ಸೂರ್ಯಕಾಂತಿ ಬೆಳೆಯಲ್ಲಿ ರೋಗಗಳು ಹಾಗೂ ಅವುಗಳ ನಿರ್ವಹಣೆ
ಸೂರ್ಯಕಾಂತಿ ಬೆಳೆಯು ಕರ್ನಾಟಕದ ಹಾಗೂ ದೇಶದ ಒಂದು ಮುಖ್ಯವಾದ ಹಾಗೂ ಲಾಭದಾಯಕ ಎಣ್ಣೆಕಾಳು ಬೆಳೆ. ಸೂರ್ಯಕಾಂತಿ ಬೆಳೆ ಕರ್ನಾಟಕದಲ್ಲಿ ಶೇಂಗಾ ಬೆಳೆಯ ನಂತರ ಒಟ್ಟು ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಎರಡನೆಯ ಸ್ಥಾನ ಪಡೆದುಕೊಂಡಿದೆ. ಈ ಬೆಳೆಯನ್ನು ಸಾಮಾನ್ಯವಾಗಿ ಮಳೆಯಾಶ್ರಿತವಾಗಿ ಬೆಳೆಯಬಹುದಾದರೂ, ನೀರಾವರಿ ಸೌಲಭ್ಯವಿದ್ದರೆ, ವರ್ಷದ ಎಲ್ಲಾ ಕಾಲಗಳಲ್ಲೂ ಉತ್ತಮವಾಗಿ ಬೆಳೆದುಕೊಳ್ಳಬಹುದು. ನಮ್ಮ ದೇಶದ ಒಟ್ಟು ಸೂರ್ಯಕಾಂತಿ ಬೆಳೆಯ ವಿಸ್ತೀರ್ಣದಲ್ಲಿ ಸುಮಾರು ಅರ್ಧದಷ್ಟು ಕರ್ನಾಟಕ ರಾಜ್ಯದ್ದೇ ಆಗಿರುತ್ತದೆ. ಆದುದರಿಂದ ನಮ್ಮ ರಾಜ್ಯಕ್ಕೆ “ಸೂರ್ಯಕಾಂತಿ ರಾಜ್ಯ” ವೆಂಬ ಹೆಗ್ಗಳಿಕೆಯೂ ಇದೆ. ನಮ್ಮ ರಾಜ್ಯದಲ್ಲಿ ಬಿಜಾಪುರ, ಬಾಗಲಕೋಟೆ, ರಾಯಚೂರು, ಬಳ್ಳಾರಿ, ಗುಲ್ಬರ್ಗ, ಕೊಪ್ಪಳ ಚಿತ್ರದುರ್ಗ, ತುಮಕೂರು, ಹಾಸನ ಮತ್ತು ಕೋಲಾರ ಸೂರ್ಯಕಾಂತಿ ಬೆಳೆಯುವ ಪ್ರಮುಖ ಜಿಲ್ಲೆಗಳು.
ಸಾಂಪ್ರದಾಯಿಕವಾಗಿ ಸೂರ್ಯಕಾಂತಿ ಬೆಳೆಯುವ ಪ್ರದೇಶಗಳಲ್ಲಿ ಹಲವಾರು ಪ್ರಮುಖ ರೋಗಗಳು ಕಾಣಿಸಿಕೊಂಡು ಇಳುವರಿಯನ್ನು ಗಣನೀಯವಾಗಿ ಕುಂಠಿತಗೊಳಿಸುತ್ತವೆ. ಈ ಬೆಳೆಗೆ ಹಲವಾರು ರೋಗಗಳು, ವಿವಿಧ ರೋಗಗಳು, ವಿವಿಧ ಕಾಲಗಳಲ್ಲಿ ಕಾಣಿಸಿಕೊಂಡು ಹಾವಳಿ ಮಾಡುತ್ತಿದ್ದು, ಅವುಗಳನ್ನು ಮುಖ್ಯವಾಗಿ ಶಿಲಿಂಧ್ರ ಹಾಗೂ ನಂಜಾಣುಗಳಿಂದ ಉಂಟಾಗುವ ರೋಗಗಳು ಪ್ರಮುಖವಾಗಿವೆ.
