Horticulture

ತೋಟಗಾರಿಕೆ ಇಲಾಖೆಯ ವತಿಯಿಂದ ರೈತರಿಗೆ ಕೃಷಿ ಹೊಂಡ, ಅರಿಷಿಣ, ಈರುಳ್ಳಿ, ಒಣದ್ರಾಕ್ಷಿ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲು ಅರ್ಜಿ ಆಹ್ವಾನ

31 July, 2021 9:38 PM IST By:

ತೋಟಗಾರಿಕೆ ಇಲಾಖೆಯಿಂದ 2021-22ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ (ಎನ್.ಹೆಚ್.ಎಂ.) ಯೋಜನೆಯಡಿ ಅರ್ಹ ರೈತರಿಗೆ ವಿವಿಧ ಸೌಲಭ್ಯ ನೀಡಲಾಗುತ್ತಿದ್ದು, ಇದಕ್ಕಾಗಿ ಅರ್ಹ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿ.ಪಂ.) ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರದೇಶ ವಿಸ್ತರಣೆ, ವೈಯಕ್ತಿಕ ಕೃಷಿ ಹೊಂಡ, ಸಾಮೂಹಿಕ ಕೃಷಿ ಹೊಂಡ, ಯಾಂತ್ರೀಕರಣ, ಪ್ಯಾಕ್‌ಹೌಸ್, ಒಣದ್ರಾಕ್ಷಿ ಘಟಕ, ತಳ್ಳುವ ಗಾಡಿ, ಈರುಳ್ಳಿ ಶೇಖರಣಾ ಘಟಕ ಹಾಗೂ ಅರಿಶಿಣ ಸಂಸ್ಕರಣಾ ಘಟಕಗಳಿಗೆ ಸಹಾಯಧನ ಸೌಲಭ್ಯಕ್ಕಾಗಿ ಜಿಲ್ಲೆಯ ಆಸಕ್ತ ರೈತರು 2021ರ ಆಗಸ್ಟ್ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು. 

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಮತ್ತು  ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳನ್ನು ಸಂಪರ್ಕಿಸಲು ಕೋರಲಾಗಿದೆ. 

 ಕೃಷಿ ಹೊಂಡಗಳೆಂದರೆ ನೀರು ಸಂಗ್ರಹಿಸಿ, ಆ ನೀರನ್ನು ವಿವಿಧ ಬೆಳೆಗಳಿಗೆ ಹರಿಸಿ ಬೆಳೆ ಬೆಳೆಯುವುದಕ್ಕೆ ಮಾತ್ರ ಸೀಮಿತ ಎಂಬುದು ಬಹುತೇಕ ರೈತರ ಅನಿಸಿಕೆ. ಅಲ್ಲದೆ ಬಯಲುಸೀಮೆಯ ಜಿಲ್ಲೆಗಳಲ್ಲಿ ಈಗಲೂ ಕೃಷಿ ಹೊಂಡಗಳು ಈ ಕೆಲಸಕ್ಕಷ್ಟೇ ಮೀಸಲಾಗಿವೆ. ಆದರೆ ಕೃಷಿ ಹೊಂಡಗಳನ್ನು ಮೀನು ಸಾಕುವ ಉದ್ದೇಶಕ್ಕೂ ಬಳಸಲಾಗುತ್ತಿದೆ.ಕೃಷಿಕರು ನೀರು ಸಂಗ್ರಹಿಸುವ ಮೂಲವಾಗಿರುವ ಕೃಷಿ ಹೊಂಡದಿಂದ ಆದಾಯ ಪಡೆಯಬಹುದು.

ಬೆಳೆ ಕಟಾವು ಸಂದರ್ಭದಲ್ಲಿ ಸಾಕಷ್ಟು ಹಾನಿಯಾಗುವ ಸಾಧ್ಯತೆಯಿರುತ್ತದೆ. ಬೆಳೆ ಹಾಳಾಗುತ್ತದೆ ಎಂಬ ಆತಂಕದಲ್ಲಿ ರೈತರು ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಾರೆ. ರೈತರ ಈ ಸ್ಥಿತಿಯನ್ನು ಅರಿತುಕೊಂಡು ತೋಟಗಾರಿಕೆ ಇಲಾಖೆಯು ಸಬ್ಸಿಡಿಯಲ್ಲಿ ಪ್ಯಾಕ್ ಹೌಸ್, ಒಣದ್ರಾಕ್ಷಿಘಟಕ, ತಳ್ಳಉವ ಗಾಡಿ, ಈರುಳ್ಳಿ ಶೇಖರಣಾ ಘಟಕ ಹಾಗೂ ಅರಿಷಿಣ ಘಟಕ ನಿರ್ಮಾಣ ಮಾಡಲು ರೈತರಿಗೆ ಸಹಾಯ ಧನ ನೀಡುವುದು.

ತೋಟಗಾರಿಕೆ ಬೆಳೆ ವಿಸ್ತರಣೆ ಮಾಡಲು ಸಹ ಸಹಾಯ ಧನ ನೀಡಲಾಗುವುದು. ಬಹಳಷ್ಟು ರೈತರು ಹಣಕಾಸಿನ ತೊಂದರೆಯಿಂದಾಗಿ ತೋಟಗಾರಿಕೆ ಬೆಳೆಯನ್ನು ವಿಸ್ತರಿಸಲು ಮುಂದಾಗುವುದಿಲ್ಲ. ಆಸಕ್ತ ರೈತರಿಗೆ ತೋಟಗಾರಿಕೆ ಬೆಳೆ ವಿಸ್ತರಣೆಗೆ ತೋಟಗಾರಿಕೆ ಇಲಾಖೆಯು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ರೈತರು ಕೂಡಲೇ ಅಗತ್ಯ ದಾಖಲೆಗಳೊಂದಿಗೆ ತೋಟಗಾರಿಕೆ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿ ಸರ್ಕಾರದ ಸಹಾಯಧನ ಸೌಲಭ್ಯ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಮತ್ತು  ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳನ್ನು ಸಂಪರ್ಕಿಸಿ  ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.