Horticulture

ಕಿರು ಆಹಾರ ಸಂಸ್ಕರಣಾ ಉದ್ದಿಮೆ ಯೋಜನೆ ಅಡಿಯಲ್ಲಿ ಗರಿಷ್ಠ 10 ಲಕ್ಷ ಸಹಾಯಧನ

03 February, 2021 7:54 PM IST By:
lemon

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಡಿಯಲ್ಲಿ ವಿಜಯಪುರ ಜಿಲ್ಲೆಗೆ ಲಿಂಬೆ ಬೆಳೆ ಆಯ್ಕೆಯಾಗಿದೆ.

ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂರಕ್ಷಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯನ್ನು 2020-21 ನೇ ಸಾಲಿನಿಂದ ಪ್ರಾರಂಭಿಸಲಾಗಿದೆ. ಆಸಕ್ತಿಯುಳ್ಳ ವೈಯಕ್ತಿಕ ಕಿರು ಉದ್ಯಮಿದಾರರು https://mofpi.nic.in/pmfme/ ವೆಬ್ ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆಯಾದ ಉದ್ದಿಮೆದಾರರಿಗೆ ಲಿಂಬೆ ಸಂಸ್ಕರಣೆಯಲ್ಲಿ ತರಬೇತಿ ನೀಡಲಾಗುವುದು. ಸರ್ಕಾರದಿಂದ ಗರಿಷ್ಠ 10 ಲಕ್ಷ (ಶೇ.35 ಸಹಾಯಧನ) ನೀಡಲಾಗುವುದು.

ಈ ಯೋಜನೆಯಲ್ಲಿ ಆಸಕ್ತಿವುಳ್ಳ ರೈತ ಉತ್ಪಾದಕರ ಸಂಸ್ಥೆ, ಸ್ವಸಹಾಯ ಗುಂಪುಗಳಿಗೂ ಅವಕಾಶವಿದ್ದು, ಆಹಾರ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ಇಚ್ಚಿಸಿದ್ದಲ್ಲಿ ಕೃಷಿ ಇಲಾಖೆಯನ್ನು ಸಂಪರ್ಕಿಸಬಹುದು.