- ಶಿಲೀಂಧ್ರದಿಂದ ಬರುವಂತಹ ರೋಗಗಳು
1.ಎಲೆ ಚುಕ್ಕೆ ರೋಗ
2.ಬೂದಿ ರೋಗ
3.ತುಕ್ಕು ರೋಗ
4.ಕೇದಿಗೆ ರೋಗ
2, ನಂಜು ರೋಗವು: ನೆಕ್ರೋಸಿಸ್ ನಂಜು ರೋಗ
1.ಶಿಲೀಂಧ್ರದಿಂದ ಬರುವಂತಹ ರೋಗಗಳು
ಎಲೆ ಚುಕ್ಕೆ ರೋಗ ((Alternaria helianthi)):
ಈ ರೋಗದ ತೀರ್ವತೆಯು ವಾತಾವರಣದ ವೈಪರೀತ್ಯಕ್ಕನುಗುಣವಾಗಿ, ಹೆಚ್ಚು ಅಥವಾ ಕಡಿಮೆಯಾಗಬಹುದು ಮತ್ತು ಮಳೆಗಾಲದಲ್ಲಿ ಸರ್ವೇಸಾಮಾನ್ಯವಾಗಿರುತ್ತದೆ.
ರೋಗದ ಪ್ರಮುಖ ಲಕ್ಷಣಗಳು:
*ಎಲೆಗಳ ಮೇಲೆ ಕಡು ಕಂದು ಅಥವಾ ಕಪ್ಪು ವೃತ್ತಾಕಾರ ಅಥವಾ ಅಂಡಾಕಾರವಾಗಿ ಸಣ್ಣ ಚುಕ್ಕೆ ಕಾಣಿಸಿಕೊಳ್ಳುತ್ತವೆ.
*ರೋಗದ ತೀವ್ರತೆಯು ಹೆಚ್ಚಾದಾಗ ಚುಕ್ಕೆಗಳ ಗಾತ್ರ ದೊಡ್ಡದಾಗಿ ಚುಕ್ಕೆಗಳು ಒಂದಕ್ಕೊಂದು ಸೇರಿಕೊಂಡು ಎಲೆಗಳು ಸುಟ್ಟಂತೆ ಕಾಣಿಸುತ್ತವೆ.
*ತದನಂತರ ಚುಕ್ಕೆಗಳು ಸಸ್ಯದ ಇತರೆ ಭಾಗಗಳಾದ ಎಲೆತೊಟ್ಟು, ಕಾಂಡ ಹಾಗೂ ಹೂಗಳ ಭಾಗಗಳ ಮೇಲೆ ಕಾಣಿಸಿಕೊಳ್ಳುತ್ತವ
ವಾತಾವರಣದ ಪೂರಕ ಅಂಶಗಳು:
*ಮಳೆಗಾಲದಲ್ಲಿ ಈ ರೋಗವು ಸರ್ವೇ ಸಾಮಾನ್ಯವಾಗಿರುತ್ತದೆ.
*ಸಾಮಾನ್ಯವಾಗಿ ಹೂ ಬಿಡುವ ಮತ್ತು ನಂತರದ ಹಂತಗಳಲ್ಲಿ ಈ ರೋಗವು ತೀವ್ರವಾಗಿರುತ್ತದೆ.
*ಹೆಚ್ಚಿನ ವಾತಾವರಣದ ತೇವಾಂಶದ ಜೊತೆಗೆ ತುಂತುರು ಮಳೆ ಇದ್ದಲ್ಲಿ ಸಸ್ಯದ ಬೆಳವಣಿಗೆಯ ಯಾವುದೇ ಹಂತದಲ್ಲಿ ಈ ರೋಗವು ಬರಬಹುದು.
ಮುಖ್ಯ ನಿರ್ವಹಣಾ ಕ್ರಮಗಳು:
- ಸ್ವಚ್ಛ ಸಾಗುವಳಿ
- ಸಸ್ಯಗಳ ಮಧ್ಯೆ ನಿಗದಿತ ಅಂತರವನ್ನು ಕಾಪಾಡುವುದು ಅಗತ್ಯ.
- ಮ್ಯಾಕೋಝೆಬ್ ಅಥವಾ ಝೈನೆಬ್ ಶಿಲೀಂದ್ರ ನಾಶಕ
2.ನೆಕ್ರೋಸಿಸ್ ನಂಜು ರೋಗ
ಈ ನಂಜು ರೋಗವು “ಇಲಾರ್” ವೈರಸ್ ಎಂಬ ನಂಜಾಣು ಗುಂಪಿನ ಟೊಬ್ಯಾಕೋ ಸ್ಟ್ರೀಕ್ ಜಾತಿಗೆ ಸೇರಿದೆ.
