬರ, 2 ಕಿಲೋ ಟ್ರೈಕೋಡರ್ಮಾ ವಿರಿಡೆ ಎಂಬ ಜೀವಶಿಲೀಂದ್ರವನ್ನು ಬೆರೆಸಿ ಪ್ರತಿ ಗಿಡಕ್ಕೆ 30-40 ಕಿಲೋ (3-4 ಬುಟ್ಟಿ) ಹಾಕಬೇಕು.
- ನೀರಾವರಿಯನ್ನು 2 ರಿಂದ 3 ದಿನಗಳಿಗೊಮ್ಮೆ ನೀಡಬೇಕು
- ರೋಗಹರಡಿದ ಗಿಡಗಳಿಗೆ ಕಾರ್ಬೆಂಡಿಜಿಮ್ ಅಥವಾ ಬೆನಾಮಿಲ್ 1 ಗ್ರಾಮ ಅಥವಾ ಕಾಪರ ಆಕ್ಸಿಕ್ಲೋರೈಡ 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಮೂರು ಬಾರಿ ಪ್ರತಿ 10 ದಿನಗಳಿಗೊಮ್ಮೆ ಗಿಡಗಳಿಗೆ ಹಾಕಬೇಕು
- ಆಥ್ರಾಕ್ನೋಸ್ :
ಹಾನಿಯ ಲಕ್ಷಣಗಳು :
- ಎಲೆಗಳ ಮೇಲೆ ಹಾಗೂ ಹಣ್ಣುಗಳ ಮೇಲೆ ಕಂದು ಬಣ್ಣದ ಚುಕ್ಕೆಗಳು ಕಂಡುಬರುತ್ತವೆ.
ನಿರ್ವಹಣಾ ಕ್ರಮಗಳು :
- ಜೈನೆಬ್ ಅಥವಾ ಮ್ಯಾಂಕೋಜೆಬ್ 75 ಡಬ್ಲ್ಯೂಪಿ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪರಣೆ ಮಾಡಬೇಕು. ಜುಲೈ ತಿಂಗಳಿಂದ 2ಗ್ರಾಂ ತಾಮ್ರದ ಆಕ್ಸಿಕ್ಲೋರೈಡನ್ನು ಪ್ರತಿ ವಾರಕ್ಕೊಮ್ಮೆ ಸಿಂಪಡಿಸಬೇಕು.