ರೋಗದ ಪ್ರಮುಖ ಲಕ್ಷಣಗಳು:
*ಎಲೆಗಳ ಒಂದು ಭಾಗವು ಸುಟ್ಟಂತೆ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಎಲೆಯು ಒಂದು ಕಡೆಗೆ ತಿರುಚಿಕೊಳ್ಳುತ್ತದೆ.
*ಕೆಲವು ರೋಗ ತಗುಲಿದ ಸಸ್ಯಗಳು, ಹಸಿರು-ಹಳದಿಯಿಂದ ಕೂಡಿದ್ದು, ಅಲ್ಲಲ್ಲಿ ಎಲೆ ಭಾಗ ಉಬ್ಬಿದ ತರಹ ಕಾಣಿಸುತ್ತದೆ.
*ರೋಗ ತಗುಲಿದ ಸಸ್ಯಗಳು, ಗಿಡ್ಡಾಗಿದ್ದು ಮತ್ತು ಎಲೆಗಳು ಅಳತೆಯಲ್ಲಿ ತುಂಬಾ ಚಿಕ್ಕದಾಗಿದ್ದು, ಕೆಲವೇ ದಿನಗಳಲ್ಲಿ ಕುಡಿಯು ಸಾಯುತ್ತದೆ.
*ಹೂ ಬಿಡುವ ಅಥವಾ ಕಾಳು ಕಟ್ಟುವ ಹಂತದಲ್ಲಿ ಈ ರೋಗದ ಸೋಂಕು ಕಂಡು ಬಂದರೆ, ತೆನೆಯ ಹಿಂಭಾಗ ಕಂದು ಬಣ್ಣಕ್ಕೆ ತಿರುಗಿ ಸುಟ್ಟಂತೆ ಒಣಗುತ್ತವೆ. ಹೀಗಾಗಿ ಕೆಲವೊಂದು ಸಲ ಹೂ ಅರಳುವುದಿಲ್ಲ ಮತ್ತು ಕಾಳು ಕಟ್ಟುವುದಿಲ್ಲ ಹಾಗೂ ಕಾಳು ಕಟ್ಟಿದರೂ ಜೊಳ್ಳಾಗುವ ಸಂಭವವೇ ಹೆಚ್ಚು
ವಾತಾವರಣದ ಪೂರಕ ಅಂಶಗಳು:
- ರಸ ಹೀರುವ “ಥ್ರಿಪ್ಸ್” ನುಸಿ ಕೀಟಗಳು ಗಿಡದಿಂದ ಗಿಡಕ್ಕೆ ರೋಗವಾಹಕಗಳಾಗಿ ಈ ರೋಗವನ್ನು ಹರಡಲು ಸಹಾಯ ಮಾಡುತ್ತÀವೆ.
- ಬೇಸಿಗೆ ಮತ್ತು ಮುಂಗಾರು ಬೆಳೆಗೆ ಈ ರೋಗದ ಹಾವಳಿ ಅಧಿಕವಾಗಿರುತ್ತದೆ.
- ಪಾರ್ಥೇನಿಯಂ ಮತ್ತು ವಿವಿಧ ಜಾತಿಯ ಕಳೆಗಳು ಈ ರೋಗ ಹಾಗೂ ಥ್ರಿಪ್ಸ್ ನುಸಿ ಕೀಟಗಳಿಗೆ ಆಶ್ರಯವಾಗಿದ್ದು, ಮುಖ್ಯ ಬೆಳೆಯಾದ ಸೂರ್ಯಕಾಂತಿಗೆ ಹರಡುತ್ತದೆ.
ಮುಖ್ಯ ನಿರ್ವಹಣಾ ಕ್ರಮಗಳು:
ನಂಜಾಣು ಗುಂಪಿನ ರೋಗಗಳಿಂದ ಸಂಪೂರ್ಣ ಮುಕ್ತ ಪಡೆಯಲು ಸಾಧ್ಯವಿಲ್ಲ. ಆದರೂ ಇದರ ಹರಡುವಿಕೆಯನ್ನು ತಡೆಗಟ್ಟುವ ದೃಷ್ಠಿಯಿಂದ ಕೆಲವು ಮುಂಜಾಗ್ರತಾ ಕ್ರಮಗಳ ಜೊತೆಗೆ ಸಮಗ್ರ ನಿರ್ವಹಣಾ ವಿಧಾನಗಳನ್ನು ಕೆಳಕಂಡಂತೆ ಅನುಸರಿಸಿ ರೋಗದ ಹಾವಳಿಯನ್ನು ಕಡಿಮೆ ಮಾಡಿಕೊಳ್ಳಬಹುದು.
ಬಿತ್ತನೆಗೆ ಮುನ್ನ ಅನುಸರಿಸಬೇಕಾದ ಕ್ರಮಗಳು:
1.ಹೊಲದಲ್ಲಿ ಹಾಗೂ ಬದುಗಳ ಮೇಲೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಪಾರ್ಥೇನಿಯಂ ಮತ್ತು ವಿವಿಧ ಜಾತಿಯ ಕಳೆಗಳನ್ನು ಹಾಗೂ ಇತರೆ ಸಸ್ಯಗಳನ್ನು ನಾಶಪಡಿಸಬೇಕು.
- ಎರಡು ಕಿಲೋಗ್ರಾಂ ಬಿತ್ತನೆ ಬೀಜಕ್ಕೆ 5 ಗ್ರಾಂ ಇಮಿಡಾಕ್ಲೋಪ್ರಿಡ್ 70 ಡಬ್ಲೂ. ಎಸ್. ಕೀಟನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು.
ಬಿತ್ತನೆ ನಂತರ ಅನುಸರಿಸಬೇಕಾದ ಕ್ರಮಗಳು:
* ಬಿತ್ತನೆಯಾದ 30 ರಿಂದ 45 ದಿನಗಳ ಬೆಳೆಗೆ ಪ್ರತಿ ಲೀಟರ್ ನೀರಿಗೆ 0.50 ಮಿ. ಲೀ. ಇಮಿಡಾಕ್ಲೋಪ್ರಿಡ್ (200 ಎಸ್. ಎಲ್), ಬೆರೆಸಿಕೊಂಡು ಬೆಳೆಗೆ ಸಿಂಪಡಿಸುವುದು. ಸಿಂಪರಣೆ ಮಾಡಿದ ಮಾರನೆಯ ದಿನ ರೋಗ ತಗುಲಿದ ಸಸ್ಯಗಳನ್ನು ಗುರುತಿಸಿ ಕಿತ್ತು ನಾಶಪಡಿಸಬೇಕು.
* ರೋಗದ ಗುಣ ಲಕ್ಷಣಗಳನ್ನು ಹೊಂದಿರುವ ಗಿಡಗಳನ್ನು ಕಂಡೊಡನೆಯೇ ಕಿತ್ತು ನಾಶಪಡಿಸುವುದರಿಂದ ರೋಗ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು.
3.ಬೂದಿ ರೋಗ (Erysiphe cichoracearum):
ರೋಗದ ಪ್ರಮುಖ ಲಕ್ಷಣಗಳು:
ಎಲೆಗಳ ಮೇಲ್ಭಾಗ ಬೂದಿ ಚೆಲ್ಲಿದ ಹಾಗೆ ಕಾಣುತ್ತದೆ. ನಂತರ ರೋಗವು ಸಸ್ಯದ ಇತರೆ ಭಾಗಗಳಾದ ಎಲೆತೊಟ್ಟು, ಕಾಂಡ ಹಾಗೂ ತೆನೆಯ ಹಿಂಭಾಗದಲ್ಲೂ ಕಾಣಿಸಿಕೊಳ್ಳುತ್ತದೆ. ತಂಪಾದ ಮೋಡ ಕವಿದ ಹಾಗೂ ಅರೆಶುಷ್ಕ ವಾತಾವರಣವು ಈ ರೋಗದ ವೃದ್ಧಿಗೆ ಹಾಗೂ ಹರಡುವಿಕೆಗೆ ಸಹಾಯಕವಾಗುತ್ತದೆ.
ವಾತಾವರಣದ ಪೂರಕ ಅಂಶಗಳು:
ತಂಪಾದ ಮೋಡ ಕವಿದ ಹಾಗೂ ಅರೆಶುಷ್ಕ ವಾತಾವರಣವು ಈ ರೋಗದ ವೃದ್ಧಿಗೆ ಹಾಗೂ ಹರಡುವಿಕೆಗೆ ಸಹಾಯಕವಾಗುತ್ತದೆ.
ಮುಖ್ಯ ನಿರ್ವಹಣಾ ಕ್ರಮಗಳು:
* ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಸಂಕಿರಣ ತಳಿಯಾದ ಕೆಬಿಎಸ್‍ಹೆಚ್-53 ಯನ್ನು ಬಿತ್ತನೆ ಮಾಡುವುದು.
* ರೋಗದ ತೀವ್ರತೆಗೆ ಅನುಗುಣವಾಗಿ ನೀರಿನಲ್ಲಿ ಕರಗುವ ಗಂಧಕ 0.3% (3 ಗ್ರಾಂ / ಲೀ.) ಅಥವಾ ಟ್ರೈಡಿಮಾರ್ಫ್ 0.05% (0.5 ಮಿಲೀ / ಲೀ) ಅಥವಾ ಡೈಫೆಕೊನಜೋಲ್ 0.05% (0.5 ಮಿಲೀ /ಲೀ) – 15-20 ದಿವಸಗಳ ಅಂತರದಲ್ಲಿ ಸಿಂಪರಣೆ ಮಾಡುವುದು.
- ತುಕ್ಕು ರೋಗ (Puccinia helianthi)
ರೋಗದ ಪ್ರಮುಖ ಲಕ್ಷಣಗಳು:
* ಈ ರೋಗವು ಸಾಮಾನ್ಯವಾಗಿ ಸಸ್ಯ ಬೆಳವಣಿಗೆಯ ಯಾವುದೇ ಹಂತದಲ್ಲೂ ಕಾಣಿಸಿಕೊಳ್ಳಬಹುದು. ಎಲೆಗಳ ತಳ ಭಾಗದಲ್ಲಿ ಕೆಂಪು/ಕಂದು ಮಿಶ್ರಿತ ಉಬ್ಬಿದ ಪುಡಿಯಂತಹ ಸಣ್ಣ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ.
*ಈ ತರಹ ಚುಕ್ಕೆಗಳು ಸಸ್ಯದ ಯಾವುದೇ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು.
*ಈ ಚುಕ್ಕೆಗಳು ನಂತರ ಕಪ್ಪು ಬಣ್ಣಕ್ಕೆ ತಿರುಗುತ್ತವೆ.
* ರೋಗದ ತೀವ್ರತೆಗನುಗುಣವಾಗಿ ಈ ತರಹದ ಚುಕ್ಕೆಗಳು ಎಲೆಗಳ ಮೇಲ್ಭಾಗದಲ್ಲೂ ಹಾಗೂ ಇತರೆ ಭಾಗಗಳಲ್ಲೂ ಕಾಣಿಸಿಕೊಳ್ಳುತ್ತವೆ ಮತ್ತು ಇದರಿಂದಾಗಿ ಎಲೆಗಳು ಒಣಗುತ್ತವೆ.
ವಾತಾವರಣದ ಪೂರಕ ಅಂಶಗಳು:
ಕಡಿಮೆ ತೇವಾಂಶ ಮತ್ತುಹೆಚ್ಚು ಉಷúತೆಯ ಸನ್ನಿವೇಶಗಳಲ್ಲಿ ಹರಡುವುದು ಕಂಡುಬಂದಿದೆ.
ಮುಖ್ಯ ನಿರ್ವಹಣಾ ಕ್ರಮಗಳು:
* ರೋಗ ನಿರೋಧಕತೆಯನ್ನು ಹೊಂದಿರುವ ಸಂಕರಣ ತಳಿಗಳನ್ನು ಬಿತ್ತನೆ ಮಾಡುವುದು.
* ರೋಗದ ತೀವ್ರತೆಗೆ ಅನುಗುಣವಾಗಿ ಜೈನೆಬ್ ಅಥವಾ ಮ್ಯಾನ್ಕೋಝಬ್, ಶಿಲೀಂಧ್ರ ನಾಶಕಗಳ (3 ಗ್ರಾಂ/ಲೀ) ಸಿಂಪರಣೆ ಮಾಡುವುದರಿಂದ ಈ ರೋಗವನ್ನು ಸಂಪೂರ್ಣವಾಗಿ ಹತೋಟಿ ಮಾಡಬಹುದು.
5.ಕೇದಿಗೆ ರೋಗ (Plasmopara halstedii)
ಈ ರೋಗವು ಸಸ್ಯದಲ್ಲಿ ಸಾಮಾನ್ಯವಾಗಿ ಅಂತವ್ರ್ಯಾಪಿಯಾಗಿದ್ದು, ಬೀಜ ಮತ್ತು ಗಾಳಿಯ ಮೂಲಕವೂ ಹರಡಬಲ್ಲುದು. ಅಲ್ಲದೆ, ಮಣ್ಣಿನಲ್ಲಿ ಸಾಯದೆ, ಬಹಳಷ್ಟು ಕಾಲದವರೆಗೆ ಬದುಕಬಲ್ಲುದು.
ರೋಗದ ಪ್ರಮುಖ ಲಕ್ಷಣಗಳು:
ಈ ರೋಗದ ಚಿಹ್ನೆಯು ಮೊದಲು ಎಲೆಗಳ ಮೇಲ್ಭಾಗದಲ್ಲಿ, ಎಲೆತೊಟ್ಟಿನಿಂದ ಶುರುವಾಗಿ ನಾಳಗಳ ಉದ್ದಕ್ಕೂ ಹಳದಿಯಾಕಾರದಲ್ಲಿ, ಹಸಿರು ಭಾಗವನ್ನು ಕಳೆದುಕೊಳ್ಳುವುದರ ಮೂಲಕ ಕಾಣಿಸಿಕೊಳ್ಳುತ್ತದೆ. ಇಂತಹ ಎಲೆಗಳ ಹಿಂಭಾಗದಲ್ಲಿ ಬಿಳಿ ಬೂಸ್ಟಿನ ತರಹದ ಶಿಲೀಂದ್ರದ ಬೆಳವಣಿಗೆಯು ಕಾಣಿಸುತ್ತದೆ. ಇಂತಹ ಸಸ್ಯಗಳು ಗಿಡ್ಡ (ಕುಬ್ಜ) ವಾಗಿದ್ದು, ಹೂ/ತೆನೆಗಳು ಬಾಗದೆ, ನೆಟ್ಟಗೆ ಆಕಾಶ ನೋಡುತ್ತಿರುತ್ತವೆ ಮತ್ತು ಕಾಳುಗಳನ್ನು ಕಟ್ಟುವುದಿಲ್ಲ. ಈ ತರಹದ ಸಸ್ಯಗಳ ಎಲೆಗಳು ಒರಟಾಗಿರುತ್ತವೆ. ಸಾಮಾನ್ಯವಾಗಿ, ಬಿತ್ತನೆ ಮಾಡಿದ 20 ದಿವಸಗಳ ತನಕ ಸಸ್ಯಗಳು ಈ ರೋಗಕ್ಕೆ ತುತ್ತಾಗುತ್ತವೆ.
ಮುಖ್ಯ ನಿರ್ವಹಣಾ ಕ್ರಮಗಳು:
* ಬಿತ್ತನೆ ಬೀಜವನ್ನು ರೋಗ ಪೀಡಿತ ಪ್ರದೇಶಗಳಿಂದ ತರಬಾರದು.
* ಬೀಜವನ್ನು ವ್ಮೆಟಾಲಾಕ್ಸಲ್ (ಏಪ್ರಾನೆ 35) ಎಂಬ ಶಿಲೀಂದ್ರನಾಶಕದಿಂದ (5 ಗ್ರಾಂ / ಕೆ.ಜಿ.) ಉಪಚಾರ ಮಾಡಿ ಬಿತ್ತನೆ ಮಾಡಬೇಕು.
* ನೀರು ನಿಲ್ಲುವಂತಹ ಜಾಗಗಳಲ್ಲಿ ಬಸಿಗಾಲುವೆಗಳನ್ನು ತೆರೆಯಬೇಕು. ನೀರಾವರಿ ಇರುವಂತಹ ಕಡೆಗಳಲ್ಲಿ, ಹದವರಿತು (ಬೇಕೆನಿಸಿದಾಗ) ನೀರನ್ನು ಕೊಡಬೇಕು.
* ಬೇಸಿಗೆಯಲ್ಲಿ, ಮಣ್ಣನ್ನು ಉಳುಮೆ ಮಾಡುವುದರಿಂದ, ಮಣ್ಣಿನಲ್ಲಿರುವ ಶಿಲೀಂದ್ರ ಕಣಗಳನ್ನು ನಾಶಪಡಿಸಬಹುದು.
* ಈ ಶಿಲೀಂದ್ರವು ಸೂರ್ಯಕಾಂತಿ ಬೆಳೆಗಷ್ಟೇ ಸೀಮಿತವಾಗಿರುವುದರಿಂದ, ಬೆಳೆ ಪರಿವತ್ನೆ ಮಾಡಬೇಕು.
ಇತರೆ ರೋಗಗಳು
ತೆನೆಕೊಳೆ ರೋಗ (Head mold/rot): Botrytis spp./ Rhizopus spp)
ಈ ರೋಗವು, ಸಾಮಾನ್ಯವಾಗಿ ಹೂ ಬಿಡುವ ಮತ್ತು ಕಾಳು ಕಟ್ಟುವ ಸಮಯದಲ್ಲಿ, ತುಂತುರು ಮಳೆಯಾಗುತ್ತಿದ್ದಲ್ಲಿ ಕಾಣಿಸಿಕೊಂಡು ಹಾನಿಯನ್ನುಂಟುಮಾಡುತ್ತದೆ.
ತೆನೆಯ ಹೆಂಬಾಗ ಮತ್ತು ತೊಟ್ಟಿನ ನಡುವಿನ ಬಾಗವು ನೀರಿನಿಂದ ಒದೆಯಾದಂತಾಗಿ, ಕಂದು ಬಣ್ಣಕ್ಕೆ ತಿರುಗಿ, ಕಪ್ಪಾಗಿ ಕೊಳೆಯುತ್ತದೆ. ಇಂತಹ ಚುಕ್ಕೆಗಳು ಕ್ರಮೇಣ ಮೂದುವಾಗಿ, ಬೆಳ್ಳಗಿನ ಬೂಸ್ಟ್ ನಿಂದಾವೃತ್ತವಾಗಿರುತ್ತದೆ. ರೋಗದ ತೀರ್ವತೆಯು ಹೆಚ್ಚಾದಾಗ, ಪೂರ್ತಿ ತೆನೆಯು ಕೊಳೆತು ಬೀಳುತ್ತದೆ. ತೆನೆಗಳು ಕೀಟಬಾದೆಗಳಿಗೊಳಗಾದಾಗ ಇಂತಹ ಪರಿಸ್ತಿತಿ ಹೆಚ್ಚಾಗುತ್ತದೆ.
ಕೀಟಬಾದೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದರಿಂದ ಮತ್ತು ಮ್ಯಾನ್ಕೋಜೆಬ್ (2.5 ಗ್ರಾಂ/ಲೀ) ಸಿಮಪರಣೆಯನ್ನು ಹೂ ಬಿಟ್ಟ ನಚಿತರ ಮಾಡುವುದರಿಂದ ಇದರ ಹಾವಳಿಯನ್ನು ತಡೆಗಟ್ಟಬಹುದು.
ಬೀಜ ಕೊಳೆ ಮತ್ತಿ ಬೇರು/ಕುತ್ತಿಗೆ ಕೊಳೆ ರೋಗ (Seed rot and root and collar rot): Sclerotium rolfsii, Sclerotinia sclerotiorum, Rhizoctonia bataticola)
ಇವು ಸಾಮಾನ್ಯವಾಗಿ ಮಣ್ಣಿನಲ್ಲಿರುವ ಸೋಂಕಿನಿಂದಾಗಿ ಬರುವಂತಹ ರೋಗಗಳು. ಸಸ್ಯಗಳು ಇದ್ದಕ್ಕಿದ್ದಂತೆ ಸೊರಗಿ ಸಾಯುತ್ತವೆ. ಬುಡದಲ್ಲಿ ಪರೀಕ್ಷಿಸಿದಾಗ, ಬೇರು ಮತ್ತು ಮಣ್ಣಿನ ಹತ್ತಿರದ ಕಾಂಡವು ಕೊಳೆತು ಸತ್ತಿರುವುದು ಕಂಡುಬರುತ್ತದೆ. ಅಲ್ಲದೆ, ಬಿಳಿ ಬೂಸ್ಟಿನಿಂದಾವೃತ್ತವಾಗಿ, ನಚಿತರ ಕಂದು ಬಣ್ಣದ ಸಾಸಿವೆ ಕಾಳಿನಂತಹ ಶಿಲೀಂದ್ರ ಕಣಗಳು ಕಂಡುಬರುತ್ತವೆ.
ಥೈರಾಮ್ (2 ಗ್ರಾ/ಕೆ.ಜಿ)ನಿಂದ ಬೀಜೋಪಚಾರ ಮಾಡುವುದು